ಭೂಮಿಯ ಸುಪೋಷಣೆಗಾಗಿ ರಾಷ್ಟ್ರೀಯ ಅಭಿಯಾನ : ನಾಳೆ, ಏ.9ರಂದು ಅಭಿಯಾನದ ರಾಷ್ಟ್ರೀಯ ಸಮಿತಿ ಸದಸ್ಯ ಆನಂದ ಅವರಿಂದ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ

ಬೆಂಗಳೂರು, ಏ.8, 2021: ರಾಸಾಯನಿಕಗಳ ಬಳಕೆಯಿಂದ ಭೂಮಿ ಬಂಜರಾಗುವುದನ್ನು ತಪ್ಪಿಸಿ, ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಅಕ್ಷಯ ಕೃಷಿ ಪರಿವಾರ, ಸಾವಯವ ಕೃಷಿ ಪರಿವಾರ, ಸ್ವದೇಶಿ ಜಾಗರಣ ಮಂಚ್, ಗ್ರಾಮ ವಿಕಾಸ, ವನವಾಸಿ ಕಲ್ಯಾಣ ಸೇರಿದಂತೆ ಹಲವು ಸಂಘಟನೆಗಳು ದೇಶದಾದ್ಯಂತ  ‘ಭೂಮಿ ಸಂಪೋಷಣೆ ಮತ್ತು ಸಂರಕ್ಷಣೆ’ ಎಂಬ ಜನಜಾಗೃತಿ ಅಭಿಯಾನವನ್ನು ನಡೆಸಲಿವೆ.

ಈ ಅಭಿಯಾನವು ವಿವಿಧ ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಅಭಿಯಾನವು ಇದೇ ಯುಗಾದಿಯಂದು, ಏಪ್ರಿಲ್ 13ರಿಂದ ಜುಲೈ 24ರ ವರೆಗೆ ನಡೆಯಲಿದೆ.

ಭೂಮಿ ಸುಪೋಷಣೆಗಾಗಿ ಕೃಷಿಕರ, ಸಾಮಾನ್ಯ ಜನರ ಸಂಪರ್ಕ ಮಾಡುವುದು, ಈಗಾಗಲೇ ಸುಪೋಷಣೆಯಲ್ಲಿ ತೊಡಗಿರುವ ಕೃಷಿಕರಿಂದ ಇನ್ನಷ್ಟು ಕಲಿಯುವುದು, ಆಸಕ್ತರನ್ನು ಪ್ರೇರೇಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ತನ್ನಿಮಿತ್ತ, ಇದೇ ಏಪ್ರಿಲ್ 9, 2021 (ನಾಳೆ) ರಂದು, ಬೆಳಿಗ್ಗೆ 9 ಗಂಟೆಗೆ ಪತ್ರಿಕಾ ಗೋಷ್ಠಿ ಆಯೋಜಿಸಲಾಗಿದೆ.

ಅಭಿಯಾನದ ರಾಷ್ಟ್ರೀಯ ಸಮಿತಿಯ ಸದಸ್ಯರಾದ ಆ. ಶ್ರೀ. ಆನಂದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭಿಯಾನದ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ.

online ಪತ್ರಿಕಾಗೋಷ್ಠಿ webex ಮೂಲಕ ನಡೆಯಲಿದೆ.

ವಿವರಗಳಿಗಾಗಿ ಸಂಪರ್ಕಿಸಿ : 98453 42972

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಅಯೋಧ್ಯೆಯ ನೂತನ ರಸ್ತೆಗಳಿಗೆ ಕೊಠಾರಿ ಸಹೋದರರ ಹೆಸರನ್ನು ನಾಮಕರಣ ಮಾಡಿದ ಯುಪಿ ಸರ್ಕಾರ

Thu Apr 8 , 2021
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾದ ರಸ್ತೆಗಳಿಗೆ ಶ್ರೀ ರಾಮಜನ್ಮಭೂಮಿ.ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದ ರಾಮ್ ಕುಮಾರ ಕೊಠಾರಿ ಮತ್ತು ಶರದ್ ಕುಮಾರ್ ಕೊಠಾರಿ ಸಹೋದರರ ಹೆಸರನ್ನು ನಾಮಕರಣ ಮಾಡಿದೆ. 1990ರಲ್ಲಿ ನಡೆದ 2ನೇ ಹಂತದ ಕರಸೇವೆಯಲ್ಲಿ  ಕೊಠಾರಿ ಸಹೋದರರು ವಿವಾದಗ್ರಸ್ಥ ಕಟ್ಟಡದ ಗುಂಬಜ್ ಮೇಲೆ ಭಗವಾಧ್ವಜವನ್ನು ಹಾರಿಸಿದ್ದರು. ಅತ್ಯಂತ ಕರಸೇವಕರ ಮೇಲೆ ಅಮಾನುಷವಾಗಿ ನಡೆದುಕೊಂಡ ಮುಲಾಯಂ ಸಿಂಗ್ ಸರ್ಕಾರದ ಪೊಲೀಸರು ಕೊಠಾರಿ ಸಹೋದರರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿತ್ತು. ಈ […]