ಛತ್ತೀಸ್ ಘಡದ ಕುಖ್ಯಾತ ನಕ್ಸಲ್ ನಾಯಕ ಕೋಸಾನನ್ನು ಹತ್ಯೆ ಮಾಡಿದ ಭದ್ರತಾ ಪಡೆಗಳು

ಛತ್ತೀಸ್ ಘಡ: ರಾಜ್ಯದ ಕುಖ್ಯಾತ ನಕ್ಸಲ್ ನಾಯಕ ‘ಕೋಸಾ’ನನ್ನು ಭದ್ರತಾ ಪಡೆಗಳು ಇಂದು (ಏ.20) ಬೆಳಿಗ್ಗೆ ಹತ್ಯೆ ಮಾಡಿವೆ.

ಈ ಕುರಿತು ಮಾಹಿತಿ ನೀಡಿದ ದಂತೇವಾಡ ಎಸ್‌ಪಿ ಅಭಿಷೇಕ್ ಪಲ್ಲವ್ ಅವರು, ದಂತೇವಾಡ ಜಿಲ್ಲಾ ಮೀಸಲು ಪಡೆ ಛತ್ತೀಸ್ ಘಡದ ನೀಲವಾಯಾ ಅರಣ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೋಸ್ಟ್ ನಟೋರಿಯಸ್ ನಕ್ಸಲ್ ನಾಯಕ ‘ಕೋಸಾ’ ಹತನಾಗಿದ್ದಾನೆ ಎಂದು ತಿಳಿಸಿದ್ದಾರೆ.

ಇದೇ ಏಪ್ರಿಲ್ ತಿಂಗಳ ಆರಂಭದಲ್ಲಿ ಛತ್ತೀಸ್ ಘಡದ ಸುಕ್ಮಾ ಮತ್ತು ಬಿಜಾಪುರ್ ನಡುವಿನ ಜುನಾಗಡದಲ್ಲಿ ನಕ್ಸಲರು ನಡೆಸಿದ್ದ ಭೀಕರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು. ಈ ದಾಳಿ ಬೆನ್ನಲ್ಲೇ ಭದ್ರತಾ ಪಡೆಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದವು.

ಮೃತ ನಕ್ಸಲ್ ನಾಯಕ ಕೋಸಾ ಮೂಲತಃ ನೀಲವಾಯದ ಮಲ್ಲಪಾರ ನಿವಾಸಿಯಾಗಿದ್ದ. ಕಳೆದ 15 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಪ್ರಸ್ತುತ ಮಲಂಗೀರ್ ಪ್ರದೇಶ ಸಮಿತಿ ಸದಸ್ಯನಾಗಿದ್ದ ಮತ್ತು ಮಿಲಿಟರಿ ಗುಪ್ತಚರ ಉಸ್ತುವಾರಿ ವಹಿಸಿದ್ದ. ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಅಪರಾಧಗಳು ದಾಖಲಾಗಿವೆ. ಈತನ ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ರೂ ಬಹುಮಾನ ನೀಡುವುದಾಗಿ ಇಲಾಖೆ ಘೋಷಣೆ ಮಾಡಿತ್ತು ಎಂದು ಎಸ್‌ಪಿ ಅಭಿಷೇಕ್ ಪಲ್ಲವ್ ಅವರು ಹೇಳಿದ್ದಾರೆ.

ಘಟನಾ ಸ್ಥಳದಲ್ಲಿ ಒಂದು 9 ಎಂಎಂ ಪಿಸ್ತೂಲ್, ಒಂದು ದೇಶೀ ನಿರ್ಮಿತ ಭರ್ಮಾರ್,  3ಕೆಜಿ ಐಇಡಿ ಸ್ಫೋಟಕ, ಪಿಥೂಸ್, ಔಷಧಿಗಳು ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ಭದ್ರತಾ ಪಡೆ ವಶಪಡಿಸಿಕೊಂಡಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಮಧ್ಯಪ್ರದೇಶದ 211 ಶಾಲೆಗಳನ್ನು ಕೊರೋನಾ ಲಸಿಕೆ-ಕ್ವಾರಂಟೈನ್ ಕೇಂದ್ರಗಳನ್ನಾಗಿ ಬಳಸಿಕೊಳ್ಳುವಂತೆ ಆರೆಸ್ಸೆಸ್ ಮನವಿ

Tue Apr 20 , 2021
ಕೊರೋನಾ ಮಹಾಮಾರಿಯ ತೀವ್ರತೆ ಹೆಚ್ಚಾಗಿರುವುದರಿಂದ ತಮ್ಮ 211 ಶಾಲೆಗಳನ್ನು ಕೊರೋನಾ ಪೀಡಿತರ ಚಿಕಿತ್ಸೆಗೆ ಬಳಸಿಕೊಳ್ಳುವಂತೆ ಸ್ಥಳೀಯ ಆರೆಸ್ಸೆಸ್ ಹಾಗೂ ಪರಿವಾರ ಸಂಘಟನೆ ಸೇವಾಭಾರತಿ ಮಧ್ಯಪ್ರದೇಶ ಸರ್ಕಾರವನ್ನು ಮನವಿ ಮಾಡಿದೆ. ಗ್ವಾಲಿಯರ್ ಮತ್ತು ಭೂಪಾಲ್ ನಲ್ಲಿ 9,ಶಿವಪುರ ಮತ್ತು ರೈಸನ್ ಗಳಲ್ಲಿ 8, ಮೊರೆನಾದಲ್ಲಿ 7, ಗುನಾ ಮತ್ತು ಬೀತಲ್ ಗಳಲ್ಲಿ 6 ಸೇರಿದಂತೆ ಒಟ್ಟು ಮಧ್ಯ ಪ್ರದೇಶದ 16 ಜಿಲ್ಲೆಗಳಲ್ಲಿ 100 ಶಾಲೆಗಳನ್ನು ಕ್ಯಾರಂಟೈನ್ ಕೇಂದ್ರಗಳನ್ನಾಗಿ  ಹಾಗೂ 111 ಶಾಲೆಗಳನ್ನು […]