ಭದ್ರಾವತಿಯಲ್ಲಿ 9 ಜನ ಮರಳಿ ಮಾತೃಧರ್ಮಕ್ಕೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಭದ್ರಾವತಿಯ ವತಿಯಿಂದ. ದಿನಾಂಕ 26.12. 21ರ ಭಾನುವಾರದಂದು 9 ಜನ ಮರಳಿ ಮಾತೃಧರ್ಮಕ್ಕೆ ವಾಪಾಸ್ಸಾಗಿದ್ದಾರೆ.

 ಅಂತರಗಂಗೆಯ ಗ್ರಾಮದ ನಿವಾಸಿ ಜಯಶೀಲನ್. ಮತ್ತು ಶ್ರೀಮತಿ ಜಯಮ್ಮ ಹಾಗೂ  ಇವರ ಕುಟುಂಬ ಸದಸ್ಯರಾದ ಪ್ರಭಾಕರನ್ ಶ್ರೀಮತಿ ಲಲಿತಾ ಪ್ರಭಾಕರನ್, ಮಕ್ಕಳಾದ ಭರತ್ ಕುಮಾರ್, ಭಾವನಾ, ದ್ವಿತೀಯ ಪುತ್ರ ಪ್ರಕಾಶ  ಮತ್ತು ಶ್ರೀಮತಿ ಶ್ವೇತಾ ಪ್ರಕಾಶ್ ಹಾಗೂ ಪುತ್ರಿ ಪೃಥ್ವಿ ಇವರ ಜೊತೆಗೂಡಿ ಭದ್ರಾವತಿಯ ಜನ್ನಾಪುರ ಸಾರ್ವಜನಿಕ ಶ್ರೀ ರಾಮ ಭಜನಾ ಮಂದಿರದಲ್ಲಿಮರಳಿದ್ದಾರೆ.

ಮೂಲತಃ ಹಿಂದೂ ಕುಟುಂಬವಾಗಿದ್ದ  ಏಳುಮಲೈ (ಕುಟುಂಬದ ಹಿರಿಯರು) ಎಂಬುವವರ ಪರಿವಾರವು1980 ರಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿತ್ತು. ಆದರೆ ಅವರ ಕುಟುಂಬದ ಯಾವ ಸದಸ್ಯರು ಕೂಡ ಕ್ರಿಶ್ಚಿಯನ್ನರ ಧರ್ಮಾಚರಣೆ ಮಾಡದೇ ಚರ್ಚ್ ಗೆ ತೆರಳದೆ ಹಿಂದೂ ಧರ್ಮದ ಅನುಸಾರ ಆಚರಣೆಗಳನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

 ಶ್ರೀಯುತ ಶ್ರೀ ಕೃಷ್ಣಮೂರ್ತಿ ಸೋಮಯಾಜಿ, ಅರಕೆರೆಯ  ಪರಮಪೂಜ್ಯ ಶ್ರೀಶ್ರೀಶ್ರೀ ಕರಿಸಿದ್ದೇಶ್ವರ ಸ್ವಾಮೀಜಿಯವರ ಇವರ ಸಮ್ಮುಖದಲ್ಲಿ ತಮ್ಮ ಸಂಪೂರ್ಣ ಆತ್ಮಸಾಕ್ಷಿಯಿಂದ ಹಿಂದೂಧರ್ಮ ಸೇರುವ ವಿಜ್ಞಾಪನೆ ಮಾಡಿಕೊಂಡು ಅವರ ಅನುಮತಿ ಆಶೀರ್ವಾದ ಪಡೆದುಕೊಂಡು  ಹಿಂದೂ ಧರ್ಮಕ್ಕೆ ಮರಳಿದರು.

ಇದೆ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ತಿನ ಪ್ರಮುಖರಾದ ಹಾ. ರಾಮಪ್ಪ. ಡಿ.ಆರ್. ಶಿವಕುಮಾರ್. ವೈಎಸ್. ರಾಮಮೂರ್ತಿ. ಎಸ್. ನಾರಾಯಣ್. ಪಿ ಮಂಜುನಾಥ್ ರಾವ್. ಶೈಲೇಶ್ ಕೋಟಿ. ಸಿ. ಮಹೇಶ್ವರಪ್ಪ. ಶಿವಮೂರ್ತಿ. ಶ್ರೀಮತಿ ಯಶೋದ ವೀರಭದ್ರಪ್ಪ. ಶ್ರೀಮತಿ ಪಂಚ ರತ್ನಮ್ಮ. ಶ್ರೀಮತಿ ಕೆಆರ್. ವೇದಾವತಿ ಶ್ರೀಮತಿ ಗಾಯತ್ರಿ. ಆರ್ ಎಸ್ ಶೋಭಾ. ಮಂಜುಳಾ. ಅನ್ನಪೂರ್ಣ ಸತೀಶ್. ಹೇಮಾವತಿ. ಪರಿವಾರದ ಪ್ರಮುಖರಾದ. ಬಾನಿ ಮಹದೇವ್. ಕುಲಕರ್ಣಿ. ಕೃಷ್ಣಮೂರ್ತಿ. ಚಂದ್ರಪ್ಪ. ಸುಬ್ರಮಣಿ. ಸುರೇಶ್ ಬಾಬು. ಬಜರಂಗದಳದ ವಡಿವೇಲು. ದಿನೇಶ್. ರವಿಕುಮಾರ್. .ವಸಂತಕುಮಾರ್ .ಬೆಟ್ಟೇಗೌಡ. ಶ್ರೀರಾಮಸೇನೆಯ ಉಮೇಶ್ ಗೌಡ. ಈ ಕಾರ್ಯಕ್ರಮಕ್ಕೆ ವಿವಿಧ ಸಂಘಟನೆಯ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ರಾಷ್ಟ್ರಕವಿ ಕುವೆಂಪು : ಕನ್ನಡದಲ್ಲಿ ಮೊಳಗಿದ ರಾಷ್ಟ್ರ ಧ್ವನಿ

Wed Dec 29 , 2021
 ರಾಷ್ಟ್ರಕವಿ ಕುವೆಂಪುಜನ್ಮದಿನದ ಸಂಭ್ರಮದಲ್ಲಿದ್ದೇವೆ . ಕುವೆಂಪು ವೈಚಾರಿಕತೆ, ದಾರ್ಶನಿಕತೆ, ಕನ್ನಡದ ಬಗೆಗಿನ ಚಿಂತನೆಗಳೆಲ್ಲವೂ ಮರು ಚಿಂತನೆಗೊಳಗಾಗುವ, ಅವರ ಚಿಂತನೆಗಳನ್ನು ವರ್ತಮಾನಕ್ಕೆ ಅನ್ವಯಿಸುವ ಕುರಿತಾದ ಮಾತುಗಳೆಲ್ಲವೂ ಕೇಳಿಬರುತ್ತದೆ. ಮತ್ತೊಂದಷ್ಟು ಜನ ಕುವೆಂಪು ಹೇಳಿಲ್ಲದ ವಿಚಾರಗಳನ್ನು ಕುವೆಂಪು ಅವರಿಗೆ ಆರೋಪಿಸುವ ಕುಬ್ಜತನವನ್ನೂ ತೋರುವವರಿದ್ದಾರೆ. ಬಹುಶಃ ಕನ್ನಡ ನಾಡಿನಲ್ಲಿ ತಪ್ಪು ವ್ಯಾಖ್ಯಾನಕ್ಕೆ, ಅಪವ್ಯಾಖ್ಯಾನಕ್ಕೆ ಒಳಗಾದವರಲ್ಲಿ ಕುವೆಂಪು ಅವರೂ ಒಬ್ಬರು. ಕನ್ನಡದ ನೆಲದಲ್ಲಿ ಕನ್ನಡದ ಗುಣಗಾನಕ್ಕೆ, ಕನ್ನಡಕ್ಕೆ ಬಂದಿರುವ ಸಂಕಟಗಳ ಕುರಿತ ಮಾತಿಗೆ ಅನ್ಯಭಾಷಾ ದ್ವೇಷದ, […]