ಕೌಸಲ್ಯದೇವಿ ಅವರ ಉದಾರ ಕೊಡುಗೆಯಿಂದ ಪ್ರಾರಂಭವಾದ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ.

ಹರಿನಗರ ಕಾಲೋನಿಯ ಕೌಸಲ್ಯದೇವಿ ಅವರ ಉದಾರ ಕೊಡುಗೆಯಿಂದ ಪ್ರಾರಂಭವಾದ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ.

ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಮೊದಲ ದಿನ ಬೆಂಗಳೂರಿನ ಪುಟ್ಟೇನಹಳ್ಳಿ ಯ ಹರಿನಗರದ ಕಲೋನಿಯಲ್ಲಿ ಮೊದಲ ಮನೆಗೆ ಶ್ರೀರಾಮ್ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಪ್ರಾಂತ ಕಾರ್ಯದರ್ಶಿ ನಾ.ತಿಪ್ಪೇಸ್ವಾಮಿ ಅವರು ಭೇಟಿ ಕೊಟ್ಟು ನಿಧಿಯನ್ನು ಕೇಳಿದರು. ಮನೆಯ ತಾಯಿ ಅಡುಗೆ ಮನೆಯ ಎಲ್ಲಾ ಡಬ್ಬಗಳನ್ನು ಹುಡುಕಿ 50 ರೂಪಾಯಿ ತೆಗೆದುಕೊಂಡು ಬಂದು ಧನ್ಯತಾ ಭಾವದಲ್ಲಿ ತಂದು ಕೊಟ್ಟರು. ಮತ್ತು ಕೂಪನ್ ಗೆ ಹೆಸರು ಬರೆಯಲು ಕೇಳಿದಾಗ ಕೌಸಲ್ಯದೇವಿ ಅಂತ ಹೇಳಿದರು. ಸಂಗ್ರಹಕ್ಕೆ ಹೋಗಿದ್ದ ಎಲ್ಲಾ ಕಾರ್ಯಕರ್ತರು ಭಾವುಕರಾದರು. ಇದು ಒಂದು ಪ್ರೇರಣಾದಾಹಿ ಘಟನೆ ಆ ತಾಯಿ ರಾಮ ಮಂದಿರ ಅತಿ ಶೀಘ್ರವೇ ಆಗಲಿ ಎಂದು ಹಾರೈಸಿದರು. ಅದೇ ಕಾಲೊನಿಯ ಚಾಲಕ ಶ್ರೀ ಗುರುಮೂರ್ತಿಯವರು ತನ್ನ ಶಕ್ತಿ ಗಿಂತ ಹೆಚ್ಚು ಹಣವನ್ನು ನಿಧಿಯ ರೂಪದಲ್ಲಿ ಸಮರ್ಪಿಸಿದ್ದು, ಅಭಿಯಾನದಲ್ಲಿ ಪಾಲ್ಗೊಂಡ ಕಾರ್ಯಕರ್ತರಿಗೆ ಸ್ಪೂರ್ತಿ ನೀಡಿತು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ದೇಶದೆಲ್ಲೆಡೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಚಾಲನೆಗೆ ಅಭೂತಪೂರ್ವ ಪ್ರತಿಕ್ರಿಯೆ

Fri Jan 15 , 2021
ಜನವರಿ ೧೫ರಿಂದ ಆರಂಭಗೊಂಡು ಫೆಬ್ರವರಿ ೫ ರ ವರೆಗೆ ನಡೆಯುವ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಇಂದು ಬಿಳಿಗ್ಗೆಯಿಂದ ದೇಶದೆಲ್ಲೆಡೆ ಆರಂಭಗೊಂಡಿದೆ. ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ್ ಕೂಡ ನಿಧಿಗೆ ಧನಸಹಾಯ ಮಾಡಿದ್ದಾರೆ. ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ದೆಹಲಿಯಲ್ಲಿ ಪೂಜ್ಯ ಮಹಾಮಂಡಲೇಶ್ವರ ಕೃಷ್ಣ ಷಾ ವಿದ್ಯಾರ್ಥಿ ಜಿ ಅವರನ್ನು ಭೇಟಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಆರೆಸ್ಸೆಸ್ ಸರಕಾರ್ಯವಾಹರಾದ ಶ್ರೀ ಭೈಯ್ಯಾಜಿ […]