ಪುನೀತ್ ರಾಜಕುಮಾರ್ ಸ್ಮರಣಾರ್ಥ ಅಭಿಮಾನಿಗಳು, ‘ಸಕ್ಷಮ’ ಆಯೋಜಿಸಿದ ನೇತ್ರದಾನ ಸಂಕಲ್ಪ

 7 ನವೆಂಬರ್ 2021, ಬೆಂಗಳೂರು: ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ನೇತ್ರದಾನ ಸಂಕಲ್ಪ ಹಾಗೂ ಉಚಿತ ಕಣ್ಣಿನ ತಪಾಸಣೆ.
 
 ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ನೇತ್ರದಾನ ಸಂಕಲ್ಪ (eye donation pledge) ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಾಲನಾಯಕನಹಳ್ಳಿಯಲ್ಲಿ ಇಂದು ಡಾ. ರಾಜಕುಮಾರ್ ನೇತ್ರಾಲಯ, ನಾರಾಯಣ ನೇತ್ರಾಲಯ ಹಾಗೂ ಸಕ್ಷಮ, ಬೆಂಗಳೂರು ಇವರ ಸಹಯೋಗದಲ್ಲಿ  ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ   ಊರಿನ ಗ್ರಾಮಸ್ಥರು ಭಾಗವಹಿಸಿ ನೇತ್ರದಾನ ಸಂಕಲ್ಪವನ್ನು ಮಾಡಿದರು.
 ಒಟ್ಟು 225 ನೇತ್ರದಾನ ಸಂಕಲ್ಪ ಇಂದು ನಡೆಯಿತು ಹಾಗೂ ಉಚಿತ ಕಣ್ಣಿನ ತಪಾಸಣೆಯ ಫಲವನ್ನು 167 ಜನರು ಪಡೆದುಕೊಂಡರು. ಇಂದಿನ ಶಿಬಿರದಲ್ಲಿ ಗೌರಮ್ಮ ಎಂಬ 104 ವರ್ಷದ ವೃದ್ಧೆಯೂ ನೇತ್ರದಾನ ಸಂಕಲ್ಪ ಮಾಡಿದ್ದಾರೆ. ಅವರ ಸಂಕಲ್ಪ ಎಷ್ಟೋ ಯುವಕರಿಗೂ ಪ್ರೇರಣೆಯಾಯಿತು.


 
ಕಣ್ಣಿನ ತೊಂದರೆ ಇರುವ ಕೆಲವರಿಗೆ ಉಚಿತವಾಗಿ ತಪಾಸಣೆ ಮಾಡುತ್ತೇವೆ ಎಂದು ಡಾಕ್ಟರ್ ರಾಜಕುಮಾರ್ ನೇತ್ರಾಲಯ ಭರವಸೆಯನ್ನೂ ನೀಡಿತು.
 
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಲಾವಿದರು, 2021ನೆ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಡೆದಿಯುವ ಶ್ರೀ ಪ್ರಕಾಶ್ ಬೆಳವಾಡಿಯವರು, ರಂಗಭೂಮಿ ಕಲಾವಿದರಾದ ಸುಧಾ ಬೆಳವಾಡಿ, ಚಲನಚಿತ್ರ ನಟರಾದ ಪ್ರತಾಪ್ ಸಿಂಹರವರು ಭಾಗವಹಿಸಿದರು.
 
ಇಂತಹ ನೇತ್ರದಾನ ಸಂಕಲ್ಪ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಹಾಗೂ ಪುನೀತ್ ರಾಜಕುಮಾರ್ ನೇತ್ರದಾನ ಮಾಡಿದಂತೆಯೇ ನಾವೂ ಮಾಡಿದರೆ ಅದೆಷ್ಟೋ ದೃಷ್ಟಿಯ ಸಮಸ್ಯೆ ಇರುವವರು ಫಲಾನುಭವಿಗಳಗುತ್ತಾರೆ ಎಂದು ಅತಿಥಿಗಳು ಮಾತನಾಡುತ್ತಾ ಕರೆ ಇತ್ತರು.

ಇಂದಿನ ಶಿಬಿರದಲ್ಲಿ ಗೌರಮ್ಮ ಎಂಬ 104 ವರ್ಷದ ವೃದ್ಧೆಯೂ ನೇತ್ರದಾನ ಸಂಕಲ್ಪ ಮಾಡಿದ್ದಾರೆ. ಅವರ ಸಂಕಲ್ಪ ಎಷ್ಟೋ ಯುವಕರಿಗೂ ಪ್ರೇರಣೆಯಾಯಿತು.

 ನೇತ್ರದಾನ ಸಂಕಲ್ಪ ಮಾಡಿದವರಿಗೆ ಪ್ರಮಾಣ ಪತ್ರ ನೀಡಲಾಯಿತು.

ಹಾಲನಾಯಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರಲ್ಲದೇ ನೇತ್ರದಾನ ಸಂಕಲ್ಪವನ್ನು ಮಾಡಿದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಮೋದಿ ಮತ್ತು ಪೋಪ್ ಚರ್ಚೆಯಲ್ಲಿನ ರಾಜಕೀಯ ಮತ್ತು ತಾತ್ವಿಕ ನೆಲೆಗಳು

Wed Nov 10 , 2021
ಮೋದಿ ಮತ್ತು ಪೋಪ್ ಚರ್ಚೆಯಲ್ಲಿನ ರಾಜಕೀಯ ಮತ್ತು ತಾತ್ವಿಕ ನೆಲೆಗಳು ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ. ನರೇಂದ್ರಮೋದಿಯವರು ಅಕ್ಟೋಬರ್ ಕೊನೆಯ ವಾರದಲ್ಲಿ ಜಾಗತಿಕ ಸಭೆಯೊಂದರಲ್ಲಿ ಭಾಗವಹಿಸಲು ಇಟಲಿದೇಶಕ್ಕೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ಕ್ಯಾಥೋಲಿಕ್ ಕ್ರೈಸ್ತರ ನೇತೃತ್ವ ವಹಿಸಿರುವ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದರು. ಸುಮಾರು ೩೦ ನಿಮಿಷಗಳ ಯೋಜಿತ ಭೇಟಿಯು ಮುಂದುವರೆದು ಒಂದು ಘಂಟೆಗೂ ಮೀರಿ ನಡೆಯಿತು. ಪ್ರಧಾನ ಮಂತ್ರಿ ಮೋದಿಅವರು ಪೋಪ್ ಭೇಟಿಗೆ ಬಂದಾಗ ಅವರನ್ನು ಸ್ವಾಗತಿಸಲು […]