ಐಎಎಸ್, ಐಪಿಎಸ್ ಪರೀಕ್ಷೆಗಳಿಗೆ ‘ಸಮುತ್ಕರ್ಷ’ ದಿಂದ ತರಬೇತಿ

ಹುಬ್ಬಳ್ಳಿ :ಸಮುತ್ಕರ್ಷ ಐಎಎಸ್ ಕರ್ನಾಟಕ ವತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗಾಗಿ ಜನವರಿ ೧ ರಿಂದ ಹುಬ್ಬಳ್ಳಿಯಲ್ಲಿ ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿಯನ್ನು ವಿದ್ಯಾನಗರದ ಕೆಎಲ್ಇ ಟೆಕ್ ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ಆರಂಭಿಸುತ್ತಿದ್ದೇವೆ ಎಂದು ಸಮುತ್ಕರ್ಷ ಟ್ರಸ್ಟ್ ಕಾರ್ಯದರ್ಶಿ ಜಿತೇಂದ್ರ ನಾಯಕ ತಿಳಿಸಿದರು.


ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಗಳಿಗೆ ತರಬೇತಿ ನಡೆಯಲಿದೆ. ದೆಹಲಿಯ ನುರಿತ ತರಬೇತಿದಾರರಿಂದ ಮತ್ತು ಹಿರಿಯ ಅಧಿಕಾರಗಳ ವಿಶೇಷ ತರಗತಿಗಳು ಹಾಗೂ ಸಂವಾದ ಕಾರ್ಯಕ್ರಮವನ್ನು ಆಯೋಜಿಸುತ್ತಾ ಅಧ್ಯಯನ ಕೇಂದ್ರವನ್ನು ಅತಿ ಕಡಿಮೆ ಖರ್ಚಿನಲ್ಲಿ ತರಬೇತಿ ನಡೆಯಲಿದೆ ಎಂದರು.

ದೆಹಲಿಯ ಸಂಕಲ್ಪದ ಸಹಯೋಗದೊಂದಿಗೆ ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಮುತ್ಕರ್ಷ ಮಾರ್ಗದರ್ಶಿಯಾಗಿದೆ.
ಆಸಕ್ತ ಅಭ್ಯರ್ಥಿಗಳು ಇದೇ ಡಿ. 31 ರ ಒಳಗಾಗಿ ದೂ. 96634 24767 ಗೆ ಸಂಪರ್ಕಿಸಬಹುದು ಎಂದು ಜಿತೇ೦ದ್ರ ನಾಯ್ಕ್ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಸದಸ್ಯ ಅಚ್ಯುತ್ ಲಿಮಯೆ ಉಪಸ್ಥಿತರಿದ್ದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಗ್ರಾಹಕರ ಹಕ್ಕುಗಳಿಗೆ ಬಲ ತುಂಬುವ ಕಾನೂನುಗಳು

Fri Dec 24 , 2021
      ನಾವಿನ್ನೂ ನಿರಾಶಾದಾಯಕ ಖೊಟ್ಟಿ ಸಮಾಜವಾದದ ಮೇನಿಯಾದಿಂದ ಹೊರಗೆ ಬಂದಿಲ್ಲ. ದೇಶದ ಆರ್ಥಿಕತೆ ವಿಕೇಂದ್ರೀಕರಣಗೊಳಿಸುವುದು, ಹೆಚ್ಚು ಹೆಚ್ಚು ಉದ್ಯಮಗಳಿಗೆ ಅವಕಾಶ ಕೊಡುವುದು ಕೇವಲ ಉದ್ಯಮಪತಿಗಳ ಲಾಭ ಹೆಚ್ಚಿಸುವುದಕ್ಕಲ್ಲ. ಇದರಿಂದ ನಾಡಿನ ಕೋಟ್ಯಂತರ ಜನರಿಗೆ ಉದ್ಯೋಗವಕಾಶಗಳ ಜೊತೆಗೆ ಉತ್ತಮ ಗುಣಮಟ್ಟದ ಸರಕು- ಸೇವೆಗಳ ವಹಿವಾಟಿಗೂ ಕೂಡಾ ದಾರಿಯಾಗುತ್ತದೆ. ಸರ್ಕಾರದ ಏಕಸ್ವಾಮ್ಯತೆ ಎನ್ನುವುದು ಅಗತ್ಯಕ್ಕೆ ತಕ್ಕಂತೆಯೇ ಇರಬೇಕೆ ಹೊರತು ಅನಿವಾರ್ಯವಾಗಬಾರದು. ಕೈಗಾರಿಕೆ ಮತ್ತು ಉದ್ಯಮಗಳ ವಿಸ್ತರಣೆಯು ಗ್ರಾಹಕರಿಗೆ ತಮಗಿಷ್ಟದ ಸರಕು […]