17 ಮಾರ್ಚ್ 2021, ಬೆಂಗಳೂರು: ನಗರದ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದ ಶಾಲೆಯ ಆವರಣದಲ್ಲಿ ಮಾರ್ಚ್ 19 ರಿಂದ ಮಾರ್ಚ್ 20ರ ವರೆಗೆ ನಡೆಯುವ ಆರೆಸ್ಸೆಸ್ ನ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಪತ್ರಿಕಾ ಗೋಷ್ಠಿಯಲ್ಲಿ ಆರೆಸ್ಸೆಸ್ ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಶ್ರೀ ಅರುಣ್ ಕುಮಾರ್ ಮಾತನಾಡಿದರು. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಒಳಗೊಂಡಿರುವ ಆರೆಸ್ಸೆಸ್ ನ ದಕ್ಷಿಣ ಮಧ್ಯ […]

ಶಿವಮೊಗ್ಗ: ಅಂತರ್‌ಧರ್ಮೀಯ ವಿವಾಹಕ್ಕೆ ಬ್ರಾಹ್ಮಣ ಯುವತಿಯರ ಟಾರ್ಗೆಟ್‌ ಎಂಬ ಆತಂಕದ ಸುದ್ದಿಗಳು ವರದಿಯಾಗುತ್ತಿವೆ. ಇಂತಹ ಯುವತಿಯರಿಗೆ ಸಮಾಲೋಚನೆಯ ಅಗತ್ಯವಿದ್ದು ಅದಕ್ಕಾಗಿ ಮಾತೃಮಂಡಳಿ ರಚನೆಯಾಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಶಿವಮೊಗ್ಗದ ಜಿಲ್ಲಾ ಬ್ರಾಹ್ಮಣ ಮಹಾಸಂಘದ ವತಿಯಿಂದ ನಡೆದ ಶ್ರೀಯುಜುಃಸಂಹಿತಾಯಾಗ ಹಾಗೂ ಸಾಧಕರಿಗೆ ಸಂಮಾನ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಪೂಜ್ಯ ಶ್ರೀಗಳು ಆಶೀವರ್ಚನ ನೀಡಿದರು. ನಮ್ಮ ಬ್ರಾಹ್ಮಣ ಕುಟುಂಬದ ಹೆಣ್ಣುಮಕ್ಕಳು ಬೇರೆ ಧರ್ಮಿಯರ ಪಾಲಾಗುತ್ತಿದ್ದಾರೆ. […]

ನವದೆಹಲಿ: ಪ್ರತಿ ಮನೆಗೂ ನಲ್ಲಿಯ ಮೂಲಕ ನೀರು ಪೂರೈಸುವ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಜಲಜೀವನ್ ಮಿಷನ್’ ಯೋಜನೆಯ ಮೂಲಕ ದೇಶದ 7.06 ಕೋಟಿ ಕುಟುಂಬಗಳು ವಾಸವಿರುವ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಜಲಶಕ್ತಿ ಸಚಿವಾಲಯದ ವರದಿ ತಿಳಿಸಿದೆ. ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೆ ಆಯಾ ರಾಜ್ಯಗಳ ಸಹಭಾಗಿತ್ವದಲ್ಲಿ ನಿತ್ಯ 55 ಲೀಟರ್ ಕುಡಿಯುವ ನೀರು ಪೂರೈಸುವ ಉದ್ದೇಶದೊಂದಿಗೆ 2019ರ ಆಗಸ್ಟ್‌ನಲ್ಲಿ ಮೋದಿ ನೇತೃತ್ವದ ಕೇಂದ್ರ […]

ಮೈಸೂರು, ಮಾರ್ಚ್ 16:  ಇದೇ ಮಾರ್ಚ್ 14ರಂದು ಮೈಸೂರು ಗ್ರಾಮಾಂತರ ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ವಿವಿಧ ವನವಾಸಿಗಳ ಹಾಡಿಗಳಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಸೇವಾಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಸುಮಾರು 150ಕ್ಕೂ ಹೆಚ್ಚು ಹಾಡಿಯ ಬಂಧುಗಳಿಗೆ ಬಟ್ಟೆ,ಗೋಧಿಹಿಟ್ಟು,ಬೆಡ್ ಶೀಟ್ ಮಕ್ಕಳ ಆಟದ ಸಾಮಾನುಗಳು ಸೀರೆ ಪಂಚೆ ಟಿ-ಶರ್ಟ್ ವಿತರಿಸಲಾಯಿತು. ಹಾಗೂ ಧರ್ಮದ ಬಗ್ಗೆ ಹಾಡಿಯ ಬಂಧುಗಳಿಗೆ ಜಾಗೃತಿಯನ್ನು ಮೂಡಿಸಲಾಹಿತು. ಈ ಸಂದರ್ಭದಲ್ಲಿ ಬಜರಂಗದಳ ರಾಷ್ಟ್ರೀಯ ಸಹ […]

ನವದೆಹಲಿ, ಮಾರ್ಚ್ 16: ಜಮ್ಮು ಕಾಶ್ಮೀರದಲ್ಲಿ 32.31 ಲಕ್ಷ ಜನರಿಗೆ ನಿವಾಸಿ ಪ್ರಮಾಣಪತ್ರ  ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು 2020ರ ಡಿಸೆಂಬರ್ ವೇಳೆಗೆ ಒಟ್ಟು 35,44,938 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ 32,31,353 ಜನರಿಗೆ ನಿವಾಸಿ ಪ್ರಮಾಣಪತ್ರವನ್ನು ಒದಗಿಸಲಾಗಿದೆ ಮತ್ತು ನಿಗದಿತ ದಾಖಳೆಗಳ್ನನು ಸಲ್ಲಿಸದ 2,15438 ಜನರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದರು. […]

ಉತ್ತರ ಪ್ರದೇಶ: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ವತಿಯಿಂದ  ಶ್ರೀ   ರಾಮಮಂದಿರ ನಿರ್ಮಾಣ  ಕಾರ್ಯ ಆರಂಭ,  ವೈದಿಕ ಸಂಪ್ರದಾಯದಂತೆ ಅಡಿಪಾಯ ತುಂಬಿಸುವ ಪೂಜೆ. ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಸ್ಥಾನದಲ್ಲಿ ಭಗವಾನ್ ಶ್ರೀ ರಾಮಚಂದ್ರನ ಭವ್ಯ ಮಂದಿರ ನಿರ್ಮಾಣದ ಕನಸನ್ನು ಹಿಂದೂ ಸಮಾಜ ಇರಿಸಿಕೊಂಡಿತ್ತು,  ಆ ಕನಸು ಸೋಮವಾರದಿಂದ ಸಂಪನ್ನವಾಗಲು  ಆರಂಭವಾಗಿದೆ. ಇಂದು 10:55ರ ಶುಭ ಮುಹೂರ್ತದಲ್ಲಿ ಟ್ರಸ್ಟ್ ನ  ಪದಾಧಿಕಾರಿಗಳು ಭೂಮಿ ಪೂಜೆಯನ್ನು ಸಲ್ಲಿಸಿದರು. ಶುಭ ಸಂದರ್ಭದ ಜೊತೆಯಲ್ಲಿಯೇ ಭಗವಾನ್  […]

ಮೀಸಲಾತಿಗೆ ಈಗಿರುವ ಶೇ. 50ರ ಮಿತಿಯ ಮರುಪರಿಶೀಲನೆಗೆ ಒಳಪಡಿಸುವ ಅಗತ್ಯ ಇದೆಯೇ ಎಂಬ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌  ಸೋಮವಾರ (ಮಾರ್ಚ್ 15) ಆರಂಭಿಸಿದೆ. 1992ರ ಇಂದ್ರಾ ಸಾಹ್ನಿ ಪ್ರಕರಣದ (ಮಂಡಲ್‌ ತೀರ್ಪು ಎಂದೂ ಹೇಳಲಾಗುತ್ತದೆ) ಐತಿಹಾಸಿಕ ತೀರ್ಪಿನಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಶೇ. 50ರಷ್ಟಕ್ಕೆ ಮಿತಿಗೊಳಿಸಿತ್ತು. ಈ ತೀರ್ಪನ್ನು ವಿಸ್ತೃತ ಪೀಠವು ಮರುಪರಿಶೀಲನೆಗೆ ಒಳಪಡಿಸುವ ಅಗತ್ಯ ಇದೆಯೇ ಎಂಬ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಇದೀಗ ಆರಂಭಿಸಿದೆ.  ಮೀಸಲಾತಿ […]

ರಾಷ್ಟೀಯ ಸುರಕ್ಷೆಯ ದ್ರಷ್ಟಿಯಿಂದ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದನ್ನು ನಿಷೇಧಿಸಲು ಹಾಗೂ 1,000ಕ್ಕೂ ಅಧಿಕ ಮದರಸಾಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಶ್ರೀಲಂಕಾ ಸರ್ಕಾರ ಪ್ರಕಟಿಸಿದೆ. ಈ ಕುರಿತ  ಪ್ರಸ್ತಾವಕ್ಕೆ ಈಗಾಗಲೇ ಸಹಿ ಹಾಕಲಾಗಿದ್ದು, ಅನುಮೋದನೆಗಾಗಿ ಸಚಿವ ಸಂಪುಟಕ್ಕೆ ಕಳುಹಿಸಲಾಗುವುದು ಎಂದು ಸಾರ್ವ ಜನಿಕ ಭದ್ರತಾ ಸಚಿವ ಶರತ್‌ ವೀರ ಶೇಖರ ಹೇಳಿದ್ದಾರೆ. ಬೌದ್ಧ ದೇವಾಲಯ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ  ಸಚಿವ ವೀರಶೇಖರ ಅವರು ಬಾಲ್ಯದಲ್ಲಿ ತಮಗೆ ಸಾಕಷ್ಟು ಜನ […]

ದೇಶದ ಬಡ ವಲಸಿಗರಿಗೆ ನೆರವಾಗುವ ಸಲುವಾಗಿ ‘ಒಂದು ದೇಶ – ಒಂದು ಪಡಿತರ ಚೀಟಿ’ (ಏಕ ದೇಶ, ಏಕ ರೇಶನ್‌ ಕಾರ್ಡ್‌’) ಯೋಜನೆಯನ್ನು ರೂಪಿಸಿರುವ ಕೇಂದ್ರ ಸರ್ಕಾರ ಈಗ ‘ಮೇರಾ ರೇಶನ್‌ ಕಾರ್ಡ್‌’ (ನನ್ನ ಪಡಿತರ ಚೀಟಿ) ಎಂಬ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ. ಒಂದೇ ಪಡಿತರ ಚೀಟಿ ಇಟ್ಟುಕೊಂಡು ದೇಶದ ಯಾವ ಭಾಗದಲ್ಲಾದರೂ ಪಡಿತರ ಪಡೆಯುವ ಯೋಜನೆ ‘ಒಂದು ದೇಶ – ಒಂದು ಪಡಿತರ ಚೀಟಿ’. ಈ ಆ್ಯಪ್‌ನಿಂದ […]

ಬೆಂಗಳೂರು: ಅಡಿಗರು ಭಾರತದ ಪ್ರಮುಖ ಕವಿಗಳಲ್ಲಿ ಅಗ್ರರೆನಿಸಿಕೊಂಡಿದ್ದರು. ಅವರು ಕನ್ನಡದ ಕಾವ್ಯ ಲೋಕಕ್ಕೆ ಹೊಸ ಮೆರುಗು ನೀಡಿದವರು. ಆಗಿನ ಕಾಲದ ಯುವ ಸಾಹಿತಿಗಳಿಗೆ ಪ್ರೇರಕ ಶಕ್ತಿಯೂ ಆಗಿದ್ದರು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜೈನ್‌ ವಿಶ್ವವಿದ್ಯಾಲಯ ಹಾಗೂ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಎಂ.ಗೋಪಾಲಕೃಷ್ಣ ಅಡಿಗರ ವ್ಯಕ್ತಿತ್ವ ಮತ್ತು ಸಾಹಿತ್ಯ’ ಕುರಿತ ಎರಡು […]