ಬೆಡ್ ಬುಕ್ಕಿಂಗ್ ಹಗರಣ : ಎನ್ಐಎ ತನಿಖೆಗೆ ಹಿಂದು ಜಾಗರಣ ವೇದಿಕೆ ಆಗ್ರಹ

ಬೆಂಗಳೂರು: ಬೆಡ್ ಬುಕ್ಕಿಂಗ್ ಹಗರಣವು ಜಿಹಾದಿ ತಳಿಗಳ ರೂಪಂತರಿ ಕೃತ್ಯವಾಗಿದೆ.  ರಾಜದ್ರೋಹ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಎನ್ಐಎಗೆ ಒಪ್ಪಿಸುವಂತೆ ಕರ್ನಾಟಕ ಹಿಂದು ಜಾಗರಣ ವೇದಿಕೆ ಆಗ್ರಹಿಸಿದೆ

ಕೋವಿಡ್ ಮೊದಲ ಅಲೆಯ ಸಂಕ?ದ ಸಂದರ್ಭದಲ್ಲಿ ಅಶಾಂತಿಯನ್ನು ಹುಟ್ಟುಹಾಕಿ ಅರಾಜಕತೆಯನ್ನು ಸೃಷ್ಟಿಸಲು ದಂಗೆಯ ಮಾದರಿಯ ಕೃತ್ಯಗಳನ್ನು ಬೆಂಗಳೂರಿನಲ್ಲಿ ನಡೆಸಿದ್ದ ಮುಸ್ಲಿಂ ಮೂಲಭೂತವಾದಿ ಜೆಹಾದಿ ಶಕ್ತಿಗಳು ಈ ಭಾರಿ ಮಹಾಮಾರಿಯಂತೆಯೇ ರೂಪಾಂತರಗೊಂಡು ಆಡಳಿತ ಯಂತ್ರದ ಒಳಗೇ ನುಸುಳಿ ಸಾಮಾಜಿಕ ಅಲ್ಲೋಲಕಲ್ಲೋಲ ಉಂಟುಮಾಡಿ ಕೋಲಾಹಲವನ್ನೆಬ್ಬಿಸಿ ಹೊಸ ಮಾದರಿಯ ದಂಗೆಗೆ ದಾರಿಮಾಡಿಕೊಡುವ ಕೃತ್ಯವನ್ನು ನಡೆಸಿರುವುದು ದೇಶದ್ರೋಹದ ಮಹಾಪರಾಧವೇ ಆಗಿದ್ದು. ರಾಜ್ಯ ಸರ್ಕಾರವು ಪ್ರಕರಣದ ಗಂಭೀರತೆಯನ್ನು ಅರ್ಥಮಾಡಿಕೊಂಡು “ರಾಜದ್ರೋಹ”ದ ಕಾನೂನಿನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ಒಪ್ಪಿಸಬೇಕೆಂದು ಕರ್ನಾಟಕ ಹಿಂದು ಜಾಗರಣ ವೇದಿಕೆಯು ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತದೆ.

ರಾಜ್ಯ ಸರ್ಕಾರವು ಈ ಘಟನೆಯನ್ನು ಒಂದು ಸಾಧಾರಣ ಭ್ರ ಷ್ಟಾಚಾರದ ’ದುಡ್ಡು ಮಾಡುವ ದಂಧೆ’ ಎಂದು ಪರಿಗಣಿಸದೆ ಸಮಾಜದಲ್ಲಿ ಅಶಾಂತಿಯನ್ನು ಹುಟ್ಟುಹಾಕಿ ಜನಸಾಮಾನ್ಯರಲ್ಲಿ ಆಕ್ರೋಶವನ್ನು ಸೃಷ್ಟಿಸಿ, ಅರಾಜಕತೆಯನ್ನು ನಿರ್ಮಾಣಮಾಡುವ ’ದೇಶದ್ರೋಹ”ದ ಅಸಾಧಾರಣ ಕೃತ್ಯವೆಂದು ಪರಿಗಣಿಸಿ ದಿಟ್ಟಕ್ರಮಕ್ಕೆ ಮುಂದಾಗಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದೆ.

ಈ ದೇಶದ್ರೋಹಿ ಮತೀಯ ಜಿಹಾದಿ ಶಕ್ತಿಗಳು ಆಡಳಿತಯಂತ್ರದ ಒಳಗೆ ನುಸುಳಲು ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ಪೂರ್ವಾಪರದ ಬಗ್ಗೆಯೂ ತೀವ್ರವಾದ ತನಿಖೆ ನಡೆಸಿ ಬುಡಮೇಲು ಕೃತ್ಯ ಎಸಗುವ ದುಷ್ಟ ಸಮಾಜಘಾತುಕ ಶಕ್ತಿಗಳೊಂದಿಗೆ ಶಾಮೀಲಾಗಿರುವ ’ಅಧಿಕಾರಶಾಹಿ’ ಮಾಫಿಯಾವನ್ನು ಬಂಧಿಸಿ ಅವುಗಳನ್ನು ಬಗ್ಗುಬಡಿದು ಮತ್ತೆಂದು ಅವುಗಳು ತಲೆ ಎತ್ತದಂತೆ ಅವುಗಳ ಹುಟ್ಟಡಗಿಸುವ ಗಟ್ಟಿ ನಿರ್ಧಾರ ಕೈಗೊಂಡು ಆಗಿರುವ ಪ್ರಮಾದಕ್ಕೆ ಸರ್ಕಾರ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದು ಕರ್ನಾಟಕ ಹಿಂದು ಜಾಗರಣ ವೇದಿಕೆ ಆಗ್ರಹಿಸುತ್ತದೆ.

–  ಬಿ.ಎಸ್. ಪೈ, ರಾಜ್ಯ ಅಧ್ಯಕ್ಷರು, ಹಿಂದು ಜಾಗರಣ ವೇದಿಕೆ, ಕರ್ನಾಟಕ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಕರೊನಾ ಆಪತ್ತಿನಲ್ಲಿ ಮಿಡಿದ ಅಂತಃಕರಣ

Wed May 5 , 2021
ವಿಚಿತ್ರ ತಲ್ಲಣವನ್ನು ಸೃಷ್ಟಿಸಿರುವ ಕರೊನಾ ಮಾನವೀಯ ಸಂಕಟದ ಕರಾಳತೆಯನ್ನು ಪರಿಚಯಿಸಿದೆ. ಸೋಂಕಿತರ ಹೆಚ್ಚುತ್ತಿರುವ ಸಂಖ್ಯೆ, ಮರಣ ಪ್ರಮಾಣ ಆತಂಕಕ್ಕೂ  ಕಾರಣವಾಗಿದೆ. ಲಾಕ್ಡೌನ್ನಿಂದ ನಾಡು ಸ್ತಬ್ಧವಾಗಿದೆ. ಭರವಸೆಯ ಬೆಳ್ಳಿಮಿಂಚು ಎಲ್ಲಾದರೂ ಗೋಚರಿಸೀತೇ ಎಂದು ಶ್ರೀಸಾಮಾನ್ಯರು ತವಕದಿಂದ ಕಾಯುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಸ್ಥಿತಿ ತುಂಬ ಭಿನ್ನ. ಹಾಗಾಗಿ, ಅವಶ್ಯಕತೆಗಳು ಕೂಡ ಭಿನ್ನವೇ. ಇದಕ್ಕೆ ಅಷ್ಟೇ ಪರಿಣಾಮಕಾರಿಯಾಗಿ ಸ್ಪಂದಿಸುತ್ತ ನೈರಾಶ್ಯದ ವಾತಾವರಣದಲ್ಲಿಯೂ ಒಂದಿಷ್ಟು ಆಶಾವಾದ ಮೂಡಿಸಿವೆ ಹಲವು ಸ್ವಯಂಸೇವಾ ಸಂಸ್ಥೆಗಳು ಮತ್ತು […]