ಜನವರಿ 12 ರಿಂದ ರಾಜ್ಯಾದ್ಯಂತ Be Good Do Good ಅಭಿಯಾನ

ಬೆಂಗಳೂರು, ಜನವರಿ 5, 2022 : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ `ಉತ್ತಮನಾಗುಉಪಕಾರಿಯಾಗು ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಬೃಹತ್ ಯುವ ಅಭಿಯಾನ ‘‘Be Good Do Good-2022’ ಇದೇ ಬರುವ ಜನವರಿ 12 ರಿಂದ 26, 2022 ರವರೆಗೆ ರಾಜ್ಯಾದ್ಯಂತ ನಡೆಯಲಿದೆ.

ಬೆಂಗಳೂರಿನ ಸಾಮಾಜಿಕ ಸಂಸ್ಥೆ ಸಮರ್ಥ ಭಾರತ ಈ ಯುವ ಅಭಿಯಾನವನ್ನು ಆಯೋಜಿಸಿದೆ.

ಕೋವಿಡ್ ನಿಯಮಾವಳಿಗನುಸಾರವಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಮಾದರಿಯಲ್ಲಿ ಈ ಬಾರಿಯ ಅಭಿಯಾನವು ನಡೆಯಲಿದೆ.  ಜನವರಿ 12, 2022 ರಂದು ಸ್ವಾಮಿ ವಿವೇಕಾನಂದರ 159ನೇ ಜಯಂತಿ ಮತ್ತು ರಾಷ್ಟೀಯ ಯುವ ದಿನದ ಅಂಗವಾಗಿ ರಾಜ್ಯದಾದ್ಯಂತ ‘Be Good Do Good-2022’ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಯುವಕ- ಯುವತಿಯರು ಸ್ವಾಮಿ ವಿವೇಕಾನಂದರು ಯುವಜನರಿಗೆ ನೀಡಿದ `ಉತ್ತಮನಾಗು-ಉಪಕಾರಿಯಾಗು’ (‘Be Good Do Good) ಎಂಬ ಸಂದೇಶವನ್ನು ತಾವು ಪಾಲನೆ ಮಾಡುವ ಸಂಕಲ್ಪ ತೊಡಲಿದ್ದಾರೆ. ಜನವರಿ 12, 2022 ರಿಂದ 26 ಜನವರಿ 2022ರ ವರೆಗೆ 2 ವಾರ ನಡೆಯಲಿರುವ ಈ ಬೃಹತ್ ಯುವ ಅಭಿಯಾನದಲ್ಲಿ ರಾಜ್ಯಾದ್ಯಂತ ಯುವಕ- ಯುವತಿಯರು ಭಾಗವಹಿಸಲಿದ್ದಾರೆ.

ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ತಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮಗುಣಸ್ವಭಾವಗಳನ್ನು ಮೈಗೂಡಿಸುವುದರ ಜತೆಗೆ ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶ. ಹೆಚ್ಚಿನ ಯುವ ಜನತೆಯನ್ನು ಸ್ಪೂರ್ತಿದಾಯಕ ಕಾರ್ಯಗಳಿಗೆ ಪ್ರೇರೇಪಿಸಿ ಈ ಮೂಲಕ ಅನೇಕ ಇತರರಿಗೆ ಆದರ್ಶ ವ್ಯಕ್ತಿಗಳಾಗುವ ಮೂಲಕ “ಉತ್ತಮನಾಗು-ಉಪಕಾರಿಯಾಗು” ಎಂಬ ಪರಂಪರೆಯನ್ನು ನಿರ್ಮಿಸುವ ಆಶಯವನ್ನು ಈ ಅಭಿಯಾನ ಹೊಂದಿದೆ. ಈ ಸಂದೇಶವು ಹೆಚ್ಚಿನ ಯುವ ಜನತೆಗೆ ತಲುಪಲು ತಂತ್ರಜ್ಞಾನಾಧಾರಿತ ವೇದಿಕೆಗಳಾದ ಸಮರ್ಥ ಭಾರತದ ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳು, ವಾಟ್ಸಪ್, ಮತ್ತು ಎಸ್‌ಎಮ್‌ಎಸ್ ಗಳನ್ನು ಬಳಸುವ ಮೂಲಕ #Be Good Do Good ಅಭಿಯಾನದ ಪ್ರಚಾರ ನಡೆಸಲಾಗುತ್ತಿದೆ. ಇದಲ್ಲದೇ ಈ ವೇದಿಕೆಗಳು ಯುವಜನರು ತಮ್ಮ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳಲೂ ಲಭ್ಯವಿರುತ್ತದೆ.

ಆಶಯಧ್ಯೇಯ (theme): 

ಬಿ ಗುಡ್: ವೈಯಕ್ತಿಕ ಜೀವನದಲ್ಲಿ ಉತ್ತಮಗುಣಸ್ವಭಾವಗಳನ್ನು ಮೈಗೂಡಿಸುವುದು. ಉದಾಹರಣೆಗೆ – ಎಲ್ಲರಿಗೂ ಗೌರವ ನೀಡುವುದು, ಎಲ್ಲರೊಂದಿಗೆ ಆತ್ಮೀಯವಾದ ವ್ಯವಹಾರ, ಸಮಯಪಾಲನೆ, ಕೊಟ್ಟಮಾತಿಗೆ ಬದ್ಧನಾಗಿರುವುದು, ತಾನು ವಹಿಸುವ ಕೆಲಸಕರ‍್ಯಗಳಲ್ಲಿ ಶ್ರದ್ಧೆ, ನಡೆನುಡಿಯಲ್ಲಿ ಶಿಸ್ತು, ಆರೋಗ್ಯಪೂರ್ಣ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಇತ್ಯಾದಿ ಅಂಶಗಳು.

ಡು ಗುಡ್: ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು. ಉದಾಹರಣೆಗೆ – ಗಿಡವೊಂದನ್ನು ನೆಡುವುದು, ನೆಟ್ಟಿರುವ ಗಿಡವೊಂದಕ್ಕೆ ಸೂಕ್ತ ರಕ್ಷಣೆ-ಪೋಷಣೆ ನೀಡುವುದು, ರಕ್ತದಾನ, ನೇತ್ರದಾನ ಸಂಕಲ್ಪ, ಅಗತ್ಯವಿರುವ ಮಕ್ಕಳಿಗೆ ಕಲಿಕಾಕೇಂದ್ರಗಳಲ್ಲಿ ಉಚಿತವಾಗಿ ಟ್ಯೂಷನ್ ನೀಡುವುದು, ಪರಿಸರ ಸಂರಕ್ಷಣೆ, ಜಲಸಂಲಕ್ಷಣೆ ಸೇರಿದಂತೆ ಸಾಮಾಜಿಕ ಜಾಗೃತಿಯ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದು ಇತ್ಯಾದಿ.

ಈ ವರ್ಷ ಅಭಿಯಾನವು ವೈಯಕ್ತಿಕ ಹಾಗೂ ಸಾಮಾಜಿಕ ಜೀವನಕ್ಕೆ ಸಂಬAಧಪಟ್ಟ ವಿಷಯಗಳ ಕುರಿತು ಜಾಗೃತಿಯನ್ನು ಮೂಡಿಸಿ, ಯುವಜನರು ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದೆ. ಈ ಬಾರಿಯ ಅಭಿಯಾನವು ಸ್ವಾತಂತ್ರö್ಯಪ್ರಾಪ್ತಿಯ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ‘ಸ್ವರಾಜ್ಯ-75: ಆತ್ಮನಿರ್ಭರ ಭಾರತಕ್ಕಾಗಿ ನಾನು’ ಎಂಬ ಆಶಯಧ್ಯೇಯವನ್ನು ಹೊಂದಿದ್ದು 3 ವಿಷಯಗಳಲ್ಲಿ ಜಾಗೃತಿ ಮೂಡಿಸಲಿದೆ.

1.      ಸ್ವಾವಲಂಬನೆ: ನಾನು ಸ್ವಾವಲಂಬಿ, ನನ್ನ ಕುಟುಂಬವೂ ಸ್ವಾವಲಂಬಿ

2.     ಸ್ವಾಭಿಮಾನ: ನನ್ನ ದೇಶ, ನನ್ನ ಹೆಮ್ಮೆ

3.     ಸ್ವದೇಶಿ: ಸ್ವದೇಶಿ ಜೀವನಶೈಲಿ, ಸ್ವದೇಶಿ ವಸ್ತು ಬಳಕೆ 

ಅಭಿಯಾನಕ್ಕೆ ಚಾಲನೆ: ಜನವರಿ 12, 2022ರಂದು ಸ್ವಾಮಿ ವಿವೇಕಾನಂದರ 159ನೇ ಜಯಂತಿಯನ್ನು `ಉತ್ತಮನಾಗು-ಉಪಕಾರಿಯಾಗು’ (‘Be Good Do Good) ಎಂಬ ಸಂದೇಶದೊAದಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮಾದರಿಯಲ್ಲಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಹಾಗೂ ಸಾಮಾಜಿಕ ಸಂಸ್ಥೆಗಳಲ್ಲಿ ಆಚರಿಸುವುದರೊಂದಿಗೆ ಅಭಿಯಾನ ಪ್ರಾರಂಭಗೊಳ್ಳಲಿದೆ.

ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ:  ಈ ಅಭಿಯಾನದ ನಿಮಿತ್ತ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಷಯ: ‘ಸ್ವಾತಂತ್ರö್ಯಸAಗ್ರಾಮದ ಮೇಲೆ ಸ್ವಾಮಿ ವಿವೇಕಾನಂದರ ವಿಚಾರದ ಪ್ರಭಾವ’. Influence of Swami Vivekananda’s Thoughts on Freedom Movement. ಪದವಿ ಯಾ ತತ್ಸಮಾನ, ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಥಮ ಬಹುಮಾನ ರೂ 10,000. ದ್ವಿತೀಯ ಬಹುಮಾನ ರೂ 7500, ತೃತೀಯ ಬಹುಮಾನ ರೂ 5000 ಹಾಗೂ ತಲಾ ರೂ 1000 ದಂತೆ 20 ಸಮಾಧಾನಕರ ಬಹುಮಾನಗಳನ್ನು ಪ್ರಶಸ್ತಿಪತ್ರ ಸಹಿತ ನೀಡಲಾಗುತ್ತದೆ. 2500 ಪದಗಳ ಮಿತಿಯಲ್ಲಿ, ಸ್ವಹಸ್ತಾಕ್ಷರದಲ್ಲಿ ಬರೆದ ಪ್ರಬಂಧಗಳನ್ನು ಜನವರಿ 31, 2022ರ ಒಳಗೆ ಅಂಚೆ ಮೂಲಕ ಕಳುಹಿಸಿಕೊಡಬೇಕು. ವಿಳಾಸ: ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ, ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಂಗಳೂರು 560001. ಮಾಹಿತಿಗಾಗಿ 9483150527

ಆನ್‌ಲೈನ್ ಉಪನ್ಯಾಸ ಸರಣಿ:

ಜನವರಿ 12 ರಿಂದ 26 ತನಕ ಅಭಿಯಾನದ ನಿಮಿತ್ತ ಪ್ರತಿದಿನ ಸಂಜೆ 6.00 ಕ್ಕೆ ಸಮರ್ಥ ಭಾರತ ಫೇಸ್‌ಬುಕ್ www.facebook.com/SamarthaBharata  ಮೂಲಕ ಆನ್‌ಲೈನ್ ಉಪನ್ಯಾಸ ಕರ‍್ಯಕ್ರಮಗಳು ನಡೆಯಲಿದ್ದು ವಿವಿಧ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಶಿಕ್ಷಣ ತಜ್ಞರು, ಚಿಂತಕರು, ಲೇಖಕರು, ಯುವಸಾಧಕರು, ಸಾಮಾಜಿಕ ಕಾರ‍್ಯಕರ್ತರು ಸ್ವಾಮಿ ವಿವೇಕಾನಂದರ ಜೀವನ-ವಿಚಾರಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾವಿರಾರು ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು, ಯುವಉದ್ಯೋಗಿಗಳು ಈ 15 ದಿನಗಳ ಫೇಸ್‌ಬುಕ್ ಲೈವ್ ಉಪನ್ಯಾಸ ಕರ‍್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

ವಾಕಥಾನ್: ಜನವರಿ 26, 2022ರಂದು ಬೆಳಗ್ಗೆ 7.30 ಗಂಟೆಗೆ ಅನೇಕ ಜಿಲ್ಲೆಗಳಲ್ಲಿ ಕೋವಿಡ್ ನಿಯಮಾವಳಿಗನುಸಾರವಾಗಿ ವಾಕಥಾನ್ (ಕಾಲ್ನಡಿಗೆ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ವಾಮಿ ವಿವೇಕಾನಂದರ ಉತ್ತಮನಾಗು-ಉಪಕಾರಿಯಾಗು’ (BE GOOD – DO GOOD) ಎಂಬ ಸಂದೇಶದೊAದಿಗೆ ಯುವಕ-ಯುವತಿಯರು ಹೆಜ್ಜೆಹಾಕಲಿದ್ದಾರೆ. ಸಾಮಾಜಿಕ ಕರ‍್ಯಗಳಲ್ಲಿ ಸಕ್ರಿಯರಾಗಿರುವ ಯುವಸಾಧಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಇದರಿಂದ ಅನೇಕ ಯುವಕ-ಯುವತಿಯರು ತಾವೂ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗುವ ಪ್ರೇರಣೆ ಪಡೆಯುತ್ತಾರೆ.

ಅಭಿಯಾನಕ್ಕೆ ದನಿಗೂಡಿಸಿದ ಗಣ್ಯರು:

ಅನೇಕ ಸಂಘಸAಸ್ಥೆಗಳು, ವಿದ್ಯಾಸಂಸ್ಥೆಗಳು, ಸಾಂಸ್ಕöÈತಿಕ ಸಂಘಗಳು, ಸಮಾಜದ ಅನೇಕ ಕ್ಷೇತ್ರಗಳ ಹೆಸರಾಂತ ಗಣ್ಯರು ಈ ಅಭಿಯಾನಕ್ಕೆ ದನಿಗೂಡಿಸಿದ್ದಾರೆ. ಡಾ|| ಡಿ.ವೀರೇಂದ್ರ ಹೆಗ್ಗಡೆ, ಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀಶ್ರೀ ರವಿಶಂಕರ್ ಗುರೂಜಿ, ಕೇಂದ್ರ ಸಚಿವೆಯರಾದ ನಿರ್ಮಲಾ ಸೀತಾರಾಮನ್, ಸ್ಮöÈತಿ ಇರಾನಿ, ಇಸ್ರೋದ ಡಾ. ಕೆ, ರಾಧಾಕೃಷ್ಣನ್, ಡಾ|| ಮೈಲಸ್ವಾಮಿ ಅಣ್ಣಾದೊರೈ, ಲಕ್ಷಿ÷್ಮ ಗೋಪಾಲಸ್ವಾಮಿ, ಮೇಜರ್ ಭಾವನಾ, ಅಶ್ವಿನಿ ಅಂಗಡಿ, ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್, ಡಾ|| ದೇವಿ ಶೆಟ್ಟಿ, ಮಮತಾ ಪೂಜಾರಿ, ಚಕ್ರವರ್ತಿ ಸೂಲಿಬೆಲೆ, ಅಭಿಮನ್ಯು ಮಿಥುನ್, ಗುರುಕಿರಣ್, ಅರ್ಜುನ್ ದೇವಯ್ಯ ಸೇರಿದಂತೆ ಅನೇಕ ಗಣ್ಯರು, ಶಿಕ್ಷಣತಜ್ಞರು, ಸಾಮಾಜಿಕ ಕಾರ್ಯಕರ್ತರು ಬಿ ಗುಡ್ ಡು ಗುಡ್ ಅಭಿಯಾನಕ್ಕೆ  ಶುಭಹಾರೈಸಿ ಹೆಚ್ಚಿನ ಸಂಖೈಯಲ್ಲಿ ಯುವಕ ಯುವತಿಯರು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆನೀಡಿದ್ದಾರೆ.

        ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9113263342

            ಎಲ್ಲಾ ವಿವರಗಳು www.samarthabharata.org ನಲ್ಲಿ ಲಭ್ಯವಿರುತ್ತದೆ.

************************************************************************************

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮನ್ವಯ ಸಭೆಯ ಕಾರ್ಯಸೂಚಿಗಳು - ಶ್ರೀ ಸುನೀಲ್ ಅಂಬೇಕರ್

Thu Jan 6 , 2022
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಾಜ ಜೀವನದ ವಿಭಿನ್ನ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿರುವ ವಿವಿಧ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳ ಸಮನ್ವಯ ಸಭೆ ಇಂದು ಭಾಗ್ಯನಗರ (ಹೈದರಾಬಾದ್),ತೆಲಂಗಾಣದಲ್ಲಿ ಆರಂಭವಾಗಿದೆ. ಈ ಸಭೆಯು ವರ್ಷದಲ್ಲಿ ಒಂದು ಬಾರಿ ನಡೆಯುವ ಪ್ರಮುಖ ಸಭೆಯಾಗಿದ್ದು ಸರಸಂಘಚಾಲಕರಾದ ಡಾ. ಮೋಹನ್‌ಭಾಗವತ್‌ಜೀ ಮತ್ತು ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರನ್ನೂ ಸೇರದಂತೆ ಎಲ್ಲಾ ಐದು ಸಹ-ಸರಕಾರ್ಯವಾಹರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ.36ವಿಭಿನ್ನ ಸಂಘಟನೆಯ 190ಕ್ಕೂಹೆಚ್ಚು ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. […]