ಸಂಘದ ಶಾಖೆಗಳಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿದೆ – ಶ್ರೀ ಮನಮೋಹನ್ ವೈದ್ಯ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ-ಸರಕಾರ್ಯವಾಹರಾದ ಶ್ರೀ ಮನಮೋಹನ್‌ವೈದ್ಯರವರು ಭಾಗ್ಯನಗರ,ತೆಲಂಗಾಣದಲ್ಲಿ ನಡೆಯುತ್ತಿರುವ ಸಮನ್ವಯ ಸಭೆಯ ಕೊನೆಯ ದಿನವಾದ ಇಂದು ಪತ್ರಿಕಾ ಗೋಷ್ಠಿ ನಡೆಸಿದರು.

* ಸಂಘದಲ್ಲಿ ಸಮನ್ವಯ ಸಭೆಗಳು ಪ್ರತಿ ವರ್ಷ ಎರಡು ಬಾರಿ ನಡೆಯುತ್ತದೆ.ಒಂದು ಸೆಪ್ಟೆಂಬರ್‌ನಲ್ಲಿ ಮತ್ತೊಂದು ಜನವರಿಯಲ್ಲಿ.ಸಂಪೂರ್ಣ ಸಮಾಜವನ್ನು ಸಂಘಟಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಯತ್ನಿಸುತ್ತಿದೆ.ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಸಾಮಾಜಿಕ ಜೀವನದ ವಿವಿಧ ಕ್ಷೇತ್ರದಲ್ಲಿ ರಾಷ್ಟ್ರೀಯ ವಿಚಾರಧಾರೆಯನ್ನು ಮಂಡಿಸುತ್ತಾ ಅಲ್ಲಿನ ಸಮಾಜವನ್ನು ಜಾಗೃತಗೊಳಿಸುವ,ಸಂಘಟಿತಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.

*ಸ್ವಾತಂತ್ರ್ಯ ಬಂದ ನಂತರದಲ್ಲಿ ಈ ನಿಟ್ಟಿನಲ್ಲಿ ಕೆಲಸಗಳು ಹೆಚ್ಚಾಗಿ ವಿದ್ಯಾರ್ಥಿ ಕ್ಷೇತ್ರ,ಸಹಕಾರಿ ಕ್ಷೇತ್ರ,ಆರೋಗ್ಯ,ರೈತ,ಕಾರ್ಮಿಕ ಹೀಗೆ ವಿವಿಧ ಸ್ತರಗಳಲ್ಲಿ 36ಸಂಘಟನೆಗಳು ಕೆಲಸ ನಿರವಹಿಸುತ್ತಿದೆ.ಇವೆಲ್ಲವೂ ಸ್ವಾಯತ್ತ ಸಂಸ್ಥೆಯಾಗಿದ್ದು, ಹೀಗೆ ಸಮಾಜ ಜೀವನದಲ್ಲಿ ಕೆಲಸ ಮಾಡುವಾಗಿನ ಪ್ರಯೋಗಗಳು,ಸಾಧನೆ, ಅನುಭವಗಳನ್ನು ಹಂಚಿಕೊಳ್ಳಲಾಗಿದೆ.

*ಆರೋಗ್ಯ ಕ್ಷೇತ್ರದಲ್ಲಿ  ಕೆಲಸ ಮಾಡುತ್ತಿರುವ ಕಾರ್ಯಕರ್ತರು,ಕೋವಿಡ್‌ನ ಸಮಯದಲ್ಲಿ ಕುಪೋಷಣೆಯ ಸಮಸ್ಯೆಯನ್ನು ಎದುರಿಸುವ ಕುರಿತು ,ಆರ್ಥಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡುವ ಕಾರ್ಯಕರ್ತರು ಉದ್ಯೋಗಾವಕಾಶಗಳನ್ನು ಹೆಚ್ಚು ಮಾಡುವ ಪ್ರಯೋಗಗಳು,ಶಿಕ್ಷಣ ಕ್ಷೇತ್ರದಲ್ಲಿ ಈಗಿರುವ ಹೊಸ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ತರಲು ನಡೆಯುತ್ತಿರುವ ಪ್ರಯೋಗಗಳನ್ನು, ಅನುಭವಗಳನ್ನು ಹಂಚಿಕೊಂಡಿದ್ದಾರೆ.

*ಸ್ವರಾಜ್ಯ @75ರ ಹೊಸ್ತಿಲಿನಲ್ಲಿ ನಿಂತಿರುವಾಗ, ವೈಚಾರಿಕ ಸಂಘಟನೆಗಳು 250 ಅಪರಿಚಿತ ಹೋರಾಟಗಾರನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದು,ಈ ನಿಟ್ಟಿನಲ್ಲಿ ಕಲೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಕಾರ ಭಾರತಿಯು 75ಹೊಸ ನಾಟಕಗಳ ಪ್ರಯೋಗ ನಡೆಸುತ್ತಿದೆ.

* ಕೋವಿಡ್‌ನ ಮೂರನೆಯ ಅಲೆಯ ನಿರೀಕ್ಷೆಯಲ್ಲಿರುವ ಈ ಸಂದರ್ಭದಲ್ಲಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಸಂಘಟನೆಗಳು ಈಗಾಗಲೇ ಅರೆ ವೈದ್ಯಕೀಯ ಶಿಕ್ಷಣವನ್ನು ೧೦ಲಕ್ಷ ಜನರಿಗೆ ನೀಡುವ ಮೂಲಕ ಸ್ವಯಂಸೇವಕರನ್ನು ಸಜ್ಜುಗೊಳಿಸಿದ್ದಾರೆ.

* ಸಂಘದ ದೈನಂದಿನ ಶಾಖೆಗಳು ಕೋವಿಡ್‌ನ ಕಾರಣದಿಂದ ಸ್ಥಗಿತಗೊಂಡಿತ್ತು. ಈಗ ಮತ್ತೆ ಆರಂಭವಾಗಿದ್ದು .2019ಕ್ಕೆ ಹೋಲಿಸಿದರೆ ಸಂಘದ ದೈನಂದಿನ ಶಾಖೆಗಳ ಕಾರ್ಯಚಟುವಟಿಕೆಗಳು ಪ್ರಸಕ್ತ ಶೇ. 93ರಷ್ಟು ಹಾಗೂ ಸಾಪ್ತಾಹಿಕ ಶಾಖೆಗಳ ಚಟುವಟಿಕೆಗಳು ಶೇ. 98ರಷ್ಟು ಪುನರಾರಂಭವಾಗಿವೆ. ಜನ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಶಾಖೆಗಳಿಗೆ ಆಗಮಿಸುತ್ತಿದ್ದಾರೆ. ಜನರಿಗೆ ಆರ್‌ಎಸ್‌ಎಸ್‌ಗೆ ಸೇರ್ಪಡೆಯಾಗುವ ಉತ್ಸುಕತೆಯೂ ಹೆಚ್ಚಿದೆ.

* ಶಾಖೆಗಳ ಮೂಲಕ ಹೊಸದಾಗಿ ಯುವಕರು ಆರ್‌ಎಸ್‌ಎಸ್‌ಗೆ ಸೇರುತ್ತಿದ್ದಾರೆ. ಸಂಘವನ್ನು ಹೇಗೆ ಪರಿಚಯ ಮಾಡಿಕೊಳ್ಳಲು ಆರ್‌ಎಸ್‌ಎಸ್ ವೆಬ್‌ಸೈಟ್‌ನಲ್ಲಿ ನೊಂದಾಯಿಸಿಕೊಳ್ಳುತ್ತಿದ್ದು, 2017-2021ರವರೆಗೆ ಪ್ರತೀ ವರ್ಷ ಸರಾಸರಿ 1ರಿಂದ 1.5ಲಕ್ಷ ಮಂದಿ ಯುವಕರು ಸೇರ್ಪಡೆಯಾಗಿದ್ದಾರೆ. ದೇಶದಲ್ಲಿ 50ಸಾವಿರ ದೈನಂದಿನ ಶಾಖೆಗಳು ದೇಶಾದ್ಯಂತ ನಡೆಯುತ್ತಿದ್ದು, ಇದರಲ್ಲಿ ಶೇ. 60ರಷ್ಟು ಯುವಜನರೇ ಇದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಆರ್ಯ- ದ್ರಾವಿಡವೆಂಬ ಸುಳ್ಳು ರಾಜಕೀಯ ವಾದ!

Sat Jan 8 , 2022
ಆರ್ಯನ್ನರು ಮತ್ತು ದ್ರಾವಿಡರು  ಭಾರತದಲ್ಲಿ ಅರ್ಥೈಸಿಕೊಳ್ಳಲು, ವಿಮರ್ಶೆಗೆ ಒಳಪಡಿಸಲು,ಒರೆಗಚ್ಚಲು ಸಾಕಷ್ಟು ವಿಚಾರಗಳಿವೆ. ಇಂತಹ ವಿಚಾರಗಳ ಅಧ್ಯಯನಕ್ಕಾಗಿ ಭಾರತದಾದ್ಯಂತ ಪಯಣಿಸುತ್ತಿರುವ ನಾನು, ಆರ್ಯನ್ನರು ಮತ್ತು ದ್ರಾವಿಡ ವಿಭಜನೆಗಳ  ಬಗ್ಗೆ  ಅರಿತುಕೊಳ್ಳಲು ದಕ್ಷಿಣ ಭಾರತದಲ್ಲೇ ಹೆಚ್ಚಿನ ಸಮಯ ಕಳೆದಿದ್ದೇನೆ.   ಶುದ್ಧ ದ್ರಾವಿಡ ಸಂಸ್ಕೃತಿಯ ನೆಲೆ ಎಂದು ಕರೆಯಲ್ಪಡುವ ತಮಿಳುನಾಡು ನನ್ನ ಅಧ್ಯಯನಕ್ಕೆ ರೂಪುರೇಶೆ ಒದಗಿಸಿದೆ.  ಇಲ್ಲಿ ಮೊದಲಿಗೆ ಗಮನಿಸಬೇಕಾದ ವಿಚಾರವೆಂದರೆ ಶುದ್ಧ ದ್ರಾವಿಡರ ನೆಲೆ ಎನ್ನುವ ತಮಿಳುನಾಡಿನಲ್ಲೂ ಬಹುತೇಕ ಹೆಸರುಗಳು  ಶುದ್ಧ ಸಂಸ್ಕೃತದ್ದೇ […]