50 ವರ್ಷಗಳ ನಂತರ ಮತ್ತೆ ಹಿಂದೂಗಳಾದ ಹೊಸಮನಿ ಕುಟುಂಬ!

ಯಾದಗಿರಿ ತಾಲೂಕಿನಲ್ಲಿ 50ವರ್ಷದ ಹಿಂದೆ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿದ್ದ ಟಿಮೋತಿ ಹೊಸಮನಿ ಮತ್ತೆ ಹಿಂದೂಗಳಾಗಿದ್ದಾರೆ.
 ಗುರ್ಮಿಟ್ಕಲ್ ತಾಲೂಕಿನ ಕನಿಕಲ್ ಗ್ರಾಮದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ 55 ವರ್ಷದ ಟಿಮೋತಿಯವರು 5ದಶಕಗಳ ಹಿಂದೆ ತಮ್ಮ ತಂದೆ ತಾಯಿಯರ ಕಾರಣದಿಂದ ಮತಾಂತರಗೊಂಡಿದ್ದು ಈಗ ವಾಪಾಸ್ ಮಾತೃಧರ್ಮಕ್ಕೆ ಮರಳುವ ಮನಸ್ಸಾಗಿದೆ ಎಂದಿದ್ದಾರೆ.
ತಮ್ಮ ತಂದೆ ತಾಯಿಗಳು ಮಾತೃ ಧರ್ಮಕ್ಕೆ ಮತ್ತೆ ಮರಳಿ ಬರಲು ವಿರೋಧಿಸಿದ್ದರಿಂದ ಅವರ ಮರಣಾ ನಂತರ ಘರ್‌ವಾಪಸಿಯಾಗಲು ನಿರ್ಧರಿಸಿದ್ದು, ಯಾವ ಕಾರಣಕ್ಕೆ ಮತಾಂತರಗೊಂಡಿದ್ದರು ಎಂಬುದು ತಿಳಿದಿಲ್ಲವೆಂದು ಆದರೆ ತಮ್ಮ ಮಕ್ಕಳು ಹಿಂದೂಗಳಾಗಿ ಬಾಳಲು ಇಚ್ಚಿಸಿದ್ದಾರೆ ಎಂದಿದ್ದಾರೆ ಟಿಮೋತಿ.

ಈ ಹಿಂದೆ ಪರಿಶಿಷ್ಟ ಜಾತಿಗೆ ಸೇರಿದ್ದೆವೆಂದು ಹೇಳಿದ್ದಾರೆ.ಟಿಮೋತಿಯವರ ಹಿರಿಯ ಪುತ್ರ ಬೆಂಗಳೂರಿನಲ್ಲಿ ಕೂಲಿ ಮಾಡುತ್ತಿದ್ದು ಇನ್ನಿಬ್ಬರು ಸದ್ಯ ವ್ಯಾಸಂಗನಿರತರಾಗಿದ್ದಾರೆ.ಸರಳವಾದ ಸಮಾರಂಭದಲ್ಲಿ ಜನ್ನಾಪುರದ ರಾಮಭಜನಾಮಂದಿರದಲ್ಲಿ ಟಿಮೋತಿ ಹೊಸಮನಿ ತಮ್ಮ ಪತ್ನಿ ಹಾಗು ಪುತ್ರರ ಸಮೇತ ಘರ್‌ವಾಪಸಿಯಾಗುತ್ತಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಭಾರತ ಮಾತೆಯ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರು

Wed Jan 12 , 2022
ಭರತ ಖಂಡವನ್ನು ಅರಿಯ ಬೇಕಾದರೆ ಸ್ವಾಮಿ ವಿವೇಕಾನಂದರನ್ನು ಅರಿತರೆ ಸಾಕು ಅವರೇ ಸಂಕ್ಷಿಪ್ತ ಭರತ ಖಂಡ… ಎಂಬ ಮಾತೇ ಭಾರತಕ್ಕೂ ವಿವೇಕಾನಂದರಿಗೂ ನಡುವೆ ಇರುವ ಉತ್ಕೃಷ್ಟ ಸಂಬಂಧದ ಶ್ರೇಷ್ಠತೆಯನ್ನು ಸೂಚಿಸುತ್ತದೆ. ಅಧಃಪತನದತ್ತ ಸಾಗುತ್ತಿರುವ ಭರತಖಂಡದ ವೈಭೋಗವನ್ನು ಮರುಳಿಸಲು ತಮ್ಮ ಆಧ್ಯಾತ್ಮ ಚಿಂತನೆಯಿಂದ ಸಾಫಲ್ಯ ಗೊಳಿಸಿದ ಧೀಮಂತರು.ಈ ನಿಟ್ಟಿನಲ್ಲಿ ಅವರ ಪರಿಶ್ರಮ ಕೊಡುಗೆ ಅಪಾರ. ಪಥನದಿಂದ ಅಭ್ಯುದಯದ ಕಡೆಗೆ ಪ್ರಯಾಣ ಮಾಡುತ್ತಿರುವ ಭರತಖಂಡದ ರಥವನ್ನು ಎತ್ತಿ ಹಿಡಿದು,ಜಗದ ನಿಕೃಷ್ಟ ದೃಷ್ಟಿಗೆ ಪಾತ್ರವಾದ […]