ಸೇವಾ ಸಪ್ತಾಹ: ಬೆಂಗಳೂರು ಮಹಾನಗರದಲ್ಲಿ ಬಜರಂಗದಳವು 10,000 ಗಿಡಗಳನ್ನು ನೆಡುವ ಗುರಿ

ಬೆಂಗಳೂರು: ದಿನಾಂಕ :-23 ಜೂನ್ ನಿಂದ 30 ಜೂನ್ ರ ವರೆಗೆ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಸೇವಾ ಸಪ್ತಾಹ’ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಡಿಯಲ್ಲಿ ಬೆಂಗಳೂರು ಮಹಾನಗರದಲ್ಲಿ ಬಜರಂಗದಳವು 10000 ಗಿಡಗಳನ್ನು ನೆಡುವ ಗುರಿಯನ್ನು ಹೊಂದಿದ್ದು ಇಂದು ಸಾಂಕೇತಿಕವಾಗಿ ಯಲಹಂಕ ಕೆರೆಯ ಸುತ್ತ, ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಬಜರಂಗದಳ ಯಲಹಂಕ ಸಂಯೋಜಕರಾದ ಶ್ರೀ ಶಿವಕುಮಾರ್ ರವರು ವಿಶ್ವ ಸಂವಾದ ಕೇಂದ್ರಕ್ಕೆ ತಿಳಿಸಿದ್ದಾರೆ.

ಶ್ರೀ ಬಸವರಾಜು ಮಾತನಾಡಿದರು

ಇಂದಿನ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಬಸವರಾಜ್ ರವರು ಮಾತನಾಡಿ, ಮನುಷ್ಯನ ಅರೋಗ್ಯ ಮತ್ತು ವಾತಾವರಣದ ಸಂರಕ್ಷಣೆಗಾಗಿ ಗಿಡಗಳನ್ನು ನೆಡುವುದು ಮತ್ತು ಸಂರಕ್ಷಿಸುವುದೊಂದೇ ಮಾರ್ಗ ಎಂದು ಹೇಳಿದರು, ಯಲಹಂಕ ಕೆರೆಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯವನ್ನು ಶ್ಲಾಘಿಸಿದರು, ಹಾಗೂ ಕಾರ್ಯಕ್ರಮದಲ್ಲಿ ಕೋವಿಡ್ ಸಮಯದಲ್ಲಿ ಸಮಾಜಮುಖಿ ಕಾರ್ಯಮಾಡಿದ ಹಲವು ಕ್ಷೇತ್ರದ ಗಣ್ಯರಿಗೆ ಸನ್ಮಾನ ಮಾಡಿ ಗೌರವ ಸೂಚಿಸಲಾಯಿತು, ಮತ್ತು ಪ್ರಾಂತ ಧರ್ಮಪ್ರಸರಣ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ ಜೀ, ಯಲಹಂಕ ಜಿಲ್ಲಾ ಸಹಕಾರ್ಯದರ್ಶಿಗಳಾದ ಮಂಜುನಾಥ್ ಜೀ ಮತ್ತು ಯಲಹಂಕದ ವಿಶ್ವಹಿಂದೂ ಪರಿಷತ್ -ಬಜರಂಗದಳದ ಜಿಲ್ಲಾ ಮತ್ತು ಪ್ರಖಂಡದ ಜವಾಬ್ದಾರಿಯುತ ಕಾರ್ಯಕರ್ತರುಗಳಾದ ಡಾ. ರತ್ನಾಕರ್, ಗುರುಪ್ರಸಾದ್, ಪ್ರವೀಣ್, ವಸಂತ್, ಈಶ್ವರ್, ಗಿರಿ, ರಿತಿಕ್, ದೇವರಾಜ್, ಸುಬ್ಬು, ರವಿ, ರಾಜು, ಮಧುಕರ್ ರೆಡ್ಡಿ ಹಾಗೂ ಮತ್ತಿತರ ಹಲವು ಕಾರ್ಯಕರ್ತರು, ಮಾತೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಕಾಶ್ಮೀರದಲ್ಲಿ 2 ಸಿಖ್ ಹುಡುಗಿಯರ ಅಪಹರಿಸಿ ಬಲವಂತವಾಗಿ ಮತಾಂತರ. ‘ಮತಾಂತರ ತಡೆ’ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ಸ್ಥಳೀಯರ ಪ್ರತಿಭಟನೆ.

Mon Jun 28 , 2021
ಜಮ್ಮು-ಕಾಶ್ಮೀರ: ಕಾಶ್ಮೀರದಲ್ಲಿ 2 ಸಿಖ್ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಮತಾಂತರಿಸಿದ ಪ್ರಕರಣ ವರದಿಯಾಗಿದೆ. ಇದನ್ನು ತೀವ್ರವಾಗಿ ಖಂಡಿಸಿರುವ ಸಿಖ್ ಸಮುದಾಯ ಮತಾಂತರ ವಿರೋಧಿ ಕಾನೂನುನನ್ನು ಜಮ್ಮು-ಕಾಶ್ಮೀರದಲ್ಲಿ ಜಾರಿಗೆ ತರಲು ಆಗ್ರಹಿಸಿವೆ. ಕಾಶ್ಮೀರದಲ್ಲಿ ಇಬ್ಬರು ಸಿಖ್ ಹುಡುಗಿಯರನ್ನು ಅಪಹರಿಸಿ ಇಸ್ಲಾಂಗೆ ಮತಾಂತರಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಿಖ್ ಸಮುದಾಯ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಮದುವೆಗಳ ನೆಪದಲ್ಲಿ ಬಲವಂತದ ಧಾರ್ಮಿಕ ಮತಾಂತರವನ್ನು ತಡೆಯಲು ಈಗಾಗಲೇ ಉತ್ತರ ಪ್ರದೇಶದಲ್ಲಿ ಜಾರಿಯಾಗಿರುವ ‘ಬಲವಂತದ ಧಾರ್ಮಿಕ ಮತಾಂತರ […]