೧೮-೩೦ ವಯಸ್ಸಿನ ಯುವಕ ಯುವತಿಯರಿಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿರುವ ಸಾಮರಸ್ಯ ವೇದಿಕೆ, ಕರ್ನಾಟಕ

ಬೆಂಗಳೂರು ಜೂನ್ 9, 2021: ಸಾಮರಸ್ಯ ವೇದಿಕೆ, ಕರ್ನಾಟಕ ವತಿಯಿಂದ ಸಾಮಾಜಿಕ ಸಾಮರಸ್ಯಕ್ಕಾಗಿ ನಡೆದ ವಿವಿಧ ಪ್ರಯತ್ನಗಳು (Various efforts to achieve Social Harmony) ಎಂಬ ವಿಷಯದ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ಹೊಸದಿಗಂತ ದಿನಪತ್ರಿಕೆಯು ಪ್ರಬಂಧ ಸ್ಪರ್ಧೆಯ ಸಹಭಾಗಿತ್ವ ವಹಿಸಿದೆ.

ವಿವರಗಳು ಈ ಕೆಳಗಿನಂತಿವೆ.
ಪ್ರಬಂಧ ಸ್ಪರ್ಧೆಯ ವಿಷಯ: ಸಾಮಾಜಿಕ ಸಾಮರಸ್ಯಕ್ಕಾಗಿ ನಡೆದ ವಿವಿಧ ಪ್ರಯತ್ನಗಳು (Various efforts to achieve Social Harmony)
ನಿಯಮಗಳು: 18 ರಿಂದ 30 ವರ್ಷದ ಒಳಗಿನ ಯುವಕ – ಯುವತಿಯರು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
ಬಹುಮಾನ:

 • ಪ್ರಥಮ: ರೂ 10,000 ಮತ್ತು ಪ್ರಮಾಣ ಪತ್ರ
 • ದ್ವಿತೀಯ: ರೂ 7,500 ಮತ್ತು ಪ್ರಮಾಣ ಪತ್ರ
 • ತೃತೀಯ: ರೂ 5,000 ಮತ್ತು ಪ್ರಮಾಣ ಪತ್ರ
  ಮತ್ತು ತಲಾ ರೂ 1,000 ದಂತೆ 10 ಸಮಾಧಾನಕರ ಬಹುಮಾನಗಳು
 1. ಮೇಲೆ ತಿಳಿಸಿದ ವಿಷಯದ ಕುರಿತು, ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ 1500 ಪದಗಳ ಮಿತಿಯಲ್ಲಿ ಪ್ರಬಂಧವನ್ನು ಸ್ವಹಸ್ತಾಕ್ಷರದಲ್ಲಿ ಬರೆದು ಈ ಕೆಳಗಿನ ವಿಳಾಸಕ್ಕೆ ಅಥವಾ ಟೈಪ್ ಮಾಡಿ essaysamarasyavedike@gmail.com ಗೆ ಜುಲೈ 25, 2021ರ ಒಳಗಾಗಿ ಕಳುಹಿಸಿ ಕೊಡಬೇಕಾಗಿ ವಿನಂತಿ.
 2. ವಯಸ್ಸಿನ ಧೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಜತೆಗಿರಿಸಬೇಕು.
 3. ವಿಳಾಸ: ‘ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ’ ಹೊಸದಿಗಂತ, ಕನ್ನಡ ದಿನಪತ್ರಿಕೆ, ಮಿಕಾಸ, ಎರಡನೇಯ ಮಹಡಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹತ್ತಿರ, ಬಿಜೈ, ಮಂಗಳೂರು-575004
 4. ಪ್ರಬಂಧ ಸ್ವೀಕರಿಸಲು ಕೊನೆಯ ದಿನಾಂಕ: ಜುಲೈ 25, 2021
  ಹೆಚ್ಚಿನ ಮಾಹಿತಿಗಾಗಿ: 9880923907, 7259011545

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಕವಿಗಳಾದ ಡಾ. ಸಿದ್ದಲಿಂಗಯ್ಯ ನಿಧನ: ಆರೆಸ್ಸೆಸ್ ನ ವಿ ನಾಗರಾಜ ತೀವ್ರ ಸಂತಾಪ

Fri Jun 11 , 2021
ಸಮಾನತೆ, ಸಾಮರಸ್ಯಕ್ಕಾಗಿ ನಿರಂತರ ಹಂಬಲಿಸಿದ, ಕನ್ನಡದ ಮಹತ್ತ್ವದ ಕ್ರಿಯಾಶೀಲ ಕವಿ ಡಾ. ಸಿದ್ದಲಿಂಗಯ್ಯನವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ವಿ. ನಾಗರಾಜ್ ತೀವ್ರ ಸಂತಾಪ ಸೂಚಿಸಿದ್ದಾರೆ. ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಡಾ. ಸಿದ್ದಲಿಂಗಯ್ಯನವರಿಗೆ 67 ವರ್ಷ ವಯಸ್ಸಾಗಿತ್ತು. ಕೊರೊನಾ ಸೋಂಕಿನ ನಂತರ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಸಂಘದ ಅನೇಕ ಪ್ರಮುಖರ ಜೊತೆ ಸಿದ್ದಲಿಂಗಯ್ಯನವರದು […]