ಹಿಂದೂ ಹೆಣ್ಣುಮಕ್ಕಳು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಹೇಗೆ?

ಉಳ್ಳಾಲ.. ಇದು ಸದಾ ಸುದ್ದಿಯಾಗುತ್ತಲೇ ಇರುವ ಊರು… ಹಿಂದೆಲ್ಲಾ ಜಗತ್ತಿನ ಯಾವುದೋ ಮೂಲೆಯಲ್ಲಿ ಬಾಂಬ್ ಸ್ಫೋಟವಾದರೆ ಕರ್ನಾಟಕದ ಭಟ್ಕಳ ಸುದ್ದಿಯಾಗುತ್ತಿತ್ತು.. ಆದರೆ ಇತ್ತೀಚೆಗೆ ಕಾಬೂಲ್ ನಿಂದ ಹಿಡಿದು ಸಿರಿಯಾ ತನಕ ನಡೆಯುವ ಒಂದಲ್ಲಾ ಒಂದು ಸ್ಫೋಟಗಳ ಹಿಂದೆ ಉಳ್ಳಾಲದ ಹೆಸರು ಕೇಳಿ ಬರುತ್ತದೆ.. ಕರ್ನಾಟಕದ ಕರಾವಳಿ ಭಯೋತ್ಪಾದಕರ ಸ್ಲೀಪಿಂಗ್ ಸೆಲ್ ಎನ್ನುವ ಹಣೆ ಪಟ್ಟಿ ಹೊತ್ತು ಕೊಂಡು ಬಹಳ ಸಮಯವೇ ಆಗಿ ಹೋಗಿದೆ..  

ಅದು 2013 ಅಂದು ಬೆಳ್ಳಂಬೆಳಗ್ಗೆ ಬಂದರಿನಲ್ಲಿ ಮೀನಿನ ವ್ಯಾಪಾರದ ಗೌಜಿ ಶುರುವಾಗುವುದಕ್ಕೂ ಮುನ್ನವೇ ರಾಷ್ಟ್ರೀಯ ತನಿಖಾ ದಳ ಮತ್ತು ಬಿಹಾರದ ಪೊಲೀಸರು ಉಳ್ಳಾಲದ ಪಂಜಿಮೊಗರುವಿನಲ್ಲಿ ಸದ್ದಿಲ್ಲದೇ ಕುಳಿತಿದ್ದ ಜುಬೇರ್ ಮತ್ತು ಆಯೇಷಾ ಎಂಬ ದಂಪತಿಗಳನ್ನು ಬಂಧಿಸಿ ಕರೆದೋಯ್ದಿದ್ದರು.. ಗರ್ಭಿಣಿಯಾಗಿದ್ದ ಜುಬೇರ್ ನ ಎರಡನೇ ಹೆಂಡತಿ ಆಯೇಷಾ ಕಂಕುಳಲ್ಲಿ ಪುಟ್ಟ ಕಂದಮ್ಮನನ್ನು  ಎತ್ತಿಕೊಂಡು ಪೋಲೀಸರ ಹಿಂದೆ ಹೆಜ್ಜೆ ಹಾಕಿದ್ದಳು.. ಇದು ಸಾಮಾನ್ಯ ಸಂಗತಿಯಾಗಿದ್ದಿದ್ದರೆ ಹತ್ತರಲ್ಲಿ ಹನ್ನೊಂದು ಎಂಬಂತೆ ಜನರ ನೆನಪಿನಿಂದ ಅಳಸಿ ಹೋಗುತ್ತಿತ್ತು.. ಆದರೆ ಕರಾವಳಿಯ ಜನರ ನೆನಪಿನಲ್ಲಿ ಇದು ಇಂದಿಗೂ ಅಚ್ಚಳಿಯದೆ ಉಳಿದಿರುವುದಕ್ಕೆ ಕಾರಣ ಆಯೇಷಾ ಅಲಿಯಾಸ್ ಆಶಾ ಎನ್ನುವ ಹೆಣ್ಣುಮಗಳ ಕಥೆ.

ಕೊಡಗಿನ ವಿರಾಜಪೇಟೆಯ ಆಶಾ ಎನ್ನುವ ಹುಡುಗಿ ಜುಬೇರ್ ಎಂಬ ಮುಸ್ಲಿಂ ನನ್ನು ಮದುವೆಯಾಗಿ ಮತಾಂತರಗೊಂಡು ಆಯೇಷಾ ಆಗುತ್ತಾಳೆ.  ಜುಬೇರ್ ನ ಎರಡನೇ ಪತ್ನಿಯಾಗಿ ಮೂರು ಮಕ್ಕಳ ತಾಯಿಯಾಗಿ ಬಂದ ಆಯೇಷಾ ಕಮೀಷನ್ ಆಸೆಗಾಗಿ ಹವಾಲಾ ದಂಧೆಗೆ ಇಳಿಯುತ್ತಾಳೆ… ಹತ್ತಾರು ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಉಗ್ರ ಸಂಘಟನೆಗೆ ಹಣ ರವಾನಿಸುವ ಕೆಲಸದ ಭಾಗವಾಗುವ ಮೂಲಕ  ಲವ್ ಜಿಹಾದ್ ನ ಭಯಾನಕತೆಗೆ ಸಾಕ್ಷಿಯಾಗಿ ನಿಲ್ಲುತ್ತಾಳೆ..ಕೇರಳದ ಮಗ್ಗುಲಲ್ಲೇ ನಿಂತಿರುವ ಉಳ್ಳಾಲ ಸಧ್ಯಕ್ಕೆ ಕರಾವಳಿಯ ಪಾಕಿಸ್ತಾನ ಎನ್ನಿಸಿಕೊಳ್ಳುವಷ್ಟರ ಮಟ್ಟಿಗೆ ಭಯೋತ್ಪಾದನೆಯ ಕರಿ ನೆರಳನ್ನು ಹೊದ್ದು ಕೂತಿದೆ.. ಇಲ್ಲಿ ಚಿಕ್ಕ ಪುಟ್ಟ ಪುಂಡರ ಗಲಾಟೆಗೂ ಪಕ್ಕದ ಕೇರಳದ ದಂಡು ಬರುತ್ತದೆ..ಈಗ ಕೇರಳ ಮತ್ತೆ ಸದ್ದು ಮಾಡಿದೆ.. ಅದೂ ಕೂಡ ಮತ್ತೊಮ್ಮೆ ಭಯೋತ್ಪಾದನೆಯ ನಂಟಿಗೆ. ಐಸಿಸ್ ಉಗ್ರ ಸಂಘಟನೆಯ ನಂಟು ಹೊತ್ತ ಸುಳಿವು ಹಿಡಿದು ರಾಷ್ಟ್ರೀಯ ತನಿಖಾ ದಳ 5 ತಿಂಗಳ ಹಿಂದೆ ಒಂದು ಮನೆಯ ಮೇಲೆ ದಾಳಿ ಮಾಡುತ್ತದೆ.. ಆ ಮನೆಯ ಮಗನನ್ನು ಉಗ್ರ ನಂಟಿನ ಕಾರಣಕ್ಕೆ ಬಂಧಿಸುತ್ತದೆ.

ಅದು ಅಂತಿಥಾ ಮನೆಯಲ್ಲ.. ಬುದ್ದಿಜೀವಿಗಳು ಹೇಳುವಂತೆ ಬಡತನದ ಕಾರಣಕ್ಕೆ ಭಯೋತ್ಪಾದಕರಾಗುತ್ತಾರೆ ಎನ್ನಲು ಅದು ಬಡವರ ಮನೆಯೂ ಆಗಿರಲಿಲ್ಲ… ಅದು ಉಳ್ಳಾಲದ ಮಾಜಿ ಶಾಸಕ ದಿ. ಬಿ.ಎಂ. ಇದಿನಬ್ಬರ ಮನೆಯಾಗಿತ್ತು. ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸಿ ಇದಿನಬ್ಬರ ಪುತ್ರ ಬಿ. ಎಂ. ಬಾಷಾನ ಕಿರಿಯ ಮಗ ಅಮ್ಮರ್ ನನ್ನು ಬಂಧಿಸಿದ್ದರು. ಆಗಲೇ ಬಯಲಾಗಿದ್ದು ಶಾಸಕರ ಮನೆಯಲ್ಲಿ ಸದ್ದಿಲ್ಲದೇ ನಡೆದಿದ್ದ ಲವ್ ಜಿಹಾದ್.. ತನಿಖೆಗಾಗಿ ಬಂದಿದ್ದ ಅಧಿಕಾರಿಗಳು ಬಿ. ಎಂ. ಬಾಷಾನ ಪುತ್ರ ಅನಾಸ್ ಅಬ್ದುಲ್ ರೆಹಮಾನ್ ಹೆಂಡತಿ  ಮರಿಯಂಳನ್ನು ಕೂಡ ವಿಚಾರಣೆ ನಡೆಸಿದ್ದರು. ಆದರೆ ಆಕೆಯ ಕೈಯಲ್ಲಿ  ಪುಟ್ಟ ಮಗುವನ್ನು ನೋಡಿ  ವಿಚಾರಣೆ ನಡೆಸಿ, ಸೂಕ್ತ ಸಾಕ್ಷಿ ಸಿಗದ ಕಾರಣ ಬಂಧಿಸದೇ ಬಿಟ್ಟಿದ್ದರು. ಆದರೆ ತನಿಖಾ ತಂಡಕ್ಕೆ  ಮರೀಯಂಳ ಮೇಲೆ ಅನುಮಾನವಿತ್ತು. ಆ ಕಾರಣಕ್ಕೆ  ಆಕೆಯ ಮೇಲೆ ಮುಂದಿನ 5 ತಿಂಗಳು ಹದ್ದಿನ ಕಣ್ಣಿಡುತ್ತಾರೆ.. ಈಗ ಉಗ್ರ ಸಂಘಟನೆಯೊಂದಿಗೆ ಆಕೆಗೆ ನಂಟಿರುವ ಕುರಿತು ಸ್ಪಷ್ಟ ಮಾಹಿತಿಯ ಮೇಲೆ ಆಕೆಯನ್ನು ಬಂಧಿಸಿದ್ದಾರೆ.

ಆ ಮೂಲಕ ಉಳ್ಳಾಲ ಲವ್ ಜಿಹಾದ್ ಮತ್ತು ಭಯೋತ್ಪಾದಕ ಸಂಘಟನೆಗಿರುವ ನೇರ ಸಂಬಂಧಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ..ಅಂದು ಆಯೇಷಾ ಪುಟ್ಟ ಮಗುವನ್ನು ಕಂಕುಳಲ್ಲಿಟ್ಟುಕೊಂಡು ಅರೆಸ್ಟ್ ಆದಂತೆಯೇ ಇಂದು ಮರೀಯಂ ಪುಟ್ಟ ಮಗುವಿನೊಂದಿಗೆ ಅರೆಸ್ಟ್ ಆಗಿದ್ದಾಳೆ… ಆಯೇಷಾ ಕೂಡ ಅಂದು ಆಶಾ ಆಗಿದ್ದು ಹಿಂದೂ ಕುಟುಂಬದಲ್ಲಿ ಹುಟ್ಟಿ ನಂತರ ಪ್ರೀತಿಯಲ್ಲಿ ಬಿದ್ದು ಮತಾಂತರವಾಗಿದ್ದಳು. ಮರೀಯಂ ಕೂಡ ಮೂಲತಃ   ದೀಪ್ತಿ ಮಾರ್ಲ ಆಗಿದ್ದು ಹಿಂದೂ ಕುಟುಂಬದಲ್ಲಿ ಹುಟ್ಟಿ ಬೆಳೆದವಳು..ಕೊಡಗಿನ ಹಿಂದೂ ಕುಟುಂಬದಲ್ಲಿ ಹುಟ್ಟಿ ಬೆಳೆದ ದೀಪ್ತಿ ಮಾರ್ಲಾ ಎನ್ನುವ ಹುಡುಗಿ ಡಾಕ್ಟರ್ ಆಗಬೇಕೆಂಬ ಹಲವು ಕನಸುಗಳನ್ನು ಹೊತ್ತುಕೊಂಡು ದೇರಳಕಟ್ಟೆಯ ಕಾಲೇಜಿಗೆ ಸೇರುತ್ತಾಳೆ. ಆದರೆ ಅಲ್ಲಿ ಬಿ. ಎಂ. ಬಾಷಾ ಪುತ್ರ ಅನಾಸ್ ಜೊತೆಗೆ ಪ್ರೀತಿಯಲ್ಲಿ ಬಿದ್ದು ಮತಾಂತರಗೊಂಡು ಮರೀಯಂ ಆಗುತ್ತಾಳೆ. ಬಳಿಕ ಜಗತ್ತನ್ನು ಇಸ್ಲಾಮೀಕರಣ ಮಾಡುವ ಇಸ್ಲಾಮಿಕ್ ಸ್ಟೇಟ್ಸ್ ನ ಉಗ್ರ ಕೃತ್ಯಗಳಿಗೆ ಧನ ಸಂಗ್ರಹಿಸುವ ತಂಡದ ಭಾಗವಾಗಿ ಕೆಲಸ ಮಾಡುತ್ತಾ ಈಗ ಕಂಬಿಯ ಹಿಂದೆ ನಿಂತಿದ್ದಾಳೆ..ಪ್ರತಿ ಬಾರಿ ಹಿಂದೂ ಹುಡುಗಿ ಮುಸ್ಲಿಂ ಯುವಕನನ್ನು ಮದುವೆಯಾದಗಲೂ ಅಲ್ಲಿ ಲವ್ ಜಿಹಾದ್ ನ ಚರ್ಚೆ ನಡೆಯುತ್ತದೆ. ಹಾಗೆ ನಡೆದಾಗಲೆಲ್ಲ ಪ್ರೀತಿಗೆ ಧರ್ಮದ ಬೆಳಿ ಇಲ್ಲ ಎಂದು ವಾದಿಸುವ ಒಂದು ವರ್ಗ ಧಿಗ್ಗನೇ ಎದ್ದು ನಿಲ್ಲುತ್ತದೆ.

ಆದರೆ ಉಗ್ರ ಸಂಘಟನೆಯ ಸಂಪರ್ಕಕ್ಕೆ ಸಿಕ್ಕು ನಲುಗಿದ ಹೆಣ್ಣುಮಕ್ಕಳಲ್ಲಿ ಬಹುತೇಕರು ಹಿಂದೂ ಅಥವಾ ಮುಸ್ಲಿಮೇತರ ಹೆಣ್ಣುಮಕ್ಕಳೇ ಆಗಿರುತ್ತಾರೆ ಎನ್ನುವ ಸತ್ಯವನ್ನು ಮಾತ್ರ ಇವರು ಒಪ್ಪಿಕೊಳ್ಳಲು ಸಿದ್ದರಿಲ್ಲ..ಒಬ್ಬ ಆಯೇಷಾ, ಒಬ್ಬ ದೀಪ್ತಿ ಮಾರ್ಲಾ ನಮ್ಮ ನಡುವೆಯೇ ಜೀವಂತ ಸಾಕ್ಷಿಯಾಗಿರುವಾಗ ಹಿಂದೂ ಹೆಣ್ಣುಮಕ್ಕಳು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಹೇಗೆ?

ಚೈತ್ರಾ ಕುಂದಾಪುರ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಈಗೆಲ್ಲಿದೆ ಕುವೆಂಪು ಕಂಡ ಆ ದಟ್ಟ ಮಲೆನಾಡು?

Fri Jan 7 , 2022
ಪ್ರಕೃತಿ ಕುವೆಂಪು ಅವರಿಗೆ ಒಂದು ಆರಾಧನೆ. ಅವರಿಗೆ ನಿಸರ್ಗನೇ ದೇವಾಲಯ, ಶಿವಮಂದಿರ. ದೈವಿಕ ಅನುಭವವಾಗಿ ಅವರ ಸಾಹಿತ್ಯದಲ್ಲಿ ಅದು ಮೂಡುತ್ತದೆ. ಅವರ ಕಾಲದ ದಟ್ಟಕಾಡು ಇಂದಿಲ್ಲ. ತೇಜಸ್ವಿ ಅವರಿಗೆ ಪ್ರಕೃತಿ ಒಂದು ಅನ್ವೇಷಣೆಯ ಮೂಲ. ಮಲೆನಾಡಿನ ಪ್ರಾಕೃತಿಕ ಪರಿಸರ ಅವರ ಬರವಣಿಗೆಯ ಒತ್ತಡವಾಗಿ ಬಂದಿದ್ದರೂ ಮನುಷ್ಯ ಬದುಕಿಗೆ ಈ ಪರಿಸರ ಎಷ್ಟು ಅನಿವಾರ್ಯ ಎಂಬ ಹುಡುಕಾಟವಿದೆ. ತೆಳುವಾಗುತ್ತಿರುವ ಕಾನನ,ನಶಿಸುತ್ತಿರುವ ವನ್ಯಜೀವಿ ಸಂಕುಲಗಳ ಬಗ್ಗೆ ವಿಷಾದವಿದೆ. ಮಹಾಕವಿ ಕುವೆಂಪು ಅವರ ಹುಟ್ಟುಹಬ್ಬ(ಡಿ-೨೯) […]