ಸಂಘವು ನಿತ್ಯ ಶಕ್ತಿ; ಸ್ವಯಂಸೇವಕರು ಸದಾಕಾಲ ಯಾವುದೇ ಸಂದಿಗ್ಧ ಪರಿಸ್ಥಿತಿಗಳಲ್ಲಿ ಮುಂದಿರುತ್ತಾರೆ : ಗುರುಪ್ರಸಾದ್

14 ನವೆಂಬರ್, ಚಿಕ್ಕಬಳ್ಳಾಪುರ : ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ ಪಥಸಂಚಲನ ನೆರವೇರಿತು. ಚಿಕ್ಕಬಳ್ಳಾಪುರ ನಗರ ಮತ್ತು ತಾಲ್ಲೂಕಿನ 134 ಸ್ವಯಂಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಕೆಎಸ್ಸಾರ್ಟಿಸಿ ಡಿಪೋ ಬಳಿ ಸಂಪತಗೊಂಡು, ಪ್ರಶಾಂತನಗರದ ರಸ್ತೆಗಳಲ್ಲಿ ಸಂಚಲನ ನಡೆಸಲಾಯಿತು. ಪ್ರಶಾಂತನಗರದ ಶನಿಮಹಾತ್ಮ ದೇವಾಲಯದ ಬಳಿಯ ಮುಖ್ಯ ರಸ್ತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಮಾನಸ ಆಸ್ಪತ್ರೆಯ ವೈದ್ಯರು/ನಿರ್ದೇಶಕರಾದ ಶ್ರೀ ಡಾ|| ಮಧುಕರ್ ಅವರು ವಹಿಸಿದ್ದರು. ಶ್ರೀ ಗುರುಪ್ರಸಾದ್ ಜೀ, ದಕ್ಷಿಣ ಕರ್ನಾಟಕ ಪ್ರಾಂತ ಪ್ರಚಾರಕರು, ಬೌದ್ಧಿಕ್ ನೆರವೇರಿಸಿದರು.


ಸಂಘವು ನಿತ್ಯ ಶಕ್ತಿ ಯಾಗಿದ್ದು ಆ ಶಕ್ತಿಯ ಪರಿಣಾಮ ಸಂಘದ ಸ್ವಯಂಸೇವಕರು ಸದಾಕಾಲ ಯಾವುದೇ ಸಂದಿಗ್ಧ ಪರಿಸ್ಥಿತಿಗಳಲ್ಲಿ ಮುಂದಿರುತ್ತಾರೆ. ಇಂತಹ ನಿತ್ಯ ಶಕ್ತಿ ನಿರ್ಮಾಣವಾಗುವುದು ನಿತ್ಯ ಶಾಖೆಯಲ್ಲಿ ಹಾಗಾಗಿ ಹೆಚ್ಚು ಹೆಚ್ಚು ಶಾಖೆಗಳನ್ನು ಮಾಡಬೇಕಾದದ್ದು ಸ್ವಯಂಸೇವಕರ ಕರ್ತವ್ಯ ಎಂದರು. ಸಮಾಜವು ಸಂಘದ ಮೇಲೆ ಅಪಾರವಾದ ವಿಶ್ವಾಸವನ್ನು ಇಟ್ಟಿದ್ದು, ಆ ವಿಶ್ವಾಸವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲ ಸ್ವಯಂಸೇವಕರದ್ದಾಗಿದೆ ಎಂದು ಗುರುಪ್ರಸಾದ್ ಅವರು ತಮ್ಮ ಬೌದ್ಧಿಕ್ ನಲ್ಲಿ ನುಡಿದರು. ಅಷ್ಟೇ ಅಲ್ಲದೆ, ಸಂಘದ ಕಾರ್ಯಗಳಲ್ಲಿ ಯಾವ ಶಿಸ್ತು ಮತ್ತು ಸೇವಾ ಮನೋಭಾವದಿಂದ ಸ್ವಯಂಸೇವಕರು ತೊಡಗಿಸಿಕೊಳ್ಳುವರೊ, ಅದೇ ಶಿಸ್ತು ಮತ್ತು ಸೇವಾ ಮನೋಭಾವವನ್ನು ತಮ್ಮ ವೈಯಕ್ತಿಕ ಜೀವನದಲ್ಲೂ ಅಳವಡಿಸಿಕೊಳ್ಳುವುದು ಅವಶ್ಯ ಎಂದು ಕಿವಿಮಾತು ಹೇಳಿದರು.

ಸಮಾರಂಭದ ಅಧ್ಯಕ್ಷರಾದ ಡಾ||ಮಧುಕರ್ ಅವರು ಸಮಾಜದಲ್ಲಿ ಕುಸಿಯುತ್ತಿರುವ ಕುಟುಂಬ ಪದ್ಧತಿ ಮತ್ತು ಕೌಟುಂಬಿಕ ಮೌಲ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ನಮ್ಮ ಸೇವಾ ಕಾರ್ಯವು ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದರು. ಅಗತ್ಯವಿರುವವರಿಗೆ ಮಾಡುವ ಯಾವುದೇ ಸಹಾಯವು ಸಣ್ಣದಲ್ಲ ಎಂದ ಅವರು, ಸಣ್ಣ ಸಣ್ಣ ಸೇವೆಗಳೇ ಒಟ್ಟುಗೂಡಿದಾಗ ದೊಡ್ಡ ಬದಲಾವಣೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ನಿಮ್ಮದು ಕೋಮುವಾದ! ನಮ್ಮದೊ ಜಾತ್ಯತೀತತೆ: 'ಶೇಖ್' ಸಿದ್ದರಾಮಯ್ಯ

Mon Nov 15 , 2021
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದುಬೈ ಶೇಖ್ ಸಂಪ್ರದಾಯದ ಉಡುಪು ಧರಿಸಿರುವ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ. ಒಂದು ಕ್ಷಣ ಎಲ್ಲರೂ ನಿಬ್ಬೆರಗಾಗಿ ಇದೇನಪ್ಪ ನಮ್ಮ ಸಿದ್ದರಾಮಯ್ಯನವರು ಈ ರೀತಿ ದುಬೈ ಶೇಖ್ ವೇಷ ಧರಿಸಿದ್ದಾರೆ! ಮೊದಲೇ ಟಿಪ್ಪು ಸುಲ್ತಾನ್ ಅನ್ನು ತಮ್ಮ ಆದರ್ಶವಾಗಿ ಹೊಂದಿರುವ ಇವರು ನಮ್ಮ ರಾಜ್ಯವನ್ನು ಬಿಟ್ಟು ದುಬೈಗೆ ಹೊರಟುಬಿಡುತ್ತಾರೊ ಏನೊ ಎಂದು ಅಚ್ಚರಿಪಟ್ಟರು. ಮಂಡ್ಯದಲ್ಲಿ ಕುರುಬ ಸಮುದಾಯದವರು ಆಯೋಜಿಸಿದ್ದ ಗಣಪತಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ […]