ನೀರಿಗಾಗಿ ಏಕಾಂಗಿಯಾಗಿ ಬಾವಿ ತೋಡಿದ್ದ ಗೌರಿ ನಾಯ್ಕಗೆ ‘ವೀರ ಮಹಿಳೆ’ ಪ್ರಶಸ್ತಿ

ನೀರಿಗಾಗಿ ಏಕಾಂಗಿಯಾಗಿ ಬಾವಿ ತೋಡಿದ್ದ ಗೌರಿ ನಾಯ್ಕಗೆ ‘ವೀರ ಮಹಿಳೆ’ ಪ್ರಶಸ್ತಿ

ಶಿರಸಿ ಮನೆ, ಚಿಕ್ಕ ತೋಟಕ್ಕೆ ನೀರಿನ ಸಮಸ್ಯೆ ಎದುರಾದಾಗ ಏಕಾಂಗಿಯಾಗಿ ಬಾವಿ ತೋಡಿ ನೀರು ಬರಲು ಕಾರಣರಾಗಿದ್ದ ಶಿರಸಿಯ ಸಾಹಸಿ ಮಹಿಳೆ ಗೌರಿ ಸಿ.ನಾಯ್ಕ ರವರಿಗೆ ಈ ಸಾಲಿನ ರಾಜ್ಯ ಮಟ್ಟದ ವೀರ ಮಹಿಳೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

2018 ರಲ್ಲಿ ನೀರಿಗಾಗಿ ಮಹಿಳೆ ಬಡತನದ ನಡುವೆ ತಾವೊಬ್ಬರೇ ಬಾವಿತೋಡಿ ನೀರು ಬರಲು ಕಾರಣರಾಗಿದ್ದರು. ಆಗ ಜಿಲ್ಲಾದ್ಯಂತ ಬಹಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಸಾಹಸಕ್ಕೆ ಹಲವು ಸಂಘಟನೆಗಳು ಗೌರವಿಸಿದ್ದವು.

ಇದೀಗ ರಾಜ್ಯ ಸರ್ಕಾರ ಗುರುತಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರ. ಇವರಿಗೆ 6 ಗುಂಟೆ ತೋಟ ಇದೆ. ಇದಕ್ಕೆ ನೀರಿನ ಕೊರತೆ ಎದುರಾದಾಗ ಸ್ವತಃ ಸಲಕರಣೆ ಹಿಡಿದು ಬರೋಬ್ಬರಿ 60 ಅಡಿ ಆಳದ ಬಾವಿಯನ್ನ ಒಬ್ಬರೇ ತೋಡಿ, ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.  ಮಕ್ಕಳ ಸಹಾಯವನ್ನೂ ಪಡೆಯದೇ  ಪಾತಾಳದಿಂದ ಗಂಗೆ ಉಕ್ಕಿ ಬರೋವರೆಗೂ ಬಿಡದೇ, ದಿಟ್ಟತನ ಮೆರೆದ ಸಾಧಕಿ 52 ವರ್ಷದ ಗೌರಿ ನಾಯಕ್​​. ಮನಸ್ಸೊಂದಿದ್ರೆ ಬೆಟ್ಟವನ್ನು ಬೇಕಾದ್ರೂ ಬಾಗಿಸಬಹುದು ಎಂಬುದಕ್ಕೆ ಸಾಕ್ಷಿ ಈ ಆಧುನಿಕ ಭಗೀರಥಿ ಗೌರಿ ನಾಯಕ್.

ವರದಿ : ರಾಮದಾಸ್, ಕುಮುಟಾ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಆರ್.‌ಎಸ್.‌ಎಸ್. ‌ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತೇ?

Fri Mar 12 , 2021
ನನ್ನ ಅಧ್ಯಯನದ ಮೂಲದ ಪ್ರಕಾರವೂ ಆರ್. ಎಸ್.‌ಎಸ್. ನ ಸ್ಥಾಪಕ ಕೇಶವ ಬಲರಾಮ ಹೆಡಗೆವಾರ್ ಅವರು ಸ್ವಾತಂತ್ರ್ಯ ಹೋರಾಟ ಮಾಡಿದ್ದರು. ಅಸಹಕಾರ ಚಳವಳಿಯಲ್ಲಿ ಅವರಿಗೆ ಜೈಲು ಶಿಕ್ಷೆಯೂ ಆಗಿತ್ತು.‌ಆಗಿನ್ನೂ ಆರ್.‌ ಎಸ್. ಎಸ್.‌ ಸ್ಥಾಪನೆ ಆಗಿರಲಿಲ್ಲ. ಉಪ್ಪಿನ ಸತ್ಯಾಗ್ರಹದಲ್ಲೂ ಹೆಡಗೆವಾರ್ ಭಾಗವಹಿಸಿದ್ದರು. ಆದರೆ ಸರ ಸಂಘ ಸಂಚಾಲಕ ಹುದ್ದೆಯನ್ನು ಪರಾಂಜಪೆಯವರಿಗೆ ವಹಿಸಿ ವೈಯಕ್ತಿಕ ನೆಲೆಯಲ್ಲಿ ಭಾಗವಹಿಸಿದ್ದರು. ಆರ್.‌ಎಸ್.‌ಎಸ್. ಒಂದು ಸಂಘಟನೆಯಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಆದರೆ ಆರ್. ಎಸ್.‌ಎಸ್. ನ […]