ಪರಸ್ಪರ ಸಹಕಾರದಿಂದ ಮಾತ್ರ ಕೊರೋನಾ ಅಲೆಯನ್ನು ಎದುರಿಸಬಹುದು : ಆರೆಸ್ಸೆಸ್ ನ ರಾಷ್ಟ್ರೀಯ ವ್ಯವಸ್ಥಾ ಪ್ರಮುಖ ಮಂಗೇಶಜೀ

ಹುಬ್ಬಳ್ಳಿ: ಪರಸ್ಪರ ಸಹಕಾರದಿಂದ ಮಾತ್ರ ಕೊರೋನಾ ಎರಡನೇ ಅಲೆಯನ್ನು ಎದುರಿಸಲು ಸಾಧ್ಯ ಎಂದು ಆರ್ ಎಸ್ ಎಸ್ ಹಿರಿಯ ಪ್ರಚಾರಕ ರಾಷ್ಟ್ರೀಯ ವ್ಯವಸ್ಥಾ ಪ್ರಮುಖರಾದ ಮಂಗೇಶ ಬೇಂಡೆ ಹೇಳಿದರು.

ಸೇವಾ ಭಾರತಿ ಟ್ರಸ್ಟ್ ಹಾಗೂ ನೆರವು ಸಹಯೋಗದಲ್ಲಿ ಇಲ್ಲಿನ ಕಿಮ್ಸ್ ಎದುರು ಸ್ಥಾಪಿಸಲಾದ ಕೊರೋನಾ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊರೋನಾ ವಿಚಾರದಲ್ಲಿ ಭಾರತವನ್ನು ಇತರೆ ರಾಷ್ಟ್ರಗಳ ಜತೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಮೇರಿಕಾ, ಇಂಗ್ಲೆಂಡ್ ಗೆ ಹೋಲಿಸಿದರೆ ಭಾರತ ಕೊರೋನಾ ಸೋಂಕನ್ನು ಸಮರ್ಥವಾಗಿ ಎದುರಿಸುತ್ತಿದೆ. ನಮ್ಮ ದೇಶದಲ್ಲಿ ಪರಸ್ಪರ ಸಹಕಾರದಿಂದ ಕೊರೋನಾ ಎದುರಿಸಲಾಗುತ್ತಿದೆ ಎಂದು ಹೇಳಿದರು.

ಸಂಘದಿಂದ ೫ ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರು ಹಗಲಿರುಳು ಸ್ವಯಂಪ್ರೇರಿತ ಕೋವಿಡ್ ವಾರಿಯರ್ ಆಗಿ ಶ್ರಮಿಸುತ್ತಿದ್ದಾರೆ. ಆತ್ಮ ಸ್ಥೈರ್ಯ ಹೆಚ್ಚಿಸುವ ಕಾರ್ಯವನ್ನು ಸಂಘದ ಕಡೆಯಿಂದ ಮಾಡುತ್ತಿದ್ದು, ಸಂಘ ಈ ಕಾರ್ಯವನ್ನು ಸಹಾಯ ಎಂಬ ಭಾವನೆಯಿಂದ ಅಲ್ಲದೆ, ಸಹಕಾರ ಸೌಹಾರ್ದದಿಂದ ಎಂಬಂತೆ ಕಾರ್ಯ ಮಾಡುತ್ತಿದೆ ಎಂದರು.

ನಮ್ಮ ಮಾಧ್ಯಮಗಳು ಸಮಾಜದಲ್ಲಿ ಜನರಿಗೆ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಜನರ ಮನಸ್ಥಿತಿಗೆ ಧೈರ್ಯ ತುಂಬುವ ಕಾರ್ಯ ಮಾಡಬೇಕಾಗಿದೆ ಎಂದು ಮನವಿ ಮಾಡಿದರು.

ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಠಾಣೆ ಆರೋಗ್ಯ ಇಲಾಖೆಗಳೊಂದಿಗೆ ಸಹಕಾರ ನೀಡುವ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯವಾದದ್ದು, ಹಾಗೂ ಬಡವರಿಗೆ ನೆರವು ನೀಡುವ ಕೆಲಸ ಪ್ರತಿಯೊಂದು ಸಹಕಾರಿ ಸಂಘ ಸಂಸ್ಥೆಗಳಿಂದ ಆಗುತ್ತಿರುವುದು ಸಂತೋಷವಾಗಿದೆ ಎಂದು ತಿಳಿಸಿದರು.
ಮೇ ತಿಂಗಳಲ್ಲಿ ಕೊರೋನಾ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಜನತೆಯ ನೆರವಿಗೆ ಧಾವಿಸಿರುವುದು ಸ್ವಾಗತಾರ್ಹ ಎಂದರು.

ಕಾರ್ಯಕ್ರಮದಲ್ಲಿ ಡಾ. ಎಸ್. ವೈ. ಮುಲ್ಕಿಪಾಟೀಲ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ವಿಭಾಗ ಕಾರ್ಯವಾಹ ಕಿರಣ ಗುಡ್ಡದಕೇರಿ ಮಾತನಾಡಿ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಘ ಯಾವ ರೀತಿಯಲ್ಲಿ ಸ್ಪಂದನೆ ಮಾಡುತ್ತದೆಯೋ ಅದೇ ರೀತಿ ಈಗಲೂ ಮುಂದಾಗಿದೆ. ಮೊದಲನೇಯದಾಗಿ ಸರ್ಕಾರ ಕೊವಿಡ್ ನಿಯಮಗಳನ್ನು ತಿಳಿಸಿ ಜಾಗೃತಿ ಮೂಡಿಸುವ ಕಾರ್ಯ, ರಕ್ತದಾನ ಶಿಬಿರಗಳನ್ನು ಏರ್ಪಡಿಸಿರುವುದು, ಸಹಾಯವಾಣಿ ಮೂಲಕ ಕೋವಿಡ್ ಮಾಹಿತಿಯನ್ನು ನೀಡುವ ಕಾರ್ಯ, ಟೆಲಿ ಮೆಡಿಸಿನ್, ಔಷಧ ಒದಗಿಸುವುದು, ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ನೆರವಾಗುವುದು, ಅಲ್ಲದೇ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಯ ಉದ್ದೇಶವಿದ್ದು, ಕಾರ್ಯ ಪ್ರವೃತ್ತರಾಗಿದ್ದೇವೆ ಎಂದರು.


ಸಾರ್ವಜನಿಕರು ನೆರವಿಗಾಗಿ 7411734247 ಹಾಗೂ 7411744246 ಈ ನಂಬರ್ ಗಳಿಗೆ ಕರೆ ಮಾಡಿ ತಮ್ಮ ಕೋವಿಡ್ ಸಂಬಂದಿತ ಏನೇ ಸಮಸ್ಯೆಗಳಿದ್ದರೂ ಸಲಹೆ ಪಡೆಯಬಹುದಾಗಿದೆ.


ಕಾರ್ಯಕ್ರಮದಲ್ಲಿ ಸೇವಾಭಾರತಿ ಪ್ರಾಂತ ಕಾರ್ಯದರ್ಶಿ
ಗೋವರ್ಧನ ರಾಯರು ಮುಂತಾದವರು ಉಪಸ್ಥಿತರಿದ್ದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಇಂದಿನ ಪ್ರಮುಖ ಸುದ್ದಿಗಳು: ರೈಲ್ವೇಯಿಂದ 64,000 ಹಾಸಿಗೆ; ಡಿಆರ್ ಡಿಓದಿಂದ 500 ಆಕ್ಸಿಜನ್ ಘಟಕ; 2ಲಕ್ಷಕ್ಕೂ ಅಧಿಕ ಮಂದಿ ಡಿಸ್ಚಾರ್ಜ್

Thu Apr 29 , 2021
ಕೊರೋನಾ ಸೋಂಕಿತರಿಗೆ ನೆರವಾಗಲು ದಿಟ್ಟ ಹೆಜ್ಜೆಯಿಟ್ಟಿರುವ ರೈಲ್ವೆ ಸಚಿವಾಲಯವು 64 ಸಾವಿರ ಹಾಸಿಗೆ ವ್ಯವಸ್ಥೆ ಕಲ್ಪಿಸಬಹುದಾದ 4,000 ಪ್ರತ್ಯೇಕ ಬೋಗಿಗಳನ್ನು ಒದಗಿಸಲು ಮುಂದಾಗಿದೆ. ರೈಲ್ವೇ ಇಲಾಖೆ ಈಗಾಗಲೇ ಕೊವೀಡ್ ಸೊಂಕಿತರ ಆರೈಕೆಗಾಗಿ 2900ಕ್ಕೂ ಅಧಿಕ ಹಾಸಿಗೆಗಳ ಸಾಮರ್ಥ್ಯವುಳ್ಳ 191 ಬೋಗಿಗಳನ್ನು ವಿವಿಧ ರಾಜ್ಯ ಸರ್ಕಾರಗಳಿಗೆ ನೀಡಿದೆ. ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್‌ಡಿಓ) ದೇಶಾದ್ಯಂತ 500 ವೈದ್ಯಕೀಯ ಬಳಕೆಯ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ. ಇದು […]