1178 ಟ್ವಿಟ್ಟರ್ ಖಾತೆಗಳನ್ನು ತೆಗೆದುಹಾಕುವಂತೆ ಟ್ವಿಟ್ಟರ್ ಗೆ ಕೇಂದ್ರ ಸರಕಾರ ಸೂಚನೆ

ಭಾರತದ ವಿರುದ್ಧಅಪಪ್ರಚಾರ ಮಾಡುವ ಹಾಗೂ ದೇಶವಿರೋಧಿ ಹೇಳಿಕೆ ನೀಡುವ 1178 ಟ್ವಿಟ್ಟರ್ ಖಾತೆಗಳನ್ನು ತೆಗೆದುಹಾಕುವಂತೆ ಟ್ವಿಟ್ಟರ್ ಸಂಸ್ಥೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಖಲಿಸ್ತಾನ ಹೋರಾಟಗಾರರರು ಸೇರಿದಂತೆ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಷಡ್ಯಂತ್ರ ಕೆಲಸ ಮಾಡುತ್ತಿರುವುದು ಇದೀಗ  ಬಯಲಾಗಿದೆ. ಈ ದೇಶವಿರೋಧಿ ಶಕ್ತಿಗಳು ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಮಾನ ಮಾಡುವ  ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಲುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರಿಂದ ಎಚ್ಚೆತ್ತಿರುವ ಕೇಂದ್ರ ಸರ್ಕಾರ 1178 ಪಾಕಿಸ್ತಾನಿ, ಖಲಿಸ್ತಾನಿ ಟ್ವಿಟ್ಟರ್ ಖಾತೆಗಳನ್ನು ತೆಗೆದುಹಾಕುವಂತೆ ಕೇಂದ್ರ ಸರಕಾರ ಸೂಚನೆ ನೀಡಿದೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟ ಬಗ್ಗೆಯೂ ಈ ಟ್ವಿಟ್ಟರ್ ಖಾತೆಗಳಿಂದ ತಪ್ಪು ಮಾಹಿತಿ ಮತ್ತು ಪ್ರಚೋದನಕಾರಿ ವಿಚಾರಗಳನ್ನು ಹರಿಬಿಡಲಾಗುತ್ತಿದೆ. ಹೀಗಾಗಿ ಒಂದು ಸಾವಿರಕ್ಕೂ ಹೆಚ್ಚು  ಖಾತೆಗಳನ್ನು ತೆಗೆದು ಹಾಕುವಂತೆ ಕೇಂದ್ರ ಸೂಚಿಸಿದೆ. ಟ್ವಿಟ್ಟರ್‌ ಸಂಸ್ಥೆಗೆ ಈವರೆಗೆ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

"ಆಂದೋಲನ ಜೀವಿ" ಗಳ ರಾಷ್ಟ್ರವಿರೋಧಿ ನಿಲುವನ್ನು ಅನಾವರಣಗೊಳಿಸಲು ಇದು ಸುಸಮಯ.

Tue Feb 9 , 2021
“ಆಂದೋಲನ ಜೀವಿ” ಗಳ ರಾಷ್ಟ್ರವಿರೋಧಿ ನಿಲುವನ್ನು ಅನಾವರಣಗೊಳಿಸಲು ಇದು ಸುಸಮಯ. ಲೇಖಕರು : ಸಿಂಚನ.ಎಂ.ಕೆ, ಇಂಜಿನಿಯರಿಂಗ್ ವಿದ್ಯಾರ್ಥಿನಿ, ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಎಬಿವಿಪಿ ಸ್ವಯಂಸೇವಕರು ಎಷ್ಟೊಂದು ವ್ಯವಸ್ಥಿತವಾಗಿ, ಯೋಜನೆಗಳನ್ನು ರೂಪಿಸಿ, ರೈತರ ಚಳುವಳಿಯ ಮುಖವಾಡ ಧರಿಸಿಕೊಂಡು ಬಲಿಷ್ಠವಾಗುತ್ತಿರುವ ಭಾರತದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡವನ್ನು ತಂದು ರಾಷ್ಟ್ರವನ್ನು ಒಡೆಯಬೇಕೆಂದು ಮಾಡಿದ್ದ ಷಡ್ಯಂತ್ರವೊಂದು ಬಯಲಾಗಿದೆ. ಯಾವ ಗ್ರೆಟಾ ಥನ್ಬರ್ಗ್ ಎಂಬ ಪರಿಸರವಾದಿ ಈ ಷಡ್ಯಂತ್ರದಲ್ಲಿ ಸ್ವತಃ ಭಾಗಿಯಾಗಿದ್ದಳೊ ಅವಳ ಚಿಕ್ಕ […]