ಬಾಂಗ್ಲಾದೇಶ ಗಡಿಯಲ್ಲಿ ಸಾವಿರಕ್ಕೂ ಹೆಚ್ಚು ಒಳನುಸುಳುವಿಕೆ ಪ್ರಕರಣಗಳು

(Photo: IANS)

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಒಳನುಸುಳುವಿಕೆ ಪ್ರಕರಣಗಳು ನಡೆದಿವೆ ಎನ್ನುವ ಆತಂಕಕಾರಿ ವಿಷಯವನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ತಿಳಿಸಿದೆ.

ನೇಪಾಳ ಮತ್ತು ಪಾಕಿಸ್ತಾನ ಗಡಿಗಳ್ಲಲಿ 60 ಒಳನುಸುಳುವಿಕೆ ಪ್ರಕರಣಗಳನ್ನು ನಡೆದಿವೆ. ಇಂತಹ ಸವಾಲುಗಳನ್ನು ಎದುರಿಸಲು ಪರಿಣಾಮಕಾರಿ ಕಣ್ಗಾವಲು, ಗುಪ್ತಚರ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವುದು, ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದು, ಗಡಿಗಳಲ್ಲಿ ಗಸ್ತು ತಿರುಗುವುದು, ಗಡಿ ಪ್ರದೇಶಗಳಲ್ಲಿ ಸ್ಥಳೀಯ ಜನಸಂಖ್ಯೆಯ ಸಂವೇದನೆ, ವೀಕ್ಷಣಾ ಪೋಸ್ಟ್‌ಗಳ ಸ್ಥಾಪನೆ, ಆಧುನಿಕ ಮತ್ತು ಹೈಟೆಕ್ ಕಣ್ಗಾವಲು ಉಪಕರಣಗಳ ಬಳಕೆ ಇತ್ಯಾದಿಗಳ ಮೂಲಕ ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಗೃಹ ವ್ಯವಹಾರ ಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ.

ಕಠಿಣ ಭೂಪ್ರದೇಶದ ಕಾರಣದಿಂದಾಗಿ ಭಾರತ-ಬಾಂಗ್ಲಾ ಗಡಿಯಲ್ಲಿ ಬೇಲಿ ಹಾಕುವ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಕಾಶ್ಮೀರದಿಂದ ಹೊರದಬ್ಬಲ್ಪಟ್ಟ 3800 ಮಂದಿಗೆ ಕಾಶ್ಮೀರದಲ್ಲಿ ಪುನರ್ವಸತಿ

Fri Mar 26 , 2021
೯೦ರ ದಶಕದಲ್ಲಿ ಕಾಶ್ಮೀರದ ಕಣಿವೆಯಿಂದ ಹೊರದಬ್ಬಲ್ಪಟ್ಟವರ ಪೈಕಿ ಸುಮಾರು ೩,೮೦೦ ಜನರು ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಮಂತ್ರಿಗಳ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ನೀಡಲಾದ ಉದ್ಯೋಗವನ್ನು ಪಡೆದುಕೊಂಡು ಕಣಿವೆಗೆ ಮರಳಿದ್ದಾರೆ. 370ನೇ ವಿಧಿಯ ರದ್ದಿನ ನಂತರ 570 ವಲಸೆ ಕಾರ್ಮಿಕರು ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಮರಳಿದ್ದು ಅಂತವರ ಪ್ರಮಾಣ ಗಣನೀಯವಾಗಿ ಏರುತ್ತಿದೆ, 2021ರಲ್ಲಿ ಸುಮಾರು 2 ಸಾವಿರ ಜನರು ಮರಳುವ ನಿರೀಕ್ಷೆಯಿದೆ. ಮುಸ್ಲಿಂ ಮೂಲಭೂತವಾದಿಗಳ ದಬ್ಬಾಳಿಕೆಯ ಕಾರಣದಿಂದ ೧೯೯೦ರ ದಶಕದಲ್ಲಿ 44,167 […]