ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಜ. 21 ಇನ್ನು ‘ದಾಸೋಹ ದಿನ’

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಜನವರಿ 21ನ್ನು ‘ದಾಸೋಹ ದಿನ’ವೆಂದು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಶಿವಕುಮಾರ ಸ್ವಾಮೀಜಿ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ  ಜ. 21 ಇನ್ನು ಪ್ರತೀ ವರ್ಷ ದಾಸೋಹ ದಿನ’ವನ್ನಾಗಿ ಆಚರಿಸಲಾಗುವುದು ಎಂದರು.

ಸ್ವಾಮೀಜಿ ಹುಟ್ಟೂರು ಮಾಗಡಿ ತಾಲ್ಲೂಕಿನ ವೀರಾಪುರದ ಅಭಿವೃದ್ಧಿಗೆ ₹ 80 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಈಗಾಗಲೇ ₹ 25 ಕೋಟಿ ಬಿಡುಗಡೆ ಮಾಡಲಾಗಿದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

ಶಿವಕುಮಾರ ಸ್ವಾಮೀಜಿ  ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ವಸ್ತು ಸಂಗ್ರಹಾಲಯದ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ನೆಹರು ಸುಭಾಷರನ್ನು ಬೆನ್ನಟ್ಟಿದರೇ?

Sat Jan 23 , 2021
ಇತಿಹಾಸದ ಒಂದು ನಿಗೂಢತೆ ರಹಸ್ಯ ಅಥವಾ ನಿಗೂಢತೆ ಎಂಬುದಕ್ಕೆ ಪರ್ಯಾಯಪದವೇನಾದರೂ ಬೇಕಾದರೆ ನೇತಾಜಿ ಸುಭಾಶ್ಚಂದ್ರ ಬೋಸ್ ಎನ್ನಬಹುದು ಎನಿಸುತ್ತದೆ. ಪ್ರಚಂಡವಾದ ಆತ್ಮಬಲ, ಆತ್ಮವಿಶ್ವಾಸಗಳಿದ್ದ ಈ ಮಹಾನ್ ಹೋರಾಟಗಾರನ ದೇಶಪ್ರೇಮ ಎಣೆಯಿಲ್ಲದ್ದು. ಕೇವಲ ಆತ್ಮಬಲ, ಆತ್ಮವಿಶ್ವಾಸಗಳಿಂದ ಅವರು ಬರಿಗೈದಾಸರಾಗಿಯೂ ಸೂರ್ಯ ಮುಳುಗದಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು ಎದುರು ಹಾಕಿಕೊಳ್ಳುವ ಧೈರ್ಯಮಾಡಿದ್ದು ಮಾತ್ರವಲ್ಲ; ಸೈನ್ಯ ಕಟ್ಟಿ ಆಂಗ್ಲೋ-ಅಮೆರಿಕನ್ ಸಂಯುಕ್ತ ಸೇನೆಯನ್ನು ಎರಡನೇ ಮಹಾಯುದ್ಧ ಕಾಲದ ರಣಾಂಗಣದಲ್ಲಿ ಎದುರಿಸಿದರು. ನಿಮ್ಮ ರಕ್ತ ಕೊಡಿ; ನಾನು ನಿಮಗೆ […]