ಸಾಮರಸ್ಯದ ಭಾವನೆಗೆ ಪ್ರೇರಣೆಯಾದ ಆರೆಸ್ಸೆಸ್ ‘ತುಡರ್’ ಕಾರ್ಯಕ್ರಮ

ಸಾಮರಸ್ಯದ ಭಾವನೆಗೆ ಪ್ರೇರಣೆಯಾದ ಆರ್.ಎಸ್.ಎಸ್ ‘ತುಡರ್’ ಕಾರ್ಯಕ್ರಮ

ಪುತ್ತೂರು: ಹಿಂದು ಸಮಾಜದ ಶಕ್ತಿಯನ್ನು ವೃದ್ಧಿಸಲು ನಮ್ಮ ಮನಸ್ಸು ಮತ್ತು ಹೃದಯ ಬೆಳಕಾಗಬೇಕು. ಅದಕ್ಕಾಗಿ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ದೀಪದ ಬೆಳಕು ಎಲ್ಲರ ಮನೆ ಮನೆಯಲ್ಲಿ ಬೆಳಗಲಿ. ಮನೆ ದೇವಸ್ಥಾನ ಆಗಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಆಹ್ವಾನಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.


ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ವಿಭಾಗವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಉರ್ಲಾಂಡಿ ನಾಯರಡ್ಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ದೀಪದ ಬೆಳಕನ್ನು ಮನೆ ಮನೆಗಳಿಗೆ ಪ್ರಧಾನ ಮಾಡಿದ ಬಳಿಕ ನಾಯರಡ್ಕ ಶ್ರೀ ಸತ್ಯನಾರಾಯಣ ಪೂಜಾ ಕಟ್ಟೆಯಲ್ಲಿ ಗೋಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೇದ ಸಮಾಜದ ಶಕ್ತಿಯನ್ನು ಕುಂದಿಸುತ್ತದೆ. ಈ ಶಕ್ತಿಯನ್ನು ಕುಂದಿಸಲು ಹೊರಗಿನಿಂದ ಅನ್ಯಮತಿಯರು ಕಾಯುತ್ತಿದ್ದಾರೆ. ಮೋಸ ವಂಚನೆ ತಿಳಿಯದ ಉಪೇಕ್ಷಿತ ಬಂಧುಗಳ ದಾರಿಯನ್ನು ತಪಿಸುವ ಕೆಲಸ ಮಾಡುವವರು ಹಲವರಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಂದು ಧರ್ಮಕ್ಕೆ ಅನ್ಯಾಯ ಆಗಬಾರದು ಎಂದಾದರೆ ನಮ್ಮಲ್ಲಿ ಸಹಕಾರ ಮಾಡುವ ಗುಣ ಬೆಳೆಯಬೇಕು. ನಮ್ಮ ಹಿಂದು ಸಮಾಜ ಸಾವಿರಾರು ವರ್ಷಗಳಿಂದ ಬದುಕಿ ಬಂದ ಸಮಾಜ. ಈ ಸಮಾಜವನ್ನು ಎಲ್ಲಿಯೂ ಒಡೆಯದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಂದು ಚಿಂತನೆಯಡಿಯಲ್ಲಿ ಸೇವೆ ಮಾಡುತ್ತಿದೆ. ಇಲ್ಲಿ ನಾವು ಜಾತಿಯನ್ನು ನೋಡಿಲ್ಲ ಎಲ್ಲರು ಒಂದೇ ಎಂಬ ಭಾವನೆಯಿಂದ ನೋಡಿದೆ. ಹಿಂದೆ ಸಮಾಜವನ್ನು ತುಂಡು ಮಾಡಲು ಹೊರಗಿನ ದೇಶದವರು ಅವ್ಯವಸ್ಥೆ ಸಮಾಜದಲ್ಲ ಸೃಷ್ಟಿಯಾಗಿತ್ತು. ಅದನ್ನು ಸರಿ ಮಾಡುವ ಕರ್ತವ್ಯ ಹಿಂದು ಸಮಾಜದಲ್ಲಿದೆ. ಯಾರು ಇವತ್ತು ಮೇಲ್ಜಾತಿ ಎಂದು ತಿಳಿದು ಕೊಂಡಿದ್ದಾರೋ ಅವರಿಗೆ ಬಹಳ ದೊಡ್ಡ ಜವಾಬ್ದಾರಿ ಇದೆ. ನಮ್ಮ ಸಮಾಜದಲ್ಲಿ ಯಾರಿಗಾದರೂ ತೊಂದರೆ ಆದಾಗ ನಮ್ಮ ಪ್ರೀತಿ ಅವರಲ್ಲಿಗೆ ಹೋಗಬೇಕೆಂದರು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ದೀಪ ಪ್ರದಾನ:

ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರ ಉಪಸ್ಥಿತಿಯಲ್ಲಿ ಉಪೇಕ್ಷಿತ ಬಂಧುಗಳಿಗೆ ದೇವಳದಿಂದ ದೀಪ ಪ್ರದಾನ ಕಾರ್ಯಕ್ರಮ ನಡೆಯಿತು. ಅಲ್ಲಿಂದ ಜ್ಯೋತಿ ಬೆಳಗಿದ ನಂದಾ ದೀಪವನ್ನು ಉರ್ಲಾಂಡಿಯಿಂದ ನಾಯರಡ್ಕದ ತನಕ ಪ್ರತಿ ಮನೆ ಮನೆಗಳಿಗೆ ತೆರಳಿ ಮನೆಗಳ ದೀಪ ಪ್ರಜ್ವಲಿಸಲಾಯಿತು. ಬಳಿಕ ಸತ್ಯನಾರಾಯಣ ಪೂಜಾ ಕಟ್ಟೆಯ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಿಂದ ದೇವರ ಭಾವಚಿತ್ರ, ಬೆಳ್ಳಿಯ ಗಣಪತಿ, ಲಕ್ಷ್ಮಿ ದೇವರು ಇರುವ ಪದಕವನ್ನು ಉಪೇಕ್ಷಿತ ಬಂದುಗಳಿಗೆ ವಿತರಣೆ ಮಾಡಲಾಯಿತು. ಆರ್ಥಿಕ ಸಂಕಷ್ಟದ ನಡುವೆಯೂ ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ೪ ಮಂದಿ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಡಾ ಪ್ರಭಾಕರ್ ಭಟ್ ಕಲ್ಲಡ್ಕ ಅವರು ಗೌರವಿಸಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ, ಸಾಮರಸ್ಯ ಮಂಗಳೂರು ವಿಭಾಗ ಸಂಚಾಲಕ ರವೀಂದ್ರ ಪಿ, ಪುತ್ತೂರು ವಿಭಾಗದ ಸಂಯೋಜಕ ದಯನಂದ್, ಸ್ಥಳೀಯರಾದ ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಮಲ ಗಣೇಶ್ ಪ್ರಾರ್ಥಿಸಿ, ಶರತ್ ಸ್ವಾಗತಿಸಿದರು. ಚೇತನಾ ವಂದಿಸಿರು. ಅಶೋಕ್ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಡಾ. ಸುಧಾ ಎಸ್ ರಾವ್, ವೀಣಾ ಬಿ.ಕೆ, ಬಿ.ಐತ್ತಪ್ಪ ನಾಯ್ಕ್, ನಗರಭಾ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಸಂತೋಷ್ ಬೊಳುವಾರು, ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಅಶೋಕ್ ಬಲ್ನಾಡು, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ಕಾರ್ಯವಾಹ ರಮೇಶ್, ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ, ಸಂತೋಷ್ ಬೋನಂತಾಯ ಮತ್ತಿತರರು ಉಪಸ್ಥಿತರಿದ್ದರು. .ಸಭಾ ಕಾರ್ಯಕ್ರಮದ ಬಳಿಕ ಉಪೇಕ್ಷಿತ ಬಂಧುಗಳ ಜೊತೆ ಸಾಮೂಹಿಕ ಉಪಹಾರ ನಡೆಯಿತು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಪಟಾಕಿಯ ಸಂಭ್ರಮವಿಲ್ಲದೆ ದೀಪಾವಳಿ ಆಚರಿಸಿದರೆ ಏನಾಗುತ್ತದೆ?

Thu Nov 4 , 2021
ಪಟಾಕಿಯ ಸಂಭ್ರಮವಿಲ್ಲದೆ ದೀಪಾವಳಿ ಆಚರಿಸಿದರೆ ಏನಾಗುತ್ತದೆ? ಕೇಳಿ, ಎಲ್ಲರೂ ಗಮನವಿಟ್ಟು ಕೇಳಿ. ಇಡೀ ಪ್ರಪಂಚದಲ್ಲೇ ಭಯಾನಕವಾದ, ಆಘಾತಕಾರಿಯಾದ ಹಬ್ಬ ಬಂದಿದೆ. ವರ್ಷದಲ್ಲಿ ಒಮ್ಮೆ ಬರುವ ಈ ಒಂದು ಹಬ್ಬದಿಂದ ಮಾತ್ರವೇ ಇಡೀ ವರ್ಷ ಭೂಮಂಡಲದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಅಪ್ಪಿ-ತಪ್ಪಿಯೂ ಹೊರಗೆ ಕಾಲಿಡಬೇಡಿ. ಯಾವಾಗ, ಎಂತಹ ಅಚಾತುರ್ಯವಾಗುವುದೋ ಏನೋ! ನಿಮ್ಮ ಮನೆಯ ಎಲ್ಲಾ ಕಿಟಕಿ-ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ ಸುರಕ್ಷಿತವಾಗಿರಿ. ಒಂದು ವೇಳೆ ನೀವೇನಾದರೂ ಈ ಹಬ್ಬವನ್ನು […]