ಶ್ರೀರಾಮ ವನವಾಸ ನಡೆಸಿದ ಮಾರ್ಗದ ಅಭಿವೃದ್ದಿಗೆ ಮುಂದಾದ ಕೇಂದ್ರ ಸರ್ಕಾರ

ಭಾರತೀಯ ಸಂಸ್ಕೃತಿಯ ಪ್ರತಿರೂಪ, ಹಿಂದುಗಳ ಆರಾಧ‍್ಯದೈವ ಶ್ರೀರಾಮಚಂದ್ರ ತನ್ನ ರಾಜಪಟ್ಟ ತೊರೆದು ವನವಾಸ ಕೈಗೊಂಡ ಮಾರ್ಗವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಶ್ರೀರಾಮಚಂದ್ರ ತಮ್ಮ  14 ವರ್ಷಗಳ ವನವಾಸದಲ್ಲಿ ನಡೆದೇ ಸಂಚರಿಸಿದ ಉತ್ತರಪ್ರದೇಶದಲ್ಲಿರುವ 201 ಕಿ.ಮೀ ಮಾರ್ಗವನ್ನು ಗುರುತಿಸಲಾಗಿದೆ. ಉತ್ತರಪ್ರದೇಶದ ಅಯೋಧ್ಯೆಯಿಂದ ಹಿಡಿದು ಮಧ್ಯಪ್ರದೇಶದ ಚಿತ್ರಕೂಟದವರೆಗಿನ ಈ ಮಾರ್ಗವನ್ನು ‘ರಾಮ ವನ ಗಮನ ಮಾರ್ಗ’ ಎಂಬ ಹೆಸರಿನಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆಚ್ಚಾರಿ ಸಚಿವಾಲಯ ನಿರ್ಧರಿಸಿದೆ.

ಅಯೋಧ್ಯೆ ಮತ್ತು ಚಿತ್ರಕೂಟ ನಗರಗಳ ನಡುವೆ ಹಾದುಹೋಗುವ ಉತ್ತರಪ್ರದೇಶದ ಫೈಝಾಬಾದ್‌, ಸುಲ್ತಾನ್‌ಪುರ, ಪ್ರತಾಪ್‌ಗಢ, ಜೇಥ್ವಾರ್‌, ಶೃಂಗವೇರ್‌ಪುರ, ಮಂಝನಾಪುರ, ರಾಜಾಪುರ ಪ್ರದೇಶದಲ್ಲಿಈ ಹೊಸ ಮಾರ್ಗವನ್ನು  ಅಭಿವೃದ್ಧಿಪಡಿಸಲಾಗುವುದು. ಮೊದಲ ಹಂತದ ಈ ಯೋಜನೆಯನ್ನು 138 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಸಚಿವಾಲಯ ಉದ್ದೇಶಿಸಿದೆ.

ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯದ ಮೂಲಕವೂ ‘ರಾಮ ವನ ಗಮನ ಮಾರ್ಗ’ವು  ಹಾದು ಹೋಗುತ್ತಿದ್ದು, ಆ ರಾಜ್ಯಗಳು ಕೂಡಾ ಈಗಾಗಲೇ ಪ್ರತ್ಯೇಕವಾಗಿ ಮಾರ್ಗ ಅಭಿವೃದ್ಧಿಗೆ ಯೋಜಿಸಿದ್ದು, ಕೇಂದ್ರ ಸರ್ಕಾರದ ನೆರವು ಕೋರಿವೆ.

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿರುವಾಗಲೇ ‘ರಾಮ ವನ ಗಮನ ಮಾರ್ಗ’ದ ಅಭಿವೃದ್ದಿಪಡಿಸುತ್ತಿರುವುದು ಭಾರತದೆಲ್ಲೆಡೆ ಮುಚ್ಚುಗೆ ವ್ಯಕ್ತವಾಗಿದೆ.

ಸುದ್ದಿಮೂಲ:  ಕನ್ನಡಪ್ರಭ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಗೀತಾ ಪ್ರೆಸ್ ನ ಅಧ್ಯಕ್ಷ ರಾಧೇಶ್ಯಾಮ್‌ ಖೇಮ್ಕಾ ಆರೆಸ್ಸೆಸ್ ಸಂತಾಪ

Mon Apr 5 , 2021
ವಿಶ್ವವಿಖ್ಯಾತ ಗೀತಾ ಪ್ರೆಸ್ ನ ಅಧ್ಯಕ್ಷ ರಾಧೇಶ್ಯಾಮ್‌ ಖೇಮ್ಕಾಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ವ್ಯಕ್ತಪಡಿಸುತ್ತದೆ. ಸ್ವರ್ಗೀಯ ರಾಧೇಶ್ಯಾಮ್‌ ಅವರು ಧರ್ಮ-ಜ್ಞಾನ ಪರಂಪರೆಯ ಪ್ರಸಾರವನ್ನು ಹಲವು ವರ್ಷಗಳ ಕಾಲ ಸಂಪೂರ್ಣ ಶ್ರದ್ಧೆ ಹಾಗೂ ಪರಿಶ್ರಮಪೂರ್ವಕವಾಗಿ ನಡೆಸಿದರು ಮತ್ತು ಹೊಸ ಅವಶ್ಯಕತೆಗಳಿಗೆ ತಕ್ಕಂತೆ ಈ ಕಾರ್ಯವನ್ನು ನಿರಂತರವಾಗಿ ಮುನ್ನಡೆಸಿದರು. ಅವರ ಪವಿತ್ರ ಆತ್ಮಕ್ಕೆ ಸದ್ಗತಿ ಸಿಗಲೆಂದು ಹಾಗೂ ಅವರ ಪರಿವಾರದವರಿಗೆ ಹಾಗೂ ಗೀತಾ ಪ್ರೆಸ್ ನ ಪರಿವಾರಕ್ಕೆ ಶ್ರೀಯುತರ ಅಗಲಿಕೆಯ […]