ವಿಜ್ಞಾನ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ನಿಧನ, ಆರೆಸ್ಸೆಸ್ ತೀವ್ರ ಸಂತಾಪ

ಡಿ ಆರ್ ಡಿ ಒ ಮಾಜಿ ವಿಜ್ಞಾನಿ ವಿಜ್ಞಾನ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. ಹಿಂದಿನ ವಾರವಷ್ಟೇ ಹೃದಯಾಘಾತದಿಂದಾಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಸುಧೀಂದ್ರ ಹಾಲ್ದೊಡ್ಡೇರಿ ಅವರು ವಿಜಯ ಕರ್ನಾಟಕ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ ಸೇರಿದಂತೆ ಅನೇಕ ಕನ್ನಡ ಪತ್ರಿಕೆಗಳಿಗೆ ವಿಜ್ಞಾನ ಅಂಕಣಗಳನ್ನು, ಲೇಖನಗಳನ್ನು ಬರೆಯುತ್ತಿದ್ದರು.

ಸುಧೀಂದ್ರ ಹಾಲ್ದೊಡೇರಿ ಅವರ ನಿಧನ ಅತೀವ ದುಖಃ ತಂದಿದೆ. ವಿಜ್ಞಾನಿಯಾಗಿ, ವಿಜ್ಞಾನ ವಿಷಯಗಳ ಅಂಕಣಕಾರರಾಗಿ ಉಪನ್ಯಾಸಕಾರರಾಗಿ ನಾಡಿಗೆ ಅನುಪಮ ಸೇವೆಯನ್ನು ಸಲ್ಲಿಸದ್ದರು. ಸರಳ ಭಾಷೆಯಲ್ಲಿ ವಿಜ್ಞಾನದ ಅಂಶಗಳನ್ನು ಎಂಥವರೂ ಅರ್ಥಮಾಡಿಕೊಳ್ಳಬಹುದಾಗಿ ವಿವರಿಸುತ್ತಿದ್ದ ಸುಧೀಂದ್ರ ಅವರ ನಿಧನದಿಂದ ವಿಜ್ಞಾನ ಬರವಣಿಗೆಯಲ್ಲಿ ನಿರ್ವಾತ ಮೂಡಲಿರುವುದು ನಿಸ್ಸಂಶಯ. ಅವರು ಸಂಘದ ಹಿತೈಷಿಗಳಾಗಿದ್ದರು. ಸಂಘದ ಕಾರ್ಯಕ್ರಮಗಳಲ್ಲಿಯೂ ಅವರು ಭಾಗವಹಿಸಿದ್ದವರು. ಅವರ ಆತ್ಮಕ್ಕೆ ಸದ್ಗತಿಯನ್ನು ಮತ್ತು ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪರಮಾತ್ಮನನ್ನು ಪ್ರಾರ್ಥಿಸುತ್ತೇನೆ ಎಂದು ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕರಾದ ವಿ ನಾಗರಾಜ್ ಸುಧೀಂದ್ರ ಹಾಲ್ದೊಡ್ಡೇರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ವಿ ನಾಗರಾಜ್
೨೦೧೫ರಲ್ಲಿ ಚನ್ನೇನಹಳ್ಳಿಯಲ್ಲಿ ನಡೆದ ಸಂಘ ಶಿಕ್ಷಾ ವರ್ಗದಲ್ಲಿ ಸುಧೀಂದ್ರ ಹಾಲ್ದೊಡ್ಡೇರಿ ಭಾಗವಹಿಸಿದ್ದರು

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಭಾರತ ಸರ್ಕಾರ ಬುಡಕಟ್ಟು ಜನತೆಗೆ ಅರಣ್ಯ ನಿರ್ವಹಣೆಯ ಬಗ್ಗೆ ಸಮುದಾಯ ಹಕ್ಕುಗಳನ್ನು ನೀಡಿರುವುದು ಸ್ವಾಗತಾರ್ಹ : ವನವಾಸಿ ಕಲ್ಯಾಣ ಕರ್ನಾಟಕ

Wed Jul 7 , 2021
6 ಜುಲೈ 2021ರಂದು, ಭಾರತ ಸರ್ಕಾರದ ಬುಡಕಟ್ಟು ಇಲಾಖೆಯ ಸಚಿವ ಶ್ರೀ ಅರ್ಜುನ್ ಮುಂಡಾ ಹಾಗೂ ಅರಣ್ಯ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ರವರು ಬುಡಕಟ್ಟು ಜನತೆಗೆ ಅರಣ್ಯ ನಿರ್ವಹಣೆಯ ಬಗ್ಗೆ ಸಮುದಾಯ ಹಕ್ಕುಗಳನ್ನು ನೀಡುವ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಎರಡು ಸಚಿವಾಲಯಗಳ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಜಂಟಿ ಸುತ್ತೋಲೆಯ ಪ್ರಕಾರ ಅರಣ್ಯ ಹಕ್ಕು ಕಾಯ್ದೆ 2006ರಂತೆ ಅರಣ್ಯ ಸಂಪನ್ಮೂಲಗಳನ್ನು ನಿರ್ವಹಿಸಲು ಗ್ರಾಮಸಭೆಗಳು ಬುಡಕಟ್ಟು ಸಮುದಾಯಗಳಿಗೆ ನೀಡುವುದು ಇದರ ಮುಖ್ಯ […]