ರೈತರ ಹೆಸರಿನಲ್ಲಿ ಪ್ರತಿಭಟನೆ: ಅಂತಾರಾಷ್ಟ್ರೀಯ ಷಡ್ಯಂತ್ರ. ಗಣ್ಯರಿಂದ ವಿದೇಶೀ ಶಕ್ತಿಗಳಿಗೆ ಎಚ್ಚರಿಕೆ.

ರೈತರ ಹೆಸರಿನಲ್ಲಿ ದೆಹಲಿಯ ಸುತ್ತಮುತ್ತ ನಡೆಯುತ್ತಿರುವ ಹೋರಾಟವು ಭಾರತದ ಏಕತೆ ಮತ್ತು ಬೆಳವಣಿಗೆಯನ್ನು ಸಹಿಸದ ವಿದೇಶೀ ಶಕ್ತಿಗಳು ಭಾರತದಲ್ಲಿ ಅರಾಜಕತೆ ನಿರ್ಮಿಸಲು ನಡೆಸುತ್ತಿರುವ ಪ್ರಯತ್ನದ  ಒಂದು ಭಾಗ ಎಂಬ ಅನುಮಾನಕ್ಕೆ ಸಾಕಷ್ಟು ಪುರಾವೆಗಳು ಇದೀಗ ಹೊರಬರುತ್ತಿವೆ.

ಇದಕ್ಕೆ ಪೂರಕವೆಂಬಂತೆ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಪಾಪ್‌ ತಾರೆ ರಿಹಾನಾ ಮತ್ತು ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ ಹಾಗೂ ಇತರ ಅಂತರರಾಷ್ಟ್ರೀಯ ಮಟ್ಟದ ಖ್ಯಾತ(?)ನಾಮರು ಮಾಡಿ ರುವ ಟ್ವೀಟ್‌ಗೆ ಪ್ರತಿಯಾಗಿ ಭಾರತದ ಕ್ರೀಡಾಪಟುಗಳು, ಚಿತ್ರನಟರು, ನಿರ್ದೇಶಕರು ಖಂಡಿಸಿ  ವಿದೇಶಿ ಶಕ್ತಿಗಳ ಹಸ್ತಕ್ಷೇಪವನ್ನು ತೀವ್ರವಾಗಿ ಖಂಡಿಸಿ, ‘ದೇಶದ ಒಗ್ಗಟ್ಟನ್ನು ಮುರಿಯುವ ಪ್ರಯತ್ನಗಳನ್ನು ಸೋಲಿಸಬೇಕು’ ಎಂದಿದ್ದಾರೆ.

ಗ್ರೇಟಾ ಥನ್‌ಬರ್ಗ್‌ ಮಾಡಿರುವ ಇನ್ನೊಂದು ಟ್ವೀಟ್ ಹೋರಾಟದ ರೂಪುರೇಷೆಗಳನ್ನು ವಿವರಿಸಲಾಗಿತ್ತು. ಕೆಲವೇ ಕ್ಷಣಗಳಲ್ಲಿ ಟ್ವೀಟನ್ನು ಡಿಲೀಟ್ ಮಾಡಿದರೂ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಂತಾರಾಷ್ಟ್ರೀಯ ಷಡ್ಯಂತ್ರದ ದಾಖಲೆ ಸಮೇತ ಹೊರಬಿದ್ದಿದೆ..

ಈ ಅಂತಾರಾಷ್ಟ್ರೀಯ ಷಡ್ಯಂತ್ರವನ್ನು ಭಾರತ ರತ್ನ ಲತಾ ಮಂಗೇಷ್ಕರ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಭಾರತ ಕ್ರಿಕೇಟ್ ತಂಡದ ಹಲವರು ಹಾಗೂ ಅಕ್ಷಯ್ ಕುಮಾರ್, ಅಜಯ್ ದೇವಗನ್, ಕಂಗನಾ ರಾವತ್   ಸೇರಿದಂತೆ ಹಲವರು ಅಂತಾರಾಷ್ಟ್ರೀಯ ಷಡ್ಯಂತ್ರವನ್ನು ಖಂಡಿಸಿ ಟ್ವೀಟ್ ಮಾಡಿದರು.

ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗ

‘ಭಾರತದ ಸಾರ್ವಭೌಮತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗದು. ವಿದೇಶಿ ಶಕ್ತಿಗಳು ಪ್ರೇಕ್ಷಕರಾಗಬಹುದೇ ವಿನಃ ದೇಶದ ಒಳಗಿನ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಭಾರತ ಏನು ಮತ್ತು ಭಾರತಕ್ಕೆ ಏನು ಬೇಕು ಎಂಬುದನ್ನು ನಿರ್ಧರಿಸಲು ಭಾರತೀಯರಿಗೆ ಗೊತ್ತಿದೆ. ಒಂದು ದೇಶವಾಗಿ ನಾವು ಒಗ್ಗಟ್ಟಿನಿಂದಿರೋಣ’

ಅಕ್ಷಯ್‌ ಕುಮಾರ್‌, ಬಾಲಿವುಡ್ ನಟ :  ‘ರೈತರು ನಮ್ಮ ದೇಶದ ಬಹು ಮುಖ್ಯ ಸಮುದಾಯ. ಅವರ ಸಮಸ್ಯೆ ಗಳ ನಿವಾರಣೆಗೆ ಸರ್ಕಾರ ಕ್ರಮ ಗಳನ್ನು ಕೈಗೊಳ್ಳುತ್ತಿದೆ ಎಂಬುದು ಸ್ಪಷ್ಟ ವಾಗಿ ಗೋಚರಿಸುತ್ತಿದೆ. ಭೇದಭಾವ ಸೃಷ್ಟಿಸಲು ಪ್ರಯತ್ನಿಸುವವರತ್ತ ಗಮನ ಹರಿಸುವ ಬದಲು, ಪರಸ್ಪರ ಮಾತು ಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸು ವತ್ತ ಗಮನಹರಿಸೋಣ’

https://twitter.com/akshaykumar/status/1356884526815842304?s=20

ಸುರೇಶ್ ರೈನಾ, ಕ್ರಿಕೇಟಿಗ

https://twitter.com/ImRaina/status/1356977153791971332?s=20

ಟ್ವೀಟ್‌ ಮೂಲಕ ರಿಹಾನಾ ಹಾಗೂ ಜಗಮೀತ್‌ಸಿಂಗ್‌ ಅವರನ್ನು ತೀವ್ರವಾಗಿ ಟೀಕಿಸಿರುವ ನಟಿ ಕಂಗನಾ ರನಾವತ್‌, ‘ಈ ಭಯೋತ್ಪಾದಕ (ಜಗಮೀತ್‌) ವಯಸ್ಕರ ಹಾಡುಗಳ ಗಾಯಕಿ ರಿಹಾನಾಳ ಸ್ನೇಹಿತ. ಅವನ ತಲೆಯಲ್ಲಿ ಖಾಲಿಸ್ತಾನವಿದೆ. ಒಬ್ಬ ವಯಸ್ಕರ ಹಾಡುಗಳ ಗಾಯಕಿ ಟ್ವಿಟರ್‌ನಲ್ಲಿ ಹಿಂಬಾಲಿಸುತ್ತಿದ್ದಾಳೆ ಎಂಬುದಷ್ಟೇ ಅವನ ಸಾಧನೆ’ ಎಂದಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಧ್ಯೇಯವೇ ತಾನಾಗಿ ನಿಂತ ತಾನಾಜಿ

Thu Feb 4 , 2021
ಭಾರತ ಇತಿಹಾಸದ ಸಾಹಸಮಯ ಪುಟಗಳಲ್ಲಿ ಒಂದಾಗಿ, ರಾಷ್ಟ್ರಭಕ್ತ ಯುವಜನರ ಮೈ ರೋಮಾಂಚನಗೊಳಿಸುವ ಆ ಘಟನೆ ನಡೆದದ್ದು, 1670ರ ಫೆಬ್ರವರಿ ನಾಲ್ಕರಂದು. ಆ ನಿಮಿತ್ತ  ಈ ನೆನಪು. ಆತ ಸಾವಿರ ಸೈನಿಕರ ನಾಯಕನಾದ ಒಬ್ಬ ಸುಬೇದಾರ, ಶಿವಾಜಿ ಹತ್ತಾರು ಆಪ್ತರಲ್ಲಿ ಅವನೂ ಒಬ್ಬ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಶಿವಾಜಿಯ ಪಡೆದಿದ್ದ ದೇವದುರ್ಲಭ ಕಾರ್ಯಕರ್ತರ ಪಡೆಯಲ್ಲಿ ಅಗ್ರಣಿ. ತಾನಾಜಿ ಮಾಲಸುರೆಯಂತಹ ನಂಬುಗೆ ಭಂಟರ ಬೆಂಬಲದಿಂದಲೇ ಮೊಗಲಾಯಿ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದು ಛತ್ರಪತಿಯೆನಿಸಿಕೊಳ್ಳಲು ಶಿವಾಜಿಗೆ […]