ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ರಾಷ್ಟ್ರೀಯ ದ್ವಿತೀಯ ರ‍್ಯಾಂಕ್‌

ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿನಿ ಆರೋಗ್ಯ ಸಮಸ್ಯೆಯ ನಡುವೆಯೂ ನೀಟ್-2021 ರ ಪಿಡಬ್ಲ್ಯೂಡಿ ವಿಭಾಗದಲ್ಲಿ ರಾಷ್ಟ್ರೀಯ ದ್ವಿತೀಯ ರ‍್ಯಾಂಕ್‌ ಪಡೆದಿದ್ದಾರೆ.

ಸಿಂಚನಾ ಲಕ್ಷ್ಮಿ

ಶ್ರೀಮತಿ. ಶೋಭಾ ಬಿ ಮತ್ತು ಶ್ರೀ ಮುರಳೀಧರ ಭಟ್ ಅವರ ಪುತ್ರಿ, ಸಿಂಚನಾ ಲಕ್ಷ್ಮಿ NEET -2021 ಪರೀಕ್ಷೆಗಳಲ್ಲಿ PWD ವಿಭಾಗದಲ್ಲಿ ಎರಡನೇ ರ್ಯಾಂಕ್ ಪಡೆಡಿದ್ದಾರೆ. ಅವರು ಪುತ್ತೂರಿನ ವಿವೇಕಾನಂದ ಪಿ.ಯು. ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದವರು.

ಸಿಂಚನಾ ಲಕ್ಷ್ಮಿ NEET-2021 ಪರೀಕ್ಷೆಗಳಲ್ಲಿ 658/720 ಅಂಕಗಳನ್ನು ಗಳಿಸಿದ್ದಾರೆ. ಕೃಷಿ ಕುಟುಂಬದಿಂದ ಬಂದಿರುವ ಸಿಂಚನಾ ಅವರು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಸರಣಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎಲ್ಲವನ್ನೂ ಸವಾಲಾಗಿ ತೆಗೆದುಕೊಂಡು ಈಗ NEET-2021 ರಲ್ಲಿ ರಾಷ್ಟ್ರೀಯ ಎರಡನೇ ರ್ಯಾಂಕ್, PWD ವರ್ಗ, ಅಖಿಲ ಭಾರತ ವಿಭಾಗದಲ್ಲಿ 1611 ನೇ ರ್ಯಾಂಕ್ ಮತ್ತು ಅಖಿಲ ಭಾರತ ಸಾಮಾನ್ಯ ವರ್ಗದಲ್ಲಿ 2856 ನೇ ರ್ಯಾಂಕ್ ಗಳಿಸುವ ಮೂಲಕ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ.

ಜೆಇಇ ಮತ್ತು ಕೆಸಿಇಟಿಯಲ್ಲೂ ಇವರ ಸಾಧನೆ ಗಮನಾರ್ಹ. ಜೆಇಇಯಲ್ಲಿ ಶೇಕಡ 96.16 ಅಂಕ ಗಳಿಸಿದ್ದಾರೆ. ಬಿಎಸ್ಸಿ, ಕೃಷಿಯಲ್ಲಿ 530ನೇ ರ್ಯಾಂಕ್, ಬಿಎನ್‌ವೈಎಸ್‌ನಲ್ಲಿ 974ನೇ ರ್ಯಾಂಕ್, ಪಶುವೈದ್ಯಕೀಯದಲ್ಲಿ 974ನೇ ರ್ಯಾಂಕ್, ಕೆಸಿಇಟಿ ಇಂಜಿನಿಯರಿಂಗ್‌ನಲ್ಲಿ 1582ನೇ ರ್ಯಾಂಕ್ ಗಳಿಸಿದ್ದಾರೆ

ವಿವೇಕಾನಂದ ಪಿಯು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಸಿಂಚನಾ ಲಕ್ಷ್ಮಿ ಅವರ ಅದ್ಭುತ ಪ್ರದರ್ಶನಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸಾಮರಸ್ಯದ ಭಾವನೆಗೆ ಪ್ರೇರಣೆಯಾದ ಆರೆಸ್ಸೆಸ್ 'ತುಡರ್' ಕಾರ್ಯಕ್ರಮ

Thu Nov 4 , 2021
ಸಾಮರಸ್ಯದ ಭಾವನೆಗೆ ಪ್ರೇರಣೆಯಾದ ಆರ್.ಎಸ್.ಎಸ್ ‘ತುಡರ್’ ಕಾರ್ಯಕ್ರಮ ಪುತ್ತೂರು: ಹಿಂದು ಸಮಾಜದ ಶಕ್ತಿಯನ್ನು ವೃದ್ಧಿಸಲು ನಮ್ಮ ಮನಸ್ಸು ಮತ್ತು ಹೃದಯ ಬೆಳಕಾಗಬೇಕು. ಅದಕ್ಕಾಗಿ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ದೀಪದ ಬೆಳಕು ಎಲ್ಲರ ಮನೆ ಮನೆಯಲ್ಲಿ ಬೆಳಗಲಿ. ಮನೆ ದೇವಸ್ಥಾನ ಆಗಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಆಹ್ವಾನಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ವಿಭಾಗವತಿಯಿಂದ ಶ್ರೀ ಮಹಾಲಿಂಗೇಶ್ವರ […]