ರಾಮಮಂದಿರ ನಿರ್ಮಾಣಕ್ಕೆ ಆದಿಚುಂಚನಗಿರಿ ಮಠ ಸಂಪೂರ್ಣವಾಗಿ ಸಹಕರಿಸುತ್ತವೆ : ಡಾ. ನಿರ್ಮಲಾನಂದನಾಥ ಸ್ವಾಮೀಜಿ

ಮಂಡ್ಯ: ಆದಿಚುಂಚನಗಿರಿ ಮಠ ಮತ್ತು ಎಲ್ಲ ಶಾಖಾಮಠಗಳು ರಾಮಮಂದಿರ ನಿರ್ಮಾಣಕ್ಕೆ  ಸಂಪೂರ್ಣವಾಗಿ ಸಹಕರಿಸುತ್ತವೆ ಎಂದು ಪೂಜ್ಯ ಸಮಾರಂಭದಲ್ಲಿ   ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ತಿಳಿಸಿದರು.

ಅವರು ಆದಿಚುಂಚನಗಿರಿ ಮಹಾಸಂಸ್ಥಾನ ಆಯೋಜಿಸಿದ ಶ್ರೀರಾಮ ಮಂದಿರ ನಿರ್ಮಾಣ  ನಿಧಿ ಸಮರ್ಪಣ  ಸಂತ ಸಮಾವೇಶ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪೇಜಾವರ ಮಠಾಧೀಶರಾದ  ಶ್ರೀ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು, ಬೇಲಿ ಮಠದ ಪೂಜ್ಯ ಶ್ರೀ ಶಿವರುದ್ರ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಸಂತ ಸಮಾವೇಶ ನೆರವೇರಿತು.

ಪೇಜಾವರ ಶ್ರೀಗಳು ಮಾತನಾಡಿ ಶ್ರೀರಾಮನ ಗುಣಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ  ಕ್ಷೇತ್ರೀಯ ಪ್ರಚಾರಕರಾದ ಸುಧೀರ್ ಅವರು ರಾಮಜನ್ಮಭೂಮಿ 492 ವರ್ಷಗಳ  ಹೋರಾಟ ಮತ್ತು ಈ ಅಭಿಯಾನದ ಹೇಗೆ ನೀಡುತ್ತದೆ ಎನ್ನುವ ಬಗ್ಗೆ ತಿಳಿಸಿಕೊಟ್ಟರು.

ಸಮಾರಂಭದಲ್ಲಿ ವಿವಿಧ ಮಠಗಳ ಮಠಾಧೀಶರುಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹ ಶ್ರೀಯುತ ನಾ. ತಿಪ್ಪೇಸ್ವಾಮಿ ಜೀ ಹಾಗೂ ವಿಶ್ವ ಹಿಂದೂ ಪರಿಷದ್ ನ ದಕ್ಷಿಣ ಕರ್ನಾಟಕ ಪ್ರಾಂತ ಪ್ರಚಾರಕರಾದ ಶ್ರೀಯುತ ಬಸವರಾಜು ಸಹ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಮಠಗಳ ಮಠಾಧೀಶರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸಮರಸ ಸಮಾಜ ಮತ್ತು ಸಂಸ್ಕಾರಯುತ ಪರಿವಾರದ ನಿರ್ಮಾಣ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳೋಣ : ಡಾ. ಕೃಷ್ಣಗೋಪಾಲ್

Thu Jan 7 , 2021
ಕೊರೋನಾ ಸವಾಲಿನ ನಂತರ ಆತ್ಮನಿರ್ಭರತೆ – ಸ್ವಾವಲಂಬನೆ – ಕೌಶಲ್ಯಾಭಿರುದ್ಧಿ ವಿಷಯಗಳನ್ನು ಸಮಾಜದ ಆಂದೋಲನವನ್ನಾಗಿ ಪರಿವರ್ತಿಸಲಾಗುವುದು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ವಿವಿಧ ಸಂಘಟನೆಗಳ ಕಾರ್ಯಕರ್ತರ ಸಮನ್ವಯ ಬೈಠಕ್ ಜನವರಿ ೫ ರಿಂದ ೭ ರ ವರೆಗೆ ಮೂರು ದಿನಗಳ ಕಾಲ ಗಾಂಧಿನಗರದ ಕರ್ಣಾವತಿ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಂಡಿತು.ಬೈಠಕ್ ನ ಕೊನೆಯ ದಿನದಂದು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಡಾ. ಕೃಷ್ಣಗೋಪಾಲರವರು, ಕೊರೋನಾ ಆಪತ್ತಿನ ಸಮಯದಲ್ಲಿ […]