ಆರೆಸ್ಸೆಸ್ ನಿಂದ ಥಲಸ್ಸಿಮಿಯಾ ಬಾಧಿತ ಮಕ್ಕಳಿಗೆ ವಿಷೇಶ ರಕ್ತದಾನ ಶಿಬಿರ

ಆರ್ ಎಸ್ ಎಸ್ ನಿಂದ ಥಲಸ್ಸಿಮಿಯಾ ಬಾಧಿತ ಮಕ್ಕಳಿಗೆ ವಿಷೇಶ ರಕ್ತ ದಾನ ಶಿಬಿರ

ರಾಷ್ಟ್ರೀಯ ಸ್ವಯಂಸೇವಕ ಸಂಘವು ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿರುತ್ತದೆ. ಈ ನಿಟ್ಟಿನಲ್ಲಿ ಅಕ್ಟೋಬರ್ ೨ ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ವಿದ್ಯಾಪೀಠ ನಗರದ ವತಿಯಿಂದ, ಥಲಸ್ಸಿಮಿಯಾ ಬಾಧಿತ ಮಕ್ಕಳಿಗೆ ರಕ್ತ ಪೂರೈಕೆ ಮಾಡುವ ಸಲುವಾಗಿ ವಿಶೇಷ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರದಲ್ಲಿ ವಿದ್ಯಾಪೀಠ ನಗರ ಹಾಗೂ ಸುತ್ತ ಮುತ್ತಲಿನ ನಿವಾಸಿಗಳು, ಸಂಘದ ಸ್ವಯಂಸೇವಕರು ಪಾಲ್ಗೊಂಡು ರಕ್ತದಾನ ಮಾಡಿದರು. ಈ ಶಿಬಿರವನ್ನು ರಾಷ್ಟ್ರೋತ್ಥಾನ ರಕ್ತಕೇಂದ್ರ  ಹಾಗೂ ಸ್ವಾಮಿ ವಿವೇಕಾನಂದ ರಕ್ತನಿಧಿಯ ಸಹಯೋಗದಿಂದ ಏರ್ಪಡಿಸಲಾಗಿತ್ತು.

ಥಲಸ್ಸಿಮಿಯಾ ಕಾಯಿಲೆ ಆನುವಂಶಿಕ ಅಸ್ವಸ್ಥತೆಯಿಂದಾಗುವ ಅಸಹಜ ಹೆಮೊಗ್ಲೊಬಿನ್ ಉತ್ಪತ್ತಿಯಿಂದ ಉಂಟಾಗುತ್ತದೆ. ಭಾರತದಲ್ಲಿ ಸುಮಾರು 1.5 ಲಕ್ಷದಷ್ಟು ಥಲಸ್ಸಿಮಿಯಾ ಬಾಧಿತ ಮಕ್ಕಳಿದ್ದು ಇದು ವಿಶವ್ವದ ಬಹುಪಾಲಾಗಿರುತ್ತದೆ ಹಾಗೂ ಇಲ್ಲಿ ಪ್ರತಿವರ್ಷವೂ 10000ಕ್ಕೂ ಹೆಚ್ಚು ಮಕ್ಕಳು ಥಲಸ್ಸಿಮಿಯಾದಿಂದ ಜನಿಸುತ್ತಾರೆ. ಇದರಲ್ಲಿ ಶೇಕಡಾ ಐವತ್ತರಷ್ಟು ಮಕ್ಕಳು 20 ವರ್ಷದೊಳಗೆ ಬಡತನದ ಕಾರಣದಿಂದ ಹಾಗೂ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುತ್ತಾರೆ. ಇಂತಹ ಮಕ್ಕಳಿಗಾಗಿ ನಡೆಸಿದ ಈ ವಿಶೇಷ ಶಿಬಿರದಲ್ಲಿ ಒಟ್ಟು 73 ಘಟಕಗಲಷ್ಟು ರಕ್ತ ಸಂಗ್ರಹಿಸಲಾಯಿತು. ಇದು ಥಲಸ್ಸಿಮಿಯಾ ಬಾಧಿತ ಮಕ್ಕಳ ಚಿಕಿತ್ಸೆಗೆ ಉಪಯೊಗವಾಗಲಿದ್ದು ಅವರ ಪ್ರಾಣ ಉಳಿಸುವುದರಲ್ಲಿ ಒಂದು ಹೆಜ್ಜೆಯಾಗಿರುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ರಕ್ತಕೇಂದ್ರದ ಪಾತ್ರ ಶ್ಲಾಘನೀಯ.

ಈ ಶಿಬಿರವನ್ನು, ರಕ್ತ ಕೇಂದ್ರದ ಪ್ರತಿನಿಧಿಗಳು ಬೆಳಗ್ಗೆ 9 ಘಂಟೆಯಲ್ಲಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಕೋವಿಡ್ ನಿಯಮಾವಳಿಗಲೊಂದಿಗೆ ಪ್ರಜ್ಞಾವಂತ ನಾಗರಿಕರು ಹಾಗೂ ಸ್ವಯಂ ಸೇವಕರು ಮಧ್ಯಾಹ್ನ 3 ಘಂಟೆಯವರೆಗೆ ಉತ್ಸಾಹದಿಂದ ಪಾಳ್ಗೊಂಡರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಹಿಂದೂ ಅರ್ಚಕರ ಶೀಘ್ರ ನೇಮಕ ಮತ್ತು ದತ್ತ ಜಯಂತಿಗೆ ಆಗಮಿಸುವಂತೆ ಮುಖ್ಯಮಂತ್ರಿಗಳಿಗೆ ಬಜರಂಗದಳ ಮನವಿ.

Tue Oct 5 , 2021
ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ನ್ಯಾಯಾಲಯದ ತೀರ್ಪಿನಂತೆ ಹಿಂದೂ ಅರ್ಚಕರನ್ನು ಶೀಘ್ರ ನೇಮಕ ಮಾಡುವಂತೆ ಮತ್ತು ದತ್ತ ಜಯಂತಿಗೆ ಆಗಮಿಸುವಂತೆ ಮುಖ್ಯಮಂತ್ರಿಗಳಿಗೆ ಬಜರಂಗದಳ ಮನವಿ. ಚಿಕ್ಕಮಗಳೂರಿನ ದತ್ತ ಪೀಠವು ಹಿಂದಿನ ಹಲವು ದಶಕಗಳಿಂದ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು ದುರದೃಷ್ಟವಶಾತ್ ಅಲ್ಲಿ ಮುಸ್ಲಿಂ ಮೌಲ್ವಿಗಳು ಪೂಜೆ ಸಲ್ಲಿಸುತ್ತಿದ್ದು ಪ್ರಸ್ತುತ ಹೈಕೋರ್ಟ್ ನ ತೀರ್ಪಿನ ಪ್ರಕಾರ ಮೌಲ್ವಿಗಳ ನೇಮಕಾತಿಯನ್ನು ರದ್ದುಪಡಿಸಲಾಗಿದೆ.ಕಳೆದ ಹಲವಾರು ವರ್ಷಗಳಿಂದ ಹಿಂದೂ ಸಮಾಜವು ಈ ಒಂದು ಅಪೇಕ್ಷೆಯನ್ನು ಮುಂದಿಟ್ಟುಕೊಂಡು […]