ಭಾರತದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಅಡ್ಡಿ: ಕಠಿಣ ಕಾನೂನು ಕ್ರಮಕ್ಕೆ ಕರ್ನಾಟಕ ಹಿಂದು ಜಾಗರಣ ವೇದಿಕೆ ಆಗ್ರಹ

ಭಾರತದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಅಡ್ಡಿ ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಾರ್ವಜನಿಕ ಅಪಮಾನ ಖಂಡನೀಯ
ಕೃತ್ಯವೆಸಗಿದ ದೇಶದ್ರೋಹಿಗಳ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಕರ್ನಾಟಕ ಹಿಂದು ಜಾಗರಣ ವೇದಿಕೆ ಆಗ್ರಹ.

ಭಾರತದ 75ನೇ ಸ್ವಾತಂತ್ರ್ಯೋತ್ಸವವನ್ನು ಇಡೀ ದೇಶ ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಿರುವ ಮತ್ತು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆರಂಭಿಸುವ ಮೊದಲ ಹಂತದಲ್ಲಿಯೇ ದೇಶದ್ರೋಹಿ ಶಕ್ತಿಗಳು ಪುತ್ತೂರಿನ ಕಬಕದಲ್ಲಿ ತಮ್ಮ ನಿಜರೂಪವನ್ನು ಪ್ರದರ್ಶನಗೊಳಿಸಿದ್ದಾರೆ. ಸ್ವಾತಂತ್ರ್ಯದ ಸಂಗ್ರಾಮದ ಕುರಿತು ಯುವಕರಲ್ಲಿ ಮಕ್ಕಳಲ್ಲಿ ದೇಶ ಭಕ್ತಿಯ ಜಾಗೃತಿಯನ್ನು ಉಂಟು ಮಾಡುವುದಕ್ಕಾಗಿ ಮನೆಮನೆಗೆ ತೆರಳಲು ಹೊರಟಂತಹ ಭಾರತದ ಸ್ವಾತಂತ್ರ್ಯ ಸಂಗ್ರಾಮದ ರಥಯಾತ್ರೆಗೆ ಪುತ್ತೂರು ಸಮೀಪದ ಕಬಕದಲ್ಲಿ ಮತಾಂಧ ದೇಶದ್ರೋಹಿ ಶಕ್ತಿಗಳು ಅಡ್ಡ ಹಾಕಿ, ಅದನ್ನು ವಿರೋಧಿಸುವ ನೆಪದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಹಾನ್ ದೇಶಭಕ್ತ ಹತ್ತಾರು ಪ್ರಥಮಗಳ ಧೀರ, ಸ್ವಾತಂತ್ರವೀರ ಸಾವರ್ಕರ್ ಅವರ ಅಪಮಾನಿಸಿ ಧಿಕ್ಕಾರ ಕೂಗಿದ ದೇಶದ್ರೋಹಿ ಶಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಕರ್ನಾಟಕ ಹಿಂದು ಜಾಗರಣ ವೇದಿಕೆ ಆಗ್ರಹಿಸುತ್ತದೆ.

ಇದು ಯಾವುದೋ ಕೆಲವು ಕಿಡಿಗೇಡಿಗಳ ಕೃತ್ಯ ಆಗಿರದೆ ಅತ್ಯಂತ ವ್ಯವಸ್ಥಿತವಾಗಿ ಊರು ಊರುಗಳಲ್ಲಿˌ ಕೇರಿ ಬೀದಿಗಳಲ್ಲಿ ತಲೆ ಎತ್ತುತ್ತಿರುವ ಪಾಕಿಸ್ತಾನಿ ಹಸ್ತಕ ದೇಶದ್ರೋಹಿಗಳ ನೇರವಾದ ಕೃತ್ಯವಾಗಿದ್ದು ಇದು ಮುಂದಿನ ದಿನಗಳ ಭಾರಿ ದುರ್ಘಟನೆಗಳಿಗೆ ಸಾಕ್ಷಿಯಾದೀತು. ಈ ಕೃತ್ಯವನ್ನು ಎಸಗಿದಂತಹ ಎಲ್ಲಾ ದೇಶದ್ರೋಹಿ ಶಕ್ತಿಗಳ ವಿರುದ್ಧ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಲ್ಲದೇ ಸ್ವಾತಂತ್ರ್ಯ ಹೋರಾಟಗಾರರನ್ನು ಸಾರ್ವಜನಿಕವಾಗಿ ನಿಂದಿಸಿ ಅಪಮಾನಿಸಿ ಧಿಕ್ಕಾರವನ್ನ ಕೂಗಿರುವ ಹಿನ್ನೆಲೆಯಲ್ಲಿ ನೇರವಾಗಿ ದೇಶದ್ರೋಹದ ಕಾನೂನಿನ ಅಡಿಯಲ್ಲಿಯೇ ಬಂಧಿಸಿ ಸೆರೆಮನೆಗೆ ಅಟ್ಟಬೇಕೆಂದು ಆ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ತಲೆಎತ್ತಬಹುದಾದ ದೇಶದ್ರೋಹಿ ಶಕ್ತಿಗಳನ್ನು ಆರಂಭದಲ್ಲಿಯೇ ಹೊಸಕಿಹಾಕಲು ಗೃಹಸಚಿವ ಅರಗ ಜ್ಞಾನೆಂದ್ರ ದಿಟ್ಟ ಕ್ರಮಕ್ಕೆ ಮುಂದಾಗುವುದರ ಮೂಲಕ ತಮ್ಮ ಕರ್ತೃತ್ವ ಶಕ್ತಿಯನ್ನು ಪ್ರದರ್ಶಿಸಬೇಕೆಂದು ಹಿಂದು ಜಾಗರಣ ವೇದಿಕೆ ಅವರನ್ನ ಆಗ್ರಹಿಸುತ್ತದೆ. ಯಾವುದೇ ಒತ್ತಡ ಯಾವುದೇ ಮುಲಾಜುಗಳಿಗೆ ಒಳಗಾಗದೆ ದಿಟ್ಟ ಕ್ರಮವನ್ನು ಕೈಗೊಳ್ಳುವ ಅವಶ್ಯಕತೆ ಇಂದಿದೆ.

ಯಾವುದೇ ವ್ಯಕ್ತಿಗಳಾಗಲಿ ಯಾವುದೇ ಶಕ್ತಿಗಳಾಗಲಿ ಈ ಕೃತ್ಯವನ್ನು ಬೆಂಬಲಿಸಿದರೆ ಅವರು ದೇಶದ್ರೋಹಿಗಳು ಎಂದು ಪರಿಗಣಿಸಿ ಇಡೀ ಸಮಾಜ ಅಂತಹ ದೇಶದ್ರೋಹಿಗಳನ್ನು ಬೆಂಬಲಿಸುವವರನ್ನ ಮತ್ತು ಸಮರ್ಥಿಸುವವರನ್ನˌ ರಕ್ಷಿಸುವವರನ್ನು ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಅವುಗಳನ್ನು ಆರಂಭದಲ್ಲಿಯೇ ಹುಟ್ಟಡಗಿ ಸಬೇಕೆಂದು ಹಿಂದು ಜಾಗರಣ ವೇದಿಕೆ ಕರ್ನಾಟಕದ ನಾಗರಿಕರನ್ನು ವಿನಂತಿಸುತ್ತದೆ. ಈ ಕುರಿತು ರಾಜ್ಯದ ಎಲ್ಲೆಡೆ ತೀವ್ರತರದ ಪ್ರತಿಭಟನೆಯನ್ನು ಇಂದು ಮತ್ತು ನಾಳೆ ಹಮ್ಮಿಕೊಳ್ಳಬೇಕೆಂದು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಇದರ ವಿರುದ್ಧ ಪ್ರತಿಭಟನೆಯನ್ನು ಸಾರ್ವಜನಿಕರು ದೇಶಭಕ್ತರು ಸಂಘಟಿತವಾಗಿ ನಡೆಸಬೇಕೆಂದು ಹಿಂದು ಜಾಗರಣ ವೇದಿಕೆ ದೇಶಭಕ್ತ ನಾಗರಿಕರಿಗೆ ಕರೆ ಕೊಡುತ್ತದೆ ಎಂದು ಹಿಂದು ಜಾಗರಣ ವೇದಿಕೆಯ ಅಧ್ಯಕ್ಷರಾದ ಬಿ.ಎಸ್.ಪೈ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Call for Justice welcomes HC, Kolkata order for CBI to probe post poll violence in West Bengal.

Sat Aug 21 , 2021
Call for Justice, wholeheartedly welcomed the Judgement pronounced by five-member bench of Hon’ble High Court of Kolkata today for ordering probe by Central Bureau of Investigation (CBI) on the post-poll violence in West Bengal, specifically, the incidents of rape, murder and crimes against women and also said investigation to be […]