ಪತ್ರಿಕಾ ಪ್ರಕಟಣೆ ಅಭಿಯಾನದ ರಾಷ್ಟ್ರೀಯ ಸಮಿತಿಯ ಸದಸ್ಯರಾದ ಆ. ಶ್ರೀ. ಆನಂದ ಅವರು ಇಂದು ಪತ್ರಿಕಾಗೋಷ್ಠಿಯ ವಿವರ:. ‘ಭೂಮಿ ಸುಪೋಷಣ ಮತ್ತು ಸಂರಕ್ಷಣಾ ಅಭಿಯಾನ’ ಏಪ್ರಿಲ್ 13 ರ ಯುಗಾದಿಯಂದು ರಾಷ್ಟ್ರವ್ಯಾಪಿ ಜನಜಾಗೃತಿ ಅಭಿಯಾನ ಪ್ರಾರಂಭ ಚೈತ್ರ ಶುಕ್ಲ ಪಾಡ್ಯದ ಯುಗಾದಿಯ ಶುಭದಿನದಂದು (೧೩ ಏಪ್ರಿಲ್ ೨೦೨೧) ಭೂ ಪೋಷಣೆ ಮತ್ತು ಸಂರಕ್ಷಣೆಗಾಗಿ ರಾಷ್ಟ್ರವ್ಯಾಪಿ ಜನಜಾಗೃತಿ ಅಭಿಯಾನ ಪ್ರಾರಂಭವಾಗಲಿದೆ. ಕೃಷಿ, ಪರಿಸರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಹಲವು […]

ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ರಾಷ್ಟ್ರೀಯ ಪುರಾತತ್ವ ಇಲಾಖೆಯಿಂದ (ಎಎಸ್ಐ, ASI)  ಸರ್ವೇ ನಡೆಸಲು ವಾರಾಣಸಿಯ ಜಿಲ್ಲಾ  ನ್ಯಾಯಾಲಯ ಅನುಮತಿ ನೀಡಿದೆ. ಕಾಶಿ ವಿಶ್ವನಾಥ ಮಂದಿರವನ್ನು ಮಹಾರಾಜ ವಿಕ್ರಮಾದಿತ್ಯ 2,050 ವರ್ಷಗಳ ಹಿಂದೆ ಕಟ್ಟಿದ್ದ. ಮೊಘಲ್ ದೊರೆ ಔರಂಗಜೇಬನು ಕ್ರಿ.ಶ. 1,664ರಲ್ಲಿ ಈ ದೇವಸ್ಥಾನವನ್ನು ಧ್ವಂಸಗೊಳಿಸಿ, ಆ ಅವಶೇಷಗಳನ್ನು ಬಳಸಿ ಮಸೀದಿ ನಿರ್ಮಿಸಿದ. ಇದನ್ನೇ ಜ್ಞಾನವಪಿ ಮಸೀದಿ ಎನ್ನಲಾಗುತ್ತಿದೆ. ವಾರಾಣಸಿಯಲ್ಲಿ ಈಗಿರುವ ಜ್ಞಾನವಪಿ ಮಸೀದಿಯ ಭೂಮಿಯು ಕಾಶಿ ವಿಶ್ವನಾಥ ದೇವಾಲಯಕ್ಕೆ […]

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾದ ರಸ್ತೆಗಳಿಗೆ ಶ್ರೀ ರಾಮಜನ್ಮಭೂಮಿ.ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದ ರಾಮ್ ಕುಮಾರ ಕೊಠಾರಿ ಮತ್ತು ಶರದ್ ಕುಮಾರ್ ಕೊಠಾರಿ ಸಹೋದರರ ಹೆಸರನ್ನು ನಾಮಕರಣ ಮಾಡಿದೆ. 1990ರಲ್ಲಿ ನಡೆದ 2ನೇ ಹಂತದ ಕರಸೇವೆಯಲ್ಲಿ  ಕೊಠಾರಿ ಸಹೋದರರು ವಿವಾದಗ್ರಸ್ಥ ಕಟ್ಟಡದ ಗುಂಬಜ್ ಮೇಲೆ ಭಗವಾಧ್ವಜವನ್ನು ಹಾರಿಸಿದ್ದರು. ಅತ್ಯಂತ ಕರಸೇವಕರ ಮೇಲೆ ಅಮಾನುಷವಾಗಿ ನಡೆದುಕೊಂಡ ಮುಲಾಯಂ ಸಿಂಗ್ ಸರ್ಕಾರದ ಪೊಲೀಸರು ಕೊಠಾರಿ ಸಹೋದರರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿತ್ತು. ಈ […]

ಬೆಂಗಳೂರು, ಏ.8, 2021: ರಾಸಾಯನಿಕಗಳ ಬಳಕೆಯಿಂದ ಭೂಮಿ ಬಂಜರಾಗುವುದನ್ನು ತಪ್ಪಿಸಿ, ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಅಕ್ಷಯ ಕೃಷಿ ಪರಿವಾರ, ಸಾವಯವ ಕೃಷಿ ಪರಿವಾರ, ಸ್ವದೇಶಿ ಜಾಗರಣ ಮಂಚ್, ಗ್ರಾಮ ವಿಕಾಸ, ವನವಾಸಿ ಕಲ್ಯಾಣ ಸೇರಿದಂತೆ ಹಲವು ಸಂಘಟನೆಗಳು ದೇಶದಾದ್ಯಂತ  ‘ಭೂಮಿ ಸಂಪೋಷಣೆ ಮತ್ತು ಸಂರಕ್ಷಣೆ’ ಎಂಬ ಜನಜಾಗೃತಿ ಅಭಿಯಾನವನ್ನು ನಡೆಸಲಿವೆ. ಈ ಅಭಿಯಾನವು ವಿವಿಧ ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಅಭಿಯಾನವು ಇದೇ ಯುಗಾದಿಯಂದು, ಏಪ್ರಿಲ್ 13ರಿಂದ ಜುಲೈ […]

ಮಾವೋವಾದಿ ನಕ್ಸಲರು ತಮ್ಮ ಸೆರೆಯಲ್ಲಿರುವ ಸಿಆರ್‌ಪಿಎಫ್‌ ಯೋಧ ರಾಕೇಶ್ವರ್ ಸಿಂಗ್ ಮನ್ಹಾ  ಅವರ ಫೋಟೋವನ್ನು ಸ್ಥಳೀಯ ಪತ್ರಕರ್ತನ ಮೂಲಕ ಬಿಡುಗಡೆ ಮಾಡಿದ್ದಾರೆ. ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಬಿಜಾಪುರದಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಭಾರತದ ಹೆಮ್ಮೆಯ 24 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ 31 ಮಂದಿ ಯೋಧರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ಧಾರೆ. ಇನ್ನೊಂದು ಕಡೆ ಸಿಆರ್‌ಪಿಎಫ್‌ ಯೋಧ ರಾಕೇಶ್ವರ್ ಸಿಂಗ್ ಮನ್ಹಾ ಅವರು ನಾಪತ್ತೆಯಾಗಿದ್ದು, ನಕ್ಸಲರ ಸೆರೆಯಲ್ಲಿದ್ದಾರೆ ಎಂದು ಶಂಕಿಸಲಾಗಿತ್ತು. ಇದೀಗ ಇಂದು […]

ಆರೆಸ್ಸೆಸ್ ನ ಹಿರಿಯ ಪ್ರಚಾರಕರಾದ ಕಾ. ಶ್ರೀ. ನಾಗರಾಜ ಅವರು ಬರೆದಿರುವ ‘ಧರ್ಮ ಸಂರಕ್ಷಕ ಶ್ರೀಕೃಷ್ಣ’ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಇದೇ ಏಪ್ರೀಲ್ 18 ಭಾನುವಾರದಂದು ನಡೆಯಲಿದೆ. ಬೆಂಗಳೂರಿನ ಜಯನಗರದ ರಾಷ್ಟ್ರೋತ್ಥಾನ ಯೋಗ ಮತ್ತು ಫಿಟ್ನೆಸ್ ಕೇಂದ್ರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಂಸದ, ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವೀ ಸೂರ್ಯ ಅವರು  ಉಪನ್ಯಾಸ ಮಾಡಲಿದ್ದಾರೆ. ಕರ್ನಾಟಕ ವಿಧಾನಸಭೆಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.

ಗೋ ಆಧಾರಿತ ಉತ್ಪನ್ನಗಳನ್ನು ತಯಾರಿಸುವ ಆಸಕ್ತಿ ನಿಮಗಿದೆಯೇ ? ಆಸಕ್ತರಿಗೆ ತರಬೇತಿ ನೀಡುವ ಸಲುವಾಗಿ ಸ್ವದೇಶಿ ಜಾಗರಣ ಮಂಚ್ ಇದೇ ಏಪ್ರೀಲ್ 17 ಮತ್ತು 18ರಂದು ಗೋ ಆಧಾರಿತ ಉತ್ಪನ್ನಗಳ ತಯಾರಿಕಾ ಶಿಬಿರವನ್ನು ಆಯೋಜಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಈ ಶಿಬಿರ ನಡೆಯಲಿದೆ ಎಂದು ಆಯೋಜಕರು ಸಂವಾದಕ್ಕೆ ತಿಳಿಸಿದ್ದಾರೆ. ರಾಷ್ಟ್ರೋತ್ಥಾನ ಗೋಶಾಲೆಯ ವ್ಯವಸ್ಥಾಪಕರಾದ ಜೀವನ್ ಕುಮಾರ್ ಮತ್ತು ಖ್ಯಾತ ಆಯುರ್ವೇದಿಕ್ ಪಂಚಗವ್ಯ ಚಿಕಿತ್ಸಾ […]

2008ರ ಬೆಂಗಳೂರು ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಜಾಮೀನಿನ ಮೇಲಿರುವ ಕೇರಳದ ಪಿಡಿಪಿ ಪಕ್ಷದ ಮುಖಂಡ ಅಬ್ದುಲ್‌ ಮದನಿಯನ್ನು  ಸುಪ್ರೀಂ ಕೋರ್ಟ್‌ ‘ಅಪಾಯಕಾರಿ ವ್ಯಕ್ತಿ’ ಎಂದು ಕರೆದಿದೆ. ಕೇರಳಕ್ಕೆ ತೆರಳುವ ಸಲುವಾಗಿ ಜಾಮೀನು ಷರತ್ತಿನಲ್ಲಿ ವಿನಾಯ್ತಿ ಕೋರಿ ಮದನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಮುಖ್ಯನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ಅವರಿದ್ದ ಪೀಠವು ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿತು. 2008ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 2010ರ ಆಗಸ್ಟ್ […]

ವಿಶ್ವವಿಖ್ಯಾತ ಗೀತಾ ಪ್ರೆಸ್ ನ ಅಧ್ಯಕ್ಷ ರಾಧೇಶ್ಯಾಮ್‌ ಖೇಮ್ಕಾಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ ವ್ಯಕ್ತಪಡಿಸುತ್ತದೆ. ಸ್ವರ್ಗೀಯ ರಾಧೇಶ್ಯಾಮ್‌ ಅವರು ಧರ್ಮ-ಜ್ಞಾನ ಪರಂಪರೆಯ ಪ್ರಸಾರವನ್ನು ಹಲವು ವರ್ಷಗಳ ಕಾಲ ಸಂಪೂರ್ಣ ಶ್ರದ್ಧೆ ಹಾಗೂ ಪರಿಶ್ರಮಪೂರ್ವಕವಾಗಿ ನಡೆಸಿದರು ಮತ್ತು ಹೊಸ ಅವಶ್ಯಕತೆಗಳಿಗೆ ತಕ್ಕಂತೆ ಈ ಕಾರ್ಯವನ್ನು ನಿರಂತರವಾಗಿ ಮುನ್ನಡೆಸಿದರು. ಅವರ ಪವಿತ್ರ ಆತ್ಮಕ್ಕೆ ಸದ್ಗತಿ ಸಿಗಲೆಂದು ಹಾಗೂ ಅವರ ಪರಿವಾರದವರಿಗೆ ಹಾಗೂ ಗೀತಾ ಪ್ರೆಸ್ ನ ಪರಿವಾರಕ್ಕೆ ಶ್ರೀಯುತರ ಅಗಲಿಕೆಯ […]

ಭಾರತೀಯ ಸಂಸ್ಕೃತಿಯ ಪ್ರತಿರೂಪ, ಹಿಂದುಗಳ ಆರಾಧ‍್ಯದೈವ ಶ್ರೀರಾಮಚಂದ್ರ ತನ್ನ ರಾಜಪಟ್ಟ ತೊರೆದು ವನವಾಸ ಕೈಗೊಂಡ ಮಾರ್ಗವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಶ್ರೀರಾಮಚಂದ್ರ ತಮ್ಮ  14 ವರ್ಷಗಳ ವನವಾಸದಲ್ಲಿ ನಡೆದೇ ಸಂಚರಿಸಿದ ಉತ್ತರಪ್ರದೇಶದಲ್ಲಿರುವ 201 ಕಿ.ಮೀ ಮಾರ್ಗವನ್ನು ಗುರುತಿಸಲಾಗಿದೆ. ಉತ್ತರಪ್ರದೇಶದ ಅಯೋಧ್ಯೆಯಿಂದ ಹಿಡಿದು ಮಧ್ಯಪ್ರದೇಶದ ಚಿತ್ರಕೂಟದವರೆಗಿನ ಈ ಮಾರ್ಗವನ್ನು ‘ರಾಮ ವನ ಗಮನ ಮಾರ್ಗ’ ಎಂಬ ಹೆಸರಿನಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆಚ್ಚಾರಿ ಸಚಿವಾಲಯ ನಿರ್ಧರಿಸಿದೆ. […]