ಸುಷ್ಮಾ ಭಾಡು: ಮಹಿಳೆಯರ ಉನ್ನತಿಗಾಗಿ ಮಾದರಿ ಗ್ರಾಮ ಪಂಚಾಯತ್ ರೂಪಿಸಿದ ಅದ್ವೀತಿಯ ಸಾಧಕಿ

ಮೂವತ್ತೇಳು ವರ್ಷದ ಸುಷ್ಮಾ ಭಾಡು ಹರಿಯಾಣದ ಧನಿ ಮಿಯಾನ್ ಖಾನ್ ಗ್ರಾಮದ ಬಿಷ್ಣೋಯ್ ಸಮುದಾಯಕ್ಕೆ ಸೇರಿದವರು. ಮತ್ತು ಅದರ ಸರ್ಪಂಚ್.

ಹೆಣ್ಣು ಮಗುವನ್ನು ತಿರಸ್ಕರಿಸುವ ರಾಜ್ಯದಲ್ಲಿ (ಹರ್ಯಾಣದಲ್ಲಿ) ಜನಿಸಿದ ಸುಷ್ಮಾ ಭಾಡು ಮಹಿಳೆಯರ ಹಕ್ಕುಗಳು ಮತ್ತು ಹೆಣ್ಣುಮಕ್ಕಳ ಉಳಿವಿಗಾಗಿ ಧನಿ ಮಿಯಾನ್ ಖಾನ್ ಪಂಚಾಯಿತಿಯನ್ನು ‘ಮಾದರಿ ಪಂಚಾಯತ್’ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

2010ರಲ್ಲಿ ಮೂರು ಗ್ರಾಮಗಳಾದ ಸಲಾಮ್ ಖೇರಾ, ಚಬ್ಲಮೋರಿ ಮತ್ತು ಧನಿ ಮಿಯಾನ್ ಖಾನ್ ಸರಪಂಚ್ ಆಗಿ ಚುನಾಯಿತರಾದ ಅವರು, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಘುನ್‌ಘಾಟ್‌ನಿಂದ/ ಪರದೆಯಿಂದ ಆವರಿಸಿಕೊಳ್ಳಬೇಕು ಮುಂತಾದ ಶತಮಾನಗಳಷ್ಟು ಹಳೆಯದಾದ ಗೊಡ್ಡು ಸಂಪ್ರದಾಯದ ವಿರುದ್ದ ಹೋರಾಡಿದರು.

ಮೂವರ ತಾಯಿಯಾದ ಈಕೆ ಮಹಿಳೆಯರಿಗಾಗಿ ಟೈಲರಿಂಗ್ ತರಬೇತಿ ಕೇಂದ್ರವನ್ನೂ ನಿರ್ಮಿಸಿದರು. ಲೈಂಗಿಕ ನಿರ್ಣಯ ಪರೀಕ್ಷೆಗಳನ್ನು ಬಯಸುವ ಕುಟುಂಬಗಳನ್ನು ಬಹಿರಂಗಪಡಿಸಲು ಶಿಳ್ಳೆಗಾರರಿಗೆ 50,000 ರೂ.ಗಳವರೆಗೆ ಬಹುಮಾನವನ್ನು ಸಹ ಪರಿಚಯಿಸಿದರು ಮತ್ತು ಪ್ರತಿ ಹಳ್ಳಿಯ ಮಕ್ಕಳು ಶಾಲೆಗೆ ಹೋಗುವುದನ್ನು ಖಾತ್ರಿಪಡಿಸಿಕೊಂಡರು.  ಅವರ ಮಾರ್ಗದರ್ಶನದಲ್ಲಿ, ಅವರ ಹಳ್ಳಿಯು ಉತ್ತಮ ನೈರ್ಮಲ್ಯ ಪರಿಸ್ಥಿತಿಗಾಗಿ‌ ನಿರ್ಮಲ್ ಪುರಸ್ಕಾರ್ ಪ್ರಶಸ್ತಿ, ಶೂನ್ಯ ಡ್ರಾಪ್ ರೇಟ್ ದರ ಮತ್ತು ಹರಿಯಾಣದ ಎಲ್ಲಾ ಹಳ್ಳಿಗಳಲ್ಲಿ ಅತ್ಯುತ್ತಮ ಲಿಂಗ ಅನುಪಾತಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಹೋರಾಟದ ಅಂಗಣದಲ್ಲಿ ರೂಪುಗೊಂಡ 'ಬಲಿಷ್ಠರ ಮೋಸ'ದ ಕುರಿತು ಗಂಭೀರ ವಿಮರ್ಶಾತ್ಮಕ ಕೃತಿ

Sat Mar 6 , 2021
ಮೀಸಲಾತಿ ಸಾಮಾಜಿಕ ನ್ಯಾಯವಂಚಿತ ಸಮುದಾಯಗಳಿಗೆ ಸಂವಿಧಾನಾತ್ಮಕ ರಕ್ಷಣೆಯೊಂದಿಗೆ ನೀಡಿದ ಅವಕಾಶ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಅವಕಾಶವಂಚಿತ ಸಮುದಾಯಗಳು ಪಡೆದ ಬಿಡುಗಡೆಯ ಬೆಳಕನ್ನು ಕಂಡಾಗ ಮೀಸಲಾತಿಯ ಹರಿಕಾರರ ದೂರದೃಷ್ಟಿಗೆ ಶತ ಶತ ಪ್ರಣಾಮಗಳನ್ನು ಸಲ್ಲಿಸಬೇಕಾಗಿದೆ. ಯಾರ ಪಾಲಿಗೆ ಶಾಲೆಗಳ ಬಾಗಿಲು ಮುಕ್ತವಾಗಿ ತೆರೆದಿರಲಿಲ್ಲವೋ, ಉನ್ನತ ಹುದ್ದೆಗಳ ಕನಸು ಕಾಣುವ ಅವಕಾಶಗಳೂ ಇಲ್ಲದಿದ್ದ ಕಾಲದಿಂದ ಮೇಲೆದ್ದು, ಪಾರ್ಲಿಮೆಂಟ್, ರಾಜಭವನಗಳ ಘನಪೀಠಗಳು ಯಾರ ಸ್ಪರ್ಶದಿಂದಲೂ ಮೈಲಿಗೆಯಾಗಲಾರದಂತೆ ಮಾಡಿತೋ ಅಂತಹ […]