2023 ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ವಿಶ್ವಸಂಸ್ಥೆ ಘೋಷಣೆ

2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ಆಚರಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಒಮ್ಮತದಿಂದ ಅಂಗೀಕರಿಸಲಾಗಿದೆ.

ಜೊತೆಗೆ ಭಾರತಕ್ಕೆ ಪ್ರಾಯೋಜಿತ ದೇಶವಾಗುವ ಗೌರವ ದೊರಕಿದೆ. ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ನಿರ್ಣಯ ವನ್ನು ಕೈಗೊಂಡ ಕುರಿತು ಮತ್ತು ಅದನ್ನು ಸಹ-ಪ್ರಾಯೋಜಿಸಿದ ಎಲ್ಲ ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದು “ಸಿರಿಧಾನ್ಯ ಗಳನ್ನು ಜನಪ್ರಿಯಗೊಳಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂಬುದು ಗೌರವದ ವಿಷಯ. ಸಿರಿಧಾನ್ಯಗಳ ಸೇವನೆಯು ಪೋಷಣೆ, ಆಹಾರ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ರೈತರ ಕಲ್ಯಾಣಕ್ಕೆ ಪೂರಕವಾಗಿದೆ” ಎಂದು ತಿಳಿಸಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಇನ್ನೊಬ್ಬರಿಗಾಗಿ ಬದುಕುವುದೇ ನಿಜವಾದ ಜೀವನ, ಸಾರ್ಥಕ ಜೀವನ

Tue Mar 9 , 2021
ಪ್ರಪಂಚದ ಪ್ರತಿಯೊಂದು ಜೀವಿಯ ಅಸ್ತಿತ್ವಕ್ಕೂ ಒಂದು ಉದ್ದೇಶವಿರುತ್ತದೆ. ಆ ಉದ್ದೇಶದ ಸಾಧನೆಯಾಗುವವರೆಗೂ ಅದು ಜೀವಿಸಿರುತ್ತದೆ ಎನ್ನುತ್ತಾರೆ. ಉದ್ದೇಶದ ಸಾಧನೆಯಾದೊಡನೆಯೇ ಅದು ತನ್ನ ಅಸ್ತಿತ್ವವನ್ನು ಈ ಪ್ರಕೃತಿಯಲ್ಲಿ ವಿಲೀನಗೊಳಿಸಿಕೊಳ್ಳುತ್ತದೆ. ನಮ್ಮೆಲ್ಲರ ಶರೀರದಲ್ಲಿರುವ ಚೈತನ್ಯ ಅವಿನಾಶಿ, ಮಾತ್ರವಲ್ಲ ವಿಶ್ವದ ನಿಯಾಮಕವಾಗಿರುವ ಆ ಬೃಹತ್ ಚೈತನ್ಯದ ಒಂದು ಅಂಶ. ಅದು ಆ ಬೃಹತ್ ಚೈತನ್ಯದಿಂದಲೇ ಹೊರಟು ಅನೇಕ ಜೀವಯೋನಿಗಳ ಮೂಲಕ ಹಾದು ಕೊನೆಗೆ ಆ ಬೃಹತ್ ಚೈತನ್ಯದಲ್ಲಿಯೇ ಒಂದಾಗುತ್ತದೆ. ಪ್ರತಿ ಜೀವಿಯ ಯಾತ್ರೆಯೂ ಆಯಾ […]