• Samvada
  • Videos
  • Categories
  • Events
  • About Us
  • Contact Us
Wednesday, June 7, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಅ.ಭಾ.ಕಾ.ಮ. ನಿರ್ಣಯ: ಬಾಂಗ್ಲಾದೇಶದ ಹಿಂದುಗಳ ಮೇಲೆ ಇಸ್ಲಾಂ ಮೂಲಭೂತವಾದಿಗಳಿಂದ ನಡೆದ ಹಿಂಸೆಯ ಖಂಡನೆ

Vishwa Samvada Kendra by Vishwa Samvada Kendra
October 29, 2021
in Articles, News Digest, Others
250
0
ಅ.ಭಾ.ಕಾ.ಮ. ನಿರ್ಣಯ: ಬಾಂಗ್ಲಾದೇಶದ ಹಿಂದುಗಳ ಮೇಲೆ ಇಸ್ಲಾಂ ಮೂಲಭೂತವಾದಿಗಳಿಂದ ನಡೆದ ಹಿಂಸೆಯ ಖಂಡನೆ
491
SHARES
1.4k
VIEWS
Share on FacebookShare on Twitter

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯು ಬಾಂಗ್ಲಾದೇಶದ ಹಿಂದುಗಳ ಮೇಲೆ ಇಸ್ಲಾಂ ಮೂಲಭೂತವಾದಿಗಳಿಂದ ನಡೆದ ಹಿಂಸೆಯನ್ನು ಖಂಡಿಸುತ್ತದೆ.

ಅಭಾಕಾಮ ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆದ ಹಿಂಸೆಯನ್ನು ಬಲವಾಗಿ ಖಂಡಿಸುತ್ತದೆ. ಬಾಂಗ್ಲಾದೇಶವನ್ನು ಮತ್ತಷ್ಟು ಇಸ್ಲಾಮೀಕರಣಗೊಳಿಸಬೇಕು ಎಂಬ ಹುನ್ನಾರದಿಂದ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಮುಂದುವರಿಯುತ್ತಿರುವ ಬರ್ಬರತೆಯನ್ನು ಸಭೆಯು ಖಂಡಿಸುತ್ತದೆ.


ಹಿಂದುಗಳು ಮತ್ತು ಹಿಂದೂ ದೇವಸ್ಥಾನಗಳ ಮೇಲಿನ ಆಕ್ರಮಣವು ಬಾಂಗ್ಲಾದೇಶದಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ಇತ್ತೀಚಿಗೆ ದುರ್ಗಾ ಪೂಜೆಯ ಸಂದರ್ಭದಲ್ಲಿ ಸ್ಫೋಟಗೊಂಡ ಕೋಮು ಹಿಂಸಾಚಾರದಲ್ಲಿ ನೂರಾರು ಹಿಂದುಗಳು ಬಲಿಯಾಗಿ, ಹಲವರು ಗಾಯಗೊಂಡು ಸಾವಿರಾರು ಕುಟುಂಬಗಳು ನೆಲೆಯಿಲ್ಲದೆ ವಿಸ್ಥಾಪಿತಗೊಂಡಿವೇ. ಹಿಂದು ಸಮಾಜದ ಹಲವು ಹೆಣ್ಣು ಮಕ್ಕಳು, ಮಹಿಳೆಯರು ಹಲ್ಲೆಗೆ ಒಳಗಾಗಿದ್ದಾರೆ ಮತ್ತು ದುರ್ಗಾ ಪೂಜೆಯ ಸ್ಥಳ ಮತ್ತು ದೇವಸ್ಥಾನಗಳನ್ನು ಕಳೆದ ಎರಡು ವಾರಗಳಲ್ಲಿ ಛಿದ್ರಗೊಳಿಸಲಾಗಿದೆ.

ಈ ಕೃತ್ಯದಲ್ಲಿ ಭಾಗಿಗಳಾಗಿದ್ದರು ಎನ್ನಲಾದವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಹಿಂಸಾಕೃತ್ಯಗಳು ಇಸ್ಲಾಂ ಮೂಲಭೂತವಾದಿಗಳ ಯೋಜಿತ ಕಾರ್ಯಾಚರಣೆ ಎಂಬುದು ಬೆಳಕಿಗೆ ಬಂದಿದೆ.

ಈ ಹಲ್ಲೆಗಳು, ಭಾರತದ ವಿಭಜನೆಯ ನಂತರ ತೀವ್ರವಾಗಿ ಇಳಿಮುಖ ಕಾಣುತ್ತಿರುವ ಅಲ್ಪಸಂಖ್ಯಾತ ಹಿಂದೂ ಸಮಾಜವನ್ನೇ ಗುರಿಯಾಗಿಸಿಕೊಂಡು ಹಿಂದುಗಳನ್ನು ಬೇರುಸಹಿತ ಕಿತ್ತೊಗೆಯಬೇಕು ಎಂಬ ಉದ್ದೇಶದಿಂದ ನಡೆಯುತ್ತಿರುವ ಸುವ್ಯವಸ್ಥಿತ ಕೃತ್ಯವಾಗಿದೆ.

ವಿಭಜನೆಯ ಸಮಯದಲ್ಲಿ ಪೂರ್ವ ಬಂಗಾಳದಲ್ಲಿ ಹಿಂದುಗಳ ಜನಸಂಖ್ಯೆ 28% ಇದ್ದು ಈಗ ಅದು 8% ಕ್ಕೆ ಕುಸಿದಿದೆ. ಜಮಾತ್ – ಇ – ಇಸ್ಲಾಮೀ (ಬಾಂಗ್ಲಾದೇಶ) ಯಂತಹ ಮೂಲಭೂತವಾದಿ ಗುಂಪುಗಳ ಹಿಂಸಾಕೃತ್ಯವು ವಿಭಜನೆಯ ನಂತರ, ವಿಶೇಷವಾಗಿ 1971 ರ ಯುದ್ಧದ ನಂತರ ಭಾರಿ ಪ್ರಮಾಣದಲ್ಲಿ ಹಿಂದುಗಳನ್ನು ಭಾರತಕ್ಕೆ ವಲಸೆ ಹೋಗುವಂತೆ ಮಾಡಿದೆ. ಈ ಗುಂಪುಗಳು ಇಂದಿಗೂ ಬಾಂಗ್ಲಾದೇಶದಲ್ಲಿ ಕೋಮು ಭಾವನೆಯನ್ನು ಪ್ರಚೋದಿಸುವುದರ ಮೂಲಕ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮನಸ್ಸಿನಲ್ಲಿ ಅಭದ್ರತೆಯನ್ನು ನಿರ್ಮಿಸಿವೆ.

ಅಭಾಕಾಮಂ’ಯು ಬಾಂಗ್ಲಾದೇಶದ ಸರ್ಕಾರವು ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸೆಯನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಡುತ್ತದೆ. ಹಿಂದೂ ವಿರೋಧಿ ಕೃತ್ಯವನ್ನು ಎಸಗಿದವರಿಗೆ ಅಲ್ಲಿನ ಸರ್ಕಾರವು ಕಠೋರ ಶಿಕ್ಷೆಯನ್ನು ವಿಧಿಸುವುದರ ಮೂಲಕ ಅಲ್ಪಸಂಖ್ಯಾತ ಹಿಂದುಗಳು ಸುರಕ್ಷಿತವಾಗಿ, ಗೌರವಪೂರ್ವಕವಾಗಿ ಮತ್ತು ಸಕಲ ಹಕ್ಕುಗಳನ್ನು ಬಳಸಿಕೊಂಡು ಬದುಕು ನಡೆಸುವುದಕ್ಕೆ ಅವಕಾಶ ಮಾಡಿಕೊಡಬೇಕು.

ಅಭಾಕಾಮ ಸ್ವಘೋಷಿತ ಮಾನವ ಹಕ್ಕುಗಳ ಕಾವಲುಪಡೆಯ ಮತ್ತು ವಿಶ್ವಸಂಸ್ಥೆಗೆ ಸಂಲಗ್ನವಾಗಿರುವ ಇತರ ಸಂಸ್ಥೆಗಳ ಕಿವಿಗಡಚಿಕ್ಕುವ ಮೌನವನ್ನು ಅಣಕಿಸುತ್ತದೆ. ಜಾಗತಿಕ ಸಮುದಾಯವು ಸ್ವಪ್ರೇರಿತವಾಗಿ ಮುಂದೆ ಬಂದು ಬಾಂಗ್ಲಾದೇಶದ ಹಿಂದೂ, ಬೌದ್ಧ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲಾಗುತ್ತಿರುವ ಹಿಂಸೆಯನ್ನು ಖಂಡಿಸಬೇಕೆಂದು ಸಭೆಯು ಆಹ್ವಾನ ನೀಡುತ್ತದೆ. ಇಸ್ಲಾಂ ಮೂಲಭೂತವಾದದ ಬೆಳವಣಿಗೆಯು ಬಾಂಗ್ಲಾದೇಶವಾಗಿರಲಿ ಅಥವಾ ಇನ್ನಾವುದೇ ಶಾಂತಿಪ್ರಿಯ ದೇಶವಾಗಿರಲಿ ಅಲ್ಲಿನ ಮಾನವ ಹಕ್ಕುಗಳಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ‌ ಎಂಬುದನ್ನು ಸಭೆಯು ಎಚ್ಚರಿಸುತ್ತದೆ.

ಲಭ್ಯವಿರುವ ಸರ್ವ ರೀತಿಯ ರಾಜತಾಂತ್ರಿಕ ಅವಕಾಶಗಳನ್ನು ಬಳಸಿಕೊಂಡು ಪ್ರಪಂಚದ ಹಿಂದೂ ಸಮಾಜ ಮತ್ತು ಸಂಘಟನೆಗಳ ಕಾಳಜಿಯನ್ನು ಬಾಂಗ್ಲಾದೇಶದ ಸರ್ಕಾರಕ್ಕೆ ಮನನ ಮಾಡಿಸಿ ಅಲ್ಲಿನ ಹಿಂದೂ ಮತ್ತು ಬೌದ್ಧ ಸಮಾಜದ ಸುರಕ್ಷತೆಯನ್ನು ಕಾಪಾಡಲು ಮುಂದಾಗಬೇಕು ಎಂದು ಭಾರತ‌ ಸರ್ಕಾರವನ್ನು ಕಾರ್ಯಕಾರಿ ಮಂಡಳಿಯು ಆಗ್ರಹಿಸುತ್ತದೆ.

ಹಿಂದೂ ಸಂಘಟನೆಗಳು ಮತ್ತು ಸಂಸ್ಥೆಗಳಾದ ಇಸ್ಕಾನ್, ರಾಮಕೃಷ್ಣ ಮಿಷನ್, ಭಾರತ‌ ಸೇವಾಶ್ರಮ ಸಂಘ, ವಿಶ್ವ ಹಿಂದೂ ಪರಿಷತ್ ಮತ್ತು ಉಳಿದೆಲ್ಲರೂ ಇಸ್ಲಾಂ ಮೂಲಭೂತವಾದದ ಹಿಂಸೆಗೆ ಬಲಿಯಾದವರ ಪರವಾಗಿ ನಿಂತದ್ದನ್ನು ಸಭೆಯು ಅನುಮೋದಿಸುತ್ತದೆ.


ಇಂತಹ ಕಠಿಣ ಸವಾಲಿನ ಸನ್ನಿವೇಶದಲ್ಲಿ ಆರೆಸ್ಸೆಸ್ ಸಂಪೂರ್ಣ ಹಿಂದೂ ಸಮಾಜದ ಜೊತೆ ಬಾಂಗ್ಲಾದೇಶದಲ್ಲಿ ಪೀಡಿತರಾಗಿರುವ ಹಿಂದುಗಳು ಮತ್ತು ಉಳಿದ ಅಲ್ಪಸಂಖ್ಯಾತ ಸಮಾಜದ ಬೆಂಬಲಕ್ಕಿದೆ ಎಂಬುದನ್ನು ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯು ದೃಢೀಕರಿಸುತ್ತದೆ.

ಆರೆಸ್ಸೆಸ್ ನ ಸಹಸರಕಾರ್ಯವಾಹರಾದ ಶ್ರೀ ಅರುಣ್ ಕುಮಾರ್ ಹಾಗೂ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಸುನಿಲ್ ಅಂಬೇಕರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು
  • email
  • facebook
  • twitter
  • google+
  • WhatsApp
Tags: ABKM 2021RSS ABKM resolution

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
Next Post
ಅ.ಭಾ.ಕಾ.ಮ. ನಿರ್ಣಯ: ಬಾಂಗ್ಲಾದೇಶದ ಹಿಂದುಗಳ ಮೇಲೆ ಇಸ್ಲಾಂ ಮೂಲಭೂತವಾದಿಗಳಿಂದ ನಡೆದ ಹಿಂಸೆಯ ಖಂಡನೆ

RSS ABKM condemns radical Islamist attacks on Hindus in Bangladesh

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

April 14, 2021
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015

ಒಂದು ಪಠ್ಯ – ಹಲವು ಪಾಠ

May 27, 2022
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011

EDITOR'S PICK

“Passing away of activists like Bal Apte leaves a vacuum”: RSS Chief Mohan Bhagwat

“Passing away of activists like Bal Apte leaves a vacuum”: RSS Chief Mohan Bhagwat

July 30, 2012
RSS leaders Mangesh, Mukund attends Onam Celebrations at Karavali College, Mangalore

RSS leaders Mangesh, Mukund attends Onam Celebrations at Karavali College, Mangalore

August 25, 2019
RSS 3-day ABKM Meet Concludes at Kochi; RSS condemns Patna Serial Bomb Blast

RSS 3-day ABKM Meet Concludes at Kochi; RSS condemns Patna Serial Bomb Blast

August 25, 2019
VHP protests against increasing atrocities on Hindus in Pak-Bangla पाक-बंग्लादेश में हिन्दुओं के उत्पीडन के विरुद्ध VHP का प्रदर्शन

VHP protests against increasing atrocities on Hindus in Pak-Bangla पाक-बंग्लादेश में हिन्दुओं के उत्पीडन के विरुद्ध VHP का प्रदर्शन

January 11, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In