• Samvada
Tuesday, May 24, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಬೆಂಗಳೂರು: ಸಾಹಿತಿ ಎಸ್.ಎಲ್. ಭೈರಪ್ಪರಿಂದ ‘ಮಹಾನ್ ಇತಿಹಾಸಕಾರರು’ ಸೇರಿದಂತೆ 4 ಗ್ರಂಥಗಳ ಲೋಕಾರ್ಪಣೆ

Vishwa Samvada Kendra by Vishwa Samvada Kendra
December 8, 2013
in News Digest
250
1
ಬೆಂಗಳೂರು: ಸಾಹಿತಿ ಎಸ್.ಎಲ್. ಭೈರಪ್ಪರಿಂದ ‘ಮಹಾನ್ ಇತಿಹಾಸಕಾರರು’ ಸೇರಿದಂತೆ 4 ಗ್ರಂಥಗಳ ಲೋಕಾರ್ಪಣೆ
491
SHARES
1.4k
VIEWS
Share on FacebookShare on Twitter

ಬೆಂಗಳೂರು: “ವಾಯ್ಸ್ ಆಫ್ ಇಂಡಿಯಾದಂತಹ ಅಧ್ಯಯನ ಶೀಲ ಗ್ರಂಥಗಳು ಎಲ್ಲ ಭಾಷೆಯಲ್ಲೂ ಬರಬೇಕು “ಎಂದು ಸರಸ್ವತಿ ಸಂಮಾನ್ ಪುರಸ್ಕೃತ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಹೇಳಿದ್ದಾರೆ.

IMG_1057

READ ALSO

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

 ಅವರು ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಾಹಿತಯ ಸಿಂಧು ಪ್ರಕಾಶನಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಡಿಸೆಂಬರ್ ೮ರಂದು ಜಯನಗರದ ಆರ್,ವಿ.ಟೀಚರ‍್ಸ್ ಕಾಲೇಜಿನಲ್ಲಿ ನಡೆದ ಅರುಣ್ ಶೌರಿ ಅವರ EMINENT HISTORIANS ಸೇರಿದಂತೆ ನಾಲ್ಕು  ಪುಸ್ತಕಗಳ ಲೋಕಾರ್ಪಣ ಕಾರ್ಯಕ್ರಮದಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

‘ನಮ್ಮ ಇತಿಹಾಸವನ್ನು ಮೊದಲಿಗೆ ಬರೆದ ಬ್ರಿಟಿಷ್ ಇತಿಹಾಸಕಾರರಿಗೆ ಎಲ್ಲದರಲ್ಲೂ ನಾವು ಭಾರತೀಯರಿಗಿಂತ ಕಡಿಮೆಯಿಲ್ಲ ಎಂಬುದನ್ನು ತೋರಿಸುವುದು ಅವರ ಅಂತಿಮ ಉದ್ದೇಶವಾಗಿತ್ತು. ಭಾರತದ ಜ್ಞಾನಪುನರುಜ್ಜೀವನದಿಂದ ನಮ್ಮಲ್ಲಿ ಸ್ವಲ್ಪಮಟ್ಟಿಗೆ ಆತ್ಮವಿಶ್ವಾಸ ಬಂದು ನಮ್ಮ ಪರಂಪರೆ ಅವರಿಗೆ ಸಮಾನ ಎಂಬ ಆತ್ಮವಿಶ್ವಾಸ ಬಂದರೂ ಕೂಡ ಬೌದ್ಧ ಮತು ಹಿಂದೂ ಧರ್ಮಗಳು ಕ್ರೈಸ್ತಮತಕ್ಕೆ ಸಮಾನವಾದರೂ ಪರಿಪೂರ್ಣವಾದದ್ದು ಕ್ರೈಸ್ತಮತ ಮಾತ್ರ ಎಂಬ ಬ್ರಿಟಿಷ್ ಪಾದ್ರಿ ಗ್ಯಲವೆ ಸಿದ್ಧಾಂvವೇ ಮುಂದುವರಿಯಿತು. ಡಾ. ಎಸ್. ರಾಧಾಕೃಷ್ಣನ್, ಆನಂದ ಕುಮಾರಸ್ವಾಮಿಯಂತಹ ವಿದ್ವಾಂಸರು ಕೂಡ ಎಲ್ಲ ಧರ್ಮಗಳ ಸಂದೇಶ ಒಂದೇ ಎಂಬ ಧಾಟಿಯಲ್ಲೇ ಮಾತನಾಡಿದರು. ಅದನ್ನು ಅಲ್ಲಗಳೆದು ಹಿಂದೂ ಧರ್ಮ ಏನು? ಅನ್ಯಮತಗಳೇನು ಎಂಬುದನ್ನು ದೇಶದಲ್ಲಿ ಸ್ಪಷ್ಟವಾಗಿ ತೋರಿಸಿದವರು ರಾಮ್‌ಸ್ವರೂಪ್ ಮತ್ತು ಸೀತಾರಾಮ್ ಗೋಯಲ್ ‘ ಎಂದು ಡಾ. ಭೈರಪ್ಪ ವಿವರಿಸಿದರು.

IMG_1058

ಪ್ರವಾದಿ ಅಲ್ಲದಿದ್ದರೆ ಅದು ಮತ(ರಿಲಿಜಿಯನ್)ವೇ ಅಲ್ಲ. ಒಬ್ಬನೇ ದೇವರು; ಅವನು ತನ್ನ ಬೋಧನೆಯನ್ನು ನನ್ನ ಮೂಲಕ ಪ್ರಕಟಿಸಿದ್ದಾನೆ; ಇದನ್ನು ನಂಬಿದರೆ ಸ್ವರ್ಗ; ನಂಬದಿದ್ದರೆ ನರಕ – ಎಂದು ಪ್ರವಾದಿ ಮತಗಳು ಹೇಳುತ್ತವೆ. ಆದರೆ ಹಿಂದು ಧರ್ಮಕ್ಕೆ ಪ್ರವಾದಿ ಇಲ್ಲ. ಋಷಿಗಳು ಮಾತ್ರ ಇದ್ದಾರೆ. ವೇದಗಳಲ್ಲಿ ಋಷಿಗಳ ತತ್ತ್ವಶಾಸ್ತ್ರೀಯ ಮಿಂಚು(ಬೆಳಕು)ಗಳು ಕಾಣುತ್ತವೆ. ಅವುಗಳ ಸಾರ ಉಪನಿಷತ್‌ಗಳಲ್ಲಿ ಇದ್ದರೂ ಕೂಡ ಅವುಗಳ ಗೂಡಾರ್ಥ ಸಾಮಾನ್ಯರಿಗೆ ತಿಳಿಯದು. ಉಪನಿಷತ್‌ಗಳ ಸಾರವನ್ನು ಹೇಳುವ ಬ್ರಹ್ಮಸೂತ್ರಗಳು ಕೂಡ ಕ್ಲಿಷ್ಟವಾಗಿವೆ. ಆದರೆ ಋಷಿಗಳಾದ ವ್ಯಾಸ-ವಾಲ್ಮೀಕಿಗಳು ರಚಿಸಿದ ರಾಮಾಯಣ ಮಹಾಭಾರತಗಳು ವೇದಸಂಸ್ಕೃತಿಯನ್ನು ಸ್ಪಷ್ಟವಾಗಿ ಚಿತ್ರಿಸಿವೆ ಎಂದವರು ತಿಳಿಸಿದರು. ಕುರಾನ್‌ನಲ್ಲಿ ೨೩ ಕಡೆ ನನ್ನ ಮತವನ್ನು ಒಪ್ಪದವರನ್ನು ಕೊಲ್ಲಿ ಎಂದು ಹೇಳಿದೆ. ಹಾಗೆ ಕೊಂದರೆ ಸರ್ಗ ಸಿಗುತ್ತದೆ. ಅಲ್ಲಿ ಚಿನ್ನದ ಅರಮನೆ, ತಂಪುಹವೆ, ಸುಂದರಿಯರಾದ ೭೨ ಮಂದಿ ಕನ್ಯೆಯರು ನಿಮ್ಮವರಾಗುತ್ತಾರೆ ಎಂದು ಕುರಾನ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದ ಭೈರಪ್ಪನವರು, ಈ ಕಾರಣದಿಂದಲೇ ಮುಸಲ್ಮಾನ್ ಯುವಕರು ಭಯೋತ್ಪಾದಕ ರಾಗುತ್ತಿದ್ದಾರೆ ಎಂದರು. ಯೇಸು ತಾನು ದೇವರ ಮಗ ಎಂದು ಹೇಳಿಕೊಂಡು ತನ್ನ ಮಾತನ್ನು ಪಾಲಿಸುವಂತೆ ಆದೇಶಿಸಿದ್ದಾರೆ. ಈ ಪ್ರವಾದಿ ಮತಗಳಲ್ಲಿ ತನ್ನ ಮಾತನ್ನು ವಿಧಿಸುವ ಅಹಂಕಾರವಿದ್ದರೆ ಹಿಂದೂಧರ್ಮ ಅಂತಹ ಒಂದು ರಿಲಿಜಿಯನ್ ಅಲ್ಲ; ಅದು ಧರ್ಮ ಎಂದು ವಿವರಿಸಿದರು.

ಭಾರತದ ಇತಿಹಾಸವನ್ನು ತಿರುಚಿದ ಬಗ್ಗೆ ತಿಳಿಸುತ್ತಾ, ಬ್ರಿಟಿಷರು ಆರಂಭಿಸಿದ ಕೆಲಸ ಸ್ವತಃ ಇತಿಹಾಸಕಾರರು ಎನಿಸಿಕೊಂಡ ಮೊದಲ ಪ್ರಧಾನಿ ಅವರ ಕಾಲದಲ್ಲಿ ಮುಂದುವರಿಯಿತು. ಅವರ ಮಗಳು ಪ್ರಧಾನಿಯಾದಾಗ ಕಮ್ಯುನಿಷ್ಠರು ಕಾಂಗ್ರೆಸ್ ಸರಕಾರವನ್ನು ಬೆಂಬಲಿಸಿ ಶಿಕ್ಷಣದಂತಹ ಪ್ರಮುಖ ಖಾತೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಅವರ ಇಷ್ಟದಮತೆ ದೆಹಲಿಯ ಜೆಎನ್‌ಯು (ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ) ಸ್ಥಾಪನೆಗೊಂಡಿತು. ಐಸಿಎಚ್‌ಆರ್(ಭಾರತೀಯ ಇತಿಹಾಸ ಸಂಶೋಧನ ಮಂಡಳಿ) ಮುಂತಾದ ಸಂಸ್ಥೆಗಳಲ್ಲಿ ಅವರ ಜನರೇ ತುಂಬಿದರು. ಬೇರೆ ರೀತಿಯ ಚಿಂತನೆ ಇದ್ದವರಿಗೆ ಆ ಸಂಸ್ಥೆಗಳು ಉದ್ಯೋಗ ನೀಡಲಿಲ್ಲ; ಅವರ ಪುಸ್ತಕಗಳನ್ನು ಪ್ರಕಟಿಸಲಿಲ್ಲ. ಇತಿಹಾಸ, ಸಮಾಜಶಾಸ್ತ್ರವಲ್ಲದೆ ಸಾಹಿತ್ಯ, ಅರ್ಥಶಾಸ್ತ್ರ ಕ್ಷೇತ್ರಗಳಿಗೂ ಇದು ವಿಸ್ತರಿಸಿತು. ಅಂತಹ ಸನ್ನವೇಶದಲ್ಲಿ ರಾಮ್ ಸ್ವರೂಪ್ ಮತ್ತು ಸೀತಾರಾಮ್ ಗೋಯಲ್ ಮೂಲಗ್ರಂಥಗಳ ಅಧ್ಯಯನ ನಡೆಸಿ ಯಾವ ಮತಗಳೇನು? ಅವುಗಳ ಸ್ವರೂಪ-ದೋಷಗಳೇನು? ಹಿಂದೂಧರ್ಮ ಏನು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ನೀಡಿದರು. ಪ್ರಕಾಶಕರು ಸಿಗುವುದು ಕಷ್ಟವಾದಾಗ ತಾವೇ ಸಂಸ್ಥೆ (ವಾಯ್ಸ್ ಆಫ್ ಇಂಡಿಯಾ) ಸ್ಥಾಪಿಸಿ ಪುಸ್ತಕ ಪ್ರಕಟಿಸಿದರು ಎಂದು ಶ್ಲಾಘಿಸಿದ ಭೈರಪ್ಪ, ಅವರ ಬರಹಗಳಿಂದ ತಮ್ಮ ಈ ಕುರಿತ ಚಿಂತನೆಗಳು ಸ್ಪಷ್ಟವಾದವು. ’ಆವರಣ’ ಕಾದಂಬರಿಯಲ್ಲಿ ಅವುಗಳಿಗೆ ಸಂಬಂಧಿಸಿದ ದಾಖಲೆಗಲನ್ನು  ರೆಫರೆನ್ಸ್ ರೂಪದಲ್ಲಿ ಪುಸ್ತಕದಲ್ಲಿಯೇ ನೀಡಲಾಗಿದೆ. ವಾಯ್ಸ್ ಆಫ್ ಇಂಡಿಯಾದಂತಹ ಅಧ್ಯಯನ ಶೀಲ ಗ್ರಂಥಗಳು ಎಲ್ಲ ಭಾಷೆಯಲ್ಲೂ ಬರಬೇಕು ಎಂದು ಆಶಿಸಿದರು.

1475967_10201047654738595_735060633_n

ಪುಸ್ತಕಗಳನ್ನು ಕುರಿತು ಮಾತನಾಡಿದ ಖ್ಯಾತ ಚಿಂತಕ, ವಿಮರ್ಶಕ ಅಜಕ್ಕಳ ಗಿರೀಶ್ ಭಟ್ ಅವರು, ಇಂದು ಎಲ್ಲವನ್ನೂ ಕೋಮುವಾದಿ ಅಥವಾ ಜಾತ್ಯಾತೀತ(ಸೆಕ್ಯುಲರ್) ಮುಂತಾಗಿ ವಿಭಜಿಸುವ ಸರಳೀಕರಣ ಜಾಸ್ತಿಯಾಗಿದೆ. ಅದಕ್ಕೆ ಹೆದರುವ ವಿದ್ಯಾವಂತರು ಮಧ್ಯಮವರ್ಗದವರು ಎರಡರಿಂದಲೂ ದೂರಿರಲು ಬಯಸಿ ಮೌನವಾಗಿರುತ್ತಾರೆ. ಉದಾಹರಣೆಗೆ  ಟಿಪ್ಪು  ವಿವಿ ಬೇಡ ಎಂದರೆ ಕೋಮುವಾದಿ ಆಗುತ್ತೇವೆ. ವಿವಿ ಆಗಲೀ ಎಂದರೆ ಸೆಕ್ಯುಲರ್ ಆಗುತ್ತೇವೆ ಎಂಬ ಮಾನಸೀಕತೆ ಇಂದು ಹಬ್ಬಿದೆ ಎಂದು ವಿವರಿಸಿದರು.

ಅರುಣ್ ಶೌರಿ ಅವರ ’ದಿ ಎಮಿನೆಂಟ್ ಹಿಸ್ಟೋರಿಯನ್’ ಕೃತಿ ಐಸಿಎಚ್‌ಆರ್ , ಐಸಿಎಸ್‌ಎಸ್‌ಆರ್, ಎನ್‌ಸಿಇಆರ್‌ಟಿ (ಶಿಕ್ಷಣ ಸಂಶೋಧನೆ, ತರಬೇತಿಯ ರಾಷ್ಟ್ರೀಯ ಮಂಡಳಿ) ಸಂಸ್ಥೆಗಳಲ್ಲಿ ಸೇರಿಕೊಂಡವರು, ಅವರು ನಡೆಸುವ ಆರ್ಥಿಕ ಭ್ರಷ್ಟಾಚಾರ ಹಾಗೂ ಬೌದ್ಧಿಕ ಅಪ್ರಾಮಾಣಿಕತೆಗಳನ್ನು ಬಯಲಿಗೆಳೆದಿದ್ದಾರೆ; ನಾವಿಂದು ದಿಕ್ಕುತಪ್ಪಿರುವುದರ ಕಾರಣ ತಿಳಿಸಿದ್ದಾರೆ ಎಂದ ಅಜಕ್ಕಳ ಗಿರೀಶ ಭಟ್, ಹಂಪಿ ವಿವಿಯಲ್ಲಿ ಕೂಡಾ ಅವ್ಯವಹಾರವಾಗಿ ಒಬ್ಬರ ಅಮಾನತು ಕೂಡಾ ಆಗಿರುವುದನ್ನು ಉಲ್ಲೇಖಿಸಿದರು.

1476374_10201047651258508_1970134844_n

ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕ ಡಾ. ಎಸ್.ಆರ್. ರಾಮಸ್ವಾವಿ, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಅನುವಾದಕರೂ ವಾಯ್ಸ್ ಆಫ್ ಇಂಡಿಯಾ ಸರಣಿಯ ಸಂಪಾದಕರೂ ಆದ ಮಂಜುನಾಥ್ ಅಜ್ಜಂಪುರ, ಲೇಖಕ ಟಿ.ಎ.ಪಿ. ಶೆಣೈ ಹಾಗೂ ಶ್ರೀನಿವಾಸ ಸುಬ್ರಹ್ಮಣ್ಯಂ ಉಪಸ್ಥಿತರಿದ್ದರು.

  • email
  • facebook
  • twitter
  • google+
  • WhatsApp

Related Posts

News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

May 22, 2022
News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
Next Post
‘Bhakti Sangeet’ aiming Cow Conservation held at Bangalore

'Bhakti Sangeet' aiming Cow Conservation held at Bangalore

Comments 1

  1. vasudevarao says:
    8 years ago

    ರಾಮ ಸ್ವರೂಪ್ ಮತ್ತು ಸೀತಾರಾಮ ಗೋಯಲ್ ಅವರಿಗಿಂತ ಬಹಳಷ್ಟು ವರ್ಷಗಳ ಹಿಂದೆ ಕ್ರಿಶ್ಚಿಯನ್ ಮತ್ತು ಇಸ್ಲಾಂ ಮತಗಳನ್ನು ಸತ್ಯ, ತರ್ಕ ಮತ್ತು ವೇದಗಳ ಹಿನ್ನೆಲೆಯಲ್ಲಿ ವಿಮರ್ಶೆ ಮಾಡಿದ ಮೊದಲ ವೈಕ್ತಿ ಸ್ವಾಮಿ ದಯಾನಂದ ಸರಸ್ವತಿಯವರು. ಹಿಂದೂ ಮತಗಳಲ್ಲಿ ಇರಬಹುದಾದ ದೋಷಗಳನ್ನು ಅವರು ಪ್ರಸ್ತಾವನೆ ಮಾಡದೆ ಇರಲಿಲ್ಲ. ಆದರೆ ಇಂದಿನ ಸೆಕ್ಯುಲರ್ ಬುದ್ಧಿಜೀವಿಗಳಂತೆ ಕೇವಲ ಹಿಂದೂಧರ್ಮದಲ್ಲಿ ಇರುವ ದೋಷಗಳನ್ನು ಮಾತ್ರ ದಯಾನಂದರು ತೋರಿಸಲಿಲ್ಲ. ಬಹುಶಃ ಜಗತ್ತಿನಲ್ಲಿಯೇ ಪ್ರಪಥಮವಾಗಿ ಇಸ್ಲಾಂ ಮತ್ತು ಇಸಾಯಿಮತಗಳ ನಿಜ ರೂಪವನ್ನು ಅವರು ತಮ್ಮ ಅಮೋಘ ಕ್ರಾಂತಿಕಾರಿ ಗ್ರಂಥ ” ಸತ್ಯಾರ್ಥ ಪ್ರಕಾಶ” ದಲ್ಲಿ ತೋರಿಸಿದರು. ಸತ್ಯಾರ್ಥ ಪ್ರಕಾಶ ಸೋತ ಹಿಂದೂ ಜನಾಂಗಕ್ಕೆ ಒಂದು ಸಂಜೀವನಿಯಾಯಿತು. ಇದುವರೆಗೆ ಇಸ್ಲಾಂ ಮತ್ತು ಕ್ರಿಶ್ಚಿಯನ್ನ ಮತೀಯರು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡಿದಾಗ ಹಿಂದೂಗಳು ಆಕ್ರಮಿತಗೊಂಡ ಆಮೆಯು ತನ್ನ ಅಂಗಗಳನ್ನು ಮುದುಡಿಕೊಂಡು ಕೂಡಿದಂತೆ ಇದ್ದರು. ಪ್ರತ್ಯಾಕ್ರಮಣ ಮಾಡುವ ಕ್ಷಮತೆಯಾಗಲೀ, ಅಥವಾ ಸಾಹಸ, ಪೌರುಷ ವಾಗಲಿ ಇರಲಿಲ್ಲ. ಸತ್ಯಾರ್ಥ ಪ್ರಕಾಶ ಹಿಂದೂಗಳಿಗೆ ಸ್ವಾಭಿಮಾನ, ನ್ಯಾಯಯುತ ರೀತಿಯಲ್ಲಿ ಪ್ರತ್ಯಾಕ್ರಮಣ ಮಾಡಲು ಅವಕಾಶ ಒದಗಿಸಿತು. ಆದ್ದರಿಂದಲೇ ವೀರ ಸಾವರ್ಕರ್ ಅದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇಂದಿಗೂ ಹಿಂದೂಗಳಿಗೆ ಅಗತ್ಯವಿರುವ ಪೌರುಷ ಪರಾಕ್ರಮಗಳನ್ನು ತುಂಬುವ ಕ್ರಿಶ್ಚಿಯನ್ ಮತ್ತು ಇಸ್ಲಾಂ ಮತದ ಹುಳುಕುಗಳನ್ನು ಜಗತ್ತಿಗೆ ತೋರಿಸುತ್ತಿರುವ ಏಕೈಕ ಗ್ರಂಥ ಇದು. ರಾಮಸ್ವರೂಪ್ ಮತ್ತು ಸೀತಾರಾಮ ಗೋಯಲ್ ರವರಿಗೆ ಇಂತಹ ಸಾಹಸ ಮಾಡಿದ ಕಾರಣ ವೆಂದರೆ ಅವರು ಆರ್ಯಸಮಾಜದಲ್ಲಿ ಪಡೆದ ಶಿಕ್ಷಣ ಮತ್ತು ಸ್ವಾಮಿ ದಯಾನಂದರ ಭೋದನೆಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಕಾರಣ. ಕೆಲವು ವಿಷಯಗಳಲ್ಲಿ ಅವರು ಇನ್ನೂ ಮುಂದೆ ಹೋಗಿದ್ದಾರೆ. ಅದು ಅವರ ಸೃಜನಶೀಲತೆಗೆ ದ್ಯೋತಕ, ಮತಗಳ ವಿವೇಚನೆ, ಅವುಗಳಲ್ಲಿರುವ ದೋಷಗಳು ಮತ್ತು ವೈದಿಕ ಧರ್ಮದ ಶ್ರೇಷ್ಠತೆಯನ್ನು ತಿಳಿಯ ಬಯಸುವವರು ಸ್ವಾಮಿ ದಯಾನಂದರ ಸತ್ಯಾರ್ಥ ಪ್ರಕಾಶವನ್ನು ಅವಶ್ಯವಾಗಿ ಓದಲೇ ಬೇಕು.

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ನವೆಂಬರ್ ೧೦ರಂದು ದೇಶಾದ್ಯಂತ ಬೃಹತ್ ಪ್ರತಿಭಟನಾ ಧರಣಿ- ರಾಮ್ ಮಾಧವ್

ನವೆಂಬರ್ ೧೦ರಂದು ದೇಶಾದ್ಯಂತ ಬೃಹತ್ ಪ್ರತಿಭಟನಾ ಧರಣಿ- ರಾಮ್ ಮಾಧವ್

November 6, 2010
ಇಂದಿನಿಂದ ದೇಶಾದ್ಯಂತ ಗ್ರಾಹಕ ಜಾಗರಣ ಪಕ್ವಾಡ್-2021

ಇಂದಿನಿಂದ ದೇಶಾದ್ಯಂತ ಗ್ರಾಹಕ ಜಾಗರಣ ಪಕ್ವಾಡ್-2021

December 15, 2021
Special College Vidyarthi Sangh Shiksha Varg concludes at Tipatur

Special College Vidyarthi Sangh Shiksha Varg concludes at Tipatur

June 9, 2012
ಎಲ್ಲ ವೈವಿಧ್ಯಗಳನ್ನು ಏಕತೆಯ ಸೂತ್ರದಲ್ಲಿ  ಪೋಣಿಸುವುದೇ ಹಿಂದುತ್ವ: ಮೋಹನ್‌ಜೀ ಭಾಗವತ್

ಎಲ್ಲ ವೈವಿಧ್ಯಗಳನ್ನು ಏಕತೆಯ ಸೂತ್ರದಲ್ಲಿ ಪೋಣಿಸುವುದೇ ಹಿಂದುತ್ವ: ಮೋಹನ್‌ಜೀ ಭಾಗವತ್

October 20, 2010

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In