ಸಾರ್ವಜನಿಕರಿಗಾಗಿ ಸ್ವಂತ ಖರ್ಚಿನಲ್ಲಿ ಕೆರೆ ನಿರ್ಮಿಸಿದ ದ.ಕನ್ನಡದ ಮಾಧವ ಭಟ್

ದಕ್ಷಿಣ ಕನ್ನಡ ಜಿಲ್ಲೆಯ ಕುಲ್ಲಂಗಾಲು ನಿವಾಸಿ ಕೆ. ಮಾಧವ ಭಟ್ , ಸಾರ್ವಜನಿಕ ಉದ್ದೇಶಕ್ಕಾಗಿ ತಮ್ಮ ಸ್ವಂತ ಹಣದಲ್ಲಿ ಕೆರೆಯನ್ನು ನಿರ್ಮಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಳದ ಬಗೆಗೆ ಪ್ರಸ್ತಾಪಿಸಿದ್ದರು.  ಇದರಿಂದ ಪ್ರೇರಣೆಗೊಂಡ ಮಾಧವ ಭಟ್ ಅವರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ವ್ಯವಸ್ಥಿತವಾಗಿ ಕೆರೆ ನಿರ್ಮಿಸಿದ್ದಾರೆ.

ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಕೆರೆಯ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಈ ಕೆರೆ 1 ಕೋಟಿ 75 ಲಕ್ಷ ಲೀಟರ್ ಸಂಗ್ರಹಸಿಟ್ಟುಕೊಳ್ಳುವ ನೀರಿನ ಸಾಮರ್ಥ್ಯ ಹೊಂದಿದೆ. ಈ ಕೆರೆಯು ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರು, ರೈತರು, ಕೃಷಿ ಚಟುವಟಿಕೆಗಳಿಗೆ, ಜಾನುವಾರುಗಳಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಸಹಕಾರಿಯಾಗಲಿದೆ.

ಈ ಕುರಿತು ಮಾತನಾಡಿದ ಮಾಧವ ಭಟ್ ಅವರು, ಕೆರೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಶೇಖರಣೆಯಾಗುವುದರಿಂದ ಸುತ್ತಮುತ್ತಲಿನ ಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಏರಿಕೆಯಾಗಲಿದೆ. ಅಲ್ಲದೆ ಬೇಸಿಗೆ ಕಾಲದಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀರಿನ ಮೂಲವೂ ದೊರೆತಂತಾಗುತ್ತದೆ ಎಂದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಭಾರತದ ರೈತರು ಶ್ರೀಮಂತರಾಗಲು ಮತ್ತು ಸ್ವಾವಲಂಬಿಗಳಾಗಲು ಹೊಸ ಕೃಷಿ ಕಾಯಿದೆಯ ಅವಶ್ಯಕತೆಯಿದೆ.

Wed Apr 28 , 2021
ನಮ್ಮ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅನೇಕರು ಯತ್ನಿಸಿ ವಿಫಲರಾಗಿದ್ದಾರೆ ಹಾಗೂ ಮತ್ತೆ ಕೆಲವರು ಯಶಸ್ವಿ ಕೂಡ ಆಗಿದ್ದಾರೆ. ಇದೇ ಹಾದಿಯಲ್ಲಿರುವ ಇನ್ನೊಂದು ಹೋರಾಟವೇ ‘ಕೃಷಿ ಮಸೂದೆ ವಿರೋಧಿಸಿ ರೈತರ ಮುಖವಾಡ ಧರಿಸಿದವರು ಮಾಡುತ್ತಿರುವ ಹೋರಾಟ’. ರೈತರ ಪರ ಎಂದು ಹೇಳಿಕೊಂಡು ಯಾವುದಾದರೂ ಹೋರಾಟ ಶುರು ಮಾಡಿದರೆ ಅದಕ್ಕೆ ಬಹುಪಾಲು ಜನರ ಬೆಂಬಲವಂತೂ ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಸಿಕ್ಕೇ ಸಿಗುತ್ತದೆ. ಹೀಗೆಯೇ ಶುರುವಾಗಿದ್ದು ಕೇಂದ್ರ ಸರಕಾರ […]