ಸ್ವರಾಜ್ಯ ಕೇವಲ ಬ್ರಿಟಿಷರ ವಿರುದ್ಧದ ಹೋರಾಟವಲ್ಲ, ಅನೇಕ ಕ್ರಾಂತಿಕಾರಕ ಅಂಶಗಳ ಫಲಶ್ರುತಿ

ಸ್ವರಾಜ್ಯವು ಕೇವಲ ಬ್ರಿಟಿಷರ ವಿರುದ್ಧದ ಹೋರಾಟವಾಗಿರದೆ ಅನೇಕ ಕ್ರಾಂತಿಕಾರಕ ಅಂಶಗಳ ಫಲಶ್ರುತಿ ಎಂದು ಪ್ರಾಧ್ಯಾಪಕರಾದ ಡಾ. ಟಿ. ಏನ್. ಲೊಕೇಶ್ ರವರು ತಿಳಿಸಿದರು .

ಹೊಂಬೇಗೌಡ ನಗರ ಮಂಥನ ಭಾಗದ ವತಿಯಿಂದ ಹಮ್ಮಿಕೊಂಡಿದ್ದ ಚಿಂತನ ಮಂಥನದಲ್ಲಿ ಮಾತನಾಡಿದ ಅವರು, ನಮಗೆ ಸಿಕ್ಕ ಸ್ವಾತಂತ್ರ್ಯ ಬ್ರಿಟಿಷರ ಬಳುವಳಿಯಾಗಿರದೆ ಅನೇಕ ರಾಷ್ಟ್ರೀಯ ಮಹಾಪುರುಷರ ತ್ಯಾಗ, ಬಲಿದಾನಗಳಿಂದ ಪಡೆದದ್ದಾಗಿದೆ. ಯೋಗಿ ಅರವಿಂದರು ಯುವಜನರಿಗೆ ತಿಳಿಸಿದ್ದ ಗತಕಾಲದ ವೈಭವದ ಅರಿವು, ವರ್ತಮಾನದ ತಲ್ಲಣ ಮತ್ತು ಭವಿಷ್ಯದ ನವ ಭಾರತದ ಕನಸನ್ನು ವಿವರಿಸಿದರು.

ಬ್ರಿಟಿಷರ ಪ್ರಭಾವವೇ ಹೆಚ್ಚಾಗಿರುವ ಭಾರತದ ಇತಿಹಾಸದಲ್ಲಿ ಸ್ಥಾನಿಕ ಹೋರಾಟಗಾರರನ್ನು ಕಡೆಗಣಿಸಿ ವಿದೇಶಿ ಲೂಟಿಕೋರರನ್ನು ವೈಭವೀಕರಿಸುವ ಮತ್ತು ಸ್ವದೇಶೀ ಕ್ರಾಂತಿಕಾರರನ್ನು ದಮನಗೊಳಿಸುವ ಪ್ರವೃತ್ತಿ ಅನೇಕ ವರ್ಷಗಳಿಂದ ನಡೆಯುತ್ತಿದೆ. ಕ್ರಾಂತಿಕಾರರ ತ್ಯಾಗ ಮತ್ತು ಬಲಿದಾನದಿಂದ ಸ್ವಾತಂತ್ರ್ಯ ಸಂಗ್ರಾಮದ ವೇಗ ಹೆಚ್ಚಾಯಿತೆಂದರು.

ಭಾರತೀಯ ಸ್ವಾತಂತ್ರ್ಯ ಹೋರಾಟವು ಕೇವಲ ರಾಜಕೀಯ ಹೋರಾಟವಾಗಿರದೆ, ಅನೇಕ ಸಾಹಿತಿಗಳು, ಲೇಖಕರು, ಸಾಮಾಜಿಕ ಹೋರಾಟಗಾರರು, ಸನಾತನ ಸಂತರು, ಸಂಸ್ಥಾನಗಳು, ವಿಶ್ವವಿದ್ಯಾಲಯಗಳು ಮತ್ತು ಪತ್ರಿಕೆಗಳು ಸ್ವರಾಜ್ಯ ಹೋರಾಟ ಮತ್ತು ರಕ್ಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದವು ಎಂದು ಹೇಳಿದರು.

ನಿಖರವಾದ ದಾಖಲೆ ಮತ್ತು ಪುರಾವೆಗಳನ್ನು ಹೊಂದಿರುವ ಐತಿಹಾಸಿಕ ಅಂಶಗಳನ್ನು ಗುರುತಿಸಿ ಪಠ್ಯ ಪುಸ್ತಕಗಳಲ್ಲಿ ಅಳವಡಿಸುವ ಕಾರ್ಯಗಳನ್ನು ರಾಷ್ಟೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ ಮಾಡುತ್ತಿದೆ. ಶಿಕ್ಷಣದ ಮೂಲಕ ರಾಷ್ಟೀಯ ಭಾವೈಕ್ಯತೆಯನ್ನು ಮೂಡಿಸಿ ರಾಷ್ಟ್ರ ನಿರ್ಮಾಣ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಿಗೆ ವಿಷಯಗಳನ್ನು ಆಯ್ದು ಕೊಳ್ಳುವ ಸ್ವಾತಂತ್ರ್ಯ ಮತ್ತು ವೃತ್ತಿಗೆ ಪೂರಕವಾದ ಕೌಶಲ್ಯಾಭಿವೃದ್ಧಿಯನ್ನು ಹೊಂದಲು ರಾಷ್ಟ್ರೀಯ ಶಿಕ್ಷಣ ನೀತಿಯು ಪೂರಕವಾಗಿದೆ ಎಂದು ಡಾ. ಲೋಕೇಶ್ ರವರು ತಿಳಿಸಿದರು.

ಭಾರತೀಯ ಇತಿಹಾಸವು ಪ್ರಪಂಚದಲ್ಲಿಯೇ ಅತ್ಯoತ ಪುರಾತನವಾಗಿದ್ದು ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತಾ ಪರೋಪಕಾರಕ್ಕಾಗಿಯೇ ಈ ಶರೀರ ಎಂಬ ಧರ್ಮವನ್ನು ಜಗತ್ತಿಗೆ ತಿಳಿಸುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಡಾ.ಕವಿರಾಜ್ ಉಡುಪರು ತಿಳಿಸಿದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸ್ವದೇಶೀ ಚಿಂತನೆಯ ಹರಿಕಾರ ರಾಜೀವ್ ದೀಕ್ಷಿತ್

Tue Nov 30 , 2021
ಹಲವು ದಶಕಗಳ ಹಿಂದೆ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಪ್ರಭಾವದಿಂದ ಭಾರತದ ಆರ್ಥಿಕ, ರಾಜತಾಂತ್ರಿಕ, ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿ ಸ್ವದೇಶೀ ಚಿಂತನೆಯ ಜಾಗೃತಿ ಮೂಡಿಸಿದವರು ರಾಜೀವ್ ದೀಕ್ಷಿತ್. ಅದು ವಿದೇಶೀ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ವ್ಯಾಪಾರ ವಹಿವಾಟುಗಳ ಮೂಲಕ ಮಾರುಕಟ್ಟೆಯಲ್ಲಿ ವಿಝ್ರಂಭಿಸುತ್ತಿದ್ದ ಸಮಯ. ಆಧುನಿಕ ಜೀವನ ಶೈಲಿ, ಪ್ರತಿಭಾ ಪಲಾಯನ, ಭಾರತದ ವಿದೇಶೀ ಸಾಲ, ರೂಪಾಯಿ ಅಪಮೌಲ್ಯ, ಕಾಳಧನ ಮತ್ತು ವಿದೇಶೀ ಬಹುರಾಷ್ಟ್ರೀಯ ಕಂಪನಿಗಳಿಂದಾಗುತ್ತಿದ್ದ ಸಮಸ್ಯೆಗಳಿಗೆ ಪರಿಹಾರ […]