ಭಾರತ 75 : ಸ್ವಾತಂತ್ರ್ಯೋತ್ಸವ ಆಚರಣೆಗೆ 259 ಸದಸ್ಯರ ಸಮಿತಿ ರಚನೆ

75ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದೆ.

ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಸಂಬಂಧ ಮತ್ತು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬಹುದು ಎಂಬ ಕುರಿತು ಈ ಸಮಿತಿ ಮಾರ್ಗಸೂಚಿಗಳನ್ನು, ನಿರ್ದೇಶನಗಳನ್ನು  ನೀಡಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ಸಮಿತಿಯು 259 ಸದಸ್ಯರನ್ನು ಒಳಗೊಂಡಿದ್ದು,  ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್, 28 ರಾಜ್ಯಗಳ ಮುಖ್ಯಮಂತ್ರಿಗಳು, ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್, ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ, ರಾಜ್ಯಪಾಲರು, ಕೇಂದ್ರ ಸಚಿವರು, ವಿರೋಧ ಪಕ್ಷಗಳ ಮುಖಂಡರಾದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮುಂತಾದವರು ಈ ಸಮಿತಿಯಲ್ಲಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸುಷ್ಮಾ ಭಾಡು: ಮಹಿಳೆಯರ ಉನ್ನತಿಗಾಗಿ ಮಾದರಿ ಗ್ರಾಮ ಪಂಚಾಯತ್ ರೂಪಿಸಿದ ಅದ್ವೀತಿಯ ಸಾಧಕಿ

Sat Mar 6 , 2021
ಮೂವತ್ತೇಳು ವರ್ಷದ ಸುಷ್ಮಾ ಭಾಡು ಹರಿಯಾಣದ ಧನಿ ಮಿಯಾನ್ ಖಾನ್ ಗ್ರಾಮದ ಬಿಷ್ಣೋಯ್ ಸಮುದಾಯಕ್ಕೆ ಸೇರಿದವರು. ಮತ್ತು ಅದರ ಸರ್ಪಂಚ್. ಹೆಣ್ಣು ಮಗುವನ್ನು ತಿರಸ್ಕರಿಸುವ ರಾಜ್ಯದಲ್ಲಿ (ಹರ್ಯಾಣದಲ್ಲಿ) ಜನಿಸಿದ ಸುಷ್ಮಾ ಭಾಡು ಮಹಿಳೆಯರ ಹಕ್ಕುಗಳು ಮತ್ತು ಹೆಣ್ಣುಮಕ್ಕಳ ಉಳಿವಿಗಾಗಿ ಧನಿ ಮಿಯಾನ್ ಖಾನ್ ಪಂಚಾಯಿತಿಯನ್ನು ‘ಮಾದರಿ ಪಂಚಾಯತ್’ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  2010ರಲ್ಲಿ ಮೂರು ಗ್ರಾಮಗಳಾದ ಸಲಾಮ್ ಖೇರಾ, ಚಬ್ಲಮೋರಿ ಮತ್ತು ಧನಿ ಮಿಯಾನ್ ಖಾನ್ ಸರಪಂಚ್ ಆಗಿ ಚುನಾಯಿತರಾದ ಅವರು, […]