ದಿಶಾ ರವಿ ‘ಟೂಲ್​ಕಿಟ್’ ಪ್ರಧಾನ ಸಂಚುಕೋರಳು: ದೆಹಲಿ ಪೊಲೀಸರಿಂದ ಬಂಧನ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರವಾಗಿ ಟ್ವಿಟರ್ ನಲ್ಲಿ ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥೂನ್ಬೆರಿ(Thunberg) ಹಂಚಿಕೊಂಡಿದ್ದ ಟೂಲ್​ಕಿಟ್ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 21 ವರ್ಷದ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಶನಿವಾರವಷ್ಟೇ, ನಗರದ ಸೋಲದೇವನಹಳ್ಳಿಯ ಆಕೆಯ ಮನೆಯಿಂದ ಪೊಲೀಸರು ಆಕೆಯನ್ನು ಕರೆದೊಯ್ದು ವಿಚಾರಣೆ ನಡೆಸಿದ್ದರು. ಈಕೆ ಟೂಲ್​ಕಿಟ್ ಸೃಷ್ಟಿಯ ಪ್ರಧಾನ ಸಂಚುಕೋರಳು ಎಂಬ ಆರೋಪ ಮಾಡಲಾಗಿದೆ.

ದಿಶಾ ರವಿ

ದಿಶಾ ರವಿಯನ್ನು ಪೊಲೀಸರು ಬಂಧಿಸಿ ದೆಹಲಿಯ ಪಟಿಯಾಲ ಹೌಸ್​ ಕೋರ್ಟ್​ ಎದುರು ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯ ದಿಶಾ ಅವರನ್ನು ಐದು ದಿನಗಳ ಮಟ್ಟಿಗೆ ಪೊಲೀಸ್​ ಕಸ್ಟಡಿಗೆ ನೀಡಿದೆ.

ದಿಶಾ ರವಿ, ಬೆಂಗಳೂರಿನ ಮೌಂಟ್​ ಕಾರ್ಮಲ್​ ನಿಂದ ಬಿಬಿಎ ಪದವಿ ಪಡೆದು, ನಗರದ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಗಸ್ಟ್ 2018ರಲ್ಲಿ ಫ್ರೈಡೇಸ್ ಫಾರ್ ಫ್ಯೂಚರ್ ಆಂದೋಲನದ ಸ್ಥಾಪಕರಲ್ಲೊಬ್ಬಳಾದ ಈಕೆ, ಗ್ರೇಟಾ ಸ್ವೀಡನ್ ಸಂಸತ್ತಿನ ಎದುರು ಆರಂಭಿಸಿದ ಆಂದೋಲನದ ಸಮಯದಲ್ಲೇ ಪರಿಸರದ ಕಾಳಜಿಗಾಗಿ ಫ್ರೈಡೇಸ್ ಫಾರ್ ಫ್ಯೂಚರ್ ಆರಂಭಿಸಲಾಗಿತ್ತು ಎನ್ನಲಾಗಿದೆ. ದಿಶಾ ತಂದೆ ಮೈಸೂರಿನವರಾಗಿದ್ದು, ಅಥ್ಲೆಟಿಕ್ಸ್ ತರಬೇತಿದಾರರಾಗಿದ್ದಾರೆ.

ದಿಶಾ ರವಿ ವಿರುದ್ಧ ದೇಶದ್ರೋಹ, ಅಪರಾಧ ಒಳಸಂಚು ಸೇರಿದಂತೆ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿವೆ. ಖಲಿಸ್ತಾನಿ ಗುಂಪಿನ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಎಂದು ಕರೆದುಕೊಳ್ಳುವ ಸಂಘಟನೆ ಈ ಟೂಲ್​ಕಿಟ್ ಸೃಷ್ಟಿಸಿದೆ ಎಂದು ದೆಹಲಿ ಪೊಲೀಸರು ಹಿಂದೆ ಅನುಮಾನ ವ್ಯಕ್ತಪಡಿಸಿದ್ದರು. ವಾಟ್ಸಾಪ್ ಮೂಲಕ ಟೂಲ್​ಕಿಟ್ ಸೃಷ್ಟಿ ಮಾಡುವ, ಗ್ರೇಟಾ ಥೂನ್ಬೆರಿಗೆ ಟೂಲ್​ಕಿಟ್ ಒದಗಿಸುವ, ನಂತರ ಪ್ರಸಾರ ಮಾಡಿರುವ ಆರೋಪ ದಿಶಾ ಮೇಲಿದೆ. ಅಲ್ಲದೇ ಖಲಿಸ್ತಾನ್ ಸಂಘಟನೆಯ ಹೋರಾಟದಿಂದ ಪ್ರಭಾವಿತರಾಗಿದ್ದರು ಎನ್ನಲಾಗಿದೆ. ಕೋರ್ಟ್ ನಲ್ಲಿ ದಿಶಾ ಅಳುವಿಗೆ ಶರಣಾಗಿ, ಈ ಆರೋಪವನ್ನು ಒಪ್ಪಿಕೊಂಡಿದ್ದು, ಟೂಲ್​ಕಿಟ್ ನ ಕೇವಲ ಒಂದೆರಡು ಸಾಲುಗಳನ್ನು ಸೇರಿಸಿದ್ದಾಗಿ ಹೇಳಿಕೊಂಡಿದ್ದಾಳೆ.

ಆಕೆಯ ಬಂಧನವಾಗುತ್ತಿದ್ದಂತೆ ಹಲವು ಬುದ್ಧಿಜೀವಿಗಳು, ಕಾಂಗ್ರೆಸ್ ನಾಯಕರು, ಮಾಧ್ಯಮದ ಕೆಲವರು ದಿಶಾ ಪರ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ದೆಹಲಿ ಪೊಲೀಸ್ ಸರಣಿ ಟ್ವಿಟ್ ಮೂಲಕ ದಿಶಾ ಮಾಡಿರುವುದು ಸಣ್ಣ ಅಪರಾಧವಲ್ಲ. ಟೂಲ್​ಕಿಟ್ ಸಹಾಯದಿಂದ ದೇಶದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಪ್ರಾದೇಶಿಕ ವಲಯಗಳಲ್ಲಿ ಯುದ್ಧ ಸಾರುವ ಸಾಮರ್ಥ್ಯ ಹೊಂದಿದ್ದಾಗಿತ್ತು ಎಂದು ತಿಳಿಸಿದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ನಿವೃತ್ತ ನ್ಯಾಯಮೂರ್ತಿ ಎಂ ರಾಮಾ ಜೋಯಿಸ್ ನಿಧನ: ಆರೆಸ್ಸೆಸ್ ನ ದತ್ತಾತ್ರೇಯ ಹೊಸಬಾಳೆ, ವಿ ನಾಗರಾಜ, ಸಂತಾಪ

Tue Feb 16 , 2021
ಜಾರ್ಖಂಡ, ಬಿಹಾರ ರಾಜ್ಯಗಳ ಪೂರ್ವ ರಾಜ್ಯಪಾಲರಾಗಿದ್ದ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯವರಾದ ಎಂ ರಾಮಾ ಜೋಯಿಸ್ ಇಂದು ನಿಧನರಾಗಿದ್ದಾರೆ. ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದ ರಾಮಾಜೋಯಿಸರು ರಾಜ್ಯ ಸಭಾ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದವರು. ಅವರಿಗೆ ೯೦ ವರ್ಷ ವಯಸ್ಸಾಗಿತ್ತು. ೧೯೩೧ ರಲ್ಲಿ ಜನಿಸಿದ ಎಂ (ಮಂಡಗದ್ದೆ) ರಾಮಾ ಜೋಯಿಸ್ ಅವರು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ತಮ್ಮ ಓದು ಮುಗಿಸಿ, ಬಿಎ ಬಿಎಲ್ ಪದವಿಗಳಿಸಿದರು. ರಾಮಾ ಜೋಯಿಸರು […]