ರಸ್ತೆ ನಿರ್ಮಾಣದಲ್ಲಿ ಹಿಂದಿನ 66 ವರ್ಷ ಮೀರಿಸಿದ ಮೋದಿ ಸರ್ಕಾರ. ದೂರ ಮತ್ತು ವೇಗದಲ್ಲಿ ಮೋದಿಗೆ ಸಾಟಿಯಿಲ್ಲ

ರಸ್ತೆ ನಿರ್ಮಾಣದಲ್ಲಿ ಹಿಂದಿನ 66 ವರ್ಷ ಮೀರಿಸಿದ ಮೋದಿ ಸರ್ಕಾರ.  ಕಳೆದ 7 ವರ್ಷಗಳಲ್ಲಿ ಹಿಂದಿನ 66 ವರ್ಷಗಳಲ್ಲಿ ನಿರ್ಮಾಣವಾದ ರಸ್ತೆಗಳಿಗಿಂತ ಅಧಿಕ ರಸ್ತೆಗಳು ನಿರ್ಮಾಣವಾಗಿವೆ.

ಭಾರತದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು ಉದ್ದ:

2013-14ರಲ್ಲಿ 91,287 KMs

2020-21ರಲ್ಲಿ 162,000 KMs

ಅಂದರೆ 2013-14ರಲ್ಲಿ ಭಾರತದಲ್ಲಿದ್ದ 91,287 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿಗಳಿದ್ದವು. ನರೇಂದ್ರ ಮೋದಿ ನೇತೃತ್ವದ ಮೋದಿ ಸರ್ಕಾರ ಕಳೆದ 7 ವರ್ಷಗಳಲ್ಲಿ 71000 ಕಿ.ಮೀ. ಗೂ ಅಧಿಕ ದೂರದ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿದೆ.

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿಯೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಜೊತೆಗೆ ರಸ್ತೆ ನಿರ್ಮಾಣದಿಂದ ಪೀಡಿತ ಜನರಿಗೆ ನೀಡುವ ಪರಿಹಾರದಲ್ಲಿಯೂ ಜನಸ್ನೇಹಿಯಾಗಿದೆ. ಇದೇ ಕಾರಣದಿಂದ ರಸ್ತೆ ನಿರ್ಮಾಣಕ್ಕೆ ವೇಗ ದೊರೆತಿದೆ ಎನ್ನುತ್ತಾರೆ ತಜ್ಞರು.

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ( ಕಿ.ಮಿ. / ದಿನಕ್ಕೆ)

2014-15 12.1

2015-16 16.6

2016-17 22.5

2017-18 26.9

2018-19 29.7

2019-20 28.1

2020-21 33.4

2021-22 40.0

ಯೂರೋಪಿನ ಅನೇಕ ದೇಶಗಳು ಅತ್ಯುತ್ತಮ ರಸ್ತೆಗಳನ್ನು ಹೊಂದಿವೆ, ಏಕೆಂದರೆ ಆ ದೇಶಗಳು ಮುಂದುವರಿದಿವೆ ಎಂಬುದು ಸಾಮಾನ್ಯರ ಅನಿಸಿಕೆ. ಆದರೆ ಭಾರತ ದರ್ಶನ ಖ್ಯಾತಿಯ ವಿದ್ಯಾನಂದ ಶೆಣೈಯವರು ಇದನ್ನು ಬೇರೆ ರೀತಿಯೇ ಹೇಳುತ್ತಿದ್ದರು. ಯೂರೋಪಿನ ಅನೇಕ ದೇಶಗಳು ರಸ್ತೆಗಳನ್ನು ಚೆನ್ನಾಗಿ ನಿರ್ಮಿಸಿಕೊಂಡವು; ಹೀಗಾಗಿ ಅವು ಅಭಿವೃದ್ಧಿಗೊಂಡಿವೆ. ಇದು ನಿಜವಾದ ಮಾತೇ ಆಗಿದೆ. ದೇಶದ ಅಭಿವೃದ್ಧಿಗೆ ಸಾರಿಗೆ ಸಂಪರ್ಕ ವ್ಯವಸ್ಥೆ ಅತ್ಯುತ್ತಮವಾಗಿರಬೇಕಾದದ್ದು ಮೊದಲನೇ ಅಂಶವಾಗಿದೆ. ದೇಶದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪಯಣಿಸುವುದೊಂದು ಕಡೆಯಾದರೆ ಕೈಗಾರಿಕಾ ಬೆಳವಣಿಗೆಗೆ ಅಗತ್ಯವಾದ ಕಚ್ಚಾವಸ್ತು ಮತ್ತು ಸಿದ್ಧವಸ್ತುಗಳ ಸಾಗಾಣಿಕೆಗೂ ಉತ್ತಮ ಸಂಪರ್ಕವ್ಯವಸ್ಥೆ ಅಗತ್ಯ. ಸಿದ್ಧವಸ್ತುಗಳ ತಯಾರಿಕಾ ವೆಚ್ಚ ವಿಪರೀತವಾಗದಂತೆ ಇದು ತಡೆಯುತ್ತದೆ. ದೇಹದ ಎಲ್ಲಭಾಗಗಳಿಗೆ ಆಮ್ಲಜನಕ, ಪೋಷಕಾಂಶಗಳನ್ನು ಪೂರೈಸುವ ರಕ್ತಚಲನೆಗೆ ನರಮಂಡಲ ವ್ಯವಸ್ಥೆ ಅವಶ್ಯವಿರುವಂತೆ ಸಾರಿಗೆವ್ಯವಸ್ಥೆಯು ದೇಶಕ್ಕೆ ಅತ್ಯಗತ್ಯ.

ಭಾರತ ಪ್ರಪಂಚದಲ್ಲಿಯೇ ರಸ್ತೆಸಂಪರ್ಕ ಜಾಲದಲ್ಲಿ ಎರಡನೇ ಸ್ಥಾನದಲ್ಲಿರುವ ದೇಶವಾಗಿದೆ, (5.89 ಮಿಲಿಯನ್ ಕಿ.ಮೀ.ಗಳು)  ರೈಲು ಜಾಲದಲ್ಲಿ ನಾಲ್ಕನೇ ಸ್ಥಾನದಲ್ಲಿದೆ  (2020ರಲ್ಲಿ 126,366ಕಿ.ಮೀ. ದೂರದ ರೈಲ್ವೇ ಹಳಿಗಳಿವೆ) ಮತ್ತು ಪ್ರಯಾಣಿಕರ ವಿಮಾನಯಾನದಲ್ಲಿ 9ನೇ ಸ್ಥಾನದಲ್ಲಿದೆ. 13 ದೊಡ್ಡ ಮತ್ತು 187 ಚಿಕ್ಕ ಬಂದರುಗಳಿವೆ.  ಸರಕುಸಾಗಣೆಯು ಭಾರತದ ಅತಿ ದೊಡ್ಡ ಉದ್ಯಮಗಳಲ್ಲೊಂದು. ಸದ್ಯಃ 65% ಸರಕುಸಾಗಣೆಯು ರಸ್ತೆಗಳನ್ನು ಅವಲಂಬಿಸಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸಂಘ ಏಕಶಿಲೆಯಾಗಿ ನಿಂತಿದ್ದು ಏಕೆ ?

Sat Mar 27 , 2021
ಇವತ್ತಿನ ಸ್ಥಿತಿಯಲ್ಲಿ ಒಂದು ಕ್ಲಬ್ ನ ಕಾರ್ಯದರ್ಶಿ ಸ್ಥಾನಕ್ಕೆ ಕೋಟ್ಯಂತರ ಖರ್ಚು ಮಾಡಿ ಚುನಾವಣೆಗೆ ನಿಲ್ಲುವವರು ಇರುವಾಗ ತನಗೆ ವಯಸ್ಸಾಗಿದೆ ಯುವಕರು ನನ್ನ ಹುದ್ದೆ ತೆಗೆದು ಕೊಳ್ಳಲಿ ಎಂದು ಭಯ್ಯಾಜಿ ಜೋಶಿ  ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದತ್ತಾತ್ರೇಯ ಹೊಸಬಾಳೆ ಅವರನ್ನು ತಂದು ಕೂರಿಸಿರುವುದು ಅಪರೂಪದ ಬೆಳವಣಿಗೆ. ಭಾರತದ ಇತಿಹಾಸದಲ್ಲಿ ಯಾವುದೇ ಸಂಘಟನೆಗಳು ಒಡೆಯದೇ 100 ವರ್ಷ ನಿಂತ ಉದಾಹರಣೆಗಳು ಕಮ್ಮಿ.ಕಾಂಗ್ರೆಸ್ ನಿಂದ ಹಿಡಿದು ಕಮ್ಯುನಿಸ್ಟರ್ ವರೆಗೆ ಸಮಾಜವಾದಿ ಗಳಿಂದ […]