ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಹೋಗುವ ಹೆದ್ದಾರಿಯಲ್ಲಿ ಚೆನ್ನಗಿರಿಗಿಂತ ಮುಂಚೆ ಬಲಕ್ಕೆ ತಿರುಗಿ ಹತ್ತು ಕಿ.ಮಿ. ಹೋದರೆ, ಹೊದಿಗೆರೆ ಎಂಬ ಕುಗ್ರಾಮವಿದೆ. ಇದೊಂದು ಪುಟ್ಟ ಹಳ್ಳಿ. ಸಣ್ಣ ಮಾರ್ಗ, ಒಂದು ಕಾರು ಹೋಗುವಷ್ಟು ಜಾಗ, ರೈತಾಪಿ ವರ್ಗವೇ ಅಧಿಕವಾಗಿರುವ ಇಲ್ಲಿ ಹೊಲ-ಗದ್ದೆಗಳು ಸಾಮಾನ್ಯ. ಆದರೆ ನಮ್ಮಲ್ಲಿ ಬಹುತೇಕ ಜನರಿಗೆ ತಿಳಿಯದ ವಿಷಯ – ಈ ಸ್ಥಳವು ಯಾವ ಪುಣ್ಯಕ್ಷೇತ್ರಕ್ಕೂ ಕಡಿಮೆ ಏನಲ್ಲ ಎಂದು. ಏಕೆಂದರೆ ಇಲ್ಲಿದೆ ಹೈಂದವೀ ಸ್ವರಾಜ್ಯದ ಹರಿಕಾರ ಶಹಜಿ ರಾಜೆ […]

ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಸ್ವಾಮಿ ವಿವೇಕಾನಂದ ಸಭಾ ಗೃಹಂ ಹಾಗು ಅನ್ನಪೂರ್ಣ ಭವನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂಜನೀಯ ಸರಸಂಘಚಾಲಕರಾದ ಶ್ರೀ ಮೋಹನ್‌ಭಾಗವತ್‌ರವರು ಜನವರಿ 20ರಂದು ಉದ್ಘಾಟನೆ ಮಾಡಿದರು. ಇದೇ ಸಂದರ್ಭದಲ್ಲಿ ಪದ್ಮಶ್ರೀ ನಿವೇದಿತಾ ಭಿಡೆಯವರು ಬರೆದಿರುವ on the Mission of Human Evolution – Indian culture challenges & Potentialities ಪುಸ್ತಕವನ್ನು ತಮಿಳುನಾಡಿನ ಘನತೆವೆತ್ತ ರಾಜ್ಯಪಾಲರಾದ ಶ್ರೀ ಆರ್‌.ಎನ್.ರವಿಯವರು ಬಿಡುಗಡೆ ಮಾಡಿ ಮಾತನಾಡಿದರು. […]

ಪರ್ಯಾಯ ಪೀಠವೇರಿ ಕಳೆದ 2 ವರ್ಷಗಳ ಕಾಲ ಉಡುಪಿ ಶ್ರೀಕೃಷ್ಣನ ಪೂಜಾ ಕೈಂಕರ್ಯದ ಜೊತೆ ಜೊತೆಗೆ ಸಮಾಜ ಜಾಗೃತಿ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಮಗ್ನರಾಗಿದ್ದ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ಈಶಪ್ರೀಯ ತೀರ್ಥರು ತಮ್ಮ ಯಾದಿ ಮುಗಿಸಿ, ಜನವರಿ 18ರ ಮುಂಜಾನೆಯಲ್ಲಿ ಶ್ರೀಕೃಷ್ಣನ ಪೂಜೆಯ ಬಳಿಕ ಪರಂಪರೆಯಂತೆ ಕೃಷ್ಣಾಪುರ ಮಠದ ಯತಿಗಳಿಗೆ ಪೂಜಾದಿ ಮಠದ ಹೊಣೆಯನ್ನು ಹಸ್ತಾಂತರಿಸಿ ಸಮಾಜದ ಪ್ರತ್ಯಕ್ಷ ಕಾರ್ಯಕ್ಕೆ ಧಾವಿಸಿರುವುದು ವಿಶೇಷ. ಮಧ್ಯಾಹ್ನ […]

ಶ್ರೀ ಕೃಷ್ಣದೇವರಾಯ. ಈ ಹೆಸರು ಕೇಳಿದೊಡನೆಯೇ ನಮ್ಮ ಕಣ್ಣ ಮುಂದೆ ಬರುವುದು ದಕ್ಷಿಣ ಭಾರತದ ಕ್ಷಾತ್ರ ತೇಜದ ಸಮರ್ಥ ಅಡಳಿತಗಾರ. ಸಾವಿರಾರು ಧಾರ್ಮಿಕ ಕ್ಷೇತ್ರಗಳ ಪುನರುಜ್ಜೀವನಗೊಳಿಸಿದ ಮಹಾನ್ ನಾಯಕ, ಮುತ್ತು ರತ್ನ ಪಚ್ಚೆ ಹವಗಳನ್ನು ರಸ್ತೆಯ ಬದಿಯಲ್ಲಿ ಬಳ್ಳ ಬಳ್ಳಗಳಲ್ಲಿ ಮಾರುತ್ತಿದ್ದಂತಹ ಸುವರ್ಣಯುಗದ ಸೃಷ್ಟಿಸಿದ ರಾಜ. 16 ನೇ ಶತಮಾನದಲ್ಲಿ ಬಿಜಾಪುರ ಸುಲ್ತಾನರು, ಬಹಮನಿ ಸುಲ್ತಾನರನ್ನು ಬಗ್ಗು ಬಡಿದಿದ್ದಲ್ಲದೇ, ಉತ್ತರದ ಮೊಘಲರ  ಅಧಿಪತಿ ಬಾಬರನಿಗೂ ಹುಟ್ಟಿಸಿದ ಕರ್ನಾಟಕದ ಕೆಚ್ಚೆದೆಯ ಹಿಂದೂ ಹುಲಿಯಷ್ಟೇ […]

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕೊಳ್ಳೆಗಾಲ ಕ್ಷೇತ್ರದ ಶಾಸಕರಾದ ಎನ್. ಮಹೇಶ್ ಅವರು ಅಸ್ಪೃಶ್ಯತೆಯ ಕುರಿತು ಮಾತನಾಡುತ್ತಾ,  ‘ಭಾರತದ ಐಕ್ಯಮತ್ಯವನ್ನು ಒಡೆಯುವ ನಮ್ಮೊಳಗಿನ ಕಟ್ಟುಕಟ್ಟಳೆಗಳನ್ನು ಮೆಟ್ಟಿ ನಿಂತಾಗ ಮಾತ್ರ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯರ ಸಾವರ್ಕರ್ ಅವರು ಕಂಡ ಕನಸಿನ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ’ ಎಂದಿದ್ದರು. ಅವರ ಮಾತನ್ನು ಕೇಳುತ್ತಿದ್ದಾಗ ಅನಿಸಿದ್ದು, ಪರಂಪರೆಯ ಹೆಸರಿನಲ್ಲಿ ಆಚರಣೆಯಲ್ಲಿ ಇರುವ ಎಷ್ಟೋ ಪದ್ಧತಿಗಳು ಒಂದು ಕಾಲದ ನಂತರ ತನ್ನ ಔಚಿತ್ಯವನ್ನು ಕಳೆದುಕೊಳ್ಳುತ್ತವೆ ಎಂಬುದು. ಸಮಾಜದ […]

ರೋಮನ್ನರು ಜೆರುಸಲೇಂ ಮೇಲೆ ಆಕ್ರಮಣ ನಡೆಸಿ, ಹತ್ಯಾಕಾಂಡಕ್ಕೆ ಇಳಿದಾಗ ಯಹೂದಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ತಾವಿದ್ದ ನೆಲವನ್ನು ತೊರೆಯಲೇಬೇಕಿತ್ತು. ಅನಿವಾರ್ಯವಾಗಿ ಗುಂಪು ಗುಂಪಾಗಿ ದೇಶಾಂತರ ಹೊರಟರು. ಆಗ ಯಹೂದಿಗಳ ಒಂದು ತಂಡ ಭಾರತದ ಕೇರಳವನ್ನು ಅರಸಿ ಬಂತು. ಆ ವೇಳೆಗಾಗಲೇ, ಯಹೂದಿಗಳು ಕೇರಳದ ಜತೆ ಅನೇಕ ವರ್ಷಗಳಿಂದ ಸಮುದ್ರ ಮಾರ್ಗದ ಮೂಲಕ ವ್ಯಾಪಾರ-ವ್ಯವಹಾರದ ಸಂಬಂಧ ಹೊಂದಿದ್ದರು. ಹಾಗಾಗಿ ಭಾರತದಲ್ಲಿ ಆಸರೆ ಸಿಗಬಹುದು, ಅನ್ನ-ನೀರು-ಸೂರು ಸಿಕ್ಕರೆ ಹೇಗೋ ಬಾಳ್ವೆ ಮಾಡಬಹುದು ಎಂಬ […]

ಭರತ ಖಂಡವನ್ನು ಅರಿಯ ಬೇಕಾದರೆ ಸ್ವಾಮಿ ವಿವೇಕಾನಂದರನ್ನು ಅರಿತರೆ ಸಾಕು ಅವರೇ ಸಂಕ್ಷಿಪ್ತ ಭರತ ಖಂಡ… ಎಂಬ ಮಾತೇ ಭಾರತಕ್ಕೂ ವಿವೇಕಾನಂದರಿಗೂ ನಡುವೆ ಇರುವ ಉತ್ಕೃಷ್ಟ ಸಂಬಂಧದ ಶ್ರೇಷ್ಠತೆಯನ್ನು ಸೂಚಿಸುತ್ತದೆ. ಅಧಃಪತನದತ್ತ ಸಾಗುತ್ತಿರುವ ಭರತಖಂಡದ ವೈಭೋಗವನ್ನು ಮರುಳಿಸಲು ತಮ್ಮ ಆಧ್ಯಾತ್ಮ ಚಿಂತನೆಯಿಂದ ಸಾಫಲ್ಯ ಗೊಳಿಸಿದ ಧೀಮಂತರು.ಈ ನಿಟ್ಟಿನಲ್ಲಿ ಅವರ ಪರಿಶ್ರಮ ಕೊಡುಗೆ ಅಪಾರ. ಪಥನದಿಂದ ಅಭ್ಯುದಯದ ಕಡೆಗೆ ಪ್ರಯಾಣ ಮಾಡುತ್ತಿರುವ ಭರತಖಂಡದ ರಥವನ್ನು ಎತ್ತಿ ಹಿಡಿದು,ಜಗದ ನಿಕೃಷ್ಟ ದೃಷ್ಟಿಗೆ ಪಾತ್ರವಾದ […]

ಯಾದಗಿರಿ ತಾಲೂಕಿನಲ್ಲಿ 50ವರ್ಷದ ಹಿಂದೆ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿದ್ದ ಟಿಮೋತಿ ಹೊಸಮನಿ ಮತ್ತೆ ಹಿಂದೂಗಳಾಗಿದ್ದಾರೆ. ಗುರ್ಮಿಟ್ಕಲ್ ತಾಲೂಕಿನ ಕನಿಕಲ್ ಗ್ರಾಮದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ 55 ವರ್ಷದ ಟಿಮೋತಿಯವರು 5ದಶಕಗಳ ಹಿಂದೆ ತಮ್ಮ ತಂದೆ ತಾಯಿಯರ ಕಾರಣದಿಂದ ಮತಾಂತರಗೊಂಡಿದ್ದು ಈಗ ವಾಪಾಸ್ ಮಾತೃಧರ್ಮಕ್ಕೆ ಮರಳುವ ಮನಸ್ಸಾಗಿದೆ ಎಂದಿದ್ದಾರೆ.ತಮ್ಮ ತಂದೆ ತಾಯಿಗಳು ಮಾತೃ ಧರ್ಮಕ್ಕೆ ಮತ್ತೆ ಮರಳಿ ಬರಲು ವಿರೋಧಿಸಿದ್ದರಿಂದ ಅವರ ಮರಣಾ ನಂತರ ಘರ್‌ವಾಪಸಿಯಾಗಲು ನಿರ್ಧರಿಸಿದ್ದು, ಯಾವ ಕಾರಣಕ್ಕೆ ಮತಾಂತರಗೊಂಡಿದ್ದರು ಎಂಬುದು […]

ಆ ಊರಿಗೆ ತೀರ್ಥಹಳ್ಳಿಯಿಂದ ಪಶ್ಚಿಮದ ದಾರಿ ಹಿಡಿದು ೨೦ ಕಿಮೀ ಸಾಗಬೇಕು. ದಾರಿಯುದ್ದಕ್ಕೂ ದಟ್ಟ ಕಾಡು. ಅಲ್ಲಲ್ಲಿ ಏರಿ, ಇಳಿದು, ದಣಿದು ದಾರಿ ತಪ್ಪಿಯೇ ಸಿಗುವ ಆ ಊರು ಚಕ್ಕೋಡುಬೈಲು. ಪ್ರವೇಶಿಸುತ್ತಲೇ ಅದೆಷ್ಟೋ ಶತಮಾನಗಳ ಹಿಂದಿನಿಂದಲೇ ಇಲ್ಲೊಂದು ಜನವಸತಿಯ ಜಾಗವಿತ್ತು ಎನಿಸುವ ಆ ಗ್ರಾಮದಂಚಿನಲ್ಲಿ ಮಾಲತಿ ನದಿ ಬಳುಕುತ್ತಾ ಹರಿಯುತ್ತದೆ. ಆ ಗ್ರಾಮದಲ್ಲೊಂದು ರಾಮಲಿಂಗೇಶ್ವರ ದೇವರಿದ್ದಾನೆ. ತುಂಬಾ ಹಿಂದೆ ಕಾಶಿ ಯಾತ್ರೆಗೆ ಹೋದವರು ನೇಪಾಳದಿಂದ ಆ ಲಿಂಗವನ್ನು ತಂದು ಪ್ರತಿಷ್ಠಾಪನೆ […]