ಮದನಿ ಅಪಾಯಕಾರಿ ವ್ಯಕ್ತಿ : ಸುಪ್ರೀಂ ಕೋರ್ಟ್

2008ರ ಬೆಂಗಳೂರು ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಜಾಮೀನಿನ ಮೇಲಿರುವ ಕೇರಳದ ಪಿಡಿಪಿ ಪಕ್ಷದ ಮುಖಂಡ ಅಬ್ದುಲ್‌ ಮದನಿಯನ್ನು  ಸುಪ್ರೀಂ ಕೋರ್ಟ್‌ ‘ಅಪಾಯಕಾರಿ ವ್ಯಕ್ತಿ’ ಎಂದು ಕರೆದಿದೆ.

ಕೇರಳಕ್ಕೆ ತೆರಳುವ ಸಲುವಾಗಿ ಜಾಮೀನು ಷರತ್ತಿನಲ್ಲಿ ವಿನಾಯ್ತಿ ಕೋರಿ ಮದನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ಅವರಿದ್ದ ಪೀಠವು ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿತು.

2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 2010ರ ಆಗಸ್ಟ್ ಮಧ್ಯಭಾಗದಲ್ಲಿ ಮದನಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ತದನಂತರ  ಜುಲೈ 2014ರಲ್ಲಿ ಮದನಿಗೆ ಜಾಮೀನು ನೀಡಲಾಗಿತ್ತು. ಆದರೆ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ತೆರಳದಂತೆ ಷರತ್ತು ವಿಧಿಸಿತ್ತು. ಆದರೂ ಅನಾರೋಗ್ಯದ ನೆಪ ಹೇಳಿ ಹಲವು ಬಾರಿ ಕೇರಳಕ್ಕೆ ಭೇಟಿ ನೀಡಿದ್ದರು.

ಮದನಿ ಅಪಾಯಕಾರಿ ವ್ಯಕ್ತಿತ್ವದ ಕುರಿತು ಪುಂಗವ ಪಾಕ್ಷಿಕದ 2010ರ ಸೆಪ್ಟೆಂಬರ್ 1ರ ಸಂಚಿಕೆಯಲ್ಲಿ ರಾಜೇಶ್ ಪದ್ಮಾರ್ ಅವರು ಬರೆದ ಲೇಖನ.

https://samvada.org/wp-content/epaper_imag/1-09-2010.pdf

ಈ ಹಿಂದೆಯೂ ಕೂಡಾ ಅನಾರೋಗ್ಯದ ನೆಪ ಹೇಳಿ ಕೇರಳಕ್ಕೆ ಭೇಟಿ ನೀಡಿದ್ದರು.  ಇದೀಗ ಅನಾರೋಗ್ಯದ ಹಾಗೂ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ ಎಂಬ ಕಾರಣದಿಂದ ಕೇರಳಕ್ಕೆ ತೆರಳಲು ಅವಕಾಶ ನೀಡುವಂತೆ ಕೋರಿ ಮದನಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಿದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರು , ಮದನಿಗೆ ಈ ಹಿಂದೆ ಜಾಮೀನು ನೀಡಿದ್ದ ಪೀಠದಲ್ಲಿ ನಾನೂ  ಇದ್ದೆಅಲ್ಲವೇ? ಈತ ಅಪಾಯಕಾರಿ ವ್ಯಕ್ತಿ ಗೊತ್ತಲ್ವಾ’ ಎಂದು  ಮೌಖಿಕವಾಗಿ ತಿಳಿಸಿದರು.

ವಿಚಾರಣೆಯ ತ್ರಿಸದಸ್ಯ ಪೀಠದ ಲ್ಲಿರುವ ನ್ಯಾ. ರಾಮಸುಬ್ರಮಣಿ ಅವರು, ತಾವು ಈ ಹಿಂದೆ ಮದನಿ ಪರ ವಕಾಲತ್ತು ನಡೆಸಿರಬಹುದು ಎಂದರು. ಇದನ್ನು ಪರಿಶೀಲಿಸುವಂತೆ ಸೂಚಿಸಿ ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದರು

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಪೋಲಿಯೋಗೆ ಸೆಡ್ಡು ಹೊಡೆದ ಶೇರ್‌ ಖಾನ್ ನ್ನು ಅರಸಿ ಬಂದ ಲಲಿತಕಲಾ ಗೌರವ

Tue Apr 6 , 2021
ಪೋಲಿಯೋಗೆ ಸೆಡ್ಡು ಹೊಡೆದು , ಛಲವೇ ಉಸಿರಾಗಿಸಿಕೊಂಡ ಕಿರಣ್ ಶೇರಖಾನ್ ಗೆ 49ನೇ ವಾರ್ಷಿಕ ಕಲಾ ಪ್ರದರ್ಶನ ಬಹುಮಾನ ದೊರಕಿದೆ. ಆತ ಮೂರನೇ ವರ್ಷದವರೆಗೂ ನಮ್ಮ ನಿಮ್ಮಂತೆ ಆಟವಾಡಿಕೊಂಡಿದ್ದ, ಇದ್ದಕ್ಕಿದ್ದಂತೆ ಕಾಲುಗಳು ಚಲನೆ ಕಳೆದುಕೊಳ್ಳತೊಡಗಿತು! ಆ ಬಾಲಕನ ಬಣ್ಣದ ಬದಕಿನ ಕನಸನ್ನು ಕಿತ್ತುಕೊಳ್ಳಲು ಹವಣಿಸಿದ್ದ ಪೋಲಿಯೋ…ತನ್ನ ಕೆಲಸ ಸಾಧಿಸಿ ನಕ್ಕಿತು. ಬಾಲಕ ಕಿರಣ್‌ ಅಳಲಿಲ್ಲ! ಕಂಗೆಡಲಿಲ್ಲ!! ಪೋಲಿಯೋಗೆ ಸೆಡ್ಡು ಹೊಡೆದು , ಛಲವೇ ಉಸಿರಾಗಿಸಿಕೊಂಡ.. ಬದುಕು ಕಟ್ಟಿಕೊಳ್ಳಲೆತ್ನಿಸತೊಡಗಿದ ಕಿರಣ್ ಶೇರಖಾನ್ […]