ಸಹಕಾರ ಭಾರತಿ : ಒಂದು ವಿಶಿಷ್ಟ ಹೆಜ್ಜೆ ನಮ್ಮ ದೇಶದ ಸಹಕಾರಿ ರಂಗದ ವ್ಯಾಪ್ತಿ ಬಹಳ ದೊಡ್ಡದು. ಸ್ವಾತಂತ್ರ್ಯಪೂರ್ವದಿಂದಲೂ ಅನೇಕ ಸಹಕಾರಿ ಸಂಘಗಳು ಜನಸಾಮಾನ್ಯರನ್ನು ಸಂಘಟಿಸಿ, ಸ್ಥಳೀಯ ಕೃಷಿ, ವ್ಯಾಪಾರ, ವ್ಯವಹಾರಗಳಿಗೆ ಬೆನ್ನೆಲುಬಾಗಿ ನಿಂತಿವೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹಳ ಮಹತ್ತ್ವದ್ದು. ಈಗಂತೂ ಅವುಗಳ ಮಹತ್ತ್ವ, ವ್ಯಾಪ್ತಿ ಮತ್ತು ಸಂಖ್ಯೆ ಇನ್ನೂ ಹೆಚ್ಚಾಗಿದೆ. ಕೇವಲ ಸ್ವಾರ್ಥಸಾಧನೆಗಾಗಿ ಸಹಕಾರ ವಿಶೇಷವೇನಲ್ಲ. ಸಹಕಾರವು ಸಂಸ್ಕಾರಯುತ ವಾದಾಗ ಸಮಾಜಕ್ಕೆ ಹೆಚ್ಚು […]

ಸಂಸ್ಕೃತ ಭಾರತಿ ಸಂಸ್ಕೃತವನ್ನು ಮತ್ತೊಮ್ಮೆ ಜನಸಾಮಾನ್ಯರ ವ್ಯವಹಾರದ ಭಾಷೆಯನ್ನಾಗಿ ಮಾಡಬೇಕೆಂಬ ಇಚ್ಛೆಯಿಂದ ಪ್ರಾರಂಭವಾದ ಆರೆಸ್ಸೆಸ್‌ನ ಸಹಸಂಘಟನೆ ‘ಸಂಸ್ಕೃತಭಾರತಿ’. ೧೯೮೧ರಲ್ಲಿ ಅದೇ ತಾನೇ ತಿರುಪತಿಯಿಂದ ಸಂಸ್ಕೃತದ ಅಧ್ಯಯನ ಮುಗಿಸಿಬಂದ ಮೂವರು ತರುಣರಿಂದ ಈ ಕಾರ್ಯ ಪ್ರಾರಂಭ. ಬೆಂಗಳೂರಿನ ಬಸವನಗುಡಿಯಲ್ಲಿ ಮೊದಲ ೧೦ದಿನದಲ್ಲಿ ದಿನಕ್ಕೆರಡು ಗಂಟೆಯಂತೆ ನಡೆಸಲಾಗುವ ಸಂಭಾಷಣಾ ಶಿಬಿರದ ಮೂಲಕ ಸಂಘಟನೆಯ ಆರಂಭ. ಸಂಸ್ಕೃತದ ಬಗ್ಗೆ ಪ್ರೀತಿಯನ್ನು ಶ್ರದ್ಧೆಯನ್ನು ಇರಿಸಿಕೊಂಡು ಅದರ ಉತ್ಥಾನಕ್ಕಾಗಿ ಪ್ರಯತ್ನಪಡುತ್ತಿರುವ ಸಾವಿರಾರು ಸಂಸ್ಥೆಗಳು ದೇಶದಲ್ಲಿ ಇಂದಿಗೂ ಕೆಲಸ […]

ಸಂಸ್ಕಾರ ಭಾರತಿ ‘ಕಲೆ ವಿಲಾಸಕ್ಕಾಗಿ ಅಲ್ಲ, ಆತ್ಮ ವಿಕಾಸಕ್ಕಾಗಿ’ ಭಾರತೀಯ ಸಂಸ್ಕೃತಿಯ ಪೋಷಣೆಗಾಗಿ ಲಲಿತಕಲೆಗಳ ಸಂವರ್ಧನೆಗೆ ವಿವಿಧ ಚಟುವಟಿಕೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಕಾರ‍್ಯನಿರ್ವಹಿಸುತ್ತಿರುವ ಸಂಘಟನೆ ಸಂಸ್ಕಾರ ಭಾರತಿ. ‘ಕಲೆ ವಿಲಾಸಕ್ಕಾಗಿ ಅಲ್ಲ, ಆತ್ಮ ವಿಕಾಸಕ್ಕಾಗಿ’ ಎಂಬುದು ಸಂಸ್ಕಾರ ಭಾರತಿಯ ಧ್ಯೇಯ ವಾಕ್ಯ. ವ್ಯಕ್ತಿಯನ್ನು ಸಮಾಜ-ದೇಶದೊಂದಿಗೆ ಜೋಡಿಸುವ ಶಕ್ತಿ ಭಾರತೀಯ ಕಲೆಗಳಿಗಿವೆ. ವ್ಯಕ್ತಿತ್ವವನ್ನು ಹೆಚ್ಚಿಸಲು ಕಲೆಯ ಆಸಕ್ತಿ-ಅಭಿವ್ಯಕ್ತಿ ಎಂದಿಗೂ ಸಹಕಾರಿ. ಭಾವನಾತ್ಮಕವಾದ ಸಮಾಜ ಪರಿವರ್ತನೆ ಹಾಗೂ ಸಮನ್ವಯಪೂರ್ಣ ಸಮಾಜ ಜೀವನ ನಡೆಸಿದ […]

ಹಿಂದು ಸೇವಾ ಪ್ರತಿಷ್ಠಾನ ಸೇವೆಯ ಭಾರತಕ್ಕೆ ಹೊಸ ಕಲ್ಪನೆಯೇನಲ್ಲ. ನಮ್ಮ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ಅದೆಷ್ಟೋ ಮಹಾಪುರುಷರು ಸಮಾಜದ ದೀನರ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟು ಕೊನೆ ಉಸಿರಿನ ತನಕ ಪರೋಪಕಾರದಲ್ಲಿ ತೊಡಗಿದ್ದನ್ನು ಕಾಣುತ್ತೇವೆ. ಮಹರ್ಷಿ ವ್ಯಾಸರು ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ ಎಂಬುದನ್ನು ಸಾರಿ ಹೇಳಿದ್ದಾರೆ. ಇಂತಹ ಮಹಾಪುರುಷರ ಆದರ್ಶವನ್ನಿಟ್ಟುಕೊಂಡು ಪ್ರಾರಂಭವಾದ ಸಂಸ್ಥೆಯೇ ಹಿಂದು ಸೇವಾ ಪ್ರತಿಷ್ಠಾನ. ‘ಲೋಕಹಿತಂ ಮಮ ಕರಣೀಯಂ’ (ಸಮಾಜಕ್ಕೆ ಹಿತವಾಗುವ ಕೆಲಸವನ್ನು ನಾನು […]

ಸ ಮದೃಷ್ಟಿ, ಕ್ಷಮ ತಾವಿಕಾಸ ಮತ್ತು ಅನುಸಂಧಾನ ಮಂಡಲ, ಕರ್ನಾಟಕ ‘ಸಕ್ಷಮ’ವು ರಾಷ್ಟ್ರೀಯ ಸ್ವಯಂಸೇವಕ ಸಂಘದ ದೇಶನಿಷ್ಠ ವಿಚಾರದಿಂದ ಪ್ರೇರಿತವಾಗಿರುವ ದಾನಶೀಲ ರಾಷ್ಟ್ರೀಯ ಸಂಸ್ಥೆಯಾಗಿದೆ. ಸಕ್ಷಮವು ವಿಕಲಚೇತನ ಸಮುದಾಯದ ಸಾಮಾಜೀಕರಣ, ಸಾಮಾಜೀಕೃತ ಸಮುದಾಯಗಳ ಏಕೀಕರಣ, ಏಕೀಕೃತ ಸಮಾಜದ ರಾಷ್ಟ್ರೀಕರಣದ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಎಲ್ಲಾ ರೀತಿಯ ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ವಿಕಲಚೇತನರು ಸಮಾಜಕ್ಕೆ ಹೊರೆಯಾಗಿರದೆ ದೇಶದ ಆಸ್ತಿಯಾಗಿದ್ದಾರೆ ಎಂಬುದು ‘ಸಕ್ಷಮ’ದ ನಂಬಿಕೆಯಾಗಿದೆ. ವಿಕಲಚೇತನರೆಲ್ಲರನ್ನೂ ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ತರಬೇಕೆನ್ನುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. […]

ರಾಷ್ಟ್ರ ಸೇವಿಕಾ ಸಮಿತಿ ಹಿಂದೂ ರಾಷ್ಟ್ರದ ಪುನರ್ನಿರ್ಮಾಣದ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುತ್ತಿರುವ ಅಖಿಲ ಭಾರತ ಮಟ್ಟದ ಮಹಿಳಾ ಸಂಘಟನೆ ’ರಾಷ್ಟ್ರ ಸೇವಿಕಾ ಸಮಿತಿ’. ಇದನ್ನು ಸ್ಥಾಪಿಸಿದವರು ವಂದನೀಯ ಲಕ್ಷ್ಮೀಬಾಯಿ ಕೇಳ್ಕರ್ (ಪ್ರೀತಿಯಿಂದ ಮೌಶೀಜೀ ಎಂದೇ ಕರೆಯಲ್ಪಡುತ್ತಾರೆ). ಪ್ರಖರವಾದ ದೇಶಭಕ್ತಿ ಇವರಿಗೆ ತಾಯಿಯಿಂದಲೇ ಬಂದ ಬಳುವಳಿ. ಜನಿಸಿದ್ದು ಸಾಮಾನ್ಯ ಕುಟುಂಬದಲ್ಲಾದರೂ ಚಿಂತನೆ ಮಾತ್ರ ಉನ್ನತ ಮಟ್ಟದ್ದು. ಸ್ತ್ರೀ ಮತ್ತು ಪುರುಷರು ರಥದ ಎರಡು ಗಾಲಿಗಳು ಎಂದು ಎಂದು ಸಾಮಾನ್ಯರೆಲ್ಲಾ ಭಾವಿಸುತ್ತಿದ್ದಾಗ, ಸ್ತ್ರೀ […]

ವಿದ್ಯಾಭಾರತಿ- ಶಿಕ್ಷಣದಿಂದ ರಾಷ್ಟ್ರ ನಿರ್ಮಾಣ ಆರಂಭವಾದ ರೀತಿ ? ಉತ್ತರ ಪ್ರದೇಶದ ಗೋರಖಪುರದಲ್ಲಿ ೧೯೫೨ರಲ್ಲಿ ಕೆಲವು ಉತ್ಸಾಹೀ ಕಾರ್ಯಕರ್ತರಿಂದ. ತಿಂಗಳಿಗೆ ೫ರೂ. ಬಾಡಿಗೆ ನೀಡಿದ ಒಂದು ಕಟ್ಟಡದಲ್ಲಿ ಆರಂಭ. ೧೯೪೬ರಲ್ಲಿ ಶ್ರೀ ಗುರೂಜಿ ಯವರಿಂದ ಶಿಲಾನ್ಯಾಸಗೊಂಡ ಕುರುಕ್ಷೇತ್ರದ ಗೀತಾ ಶಾಲೆಯೂ ಸೇರಿದಂತೆ ವಿದ್ಯಾಭಾರತಿ ಶಾಲಾ ಬಳಗಕ್ಕೆ ಹತ್ತಾರು ಕಡೆಗಳಿಂದ ಸ್ವಾಗತ. ಹೇಗೆ ಬೆಳೆಯಿತು ? ಉತ್ತರ ಪ್ರದೇಶದಲ್ಲಿ ವ್ಯಾಪಕವಾಗಿ ಸರಸ್ವತಿ ಶಿಶು ಮಂದಿರಗಳು ಆರಂಭವಾಗಿ, ೧೯೫೮ರ ಹೊತ್ತಿಗೆ ಶಿಶು ಶಿಕ್ಷಾ […]