• Samvada
  • Videos
  • Categories
  • Events
  • About Us
  • Contact Us
Sunday, January 29, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Photo

65,000 students participated in ABVP’s protest rally against State Govt in Bengaluru-Hubballi

Vishwa Samvada Kendra by Vishwa Samvada Kendra
October 7, 2015
in News Photo
243
0
65,000 students participated in ABVP’s protest rally against State Govt in Bengaluru-Hubballi
491
SHARES
1.4k
VIEWS
Share on FacebookShare on Twitter

ABVP Maharally Bangalore 1 (1)

Bengaluru and Hubballi October 6: More than 65,000 students participated in a mega rally organised by ABVP to protest against Karnataka state govt for its alleged anti-farmer and anti-student education policies on Tuesday. The mega protest rally was held at Bengaluru and Hubballi cities, was named Transforming Education (ಶಿಕ್ಷಣ ಪರಿವರ್ತನೆ), which gained massive support in both the places. ABVP’s national general secretary Srihari Borikar addressed the protest rally in Bengaluru in which nearly 40,000 students participated.

READ ALSO

ಮೋಹಿನಿ ಅಟ್ಟಂ ನೃತ್ಯಕ್ಕೆ ತಡೆ ಒಡ್ಡಿದ ಕೇರಳದ ಜಸ್ಟೀಸ್ ಕಲಮ್ ಪಾಶಾ

ಗದಗಿನಲ್ಲಿ ಲವ್ ಜಿಹಾದ್ : ಮೋಸ ಹೋದ ಎಂಬಿಎ ಪದವೀಧರೆ

CQp069mU8AA1vUW

ABVP Maharally Bangalore 1 (14)

65 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಬೃಹತ್ ವಿದ್ಯಾರ್ಥಿಶಕ್ತಿ ಪ್ರದರ್ಶನ :
ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ, ರೈತ ವಿರೋಧಿ ನೀತಿಗೆ ಆಕ್ರೋಶ
ನಿದ್ರಿಸುತ್ತಿರುವ ಸಿಎಂ ಸಿದ್ರಾಮಯ್ಯ ಇನ್ನಾದರೂ ಎಚ್ಚರಗೊಳ್ಳಲಿ : ಶ್ರೀಹರಿ ಬೋರಿಕರ ಆಗ್ರಹ

ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರವು ವಿದ್ಯಾರ್ಥಿ ವಿರೋಧಿ ನೀತಿ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ ನಿದ್ರಿಸುತ್ತಿರುವ ಸಿದ್ದರಾಮಯ್ಯ ಇನ್ನಾದರೂ ಎಚ್ಚರಗೊಳ್ಳಲಿ ಎಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಭೋರಿಕರ ಆಕ್ರೋಶ ವ್ಯಕ್ತಪಡಿಸಿದರು.

ABVP Maharally Bangalore 1 (4)
ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಎಬಿವಿಪಿ ವತಿಯಿಂದ ಆಯೋಜಿಸಿದ್ದ ’ಶಿಕ್ಷಣ ಪರಿವರ್ತನೆಗೆ ಬೃಹತ್ ರ‍್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿಂದು ಎಲ್.ಕೆ.ಜಿ ಯಿಂದ ಪಿಜಿ ವರೆಗೆ ಡೋನೇಶನ್ ಹಾವಳಿ ಎಗ್ಗಿಲ್ಲದೇ ನಡೆಯುತ್ತಿದೆ, ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ, ರಾಜ್ಯದ ಹಾಸ್ಟೆಲ್‌ಗಳ ಸ್ಥತಿಯಂತೂ ಅತ್ಯಂತ ಧಯಾನೀಯ ಸ್ಥಿತಿಯಲ್ಲಿದೆ. ಅಪರಾಧ ಪ್ರಕರಣಗಳಿಂದ ಬಂಧಿಯಾಗಿರುವ ಖೈದಿಗೆ ಇಂದು ಸರ್ಕಾರ ಮಾಸಿಕವಾಗಿ ೨೩೦೦ ರೂ, ಖರ್ಚು ಮಾಡುತ್ತಿವೆ ಆದರೆ ಹಾಸ್ಟೆಲ್ ವಿದ್ಯಾರ್ಥಿಗೆ ಕೇವಲ ೧೨೦೦ ಮಾತ್ರ ಖರ್ಚು ಮಾಡಿ ಖೈದಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಿವೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಂಬಿಎ, ಮೆಡಿಕಲ್-ಇಂಜಿನಿಯರಿಂಗ್ ಸೇರಿದಂತೆ ಇತರೆ ವೃತ್ತಿಶಿಕ್ಷಣವಂತೂ ಗಗನಕುಸುಮವಾಗಿ ಶಿಕ್ಷಣ ದೊರಕುತ್ತಿಲ್ಲ, ಒಬಿಸಿ ಮತ್ತು ಎಸ್.ಸಿ/ಎಸ್.ಟಿ ವಿದ್ಯಾರ್ಥಿ ವೇತನದಲ್ಲಿ ಸಮಸ್ಯೆ ಹೀಗೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶೈಕ್ಷಣಿಕ ವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿದೆ, ಕಳೆದ ಎರಡು ತಿಂಗಳಾದರೂ ಇನ್ನುವರೆಗೂ ಉನ್ನತ ಶಿಕ್ಷಣ ಇಲಾಖೆಗೆ ಸಚಿವರಿಲ್ಲದೇ ಇಲಾಖೆಯ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ರಾಜ್ಯ ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ಇಂದು ೫೧೬ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಸರ್ಕಾರ ಎಚ್ಚೆತ್ತಿಲ್ಲ, ಸಾಹಿತಿ ಎಂ ಎಂ ಕಲ್ಬುರ್ಗಿ ಹತ್ಯೆಯಾಗಿ ತಿಂಗಳಾದರೂ ಇನ್ನು ಆರೋಪಿಗಳನ್ನು ಬಂಧಿಸಿಲ್ಲ, ರಾಜ್ಯದಲ್ಲಿ ಮಹಿಳೆಯರ, ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ ಅಲ್ಲದೇ ನಿನ್ನೆ ಬೆಂಗಳೂರಿನಲ್ಲಿ ಮತ್ತೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದ್ದು ಖಂಡನೀಯ, ಈ ಎಲ್ಲ ಘಟನೆಗಳನ್ನು ಗಮನಿಸಿದರೆ ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆಯಂತೂ ನಿಷ್ಕ್ರೀಯಗೊಂಡು ಆಡಳಿತವಂತೂ ಸಂಪೂರ್ಣವಾಗಿ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾರ್ಯದರ್ಶಿ ಸುನೀಲ್‌ಕುಮಾರ್ ಮಾತನಾಡಿ ಈ ರಾಜ್ಯ ಸರ್ಕಾರಕ್ಕೆ ಶಿಕ್ಷಣದ ಬಗ್ಗೆ ಕಾಳಜಿಯಿಲ್ಲ, ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ. ಇಂದು ರಾಜ್ಯದಲ್ಲಿ ಬರಗಾಲದಿಂದ ಜನರು, ಜಾನುವಾರುಗಳು ತತ್ತರಿಸಿ ಕುಡಿಯುವ ನೀರಿಗೂ ಹಾಹಾಕಾರವಿದೆ, ಪ್ರತಿನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಸರ್ಕಾರ ರೈತರ ನೆರವಿಗೆ ಧಾವಿಸದೇ, ಬರ ಕಾಮಗಾರಿ ನಡೆಸಿ ಪರಿಹಾರ ನೀಡುವುದನ್ನು ಬಿಟ್ಟು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ಅಧಿಕಾರಿಗಳು ಇಂದು ತಮ್ಮ ವಸತಿಗೃಹಗಳನ್ನು ರಿಪೇರಿ ಮಾಡಲು ನಿರತರಾಗಿ, ಭೊಕ್ಕಸದ ಕೋಟ್ಯಾಂತರ ರೂ.ಖರ್ಚು ಮಾಡುತ್ತಿದ್ದಾರೆ, ಇನ್ನೊಂದೆಡೆ ತಾಜಾ ನಿದರ್ಶನವೆಂದರೆ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಸೋಪಿನ ಬಾಕ್ಸ್ ಮತ್ತು ಏರ್‌ಪ್ರೇಷನರ್ ಖರೀದಿಗೆ ಲಕ್ಷಾಂತರ ರೂ. ಖರ್ಚು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಇದನ್ನು ಗಮನಿಸಿದರೆ ರಾಜ್ಯದ ಸಚಿವರು, ಮುಖ್ಯಮಂತ್ರಿಗಳಿಗೆ, ಅಧಿಕಾರಿ ವರ್ಗಕ್ಕೆ ರಾಜ್ಯದ ಜನರ ಅಭಿವೃದ್ಧಿ ಬೇಕಾಗಿಲ್ಲವಾಗಿರುವುದು ಸ್ಪಷ್ಟವಾಗುತ್ತದೆ, ಇಂದು ರಾಜ್ಯದಲ್ಲಿ ಭ್ರಷ್ಟರ ವಿರುದ್ಧ ಧ್ವನಿಯೆತ್ತಿದ್ದ ಪ್ರಾಮಾಣಿಕ ಅಧಿಕಾರಿಗಳ ನಿಗೂಡ ಸಾವು, ವಿದ್ಯಾರ್ಥಿ ಯಲ್ಲಾಲಿಂಗ ಪ್ರಕರಣಗಳು ಸೇರಿದಂತೆ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು, ರಾಜ್ಯದಲ್ಲಿ ಈಗಾಗಲೇ ವಿದ್ಯುತ್ ಸಮಸ್ಯೆ, ಭ್ರಷ್ಟ ಅಧಿಕಾರಿಗಳ ತಾಂಡವಾಡುತ್ತಿದೆ. ಅಲ್ಲದೇ ಇಂದು ಕೆಪಿಎಸ್ಸಿ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಬಹಿರಂಗವಾಗುತ್ತಿವೆ, ದೂರಶಿಕ್ಷಣ ಕೇಂದ್ರದ ಸಮಸ್ಯೆಗಳಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತಂದಿದೆ.

ರಾಜ್ಯದಲ್ಲಿ ಒಂದಂಕಿ ಲಾಟರಿ ಹಗರಣಗಳು ನಡೆಯುತ್ತಿವೆ, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಅಕ್ರಮವಾಗಿ ನೇಮಕಾತಿ, ಬೆಂಗಳೂರು ವಿವಿ, ಗುಲ್ಬರ್ಗಾ ವಿವಿ, ಧಾರವಾಡ ವಿವಿ, ಬೆಳಗಾವಿ ವಿವಿ, ಮೈಸೂರು ವಿವಿ ಹಾಗೂ ವಿಟಿಯು ಸೇರಿದಂತೆ ಹಲವು ವಿವಿಗಳಲ್ಲಿನ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದರು.
ರಾಜ್ಯ ಸಹ ಕಾರ್ಯದರ್ಶಿ ಪವನ್ ಮಾತನಾಡಿ ರಾಜ್ಯದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಹುತೇಕ ಭಾಗಗಳಲ್ಲಿ ಕುಡಿಯುವ ನೀರಿಗೆ ಅತ್ಯಂತ ಗಂಭೀರವಾದ ಸಮಸ್ಯೆಯಿದೆ. ಅಲ್ಲದೇ ರಾಯಚೂರು, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶ ಇರುವುದರಿಂದ ಜನ ಜೀವನದ ಮೇಲೆ ಹಾಗೂ ಹುಟ್ಟುವ ಮಕ್ಕಳ ಆರೋಗ್ಯದ ಸಮಸ್ಯೆಯಾಗುತ್ತಿದೆ. ದಶಕಗಳಿಂದ ಹಲವು ಹೋರಾಟ ನಡೆದರು ಇವರೆಗೂ ಯಾವುದೇ ಸರ್ಕಾರಗಳು ಸ್ಪಂದಿಸದೇ ಇರುವುದು ಖಂಡನೀಯ. ಕುಡಿಯುವ ನೀರಿಗಾಗಿ ಇನ್ನೇಷ್ಟೂ ಹೋರಾಟಗಳು? ಇನ್ನೇಷ್ಟು ರೈತರು ಬಲಿಯಾಗಬೇಕು? ಪ್ರಾಣಿ ಪಕ್ಷಿಗಳು ಬಲಿಯಾಗಬೇಕು? ಸರ್ಕಾರಗಳು ಇನ್ನಾದರೂ ಕಣ್ಣು ತೆರೆಯಬೇಕು. ಮಾನವಿಯ ನೆಲೆಯಲ್ಲಿ ಶಾಶ್ವತವಾಗಿ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಸರ್ಕಾರ ಪ್ರಥಮ ಆದ್ಯತೆಯನ್ನು ನೀಡಿ ಜಾರಿಗೆ ತರಬೇಕೆಂದು ಆಗ್ರಹಿಸುತ್ತದೆ. ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ವಿದ್ಯುತ್ ಅಭಾವ ತಲೆದೂರಿದ್ದು, ಪ್ರತಿನಿತ್ಯ ಅನಿಯಮಿತವಾಗಿ ಲೋಡ್ ಶೆಡ್ಡಿಂಗ್ ಮೂಲಕ ವಿದ್ಯುತ್ ಕಡಿತವಾಗುತ್ತಿದೆ. ಲೋಡ್ ಶೆಡ್ಡಿಂಗ್‌ನಿಂದ ವಿದ್ಯಾರ್ಥಿಗಳು, ರೈತರು, ಕೈಗಾರಿಕೆಗಳಿಗೆ ಸಮಸ್ಯೆಗಳು ಹೆಚ್ಚಾಗಿ ಪರಿತಪಿಸುವಂತಾಗಿದೆ ವಿದ್ಯಾರ್ಥಿಗ ಪರಿಕ್ಷೆ ತಯಾರಿಗೆ ಸಮಸ್ಯೆ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ, ಹೊಸ ಕೈಗಾರಿಕೆಗಳು ಸ್ಥಾಪನೆ ಅವಕಾಶ ರಾಜ್ಯಕ್ಕೆ ಕೈತಪ್ಪುತ್ತಿರೂವುದು ರಾಜ್ಯದಲ್ಲಿ ಉದ್ಯೋಗ ಸೃಷ್ಠಿ ಹಾಗೂ ರಾಜ್ಯದ ಆರ್ಥಿಕ ವ್ಯವಸ್ಥೆಯ ಮೇಲೆ ತೀವ್ರವಾದ ದುಷ್ಠಪರಿಣಾಮವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಕು.ಚೈತ್ರಾ ಮಾತನಾಡಿ ರಾಜ್ಯದಲ್ಲಿ ದಿನನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ ರಾಜ್ಯ ಸರ್ಕಾರ ಮಾತ್ರ ಕೈಕಟ್ಟಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯೆ ಕು.ತನ್ಮಯಿ ಮಾತನಾಡಿ ಇಂದು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತು ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು. ರ‍್ಯಾಲಿಯಲ್ಲಿ ಎಬಿವಿಪಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ರಾಮಮೋಹನ್, ರ‍್ಯಾಲಿ ಸಂಚಾಲಕ ಹರ್ಷನಾರಾಯಣ, ರಾಜ್ಯ ಸಹ ಕಾರ್ಯದರ್ಶಿ ಅಮರೇಶ ಮಾತನಾಡಿದರು. ರ‍್ಯಾಲಿಯು ಮಲ್ಲೇಶ್ವರಂ, ಮೆಜೆಸ್ಟಿಕ್, ಲಾಲಭಾಗನಿಂದ ಆಗಮಿಸಿ ಸೆಂಟ್ರಲ್ ಕಾಲೇಜು ಆವರಣದಲ್ಲಿ ಸಾರ್ವಜನಿಕ ಸಭೆ ನಡೆಯಿತು.

ಮಹಾರ‍್ಯಾಲಿಯ ಪ್ರಮುಖ ಬೇಡಿಕೆಗಳು:-

1. ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರ ಖಾಯಂ ನೇಮಕಾತಿಯಾಗಬೇಕು.
2. ಸಿ.ಇ.ಟಿ -2006 ಕಾಯ್ದೆಯ ಪುನರ್ ಪರಿಶೀಲನೆಯಾಗಬೇಕು. ಬಡ, ಪ್ರತಿಭಾವಂತ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಪರವಾದ ನಿಯಮ ಜಾರಿಗೆ ತರಬೇಕು.
3. ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಪ್ರಮಾಣವನ್ನು ಹೆಚ್ಚಳಗೊಳಿಸಬೇಕು.
4. ಎ.ಸ್ಸಿ/ಎಸ್.ಟಿ/ಒ.ಬಿ.ಸಿ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡಗಳಾಗಬೇಕು. ಆಹಾರ ಭತ್ಯೆಯನ್ನು ಕೂಡಲೇ ಹೆಚ್ಚಿಸಬೇಕು. ಎಸ್ಸಿ/ಎಸ್.ಟಿ ವಿದ್ಯಾರ್ಥಿಗಳ ಬಾಕಿ ಇರುವ ವಿದ್ಯಾರ್ಥಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು.
5. ರಾಜ್ಯವನ್ನು ತಲ್ಲಣಗೊಳಿಸಿರುವ ಸಾಹಿತಿ ಎಂ.ಎಂ.ಕಲ್ಬುರ್ಗಿ, ಕು.ಸೌಜನ್ಯ, ಕು.ರತ್ನಾ ಕೊಟ್ಟಾರಿ, ಕು. ಅಕ್ಷತಾ ದೇವಾಡಿಗ, ಕು ನಂದಿತಾ ಪೂಜಾರಿ, ಯಲ್ಲಾಲಿಂಗ ಹತ್ಯೆ ಹಾಗೂ ಗೌತಮಿ ಶೂಟೌಟ್ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
6. ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳನ್ನು ರಾಜ್ಯ ಸರಕಾರ ಕೂಡಲೇ ಪ್ರಾರಂಭಿಸಬೇಕು.
7. ಅನ್ನದಾತನ ಆಕ್ರಂದನಕ್ಕೆ ಸರಕಾರ ಶೀಘ್ರವಾಗಿ ಸ್ಪಂದಿಸಬೇಕು, ಆ ಮೂಲಕ ರೈತರ ಆತ್ಮಹತ್ಯೆ ತಡೆಯಲು ಶೀಘ್ರ ಮುಂದಾಗಬೇಕು.
8 ಮಹಿಳೆಯರ, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ, ಅತ್ಯಾಚಾರಕ್ಕೆ ಕಡಿವಾಣ ಹಾಕಬೇಕು. ಕಠಿಣ ಕಾನೂನು ಜಾರಿಗೊಳಿಸಬೇಕು.
9. ಪ್ರಸ್ತುತ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿಯಿದ್ದು, ಕೃಷಿ ಆಧಾರಿತ ಕುಂಟುಂಬ ಹಿನ್ನಲೆಯ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ಘೋಷಿಸಬೇಕು.
ವಂದನೆಗಳೊಂದಿಗೆ,

  • email
  • facebook
  • twitter
  • google+
  • WhatsApp

Related Posts

News Digest

ಮೋಹಿನಿ ಅಟ್ಟಂ ನೃತ್ಯಕ್ಕೆ ತಡೆ ಒಡ್ಡಿದ ಕೇರಳದ ಜಸ್ಟೀಸ್ ಕಲಮ್ ಪಾಶಾ

March 23, 2022
News in Brief

ಗದಗಿನಲ್ಲಿ ಲವ್ ಜಿಹಾದ್ : ಮೋಸ ಹೋದ ಎಂಬಿಎ ಪದವೀಧರೆ

March 11, 2022
VHP extends cooperation with Sri Ram Janmabhoomi Teerth Kshetra Trust to collect monetary offerings from Hindu society.
News Digest

VHP extends cooperation with Sri Ram Janmabhoomi Teerth Kshetra Trust to collect monetary offerings from Hindu society.

December 22, 2020
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮೀಕ್ಷೆ : ಒಂದು ವಿಶ್ಲೇಷಣೆ  #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ
News Photo

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮೀಕ್ಷೆ : ಒಂದು ವಿಶ್ಲೇಷಣೆ #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

December 1, 2020
ಡಾ. ಸಲ್ಮಾ ಆರೆಸ್ಸೆಸ್ ವಿಜಯದಶಮಿ 2018ರ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳು
News Digest

ಡಾ. ಸಲ್ಮಾ ಆರೆಸ್ಸೆಸ್ ವಿಜಯದಶಮಿ 2018ರ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳು

October 29, 2020
ಎಲ್ಲ ಪ್ರಜೆಗಳೂ ರಾಷ್ಟ್ರಭಕ್ತಿಯನ್ನು ಅಂತರ್ಗತ ಹಾಗೂ ಅಭಿವ್ಯಕ್ತಗೊಳಿಸಬೇಕು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ
News Digest

ಎಲ್ಲ ಪ್ರಜೆಗಳೂ ರಾಷ್ಟ್ರಭಕ್ತಿಯನ್ನು ಅಂತರ್ಗತ ಹಾಗೂ ಅಭಿವ್ಯಕ್ತಗೊಳಿಸಬೇಕು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ

October 25, 2020
Next Post
RSS Sarasanghachalak Mohan Bhagwat’s #RSSVijayaDashami speech on Oct 22, LIVE on Samvada.Org

RSS Sarasanghachalak Mohan Bhagwat's #RSSVijayaDashami speech on Oct 22, LIVE on Samvada.Org

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Pujya Mata Amritanandamayi Devi blesses delegates of RSS ABPS Meet at Coimbatore

With minor changes in National team; RSS 3-day National meet ABPS-2017 concludes at Coimbatore

March 21, 2017
RSS National Meet ABKM-2016 begins at Hyderabad, resolution likely on Politically motivated murders in Kerala

RSS National Meet ABKM-2016 begins at Hyderabad, resolution likely on Politically motivated murders in Kerala

October 23, 2016
RSS Press Release clarifies 'RSS is Opposed to FDI in Retail'

RSS Press Release: संघ रिटेल में FDI के विरोध में

August 25, 2019
Creator of Indian Comics Anant Pai expires

Creator of Indian Comics Anant Pai expires

February 26, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In