ಅಕ್ಟೋಬರ್ 28ರಿಂದ 30ವರೆಗೆ ಧಾರವಾಡದಲ್ಲಿ ಆರೆಸ್ಸೆಸ್ ನ ಅ ಭಾ ಕಾರ್ಯಕಾರಿ ಮಂಡಳಿ ಬೈಠಕ್ ನಡೆಯಲಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ , ಅಕ್ಟೋಬರ್ 28, 29 ಮತ್ತು 30 ರಂದು ಧಾರವಾಡದ ಹೊರವಲಯದಲ್ಲಿರುವ ಗರಗದ ಮಾಧವ ನಗರದಲ್ಲಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆಯಲಿದೆ.

ಬೈಠಕ್ ನಲ್ಲಿ ಪರಮಪೂಜನೀಯ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಮತ್ತು ಮಾ. ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ಶ್ರೀ ದತ್ತಾತ್ರೇಯ ಹೊಸಬಾಳೆ ಜೊತೆಗೆ ಅಖಿಲ ಭಾರತೀಯ, ಕ್ಷೇತ್ರೀಯ ಮತ್ತು ಪ್ರಾಂತ ಸ್ತರದ ಕಾರ್ಯಕರ್ತರು ಈ ಬೈಠಕನಲ್ಲಿ ಭಾಗವಹಿಸಲಿದ್ದಾರೆ.


ದೇಶದೆಲ್ಲಕಡೆಗಳಿಂದ ಸುಮಾರು 350 ಪ್ರತಿನಿಧಿಗಳು ಈ ಬೈಠಕನಲ್ಲಿ ಭಾಗವಹಿಸಲಿದ್ದಾರೆ. ಮಾರ್ಚ ತಿಂಗಳಲ್ಲಿ ನಡೆಯುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಸಂಘವು ಯೋಜನೆಯನ್ನು ರೂಪಿಸುತ್ತದೆ. ಇದಾದ 6 ತಿಂಗಳ ನಂತರ ನಡೆಯುವ ಅಖಿಲ ಭಾರತೀಯ ಕಾರ್ಯಕಾರಿ ಮಂಡಳ ಬೈಠಕ್ ಇದರ ಪರಿಶೀಲನಾ ಸಭೆಯಾಗಿದ್ದು, ವಿಸ್ತರಣೆಯ ಯೋಜನೆಗಳು, ಕಾರ್ಯಕರ್ತರ ತರಬೇತಿ ಮತ್ತು ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ.

File picture

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಡಾ.ಎಂ.ಪಿ.ಕರ್ಕಿ ನಿಧನಕ್ಕೆ ಆರೆಸ್ಸೆಸ್ ತೀವ್ರ ಸಂತಾಪ

Fri Oct 22 , 2021
ಉತ್ತರ ಕನ್ನಡ ಜಿಲ್ಲೆಯ ಬಿಜೆಪಿಯ ಹಿರಿಯ ಧುರೀಣರು, ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕ ಡಾ. ಎಂ.ಪಿ.ಕರ್ಕಿ ಅಕ್ಟೊಬರ್ ೧೮ರಂದು ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಡಾ. ಕರ್ಕಿ ಅವರನ್ನು ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು. ಡಾ. ಕರ್ಕಿಯವರು 1968 ರಿಂದ ಜನಸಂಘದ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. 1983ರಲ್ಲಿ ಮತ್ತು 1994ರಲ್ಲಿ ಕುಮಟಾ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಡಾ.ಎಂ.ಪಿ.ಕರ್ಕಿ ನಿಧನಕ್ಕೆ ಆರೆಸ್ಸೆಸ್ ತೀವ್ರ […]