ಬುಡಕಟ್ಟು ಜನಾಂಗದ ಅಪ್ರತಿಮ ನಾಯಕ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಸ್ಮರಣೆಯಲ್ಲಿ ನಿರ್ಮಾಣವಾಗುತ್ತಿದೆ ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ

ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಓಡಿಶಾದ ರೂರ್‌ ಕೆಲಾದಲ್ಲಿ ಶಿಲಾನ್ಯಾಸ  ನೆರವೇರಿಸಲಾಗಿದೆ. ಬುಡಕಟ್ಟು ಜನಾಂಗದ ಅಪ್ರತಿಮ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬಿರ್ಸಾ ಮುಂಡಾ ಅವರ ಸ್ಮರಣೆಯಲ್ಲಿ ನಿರ್ಮಾಣವಾಗುತ್ತಿರುವ ಈ ಅತ್ಯಾಧುನಿಕ ಕ್ರೀಡಾಂಗಣ ೨೦ ಸಾವಿರಕ್ಕೂ ಹೆಚ್ಚು ಜನ ಪ್ರೇಕ್ಷಕರ ಸಾಮರ್ಥ್ಯ ಹೊಂದಲಿದೆ. ಭಾರತದ ರಾಷ್ಟ್ರೀಯ ಕ್ರೀಡೆಯೂ ಆಗಿರುವ ಹಾಕಿ ಕ್ರೀಡೆಯ ೨೦೨೩ರ ವಿಶ್ವಕಪ್ ಆತಿಥ್ಯವನ್ನು ಬಿರ್ಸಾ ಮುಂಡಾ ಕ್ರೀಡಾಂಗಣ ವಹಿಸಲಿದೆ.

ಈ ಕ್ರೀಡಾಂಗಣವು 120 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ನಿರ್ಮಾಣದ ಜವಾಬ್ದಾರಿಯನ್ನು ಪ್ರತಿಷ್ಠಿತ ಇಂಡಸ್ಟ್ರೀಯಲ್ ಗ್ರೋಥ್ ಕಂಪೆನಿ (IDCO) ವಹಿಸಿಕೊಂಡಿದೆ. ಿದಕ್ಕಾಗಿ ಒಡಿಶಾ ಸರ್ಕಾರ 15 ಎಕರೆ ಜಾಗ ಮೀಸಲಿರಿಸಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

13 ಮಂದಿ ಮಂಗಳಮುಖಿಯರು ಪೋಲಿಸರಾಗಿ ನೇಮಕ

Thu Mar 25 , 2021
ಛತ್ತೀಸ್‌ ಘಡ: ಇತ್ತೀಚೆಗೆ ರಾಯ್‌ಪುರದಲ್ಲಿ ೧೩ ಮಂದಿ ಮಂಗಳಮುಖಿಯರನ್ನು ಕಾನ್‌ ಸ್ಟೇಬಲ್‌ಗಳಾಗಿ ನೇಮಕ ಮಾಡಿಕೊಳ್ಳುವ ಮೂಲಕವಾಗಿ ಸಮಾಜದಲ್ಲಿ ವಂಚಿತ ತೃತೀಯಲಿಂಗಿಗಳೂ ಆರಕ್ಷಕರಾಗಿ ಸೇವೆ ಸಲ್ಲಿಸಬಹುದು ಎನ್ನುವ ಸಂದೇಶವನ್ನು ಛತ್ತೀಸ್‌ ಘಡ್ ಪೊಲೀಸರು ನೀಡಿದ್ದಾರೆ. ಹಾಗೆಯೇ ಪೋಲಿಸ್ ಪಡೆಯಲ್ಲಿ ಅವರು ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲರು ಎನ್ನುವುದನ್ನು ಸಾಬೀತು ಪಡಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಕೆಲವು ದಿನಗಳ ತೃತೀಯಲಿಂಗಿ ಮಹಿಳೆಯನ್ನು ಗ್ರಾಮ ಪಂಚಾಯ್ತಿಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಘಟನೆ ಕರ್ನಾಟಕದ ಮೈಸೂರಿನಲ್ಲಿ ವರದಿಯಾಗಿತ್ತು. email […]