ಕರಾವಳಿಯಲ್ಲಿ ಹೆಚ್ಚಾಗುತ್ತಿರುವ ಭಯೋತ್ಪಾದನ ಚಟುವಟಿಕೆಗಳ ಹಿನ್ನೆಲೆಯಲ್ಲಿ, ಮಂಗಳೂರಿನಲ್ಲಿ ಶಾಶ್ವತವಾಗಿ NIA ಕಚೇರಿಯನ್ನು ಸ್ಥಾಪಿಸಲು ಬಜರಂಗದಳ ಮನವಿ

ಕರಾವಳಿಯಲ್ಲಿ ಹೆಚ್ಚಾಗುತ್ತಿರುವ ಭಯೋತ್ಪಾದನ ಚಟುವಟಿಕೆಗಳ ಸರಿಯಾದ ತನಿಖೆಗೆ ಬಜರಂಗ ದಳ ಆಗ್ರಹಿಸುತ್ತದೆ ಹಾಗೂ ಮಂಗಳೂರಿನಲ್ಲಿ ಶಾಶ್ವತವಾಗಿ NIA ಕಚೇರಿಯನ್ನು ಸ್ಥಾಪಿಸಲು ಕೇಂದ್ರ ಸರಕಾರಕ್ಕೆ ಬಜರಂಗದಳ ಮನವಿ ಮಾಡಿದೆ.ವಿಷಯವನ್ನು ಬಜರಂಗದಳದ ಕರ್ನಾಟಕ ದ.ಪ್ರಾಂತದ ಸಂಚಾಲಕರಾದ ಕೆ ಆರ್ ಸುನೀಲ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾವಳಿಯಲ್ಲಿ ಹೆಚ್ಚಾಗುತ್ತಿರುವ ಭಯೋತ್ಪಾದನಾ ಚಟುವಟಿಕೆಗಳ ಸರಿಯಾದ ತನಿಖೆಗೆ ಆಗ್ರಹ ಮತ್ತು ಮಂಗಳೂರಿನಲ್ಲಿ ಶಾಶ್ವತವಾಗಿ NIA ಕಚೇರಿಯನ್ನು ಸ್ಥಾಪಿಸಲು ಕೇಂದ್ರ ಸರಕಾರಕ್ಕೆ ಬಜರಂಗದಳದ ಮನವಿ.

ಉಳ್ಳಾಲದ ಮಾಜಿ ಶಾಸಕ ಬಿ .ಎಂ .ಇದಿನಬ್ಬ ಅವರ – ಇನ್ನಷ್ಟು ಹೆಚ್ಚಿನ ತನಿಖೆಗೆ ಆಗ್ರಹ ಮತ್ತು ಮಂಗಳೂರಿನಲ್ಲಿ ಶಾಶ್ವತವಾಗಿ NIA ಕಚೇರಿಯನ್ನು ಸ್ಥಾಪಿಸಲು ಕೇಂದ್ರ ಸರಕಾರಕ್ಕೆ ಬಜರಂಗದಳಮನವಿ.

ಉಳ್ಳಾಲದ ಮಾಜಿ ಶಾಸಕ ಬಿ.ಎಂ ಇದಿನಬ್ಬ ಪುತ್ರ ಅಬ್ದುಲ್ ರಹಿಮಾನ್ ಬಾಷಾ ಸಿರಿಯಾ ಮೂಲದ ಐಸಿಸ್ ಉಗ್ರ ಸಂಘಟನೆಯ ನಂಟು ಇರುವ ಶಂಕೆಯಲ್ಲಿ NIA ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಾಷಾ ಅವರ ಮಾಸ್ತಿಕಟ್ಟೆಯಲ್ಲಿರುವ ಮನೆಗೂ NIA ತಂಡ ದಾಳಿ ನಡೆಸಿ ದಿನವಿಡೀ ತನಿಖೆ ನೆಡಿಸಿತ್ತು,ಈ ವಿದ್ಯಮನದಿಂದ ಇಡೀ ಜಿಲ್ಲೆ ಹಾಗೂ ರಾಜ್ಯ ಆತಂಕಕ್ಕೆ ಒಳಗಾಗಿದೆ.ಅಲ್ಲದೆ ಐಸಿಸ್ ಉಗ್ರ ಸಂಘಟನೆಗೆ ಹಣ ಸಂಗ್ರಹಿಸುತ್ತಿದ್ದ ಆರೋಪದಡಿ ಬಾಷಾ ಅವರ ಕಿರಿಯ ಮಗ ಅಮ್ಮರ್ ಅಬ್ದುಲ್ ರೆಹಮಾನ್ ನ್ನು ವಶಕ್ಕೆ ಪಡೆದು ತೆರಳಿದ್ದರು.ಬಂದಿತ ಆರೋಪಿ ಅಮ್ಮರ್ ರೆಹಮಾನ್ ಬಗ್ಗೆ ವಿಶೇಷ ತನಿಖೆ ನೆಡೆಸಬೇಕು.ಆತನ ಜೊತೆ ಕೈ ಜೋಡಿಸಿದವರ ಮತ್ತು ಆತನ ನಂಟಿನ ಬಗ್ಗೆ ಪತ್ತೆ ಹಚ್ಚಬೇಕು.ಏಕೆಂದರೆ ಕಳೆದ ಕೆಲವು ವರ್ಷಗಳಿಂದ ದೇಶದ ಯಾವುದೇ ಮೂಲೆಯಲ್ಲಿ ಉಗ್ರರ ಬಂಧನವಾದರು ಆ ಉಗ್ರರ ಜೊತೆಗೆ ಮಂಗಳೂರಿನ ನಂಟು ಕಂಡುಬರುತ್ತದೆ.


ನಿನ್ನೆ NIA ದಾಳಿ ನಡೆಸಿದ ಬಾಷಾ ಅವರ ಮನೆ ಸೊಸೆ ಮತಾಂತರಕೊಂಡ ಹಿಂದೂ ಯುವತಿಯಾಗಿದ್ದು, ಆಕೆಯು ಸಹ ಕ್ರೋನಿಕಲ್ ಪೌಂಡೇಶನ್ ಎನ್ನುವ ಇನ್ ಸ್ಟ್ರಾಗ್ರಾಮ್ ಪೇಜನಲ್ಲಿ ಐಸಿಸ್ ಪರ ಅಚೆಂಡಾ ಹರಡುತ್ತಿದ್ದ ಆರೋಪ ಕೇಳಿ ಬಂದಿದೆ. ಇದು ಒಂದು ಲವ್ ಜಿಹಾದ್ ಪ್ರಕರಣ ಹಿಂದೂ ಯುವತಿಯರನ್ನು ಪ್ರೀತಿಯ ಹೆಸರಲ್ಲಿ ಮದುವೆಯಾಗಿ ಮತಾಂತರ ಮಾಡಿ ಉಗ್ರ ಚಟುವಟಿಕೆಗಳಲ್ಲಿ ಬಳಸಿಕೊಳ್ಳುತ್ತಾ ಇದ್ದಾರೆ ಈ ಬಗ್ಗೆಯೂ ತನಿಖೆಯಾಗಬೇಕು.


ಭಟ್ಕಳ ಸಹೋದರರು ಇಲ್ಲಿಯೆ ನಂಟು ಹೊಂದಿದ್ದರು. ರಿಯಾಜ್ ಭಟ್ಕಳ್ ತೋಕ್ಕೊಟ್ಟಿನಲ್ಲಿ ಸಿಕ್ಕಿಬಿದ್ದ ಸಂದರ್ಭ ಬಾಂಬ್ ತಯಾರಿಯಯಲ್ಲಿ ತೊಡಗಿಕೊಂಡ ವ್ಯಕ್ತಿಯೊಬ್ಬನನ್ನ ಮುಕ್ಕಚೇರಿಯಿಂದ ಬಂದಿಸಲಾಗಿತ್ತು. ಕಳೆದ ಹಲವು ವರ್ಷಗಳಿಂದ ಪಕ್ಕದ ರಾಜ್ಯ ಕೇರಳದ ಬಹುತೇಕ ಮುಸ್ಲಿಂ ಯುವಕರು ಸಿರಿಯಾ ಐಸಿಸ್ ಸಂಘಟನೆ ಸೇರಿದ್ದು ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದ್ದಾರೆ.


ತಕ್ಷಣ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ತನಿಖೆ ನಡೆಸಬೇಕು, ಅಲ್ಲದೆ ಮಂಗಳೂರಿನಲ್ಲಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಉಗ್ರರ ಪರ ಗೋಡೆಬರಹ ಬರೆದ ಶಂಕಿತ 3 ಉಗ್ರರ ಬಂಧನವಾಗಿತ್ತು. ಈ ಬಗ್ಗೆ ಕೂಡ ತನಿಖೆ ಆಗಬೇಕು. ಮತ್ತು ಇಲ್ಲಿನ ಸ್ಥಳೀಯರು ಅಂತಹವರಿಗೆ ಸಹಕಾರ ನೀಡುತ್ತಿರುವ ಬಗ್ಗೆ ಸಾಕಷ್ಟು ಅನುಮಾನ ಗಳಿದ್ದು ಆ ವ್ಯಕ್ತಿಗಳನ್ನು ಕೂಡ ಪತ್ತೆ ಹಚ್ಚಿ ಬಂಧಿಸಬೇಕು.


ಜಾಗತಿಕ ಮಟ್ಟದಲ್ಲಿ ಬೇರೂರಿರುವ ಭಯೋತ್ಫಾದನೆ ಚಟುವಟಿಕೆಯು ಕರಾವಳಿ ಜಿಲ್ಲೆಗಳಲ್ಲಿ ನೆಲೆಕಾಣಲು ಪ್ರಯತ್ನಿಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದ್ದು ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆಮೂಲಾಗ್ರ ತನಿಖೆ ನಡೆಸಬೇಕೆಂದು ಮತ್ತು ಮಂಗಳೂರಿನಲ್ಲಿ ಶಾಶ್ವತವಾಗಿ NIA ಕಚೇರಿಯನ್ನು ಸ್ಥಾಪಿಸಬೇಕು ಎಂದು ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಂಚಾಲಕ ಕೆ.ಆರ್.ಸುನೀಲ್ ಆಗ್ರಹಿಸಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ನಾಗರಿಕತೆಗೆ ಅಂಟಿದ ಕಪ್ಪು ಚುಕ್ಕೆ- ಮೂಲನಿವಾಸಿಗರ ಹತ್ಯಾಕಾಂಡ

Mon Aug 9 , 2021
  ಆಗಸ್ಟ್ 9ನ್ನು ವಿಶ್ವಸಂಸ್ಥೆಯು ವಿಶ್ವ ಮೂಲನಿವಾಸಿಗಳ ದಿನಾಚರಣೆ ಎಂದು ಘೋಷಿಸಿದೆ. ಜಗತ್ತಿನಾದ್ಯಂತ ಎಲ್ಲೆಲ್ಲಿ ಮೂಲನಿವಾಸಿಗಳನ್ನು ದಮನಿಸಿ ಪರಕೀಯರ ಸಾಮ್ರಾಜ್ಯಗಳನ್ನು ಕಟ್ಟಲಾಗಿದೆಯೋ ಅಲ್ಲೆಲ್ಲಾ ಸಂಭ್ರಮದ ಆಚರಣೆಯ ಜೊತೆಗೆ ತಮ್ಮ ಜನಾಂಗ ನೂರಾರು ವರ್ಷಗಳ ಕಾಲ ಅನುಭವಿಸಿದ ಯಾತನೆ, ಅವಮಾನ, ನರಸಂಹಾರದ ಕಥನಗಳನ್ನು ಇಂದಿನ ವಿಶ್ವದೆದುರು ಬಿಚ್ಚಿಡುವ ಪ್ರಯತ್ನಗಳೂ ನಡೆಯುತ್ತಿದೆ. ೧೯೯೪ರಲ್ಲಿ ವಿಶ್ವಸಂಸ್ಥೆಯು ತನ್ನ ಸಾಮಾನ್ಯ ಸಭೆಯಲ್ಲಿ ಈ ದಿಣಾಚರಣೆಯನ್ನು ಆಚರಿಸುವ ನಿರ್ಧಾರವನ್ನು ಪ್ರಕಟಿಸಿತು. ಆ ಮೂಲಕ ವಿಶ್ವದಾದ್ಯಂತ ಸಾಮ್ರಾಜ್ಯಶಾಹಿಗಳಿಂದ , […]