• Samvada
Friday, August 12, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಭಾರತ ಕಂಡ ಶ್ರೇಷ್ಠ ಕ್ರಾಂತಿಕಾರಿ ಭಾಯಿ ಪರಮಾನಂದರು

Vishwa Samvada Kendra by Vishwa Samvada Kendra
December 8, 2021
in Articles
250
0
ಭಾರತ ಕಂಡ ಶ್ರೇಷ್ಠ ಕ್ರಾಂತಿಕಾರಿ ಭಾಯಿ ಪರಮಾನಂದರು
491
SHARES
1.4k
VIEWS
Share on FacebookShare on Twitter

ಭಾಯಿ ಪರಮಾನಂದರು.. ಭಾರತ ಕಂಡ ಶ್ರೇಷ್ಠ ಕ್ರಾಂತಿಕಾರಿ. ಪಂಜಾಬಿನ ಝೇಲಮ್ಮಿನಲ್ಲಿ ಹುಟ್ಟಿದ ಇವರು, ತಂದೆ ತಾರಾ ಚಂದ್ ಮೋಹ್ಯಾಲರ ಕಾರಣದಿಂದ ಬಹಳ ಕಿರಿಯ ವಯಸ್ಸಿನಲ್ಲೇ ಆರ್ಯ ಸಮಾಜದ ಪ್ರಭಾವಕ್ಕೆ ಒಳಪಡುತ್ತಾರೆ. ಆರ್ಯ ಸಮಾಜದ ಕಾರ್ಯಗಳ  ಪ್ರಚಾರಕ್ಕಾಗಿ 1905ರ ನಂತರದಲ್ಲಿ  ಆಫ್ರಿಕಾ, ಅಮೇರಿಕಾ ಖಂಡಗಳಲ್ಲೂ ಅನೇಕ ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಹಾಗಿರುವಾಗಲೇ ಕೇವಲ ಧಾರ್ಮಿಕ ಸುಧಾರಣೆ ಮಾತ್ರವಲ್ಲ ರಾಷ್ಟ್ರದ ಮುಕ್ತಿಯೂ  ಆರ್ಯ ಸಮಾಜದ ಜವಾಬ್ದಾರಿ ಎಂಬುದನ್ನ ಮನಗಂಡ ಪಂಜಾಬಿನ ಆರ್ಯ ಸಮಾಜದ ಅನೇಕ ಮುಖಂಡರುಗಳೂ ಸ್ವತಾಂತ್ರ್ಯಾಂದೋಲನದಲ್ಲಿ ಪ್ರಮುಖವಾಗಿ ಭಾಗವಹಿಸುತ್ತಿದ್ದರು.

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಅದರಲ್ಲೂ ಲಾಲಾ ಲಜಪತರಾಯರಂತಹ ಹಿರಿಯ ಮುತ್ಸದ್ದಿಗಳ ಜೊತೆ ಒಡನಾಟವಿದ್ದುದರಿಂದ ಸಹಜವಾಗಿಯೇ ಪರಮಾನಂದರಿಗೆ ಸ್ವಾತಂತ್ರ್ಯಾಂದೋಲನದಲ್ಲಿ ಆಸಕ್ತಿ ಮೂಡುತ್ತದೆ. ಮುಂದೆ ಆರ್ಯ ಸಮಾಜದ ಕೆಲಸಗಳ ಸಲುವಾಗಿಯೇ ಪ್ರವಾಸ ಮಾಡುತ್ತಾ ಜೊತೆಗೆ ಗದರ್ ಪಾರ್ಟಿಯ ಲಾಲಾ ಹರದಯಾಳರ ಜೊತೆ ದಕ್ಷಿಣ ಅಮೇರಿಕಾದ ಬ್ರಿಟಿಷ್ ವಸಾಹತುಗಳಲ್ಲೂ ಪ್ರವಾಸ ಮಾಡುವ ಇವರು, ಗದರ್ ಚಳುವಳಿಯನ್ನು ಆರಂಭಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅಲ್ಲದೆ ಗದರ್ ಪಾರ್ಟಿಯ ಪ್ರಮುಖ ಗ್ರಂಥ ತಾರಿಖ್ – ಐ – ಹಿಂದ್ಅನ್ನು ರಚಿಸುತ್ತಾರೆ.

ಮೊದಲನೆಯ ಮಹಾಯುದ್ಧದ  ತರುವಾಯು ಗದರ್ ಭಾರತದಲ್ಲಿ ಸಶಸ್ತ್ರ ಕ್ರಾಂತಿಗಾಗಿ ಚಳುವಳಿಯನ್ನು ಹೂಡಿತ್ತು. ಈ ಕುರಿತಾಗಿ ಪೇಶಾವರದ ನಾಯಕತ್ವವನ್ನ ಭಾಯಿ ಪರಮಾನಂದರಿಗೆ ವಹಿಸಲಾಗಿತ್ತು. ಲಾಹೋರ್ ಕಾನ್ಸ್ಪಿರೆಸಿ ಕೇಸಿನಲ್ಲಿ ಬಂಧಿತರಾದ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬ್ರಿಟಿಷ್ ಸರಕಾರ  ಇವರನ್ನು ಅಂಡಮಾನಿನ ಜೈಲಿಗೆ ಗಡಿಪಾರು ಮತ್ತು ಜೀವಾವಧಿ ಶಿಕ್ಷೆಗೆ ಕಳುಹಿಸಿತು. ಅಂಡಮಾನಿನ ಜೈಲಿನಲ್ಲಿ ಸಾವರ್ಕರರ ಸಂಪರ್ಕಕ್ಕೂ ಬರುವ ಭಾಯಿ ಪರಮಾನಂದರು ಅಲ್ಲಿನ ಸೆರೆಮನೆ ವಾಸದಲ್ಲಿ ಖೈದಿಗಳಿಗೆ ನೀಡುತ್ತಿದ್ದ ಚಿತ್ರ ಹಿಂಸೆಯ ವಿರುದ್ಧವಾಗಿ ಸತತ ಎರಡು ತಿಂಗಳುಗಳ ಕಾಲ ಉಪವಾಸದ ಹೋರಾಟವನ್ನು ನಡೆಸುತ್ತಾರೆ.

ಬಡತನದ ನಡುವಿನಲ್ಲೂ ಸ್ವಾತಂತ್ರ್ಯದ ಆಂದೋಲನಕ್ಕಾಗಿ ತಮ್ಮ ಇಡೀ ಬದುಕನ್ನೇ ಮುಡಿಪಿಟ್ಟ ಭಾಯಿ ಪರಮಾನಂದರ ತ್ಯಾಗ ಬಲಿದಾನ ಎಂದಿಗೂ ಸ್ಮರಣೀಯ.  ಗಾಂಧೀಜಿಯವರ  ಒಡನಾಡಿ ರೆವ್. ಸಿ.ಎಫ್ ಆಂಡ್ರೀವ್ಸ್ ಭಾಯಿ ಪರಮಾನಂದರು ಗಡಿಪಾರಾಗಿ ಅಂಡಮಾನಿನ ಜೈಲಿಗೆ ಹೋದಾಗ ಅವರ ಮನೆಗೆ ಭೇಟಿ ನೀಡುತ್ತಾರೆ.ಗಡಿಪಾರಾಗಿ ಜೈಲು ಸೇರಿದ್ದರಿಂದ ಜೋಪಡಿಯಂತಹ ಕೋಣೆಯಲ್ಲಿ ಗಾಳಿ ಬೆಳಕು ಇಲ್ಲದೆ, ಒಂದು ಅಗುಳು ಧಾನ್ಯವೂ ಇರದೆ, ರೋಗಗ್ರಸ್ತರಾದ ಮಕ್ಕಳನ್ನು ತೊಡೆಯ ಮೇಲೆ ಮಲಗಿಸಿಕೊಂಡ ಅವರ ಹೆಂಡತಿ ಮತ್ತು ಮಕ್ಕಳನ್ನು ಕಂಡು ಅತ್ಯಂತ ಭಾವುಕರಾಗಿ “ ಭಾಯಿ ಪರಮಾನಂದರಾಗುವುದು ಅಷ್ಟು ಸುಲಭವಲ್ಲ” ಎನ್ನುತ್ತಾ ಒದ್ದೆಯಾದ ಕಣ್ಣಂಚು ಒರೆಸಿಕೊಳ್ಳುತ್ತಾರೆ . .

ಅಂಡಮಾನಿನ ಸೆರೆವಾಸದ ನಂತರ ಭಾರತಕ್ಕೆ ಮರಳಿದ ಭಾಯಿ ಪರಮಾನಂದರು ಮದನ್ ಮೋಹನ್ ಮಾಳವೀಯರ ನಂತರ 1930ರ ಹೊತ್ತಿಗೆ ಹಿಂದೂ ಮಹಾಸಭಾದ ನೇತೃತ್ವವನ್ನು ವಹಿಸಿಕೊಳ್ಳುತ್ತಾರೆ. ಹಿಂದೂ ಮಹಾಸಭಾ ಅಲ್ಲಿನವರೆಗೂ ಮಂದಗಾಮಿ ತತ್ವಗಳ ಆಧಾರದ ಮೇಲೆ ನಡೆಯುತ್ತಿತ್ತು. ಆದರೆ ಮಹಾರಾಷ್ಟ್ರದ ಬಿ.ಎಸ್.ಮೂಂಜೆ ಮತ್ತು ಭಾಯಿ ಪರಮಾನಂದರ ನೇತೃತ್ವದಿಂದ ತೀವ್ರಗಾಮಿಯಾದ, ಚಟುವಟಿಕೆಗಳಿಂದ ಕೂಡಿದ ಹಿಂದೂ ಮಹಾಸಭಾವನ್ನುತಮ್ಮ ಹೆಗಲುಗಳ ಮೇಲೆ   ಮುನ್ನಡೆಸಿಕೊಂಡು ಬಂದಿದ್ದರು. ಅವರ ಸ್ಮೃತಿ ದಿನದಂದು ನಮ್ಮ ಹೃದಯಪೂರ್ವಕ ನಮನಗಳು.

  • email
  • facebook
  • twitter
  • google+
  • WhatsApp
Tags: andamanaryasamajbritishIndiafreedomgandhijihindumahasabhalalalajpatrayrevolutionstruggle

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ಜಗತ್ತಿನೆದುರು ವಿಜಯ ಪತಾಕೆ ಹಾರಿಸಿದ ಹೆಮ್ಮೆಯ ‘ವಿಜಯ ದಿವಸ್’

ಜಗತ್ತಿನೆದುರು ವಿಜಯ ಪತಾಕೆ ಹಾರಿಸಿದ ಹೆಮ್ಮೆಯ ‘ವಿಜಯ ದಿವಸ್’

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

Rejoinder to Ashutosh Varshney by Ram Madhav, RSS senior functionary

Rejoinder to Ashutosh Varshney by Ram Madhav, RSS senior functionary

March 27, 2014
ಬದಲಾಗುತ್ತಿರುವ ವಿಶ್ವದ ವ್ಯಾಕ್ಸಿನ್ ವಿಚಾರಧಾರೆ – ಇದು ಔದಾರ್ಯವಲ್ಲ, ಎಕನಾಮಿಕ್ಸ್!

ಬದಲಾಗುತ್ತಿರುವ ವಿಶ್ವದ ವ್ಯಾಕ್ಸಿನ್ ವಿಚಾರಧಾರೆ – ಇದು ಔದಾರ್ಯವಲ್ಲ, ಎಕನಾಮಿಕ್ಸ್!

May 7, 2021
RSS ABKM-Resolution-1: Growing Jehadi Radicalization in Southern States of Bharat

RSS ABKM-Resolution-1: Growing Jehadi Radicalization in Southern States of Bharat

August 25, 2019
MADESNANA is a blot on progressive Hindu society; writes Pradeep Shimoga

MADESNANA is a blot on progressive Hindu society; writes Pradeep Shimoga

December 8, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ
  • Swaraj@75 – Refrain from politics over Amrit Mahotsava
  • Amrit Mahotsav – Over 200 tons sea coast garbage removed in 20 days
  • “ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In