ಉತ್ತರ ಪ್ರದೇಶ: ಅಯೋಧ್ಯೆಯಲ್ಲಿರುವ ರಾಮಾಯಣ ಕಾಲದ 5 ಜಲಮೂಲಗಳನ್ನು ಪುನರುಜ್ಜೀವನಗೊಳಿಸಲು ಕೇಂದ್ರ  ಜಲಶಕ್ತಿ ಇಲಾಖೆ ಮುಂದಾಗಿದೆ. ಅಯೋಧ್ಯೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಪರಿಸರ ಸಂರಕ್ಷಣೆಗಾಗಿ ಸ್ವಚ್ಛ ಗಂಗಾ ಯೋಜನೆಯ ಭಾಗವಾಗಿ ಅಯೋಧ್ಯೆಗೆ 10 ಕೋಟಿ ರೂ.ಯನ್ನು ತೆಗೆದಿರಿಸಿದೆ. ಇದರ ಮೂಲಕ ಅಯೋಧ್ಯೆಯಲ್ಲಿ5 ಜಲಮೂಲಗಳನ್ನು ಪುನರುಜ್ಜೀವನ, ಸಾರ್ವಜನಿಕ ಕಲಾ ಯೋಜನೆ ಮುಂತಾದವುಗಳು  ಸಮುದಾಯ ಸಹಬಾಗಿತ್ವದಲ್ಲಿ ನಡೆಯಲಿದೆ. ಇದು 18 ತಿಂಗಳ ಯೋಜನೆಯಾಗಿದೆ ಎಂದು  ಕೇಂದ್ರ ಜಲಶಕ್ತಿ ಸಚಿವಾಲಯ ತಿಳಿಸಿದೆ. ಅಯೋಧ್ಯೆಯ ಅಭಿವೃದ್ಧಿ […]

೯೦ರ ದಶಕದಲ್ಲಿ ಕಾಶ್ಮೀರದ ಕಣಿವೆಯಿಂದ ಹೊರದಬ್ಬಲ್ಪಟ್ಟವರ ಪೈಕಿ ಸುಮಾರು ೩,೮೦೦ ಜನರು ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಮಂತ್ರಿಗಳ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ನೀಡಲಾದ ಉದ್ಯೋಗವನ್ನು ಪಡೆದುಕೊಂಡು ಕಣಿವೆಗೆ ಮರಳಿದ್ದಾರೆ. 370ನೇ ವಿಧಿಯ ರದ್ದಿನ ನಂತರ 570 ವಲಸೆ ಕಾರ್ಮಿಕರು ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಮರಳಿದ್ದು ಅಂತವರ ಪ್ರಮಾಣ ಗಣನೀಯವಾಗಿ ಏರುತ್ತಿದೆ, 2021ರಲ್ಲಿ ಸುಮಾರು 2 ಸಾವಿರ ಜನರು ಮರಳುವ ನಿರೀಕ್ಷೆಯಿದೆ. ಮುಸ್ಲಿಂ ಮೂಲಭೂತವಾದಿಗಳ ದಬ್ಬಾಳಿಕೆಯ ಕಾರಣದಿಂದ ೧೯೯೦ರ ದಶಕದಲ್ಲಿ 44,167 […]

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಒಳನುಸುಳುವಿಕೆ ಪ್ರಕರಣಗಳು ನಡೆದಿವೆ ಎನ್ನುವ ಆತಂಕಕಾರಿ ವಿಷಯವನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ತಿಳಿಸಿದೆ. ನೇಪಾಳ ಮತ್ತು ಪಾಕಿಸ್ತಾನ ಗಡಿಗಳ್ಲಲಿ 60 ಒಳನುಸುಳುವಿಕೆ ಪ್ರಕರಣಗಳನ್ನು ನಡೆದಿವೆ. ಇಂತಹ ಸವಾಲುಗಳನ್ನು ಎದುರಿಸಲು ಪರಿಣಾಮಕಾರಿ ಕಣ್ಗಾವಲು, ಗುಪ್ತಚರ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವುದು, ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದು, ಗಡಿಗಳಲ್ಲಿ ಗಸ್ತು ತಿರುಗುವುದು, ಗಡಿ ಪ್ರದೇಶಗಳಲ್ಲಿ ಸ್ಥಳೀಯ ಜನಸಂಖ್ಯೆಯ ಸಂವೇದನೆ, ವೀಕ್ಷಣಾ ಪೋಸ್ಟ್‌ಗಳ ಸ್ಥಾಪನೆ, ಆಧುನಿಕ […]

ಛತ್ತೀಸ್‌ ಘಡ: ಇತ್ತೀಚೆಗೆ ರಾಯ್‌ಪುರದಲ್ಲಿ ೧೩ ಮಂದಿ ಮಂಗಳಮುಖಿಯರನ್ನು ಕಾನ್‌ ಸ್ಟೇಬಲ್‌ಗಳಾಗಿ ನೇಮಕ ಮಾಡಿಕೊಳ್ಳುವ ಮೂಲಕವಾಗಿ ಸಮಾಜದಲ್ಲಿ ವಂಚಿತ ತೃತೀಯಲಿಂಗಿಗಳೂ ಆರಕ್ಷಕರಾಗಿ ಸೇವೆ ಸಲ್ಲಿಸಬಹುದು ಎನ್ನುವ ಸಂದೇಶವನ್ನು ಛತ್ತೀಸ್‌ ಘಡ್ ಪೊಲೀಸರು ನೀಡಿದ್ದಾರೆ. ಹಾಗೆಯೇ ಪೋಲಿಸ್ ಪಡೆಯಲ್ಲಿ ಅವರು ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲರು ಎನ್ನುವುದನ್ನು ಸಾಬೀತು ಪಡಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಕೆಲವು ದಿನಗಳ ತೃತೀಯಲಿಂಗಿ ಮಹಿಳೆಯನ್ನು ಗ್ರಾಮ ಪಂಚಾಯ್ತಿಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಘಟನೆ ಕರ್ನಾಟಕದ ಮೈಸೂರಿನಲ್ಲಿ ವರದಿಯಾಗಿತ್ತು.

ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಓಡಿಶಾದ ರೂರ್‌ ಕೆಲಾದಲ್ಲಿ ಶಿಲಾನ್ಯಾಸ  ನೆರವೇರಿಸಲಾಗಿದೆ. ಬುಡಕಟ್ಟು ಜನಾಂಗದ ಅಪ್ರತಿಮ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬಿರ್ಸಾ ಮುಂಡಾ ಅವರ ಸ್ಮರಣೆಯಲ್ಲಿ ನಿರ್ಮಾಣವಾಗುತ್ತಿರುವ ಈ ಅತ್ಯಾಧುನಿಕ ಕ್ರೀಡಾಂಗಣ ೨೦ ಸಾವಿರಕ್ಕೂ ಹೆಚ್ಚು ಜನ ಪ್ರೇಕ್ಷಕರ ಸಾಮರ್ಥ್ಯ ಹೊಂದಲಿದೆ. ಭಾರತದ ರಾಷ್ಟ್ರೀಯ ಕ್ರೀಡೆಯೂ ಆಗಿರುವ ಹಾಕಿ ಕ್ರೀಡೆಯ ೨೦೨೩ರ ವಿಶ್ವಕಪ್ ಆತಿಥ್ಯವನ್ನು ಬಿರ್ಸಾ ಮುಂಡಾ ಕ್ರೀಡಾಂಗಣ ವಹಿಸಲಿದೆ. ಈ ಕ್ರೀಡಾಂಗಣವು 120 ಕೋಟಿ ವೆಚ್ಚದಲ್ಲಿ […]

ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದವರು ನಡೆಸುವ ಸಹಕಾರಿ ಸೊಸೈಟಿಗಳಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸುವ ಅಧಿಕಾರವನ್ನು ರಾಜ್ಯ ಸರ್ಕಾರದ ಸಹಕಾರ ಇಲಾಖೆಗೆ ನೀಡುವ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ಮಸೂದೆ 2021ಕ್ಕೆ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರ ಪಡೆದಿದೆ. ಮಸೂದೆಯನ್ನು ಮಂಡಿಸಿ ಮಾತನಾಡಿದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಅವರು, ರಾಜ್ಯದಲ್ಲಿ 3.71 ಲಕ್ಷ ಸಹಕಾರ ಸೊಸೈಟಿಗಳಿವೆ, ಇದರಲ್ಲಿ 6,807 ಸೊಸೈಟಿಗಳನ್ನು ಅಲ್ಪಸಂಖ್ಯಾತರ ನಡೆಸುತ್ತಿದ್ದಾರೆ. ಈ ಮಸೂದೆಯಿಂದ ಸೊಸೈಟಿಗಳನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ಸೊಸೈಟಿಗಳ ಸದಸ್ಯರು ಮತ್ತು ಸಾರ್ವಜನಿಕರ […]

ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಹೆಸರನ್ನು ಶಿಫಾರಸು ಮಾಡಿ ಸಿಜೆಐ ಎಸ್‌.ಎ. ಬೊಬ್ಡೆ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರದಿದ್ದಾರೆ. ಪ್ರಸ್ತುತ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿರುವ ಎಸ್‌.ಎ. ಬೊಬ್ಡೆ ಅವರು ಏಪ್ರಿಲ್ 23 ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ನೂತನ ಮುಖ್ಯ ನ್ಯಾಯಮೂರ್ತಿ ನೇಮಕಕ್ಕೆ ಶಿಫಾರಸು ಮಾಡಲಾಗಿದೆ. ನ್ಯಾಯಮೂರ್ತಿ ಎನ್.ವಿ. ರಮಣ ಅವರ ಅಧಿಕಾರಾವಧಿ 2022 ರ […]

ಉತ್ತರಾಖಂಡ: ಈ ವರ್ಷ ಮಹಾ ಕುಂಭಮೇಳವು ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿದ್ದು, ಕುಂಭಮೇಳಕ್ಕೆ ಸಂಬಂಧಿಸಿದ ಮಾಹಿತಿ ನೀಡುವ ಸಲುವಾಗಿ ಸಹಾಯವಾಣಿ 1902ಕ್ಕೆ ಉತ್ತರಾಖಂಡ ಪೊಲೀಸರು ಚಾಲನೆ ನೀಡಿದರು. ಕುಂಭಮೇಳಕ್ಕೆ ತೆರಳುವ ಭಕ್ತರು ನೋಂದಣಿ, ಮೇಳ ತಲುಪುವ ಮಾರ್ಗ, ಪಾರ್ಕಿಂಗ್‌ ವ್ಯವಸ್ಥೆ, ಕೋವಿಡ್‌ ಮಾರ್ಗಸೂಚಿ, ಲಭ್ಯವಿರುವ ಆರೋಗ್ಯ ಸೇವೆ ಸೇರಿದಂತೆ ವಿವಿಧ ಮಾಹಿತಿಯನ್ನು ಈ ಸಹಾಯವಾಣಿ ಸಂಪರ್ಕಿಸಿ ಪಡೆಯಬಹುದು ಎಂದು ಮೇಳದ ಉಸ್ತುವಾರಿ ಐಜಿಪಿ ಸಂಜಯ್‌ ಗುಂಜ್ಯಾಲ್ ತಿಳಿಸಿದರು. ಈ ವರ್ಷ ಮಹಾ […]

ಕರ್ನಾಟಕದ ಹೆಮ್ಮೆಯ ವಿಕಲಚೇತನ ಈಜು ಪಟು ನಿರಂಜನ್ ಮುಕುಂದನ್ ಅವರು ಮಾರ್ಚ್ 21, 2021ರಂದು ಮುಕ್ತಾಯಗೊಂಡ ರಾಷ್ಟ್ರೀಯ ವಿಕಲಚೇತನ ಈಜು ಸ್ಪರ್ಧೆಯಲ್ಲಿ ನಾಲ್ಕು ಚಿನ್ನ, ಒಂದು ಬೆಳ್ಳಿ ಪದಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕ ತಂಡ 92 ಪದಕ ಗಳಿಸಿ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿತು. ಮುಕುಂದನ್ ಅವರು ಈಗಾಗಲೇ ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಕಲಚೇತನ ಈಜು ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ಧಾರೆ.

ಜಗತ್ತಿನ ಬಲಿಷ್ಠ ಸೇನೆಗಳ ಪಟ್ಟಿಯಲ್ಲಿ ಭಾರತವು 4ನೇ ಸ್ಥಾನದಲ್ಲಿದೆ ಎಂದು ಮಿಲಿಟರಿ ಡೈರೆಕ್ಟ್ ವರದಿ ಹೇಳಿದೆ. ಮಿಲಿಟರಿ ಡೈರೆಕ್ಟ್ ಎಂಬ ವೆಬ್ಸೈಟ್ ಬಿಡುಗಡೆ ಮಾಡಿರುವ ಅಧ್ಯಯನ ವರದಿ ಪ್ರಕಾರ 61 ಅಂಕಗಳೊಂದಿಗೆ ಭಾರತೀಯ ಸೇನೆ ನಾಲ್ಕನೇ ಸ್ಥಾನದಲ್ಲಿದೆ. ಜಗತ್ತಿನ ಸೂಪರ್ ಪವರ್ ರಾಷ್ಟ್ರ ಎಂದೇ ಕರೆಸಿಕೊಳ್ಳುತ್ತಿದ್ದ ಅಮೆರಿಕ ಸೇನೆ 2ನೇ ಸ್ಥಾನದಲ್ಲಿದ್ದರೆ,  ಚೀನೀ ಸೇನೆ ಅಗ್ರ ಸ್ಥಾನಕ್ಕೇರಿದೆ. ಜಗತ್ತಿನ ಬಲಿಷ್ಠ ಮಿಲಿಟರಿ ಪಡೆಗಳಲ್ಲಿ ಭಾರತೀಯ ಸೇನೆ ನಾಲ್ಕನೇ ಸ್ಥಾನದಲ್ಲಿದೆ ಎಂದು […]