ಆಪ್ತ ಸಲಹಗಾರರಾಗಲು ಸುವರ್ಣಾವಕಾಶ ಮಾರ್ಚ್ 13 ರಿಂದ ತರಗತಿಗಳು ಪ್ರಾರಂಭ

ಬೆಂಗಳೂರಿನ ಆಪ್ತ ಸಲಹಾ ಕೇಂದ್ರವು ಕಳೆದ ಕೆಲವು ವರ್ಷಗಳಿಂದ ಸಮಾಜದ ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಿ ಸಮಾಜದ ಆರೋಗ್ಯವನ್ನು ಕಾಪಾಡುವ ಕಾರ್ಯದಲ್ಲಿ ತೊಡಗಿದೆ. ಪ್ರತಿಷ್ಠಿತ ನಿಮ್ಹಾನ್ಸ್  ಮತ್ತು ಸಮಾಧಾನ ಸಂಸ್ಥೆಯಿಂದ ತರಬೇತಿ ಪಡೆದ 400ಕ್ಕೂ ಹೆಚ್ಚು ಆಪ್ತ ಸಲಹಾಗಾರರು ಉಚಿತವಾಗಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ಅದೇ ರೀತಿಯಲ್ಲಿ ಈಗ ಸಮಾಧಾನ ಸಂಸ್ಥೆಯ ಅಡಿಯಲ್ಲಿ ಆಪ್ತ ಸಲಹಾಗಾರರಾಗಿ ಪರಿಣತಿ ಪಡೆಯಲು ಹೊಸಬರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ನಿಮ್ಹಾನ್ಸ್  ಸಂಸ್ಥೆಯ ಮಾಜಿ ಪ್ರಾಧ್ಯಾಪಕರಾದ ಡಾ. ಸಿ. ಆರ್. ಚಂದ್ರಶೇಖರ್ ಅವರಿಂದ 2007 ರಲ್ಲಿ ಪ್ರಾರಂಭವಾದ ಸಮಾಧಾನ ಸಂಸ್ಥೆಯು 20,000ಕ್ಕೂ ಹೆಚ್ಚು ಜನರ ಬಾಳಿನಲ್ಲಿ ಸಮಾಧಾನ ತರಿಸಿದೆ. ಅಲ್ಲದೆ 1500ಕ್ಕೂ ಹೆಚ್ಚು ಮಂದಿಗೆ ಆಪ್ತ ಸಲಹಾಗಾರರಾಗಲು ತರಬೇತಿ ನೀಡಿದ್ದಾರೆ. ಅವರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಅನೇಕ ಪ್ರಶಸ್ತಿಗಳನ್ನೂ‌ ಪಡೆದಿದ್ದಾರೆ.

ಡಾ. ಸಿ. ಆರ್. ಚಂದ್ರಶೇಖರ್

ಡಾ. ಸಿ. ಆರ್. ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ನಮ್ಮ ಮುಂದಿನ ತರಗತಿಗಳು ಮಾರ್ಚ್ 13 ರಿಂದ ಪ್ರಾರಂಭವಾಗುತ್ತವೆ. 40 ವರ್ಷ ಮೇಲ್ಪಟ್ಟ, ಸಮಾಜದ ಬಗ್ಗೆ ಕಾಳಜಿಯಿರುವ ವ್ಯಕ್ತಿಗಳು ಈ ತರಗತಿಗಳಿಗೆ  ನೊಂದಾಯಿಸಿಕೊಳ್ಳಬಹುದಾಗಿದೆ.  ಸಂಸ್ಥೆಯವರು ರೂ.500/- ಬೆಲೆಯ ಪುಸ್ತಕಗಳನ್ನು  ಕೋರಿಯರ್ ಮಾಡುತ್ತಾರೆ. ಪ್ರತಿ ಶನಿವಾರ ಮತ್ತು ಭಾನುವಾರ ದಿನಕ್ಕೆ  2 ಗಂಟೆಗಳಂತೆ ಒಟ್ಟು 10 ತರಗತಿಗಳು ಆನ್ಲೈನ್ ಮುಖಾಂತರ ನಡೆಯುತ್ತವೆ. ತರಗತಿಗಳಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಈ ತರಬೇತಿಯ ಶುಲ್ಕ ರೂ. 1000/.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ  ಶ್ರೀ ರಾಜಶೇಖರ್ ಅವರನ್ನು ಅವರ ಮೊಬೈಲ್ ದೂರವಾಣಿ ಸಂಖ್ಯೆಯಾದ  8088089090 ಇಲ್ಲಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ website: ask4support.in ಅನ್ನೂ ಗಮನಿಸಬಹುದು ಎಂದು ಆಪ್ತ ಸಲಹಾ ಕೇಂದ್ರದ ಪ್ರಕಟಣೆ ತಿಳಿಸಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಹೆಜ್ಜೆ ಹಿಂದಿಟ್ಟ ಚೀನಾ : ಭಾರತಕ್ಕೆ ಸಮರಾಂಗಣದಲ್ಲೂ ಗೆಲುವು, ರಾಜತಾಂತ್ರಿಕತೆಯಲ್ಲೂ ಮುನ್ನಡೆ

Mon Mar 1 , 2021
ಕಳೆದ ವರ್ಷದಿಂದ ಏರುತ್ತಿದ್ದ ಪೂರ್ವ ಲಢಾಕಿನ ನಿಯಂತ್ರಣ ರೇಖೆಯ ಆಸುಪಾಸಿನ ಕಾವು ಸ್ವಲ್ಪ ತಗ್ಗುವ ಲಕ್ಷಣ ಕಾಣುತ್ತಿದೆ. ಇತ್ತೀಚಿನ ಮಹತ್ವದ ಘಟನೆಯಲ್ಲಿ ಪ್ಯಾಂಗಾಂಗ್ ತ್ಸೊ ಸರೋವರದ ಇಕ್ಕೆಲಗಳಲ್ಲಿ ವಾಸ್ತವ ನಿಯಂತ್ರಣ ರೇಖೆಗುಂಟ ಚೀನಾ ಜಮಾವಣೆ ಮಾಡಿದ್ದ ಸುಮಾರು ೧೦ ಸಾವಿರ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದೆ. ಕಳೆದ ವರ್ಷ ಮೇ ತಿಂಗಳ ೫ರಂದು ಪ್ಯಾಂಗಾಂಗ್ ಬಳಿ ಚೀನಾ ಸೈನಿಕರು ಆರಂಭಿಸಿದ ಗಡಿ ತಂಟೆ ಸಂಘರ್ಷಕ್ಕೆ ಮೊದಲು ಮಾಡಿತು. ಜೂನ್ ತಿಂಗಳಿನಲ್ಲಿ ಗ್ಯಾಲ್ವಾನ್ […]