ತಮ್ಮದೇ ಟ್ವಿಟ್ ಸಮರ್ಥನೆಗೆ ತಾವೇ ನಿಂತು ಏಕಾಂಗಿಯಾಗಿ ಹಾಸ್ಯಾಸ್ಪದರಾದರೆ ಕುಮಾರಸ್ವಾಮಿ?

ವಿಹಿಂಪ, ಆರೆಸ್ಸೆಸ್ ಬಗ್ಗೆ, ರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಬಗ್ಗೆ ಅವಹೇಳನಾಕಾರಿ ಟ್ವಿಟ್ ಸರಣಿ ಕಾರಿ ಮುಗಿಸಿದ ಬಳಿಕ, ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರು ಆತಾತುರವಾಗಿ ಬುಧವಾರದಂದು ಪತ್ರಿಕಾ ಗೋಷ್ಠಿಯನ್ನು ಕರೆದಿದ್ದರು. ತಮ್ಮ ಟ್ವಿಟ್ ಅಭಿಯಾನದ ನಂತರ, ಮಾಧ್ಯಮಗಳಲ್ಲಿ ನಡೆದ ಚರ್ಚೆ, ವಿಹಿಂಪ, ಬಜರಂಗ ದಳದ ಪತ್ರಿಕಾ ಹೇಳಿಕೆ, ಜೊತೆಗೆ ನಡೆದ ಸಾರ್ವಜನಿಕ ಚರ್ಚೆಯ ಬಳಿಕ ಕುಮಾರಸ್ವಾಮಿಯವರು ಪತ್ರಿಕಾ ಹೇಳಿಕೆಗೆ ಆಹ್ವಾನಿಸಿದರು. ನಾಝಿಗಳಂತೆ ಮನೆ ಮಾರ್ಕ್ ಮಾಡಲಾಗುತ್ತಿದೆ, ಮುಂದೊಂದು ದಿನ ರಾಜ್ಯಕ್ಕೆ ಆಪಾತ್ತಿದೆ ಎಂಬ ಹುರುಳಿಲ್ಲದ ಆರೋಪ ಮಾಡುವಾಗ ಕುಮಾರಣ್ಣ ಅದಕ್ಕೆ ತಕ್ಕ ಪುರಾವೆ ಒದಗಿಸದೆ ಹೋದದ್ದು , ಮಾಜಿ ಮುಖ್ಯಮಂತ್ರಿಯೊಬ್ಬರು ಮುಂದಿನ ದಿನಗಳಲ್ಲಿ ಆರೋಪ ಮಾಡುವಾಗ ಜಾಗರೂಕರಾಗಿರಬೇಕಾದ ಅವಶ್ಯಕತೆ ಹೆಚ್ಚಿದೆ ಎಂಬ ಸಂದೇಶ ರವಾನೆಯಾಯಿತು.

ಮಾಜಿ ಮುಖ್ಯಮಂತ್ರಿಯೊಬ್ಬರ ಟ್ವಿಟ್, ಸಂಚಲನ ಮೂಡಿಸಿದ್ದೇನೋ ನಿಜ ಆದರೆ ಅವರ ಮಾತುಗಳು ಅವರಿಗೇ ಮುಳುವಾಗಿ ಪರಿಣಮಿಸಿತು ಎಂದು ಅಂದಾಜಿಸಿ, ಅದರಿಂದ ಹೊರಬರುವ ಪ್ರಯತ್ನವೇ ಪತ್ರಿಕಾ ಪ್ರಕಟಣೆಯ ಉದ್ದೇಶ ಎಂದು ಮಾಧ್ಯಮದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯ ಹೆಚ್ಚಿನ ವಿಷಯಗಳನ್ನು, ನಮ್ಮ ನಿಲುವನ್ನು ಸ್ಪಷ್ಟ ಪಡಿಸಿಕೊಳ್ಳಲು ಕರೆಯುವ ಇಂತಹ ಪತ್ರಿಕಾ ಗೋಷ್ಠಿಗೆ ಪತ್ರಕರ್ತರೂ ಕಾತುರದಿಂದ ಕಾಯುತ್ತಾರೆ. ಆದರೆ ಗೋಷ್ಠಿ ನೀರಸವಾದಾಗ, ಅವರಿಗಾಗುವ ಬೇಸರ ಅಷ್ಟಿಷ್ಟಲ್ಲ. ಸಾರ್ವಜನಿಕರೂ ಸೇರಿದಂತೆ ಕುಮಾರಸ್ವಾಮಿಯವರಿಗೆ ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನಿಸುವ ಕೆಲಸಕ್ಕೂ ಕೆಲವೊಮ್ಮೆ ಹೆದರುತ್ತಾರೆ, ಕಾರಣವಿಷ್ಟೇ. ಕುಮಾರಸ್ವಾಮಿಯವರು “ಇಕ್ಕಟ್ಟಿನ ಪ್ರಶ್ನೆ ಕೇಳುವವರನ್ನು” “ಮಾರ್ಕ್” ಮಾಡಿಕೊಳ್ಳುತ್ತಾರೆಂಬ ಭಯ ಎಂದು ಮಾಧ್ಯಮದ ವಿಶ್ಲೇಷಕರೊಬ್ಬರು ವಿಶ್ವ ಸಂವಾದ ಕೇಂದ್ರಕ್ಕೆ ತಿಳಿಸಿದರು. ಕುಮಾರಸ್ವಾಮಿಯವರು ಒತ್ತಡಕ್ಕೆ ಮಣಿದು, ಅವರಿಗಿರುವ ಅನಿವಾರ್ಯತೆಯ ಕುರಿತಾಗಿ ಮಾಧ್ಯಮದ ವಿಶ್ಲೇಷಕರು ಮಾತನಾಡುತ್ತ,

ಏಕಾಂಗಿಯಾದರೆ ಕುಮಾರಣ್ಣ?
ವಿಶೇಷವೆಂದರೆ, ಜೆಡಿಎಸ್ ಪ್ರಾದೇಶಿಕ ಪಕ್ಷವಾದರೂ ರಾಷ್ಟ್ರೀಯ ಪಕ್ಷ ಎಂಬ ಹಣೆಪಟ್ಟಿ ಇಟ್ಟುಕೊಂಡಿದ್ದಾಗಿಯೂ ಕುಮಾರಣ್ಣನವರ ಟ್ವಿಟ್ ಸಮರ್ಥನೆಗೆ ಅವರೇ ಬರಬೇಕಾಯಿತು. ತಮ್ಮ ಕಾರ್ಯಕರ್ತರೂ ಸೇರಿದಂತೆ ಹಲವಾರು ಜನರು ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿರುವಾಗ ಎಚ್ಡಿಕೆ ಒಬ್ಬರೇ ಶ್ರೀ ರಾಮ ಮಂದಿರ ನಿರ್ಮಾಣದ ವಿರುದ್ಧ ನಿಲ್ಲಲಾಗದೆ ಸ್ವಪಕ್ಷೀಯರೂ ಸಮರ್ಥನೆಗೆ ಬರದೇ ಏಕಾಂಗಿಯಾದರೆ ಕುಮಾರಣ್ಣ ಎಂಬ ಪ್ರಶ್ನೆ ಮೂಡುತ್ತದೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

ತಾವೊಬ್ಬ ರಾಮ ಭಕ್ತ
ತಾವೊಬ್ಬ ರಾಮನ ಭಕ್ತನ ಕುಟುಂಬದವನು ಹಾಗೂ ತಾವು ಇಟ್ಟಿರುವ ಭಕ್ತಿಯ ಮುಂದೆ ಉಳಿದವರ ಭಕ್ತಿ ನಗಣ್ಯ, ತಾವೂ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವವರೇ ಆದರೆ ಪ್ರಶ್ನೆಗಳನ್ನು ಕೇಳಿ ಅನುಮಾನಗಳನ್ನು ದೂರ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುವ ಪ್ರಯತ್ನವನ್ನೇ ಕುಮಾರಣ್ಣ ಮಾಡಿದ್ದಾರೆ. ಮುಂದೊಂದು ದಿನ ಶ್ರೀ ರಾಮನ ಮಂದಿರ ನಿರ್ಮಾಣದ ದೇಣಿಗೆಯನ್ನು ಪ್ರಶ್ನಿಸಿದ್ದರು ಎಂದು ಮತಗಳು ಕಡಿತಗೊಂಡು, ತಾವು “ಕಿಂಗ್ ಮೇಕರ್” ಆಗದಿದ್ದರೆ ಮತ್ತಷ್ಟು ವರ್ಷ ಅಧಿಕಾರದ ವನವಾಸ ಅನುಭವಿಸಬೇಕಾದೀತು ಎಂಬ ಭಯ ಅವರಿಗಿದ್ದೀತು.

ರಾಜಕೀಯವಾಗಿ ಮರುಸ್ಥಾಪನೆಗೊಳ್ಳಬೇಕು
ಇಂದಿನ ದಿನಗಳಲ್ಲಿ ರಾಜಕೀಯ ತಲ್ಲಣಗಳು ಸರ್ವೇ ಸಾಮಾನ್ಯ. ಅಂತಹ ಅವಕಾಶ ಮತ್ತೊಮ್ಮೆ ಸಿಕ್ಕು ತಾವು ಮುಖ್ಯಮಂತ್ರಿಗಳಾಗಬೇಕೆಂಬ ಹೆಬ್ಬಯಕೆ ಕುಮಾರಸ್ವಾಮಿಯವರಿಗೆ ಇದ್ದಿರಲಿಕ್ಕೆ ಸಾಕು. ಹಿಂದೊಮ್ಮೆ ಕಾಂಗ್ರೆಸ್ ಜೊತೆ ಸೇರಿಕೊಂಡು ಮುಖ್ಯಮಂತ್ರಿಯಾದಾಗ, ತಮ್ಮನ್ನು ಕ್ಲರ್ಕ್ ತರಹ ಕಂಡಿದ್ದರು ಎಂದು ದೂರುವ ಕುಮಾರಸ್ವಾಮಿಯವರು ಇಂದಿಗೂ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಹಾತೊರಿಕೆ ಇದಕ್ಕೆ ಕಾರಣವಿರಬಹುದು.

ದಾರಿ ತಪ್ಪಿದ ಗೋಷ್ಠಿ
ಸಂಘ, ವಿಹಿಂಪ ಬಗ್ಗೆ ಮಾತನಾಡಲು ಆರಂಭಿಸಿ, ಉಪ್ಪಿನಕಾಯಿ ರುಚಿ ಎಂದು ಅದನ್ನೇ ಬಡಿಸುವ ಕೆಲಸದಲ್ಲಿ ಕುಮಾರಣ್ಣ ಪತ್ರಿಕಾ ಗೋಷ್ಠಿಯಲ್ಲಿ ತೊಡಗಿದ್ದರು. ರಾಮ ಮಂದಿರ ಸ್ಥಾಪನೆಯ ಬಗ್ಗೆ ಮಾತನಾಡುತ್ತ ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆಯೂ ಮಾತನಾಡ ತೊಡಗಿದರು.

ವೃಥಾ ಆರೋಪ.
ತಮ್ಮ ಮೊದಲ ಟ್ವಿಟ್ ಸರಣಿಯಲ್ಲಿ ನಾಝಿಯರನ್ನು, ರಾಮ ಮಂದಿರದ ದೇಣಿಗೆ ನೀಡದವರ ಮನೆ ಮಾರ್ಕ್ ಮಾಡುವ ಸುಳ್ಳು ಸಂಗತಿ ಎಳೆತಂದ ಮಾಜಿ ಮುಖ್ಯಮಂತ್ರಿಗಳು, ಅದಕ್ಕೆ ಪೂರಕವಾದ ಸಾಕ್ಷಿಗಳನ್ನು ಒದಗಿಸಲು ನಪಾಸಾದರು. ಆರೋಪ ಮಾಡುವುದು ಸುಲಭವಾದರೂ ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು ಮಾಡುವ ಗಂಭೀರ ಆರೋಪಕ್ಕೂ, ಜನಸಾಮಾನ್ಯನೊಬ್ಬ ಮಾಡುವ ಆರೋಪಕ್ಕೂ ವ್ಯತ್ಯಾಸ ಇರಲೇಬೇಕು, ಹಾಗೂ ಜವಾಬ್ದಾರಿಯುತ ಹುದ್ದೆಯಲ್ಲಿದ್ದವರು ಹೆಚ್ಚು ಜಾಗರೂಕರಾಗಿರಬೇಕು.

ಒಟ್ಟಿನಲ್ಲಿ ಠುಸ್ ಪಟಾಕಿಯಂತಿದ್ದ ಅವರ ಪತ್ರಿಕಾ ಗೋಷ್ಠಿಯನ್ನು “ಮಾರ್ಕ್” ಮಾಡಿಕೊಂಡು ಮುಂದೊಂದು ದಿನ ತಪ್ಪಿಸಿಕೊಳ್ಳಬೇಕು ಎಂದು ಮಾಧ್ಯಮ ಮಿತ್ರರೊಬ್ಬರು ವಿಶ್ವ ಸಂವಾದ ಕೇಂದ್ರಕ್ಕೆ ತಿಳಿಸಿದರು. ಇನ್ನು ಕುಮಾರಸ್ವಾಮಿಯವರ ಗೋಷ್ಠಿಯಲ್ಲಿ ಬಂದ ಶೈಲಿಯಲ್ಲೇ ಹೇಳಬೇಕೆಂದರೆ, “ಆ ಮಿತ್ರರ ಹೆಸರು ಬೇಡ.” ಹಿಂದೆಲ್ಲ ಪತ್ರಕರ್ತರನ್ನು ಹೀನಾಯವಾಗಿ ಕಂಡು ಕೇಸು ಜಡಿಯುವ ಕೆಲಸದಲ್ಲಿ ಇದ್ದ ಕುಮಾರಸ್ವಾಮಿಯವರು, ತಮ್ಮ ಶಿಫಾರಸ್ಸು ಬಳಸಿಕೊಂಡು ಮತ್ತೆ ಆ ಚಾಳಿ ಮುಂದುವರೆಸಿಯಾರು ಎಂಬ ಕಾಳಜಿಯಷ್ಟೇ.

ಎಚ್ ಡಿ ಕುಮಾರಸ್ವಾಮಿ

Vishwa Samvada Kendra

One thought on “ತಮ್ಮದೇ ಟ್ವಿಟ್ ಸಮರ್ಥನೆಗೆ ತಾವೇ ನಿಂತು ಏಕಾಂಗಿಯಾಗಿ ಹಾಸ್ಯಾಸ್ಪದರಾದರೆ ಕುಮಾರಸ್ವಾಮಿ?

  1. ಈ ರೀತಿಯ ಹೇಳಿಕೆಗಳೇ ಅವರ ಜೀವನೋಪಾಯದ ಮೂಲ ಆಧಾರ. ಹೀಗಿರುವಾಗ ತಮ್ಮ ಹೊಟ್ಟೆ ಮೇಲೆ ತಾವೇ ಹೊಡೆದುಕೊಳ್ಳಲಾದೀತೇ?

    ಎಲ್ಲದರಲ್ಲೂ ಎರಡೆರಡು ಅನುಭವವನ್ನು ಹೊಂದಿದ ಕುಮಾರಣ್ಣ(ಮದುವೆ, ಸಮ್ಮಿಶ್ರ ಸರ್ಕಾರ) ನಿಗೆ ನೀವು ನಿಮ್ಮ ಒಂದು ಗಟ್ಟಿ ನಿರ್ಧಾರ ತಿಳಿಸಿ ಅಂತ ಕೇಳಿದರೆ ಹೇಗೆ. ನಾಳೆ ಸಮಯ ಬಂದಾಗ ಟವೆಲ್ ಹಿಡಿದು ಈ ರೀತಿಯಾಗಿ ರಾಮನ ಬಗ್ಗೆ ಮಾತನಾಡಲು ಹೇಳಿದ್ದೇ ಕಾಂಗ್ರೆಸ್ನವರು ಅಂತ ಹೇಳಿ ವೋಟ್ ಗಿಟ್ಟಿಸಿಕೊಳ್ಳಬೇಕಲ್ಲವೇ….

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ 'ವಿಜಯನಗರದ ನೆನಪು' ಕವನದ ಕುರಿತು...

Thu Feb 18 , 2021
ಅವಿನಾಶ್ ವಿ.ಜಿ, ಹವ್ಯಾಸಿ ಬರಹಗಾರರು ಎಂ. ಗೋಪಾಲಕೃಷ್ಣ ಅಡಿಗರ ಬರಹಗಳಲ್ಲಿ ನನ್ನ ಮೆಚ್ಚಿನದು ‘ವಿಜಯನಗರದ ನೆನಪು’. ಈ ಕವನವು ಅಡಿಗರ ‘ಕಟ್ಟುವೆವು ನಾವು’ ಕವನ ಸಂಕಲನದ ಒಂದು ಕವನ. ‘ಅಡಿಗರ ಕವನದಲ್ಲಿ ಯಕ್ಷಗಾನ ಗತ್ತು ಎದ್ದು ತೋರುತ್ತದೆ’ ಎಂದು ಲಂಕೇಶರು ಒಂದು ಕಡೆ ಹೇಳಿದ್ದಾರೆ. ಆ ಮಾತಿಗೆ ಈ ಕವನವು ಒಂದು ಸೂಕ್ತ ಉದಾಹರಣೆ ಎಂದು ಹೇಳಬಹುದು. ಪ್ರತಿ ಕನ್ನಡಿಗನಿಗೂ ತನ್ನ ಉತ್ಕೃಷ್ಟ ಪರಂಪರೆಯ ಬಗ್ಗೆ, ಈ ಕವನ ಓದಿದರೆ […]