• Samvada
Friday, May 20, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಹಿಂದುತ್ವದ ತತ್ವದೊಂದಿಗೆ ಬೆಸೆದಿದೆ ಭಾರತದ ಗುರುತು : ಸಹಸರಕಾರ್ಯವಾಹ, ಡಾ. ಮನಮೋಹನ ವೈದ್ಯ

Vishwa Samvada Kendra by Vishwa Samvada Kendra
May 25, 2019
in Articles
250
0
UDUPI: VHP strongly condemns ban on Togadia, pledged for Hindu Unity at mega Hindu Samajotsav
491
SHARES
1.4k
VIEWS
Share on FacebookShare on Twitter

ಹಿಂದುತ್ವದ ತತ್ವದೊಂದಿಗೆ ಬೆಸೆದಿದೆ ಭಾರತದ ಗುರುತು

ಪುರಾತನ ಕಾಲದಿಂದ ಭಾರತ ಜೀವನದ ಕುರಿತು ಒಂದು ಅನನ್ಯ ಕಲ್ಪನೆಯನ್ನು ಮುಂದಿರಿಸಿದೆ. ಇದಕ್ಕೆ ಕಾರಣ ಜೀವನದ ಕುರಿತ ಭಾರತೀಯ ಚಿಂತನೆ ಅಧ್ಯಾತ್ಮದ ಮೇಲೆ ಆಧಾರಿತವಾದುದೇ ಆಗಿದೆ. ಸತ್ಯಕ್ಕೆ ಅನೇಕ ಮುಖಗಳು ಇವೆ ಮತ್ತು ಅನೇಕ ಮಾರ್ಗಗಳಿಂದ ಅದನ್ನು ತಲುಪಬಹುದು ಎನ್ನುವುದು ಭಾರತದ ನಂಬಿಕೆಯಾಗಿದೆ. ವಿಧವಿಧವಾದರೂ ಈ ಮಾರ್ಗಗಳು ಸಮಾನವಾಗಿವೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತ ವಿಕಾಸಶೀಲವಾದ ವೈವಿಧ್ಯತೆಗಳ ನಡುವೆ ಏಕತೆಯನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ವಿವಿಧತೆಯನ್ನು ವ್ಯತ್ಯಾಸ ಎಂದು ಭಾರತ ಕಾಣುವುದಿಲ್ಲ. ಪ್ರತಿಯೊಂದು ಆತ್ಮವೂ ದೈವಿಕವಾದುದು ಮತ್ತು ಅದೇ ದೈವಿಕತೆ ಸಜೀವ ಹಾಗೂ ನಿರ್ಜೀವ ಎಲ್ಲದರಲ್ಲೂ ವ್ಯಾಪಿಸಿದೆ ಎಂದು ನಮ್ಮ ಅಧ್ಯಾತ್ಮವು ತಿಳಿಸುತ್ತದೆ. ಹಾಗಾಗಿ ನಾವು ಪರಸ್ಪರ ಸೇರಿಕೊಂಡಿದ್ದೇವೆ. ಈ ಸೇರುವಿಕೆಯನ್ನು ತಿಳಿಯುವುದು, ಅದರ ವ್ಯಾಪ್ತಿಯನ್ನು ಹಿಗ್ಗಿಸುವುದು ಮತ್ತು ಅದರ ಏಳಿಗೆಗಾಗಿ ಶ್ರಮಿಸುವುದು ಧರ್ಮದ ಮೂಲವಾಗಿದೆ. ರಿಲಿಜನ್‌ಗಿಂತ ಭಿನ್ನವಾಗಿರುವ ’ಧರ್ಮ’ದ ಕಲ್ಪನೆ ಪ್ರತ್ಯೇಕತೆಯಲ್ಲ, ಇದು ಎಲ್ಲರನ್ನೂ ಒಳಗೊಂಡು ಎಲ್ಲರ ಒಳಿತಿಗಾಗಿ ಇರುವುದು.

ಇದು ಹಿಂದುವಿನ ಜೀವನದ ಕಲ್ಪನೆ; ಯಾವುದೇ ಜಾತಿ, ಮತ, ಪ್ರದೇಶ ಅಥವಾ ಭಾಷೆಗೆ ಸೇರಿದ್ದರೂ ಭಾರತರದಲ್ಲಿ ಬದುಕುವವರು ಈ ಬದುಕಿನ ಕಲ್ಪನೆಯನ್ನು ಒಪ್ಪುತ್ತಾರೆ. ಆದ್ದರಿಂದ ಹಿಂದುವಾಗಿರುವುದು ಅಥವಾ ಹಿಂದುತ್ವ ಎಲ್ಲ ಭಾರತೀಯರ ಗುರುತಾಗಿದೆ. ಆರೆಸ್ಸೆಸ್ ಸಂಸ್ಥಾಪಕ ಡಾ. ಕೆ. ಬಿ. ಹೆಡಗೇವಾರ್ ಬೇರೆ ಬೇರೆ ಜಾತಿ, ಮತ, ಪ್ರದೇಶ ಅಥವಾ ಭಾಷೆಗೆ ಸೇರಿದ ಭಾರತೀಯರಲ್ಲಿ ಏಕತೆಯ ಭಾವವನ್ನು ಜಾಗೃತಗೊಳಿಸುವ ಉಪಕರಣವನ್ನಾಗಿ ಹಿಂದುತ್ವವನ್ನು ಬಳಸಿದರು. ಇಡೀ ಸಮಾಜವನ್ನು ಸಂಘಟಿಸಿ ಹಿಂದುತ್ವದ ಸೂತ್ರದಲ್ಲಿ ಬಂಧಿಸಲು ಅವರು ಆರಂಭಿಸಿದರು.

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

ಆದರೆ ತಮ್ಮ ವೈಯಕ್ತಿಕ ಮತ್ತು ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆದಿಡಲು ಬಯಸುವವರು ಹಿಂದುತ್ವ ಮತ್ತು ಸಂಘವನ್ನು ವಿರೋಧಿಸತೊಡಗಿದರು. ಸಂಘವನ್ನು ಕೋಮುವಾದಿ, ಪ್ರತಿಗಾಮಿ, ವಿಭಜನಕಾರಿ, ಅಲ್ಪಸಂಖ್ಯಾತ ವಿರೋಧಿ ಇತ್ಯಾದಿಯಾಗಿ ದೂರತೊಡಗಿದರು. ಇಂತಹ ಆರೋಪಗಳ ಮೂಲಕ ಮಹಾತ್ಮರು ಮತ್ತು ಹಿಂದುತ್ವದ ಪ್ರತಿಪಾದಕರಾಗಿದ್ದ ಸ್ವಾಮಿ ವಿವೇಕಾನಂದ ಮತ್ತು ದಯಾನಂದ ಸರಸ್ವತಿಯಂತವರು ಮಾಡಿದ ಮಹೋನ್ನತ ಕಾರ್ಯಗಳನ್ನು ತಿರಸ್ಕರಿಸಿ ವಿರೋಧಿಸಿದರು.

ಹೀಗಿದ್ದ ವಿರೋಧಗಳ ಹೊರತಾಗಿಯೂ ಹಿಂದುತ್ವದ ನೆಲೆಗಟ್ಟಿನ ಆಧಾರದ ಮೇಲೆ ನಿರ್ಮಿತವಾದ ಸಂಘದ ಕಾರ್ಯ ವಿಸ್ತರಣೆಯಾಗುತ್ತ ಹೋಯಿತು.

ನಂತರ ಅದೇ ದುರುದ್ದೇಶಪೂರಿತ ವಿಮರ್ಶಕರು ಹಿಂದುತ್ವ ಸರಿ, ಆದರೆ ಮೃದು ಹಿಂದುತ್ವ ಮತ್ತು ಕಟ್ಟರ್-ಹಿಂದುತ್ವದ ನಡುವೆ ಅಂತರವಿದೆ ಎನ್ನತೊಡಗಿದರು. ಸ್ವಾಮಿ ವಿವೇಕಾನಂದರಂತವರ ಹಿಂದುತ್ವ ಮೃದು, ಆದರೆ ಆರೆಸ್ಸೆಸ್‌ನ ಹಿಂದುತ್ವ ಕಟ್ಟರ್ ಆದ್ದರಿಂದ ಖಂಡಿಸಲು ಯೋಗ್ಯವಾದುದು ಎಂದು ವಾದಿಸತೊಡಗಿದರು. ಅಂತಹ ನಿರಾಕರಣವಾದಿಗಳಿಂದ ’ನಾನೇಕೆ ಹಿಂದುವಲ್ಲ’ ಮತ್ತು ನಂತರ ’ನಾನೇಕೆ ಹಿಂದು’ ಮುಂತಾದ ಶೀರ್ಷಿಕೆಯ ಪುಸ್ತಕಗಳು ರಚಿತವಾದವು. ಆದರೂ ಇಂತಹ ಪ್ರಯತ್ನಗಳ ಹೊರತಾಗಿಯೂ ಹಿಂದುತ್ವದ ಮಾನ್ಯತೆ ಹೆಚ್ಚಾಗುತ್ತ ಸಾಗಿತು. ಇದಕ್ಕೆ ಕಾರಣ ಭಾರತದ ಆತ್ಮ ಮತ್ತು ಅದರ ಪ್ರಜ್ಞೆಯ ಅಭಿವ್ಯಕ್ತಿಯೇ ಆಗಿದೆ. ಅದನ್ನು ಯಾವುದೇ ಮಹಾಕಾವ್ಯದೊಂದಿಗೆ ಸ್ಫರ್ಧೆಗಿಳಿಯುವ ಪುಸ್ತಕದಿಂದಲೂ ಎದುರಿಸಲು ಸಾಧ್ಯವಿಲ್ಲ.

ಸ್ವಾರ್ಥ ಹಿತಾಸಕ್ತಿಯುಳ್ಳ ದುರುಳ ಶಕ್ತಿಗಳು ಹಿಂದೂಯಿಸಂ ಒಳ್ಳೆಯದು ಆದರೆ ಹಿಂದುತ್ವ ಕೆಟ್ಟದ್ದು ಎನ್ನುವ ಗೊಂದಲ ಸೃಷ್ಟಿಸಲು ಆರಂಭಿಸಿದರು. ಹಿಂದೂಯಿಸಂ ಮತ್ತು ಹಿಂದುತ್ವ ಇವುಗಳ ನಡುವೆ ಏನು ವ್ಯತ್ಯಾಸವೇನು ಎಂದು ಮಾಧ್ಯಮಗಳು ಕೇಳುತ್ತವೆ. ಇವೆರಡೂ ಒಂದೇ ಎನ್ನುವುದು ಇದಕ್ಕೆ ಉತ್ತರ. ಒಂದು ಇಂಗ್ಲೀಷನಲ್ಲಿದೆ ಇನ್ನೊಂದು ಕನ್ನಡದಲ್ಲಿದೆ ಅಥವಾ ಹಿಂದಿ, ಮರಾಠಿ ಇತ್ಯಾದಿ ಭಾರತೀಯ ಭಾಷೆಯಲ್ಲಿದೆ. ಡಾ ಎಸ್ ರಾಧಾಕೃಷ್ಣನ್ ’ದ ಹಿಂದೂ ವ್ಯೂ ಆಫ್ ಲೈಫ್’ ಎನ್ನುವ ಪುಸ್ತಕವನ್ನಿ ಇಂಗ್ಲೀಷ್ ಭಾಷೆಯಲ್ಲಿ ಬರೆದರು. ಹಾಗಾಗಿ ಅದರಲ್ಲಿ ’ಹಿಂದೂಯಿಸಂ’ ಎನ್ನುವ ಶಬ್ದವನ್ನು ಬಳಸಿದರು. ಅವರು ಕನ್ನಡದಲ್ಲಿ ಪುಸ್ತಕವನ್ನು ಬರೆದಿದ್ದರೆ ’ಹಿಂದುತ್ವ’ ಎಂದೇ ಬಳಸುತ್ತಿದ್ದರೇನೋ. ಸ್ವಾತಂತ್ರ್ಯವೀರ ಸಾವರ್ಕರರು ಇಂಗ್ಲೀಷ್‌ನಲ್ಲಿ ’ಹಿಂದುತ್ವ’ ಪುಸ್ತಕವನ್ನು ಬರೆದಿದ್ದರೆ ಅವರು ಬಹುಶಃ ’ಹಿಂದೂಯಿಸಂ’ ಎನ್ನುವ ಶಬ್ದವನ್ನೇ ಬಳಸುತ್ತಿದ್ದರು. ಆದರೂ, ಹಿಂದುತ್ವ ಎನ್ನುವುದು ಹಿಂದೂಯಿಸಂ ಎನ್ನುವ ಬದಲು ’ಹಿಂದೂನೆಸ್’ ಎಂದು ಭಾಷಾಂತರವಾಗುವುದು ಸೂಕ್ತ.

ಕಳೆದ ವರ್ಷ ದೆಹಲಿಯ ವಿಗ್ಯಾನ್ ಭವನದಲ್ಲಿ ಮೂರು ದಿವಸ ನಡೆದ ಉಪನ್ಯಾಸದಲ್ಲಿ ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಹಿಂದು ಮತ್ತು ಹಿಂದುತ್ವಗಳ ಅರ್ಥವನ್ನು ಸ್ಪಷ್ವವಾಗಿ ನಿರೂಪಿಸಿದ್ದಾರೆ. ಆದರೆ ತಮ್ಮ ದುರುದ್ದೇಶಗಳಿಗೆ ಈ ಅರ್ಥ ಹೊಂದಿಕೆಯಾಗದ ಕಾರಣ ವಿರೋಧಿಸುವವರು ಇದನ್ನು ಉಲ್ಲೇಖಿಸುವುದೇ ಇಲ್ಲ. ನಿಜವಾದ ವೈಚಾರಿಕ ಸಂಘರ್ಷ ಇರುವುದು ಭಾರತದ ಕುರಿತು ಇರುವ ಎರಡು ಭಿನ್ನ ವಿಚಾರಧಾರೆಗಳ ನಡುವೆ. ಒಂದು ದೇಶದ ಸನಾತನ ಆಧ್ಯಾತ್ಮಿಕ ಸಂಪ್ರದಾಯಗಳ ಆಳವಾದ ಬೇರುಗಳುಳ್ಳ ಭಾರತೀಯ ಕಲ್ಪನೆ, ಇನ್ನೊಂದು ಪರಕೀಯ ಅಥವಾ ವಿದೇಶೀ ಪರಿಕಲ್ಪನೆ.

ಓರ್ವ ಪತ್ರಕರ್ತ ರಾಜಕಾರಣಿ ಈ ಚುನಾವಣೆಯಲ್ಲಿ ’ಹಿಂದು ಇಂಡಿಯಾ’ ಮತ್ತು ’ಹಿಂದುತ್ವ ಇಂಡಿಯಾ’ದ ನಡುವಿ ಆಯ್ಕೆಯಾಗಬೇಕು ಎಂದು ಇತ್ತೀಚೆಗೆ ಹೇಳಿದರು. ಹಿಂದು ಇಂಡಿಯಾದ ಕುರಿತು ಇಂತವರು ಮಾತಾಡಲು ಏಕೈಕ ಕಾರಣ ಬೆಳೆಯುತ್ತಿರುವ ’ಹಿಂದುತ್ವ’ದ ಪ್ರಭಾವ. ಅದು ಅವರ ಬದ್ಧತೆಯನ್ನು ಪ್ರತಿಬಿಂಬಿಸುವುದಿಲ್ಲ, ಕೇವಲ ಅನುಕೂಲಕ್ಕಾಗಿ ಮಾತ್ರ ಹೀಗೆ ಹೇಳಲಾಗುತ್ತದೆ. ಹಿಂದುತ್ವದ ಆಧಾರದ ಮೇಲೆ ಭಾರತ ಒಗ್ಗೂಡುತ್ತಿರುವುದರಿಂದ ಅವರ ಜಾತಿ, ಭಾಷೆ, ಪ್ರಾಂತ ಅಥವಾ ಮತ ಆಧಾರಿತ ರಾಜಕಾರಣ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ ಮತ್ತು ಅವರ ಬೆಂಬಲ ಕಡಿಮೆಯಾಗುತ್ತಿದೆ. ಅವರ ಚಿಲ್ಲರೆ ರಾಜಕಾರಣಕ್ಕೆ ಸಮಾಜವನ್ನು ಒಡೆಯುವುದು ಅನಿವಾರ್ಯ- ಜಾತಿ, ಭಾಷೆ ಅಥವಾ ಮತದ ಆಧಾರದ ಮೇಲೆ. ಇಲ್ಲವಾದರೆ ಹಿಂದು ಮತ್ತು ಹಿಂದುತ್ವ ಎನ್ನುವುದರ ಮೇಲೆ. ಆದರೆ ಇಂದು ಸಾಮಾನ್ಯ ಭಾರತೀಯ ಇವರ ಬಲೆಗೆ ಬೀಳುವಷ್ಟು ಮೂರ್ಖನಲ್ಲ.

ಗೊಂದಲ ಹುಟ್ಟಿಸುವ ಸಲುವಾಗಿ ಬಳಸಲಾಗುವು ಇನ್ನೊಂದು ಪದ ’ಹಿಂದುವಾದಿ’ ಅಥವಾ ’ಹಿಂದೂಯಿಸ್ಟ್’. ವಿಶ್ವದಲ್ಲಿ ಕ್ಯಾಪಿಟಲಿಸ್ಟ್, ಕಮ್ಯುನಿಸ್ಟ್ ಅಥವಾ ಸೋಷಿಯಲಿಸ್ಟ್ ಮೊದಲಾದ ವಿಚಾರವಾದಗಳಿವೆ. ಆದರೆ ಭಾರತದಲ್ಲಿ ಪಾಶ್ಚಿಮಾತ್ಯದಲ್ಲಿರುವಂತ ’ಇಸಂ’ಗೆ ಸ್ಥಾನವಿಲ್ಲ. ಪಾಶ್ಚಿಮಾತ್ಯದಲ್ಲಿರುವ ’ಇಸಂ’ಗಳಿಗೆ ಇನ್ನೊಬ್ಬರ ಮೇಲೆ ಬಲಪೂರ್ವಕವಾಗಿಯಾದರೂ ಸರಿ ತಮ್ಮ ಚಿಂತನೆಯನ್ನು ಹೇರುವ ಹಾಗೂ ಅಧಿನಕ್ಕೊಳಪಡಿಸುವ ಪೃವೃತ್ತಿಯಿದೆ. ಭಾರತದಲ್ಲಿ ’ಹಿಂದುತ್ವ’ (ಹಿಂದುನೆಸ್) ಎಂದರೆ ಹಿಂದು ಹೆಸರಿನಲ್ಲಿ ಆಧ್ಯಾತ್ಮಿಕತೆಯ ಬೆಳಕಿನಲ್ಲಿ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ಔದ್ಯೋಗಿಕ ಬದುಕನ್ನು ಬಾಳುತ್ತಿರುವ ಒಂದು ಸಮಗ್ರ ಜೀವನದ ಕಲ್ಪನೆಯಾಗಿದೆ.

ಆದ್ದರಿಂದ ವಿಭಜನಕಾರಿ ಮತ್ತು ಗೊಂದಲಕಾರಿಗಳನ್ನು ಬಹಿರಂಗಪಡಿಸುವುದು ಮತ್ತು ಬದ್ಧತಯ ಕಾರ್ಯ ಮತ್ತು ಆಚರಣೆಗಳ ಮೂಲಕ ಸನಾತನ ಹಿಂದುತ್ವದ ತತ್ವವನ್ನು ಸ್ಥಾಪಸಿವುದು ಅತ್ಯಗತ್ಯವಾಗಿದೆ. ಇದರಿಂದ ಶತಮಾನಗಳಿಂದ ಪ್ರಪಂಚಕ್ಕೆ ತಿಳಿದಿರುವ ಭಾರತದ ನಿಜವಾದ ಗುರುತು ವಿಶ್ವದ ಮುಂದೆ ಮತ್ತೆ ತೆರೆಯಲಿದೆ. ಭಾರತದ ಪುರುಷಾರ್ಥ ಸಮಾಜದ ಪ್ರತಿ ಅಂಗ ಮತ್ತು ರಾಷ್ಟ್ರೀಯ ಜೀವನದಲ್ಲಿ ಅಭಿವ್ಯಕ್ತವಾಗಲಿದೆ. ’ಸ್ವದೇಶಿ ಸಮಾಜ’ ಎನ್ನುವ ಪ್ರಬಂಧದಲ್ಲಿ ರವೀಂದ್ರನಾಥ ಠಾಕೂರರು ಹೇಳಿದಂತೆ ’ಎಲ್ಲಕ್ಕೂ ಮೊದಲು, ನಾವು ನಿಜವಾಗಿ ಯಾರಾಗಿರುವೆವೋ ಅವರೇ ಆಗಬೇಕು’ (“First of all, We will have to become what We actually are”)

– ಡಾ. ಮನಮೋಹನ ವೈದ್ಯ,

ಆರ್‌ಎಸ್‌ಎಸ್‌ ಸಹಸರಕಾರ್ಯವಾಹರು

(ಕನ್ನಡ ಅನುವಾದ : ಸತ್ಯನಾರಾಯಣ ಶಾನುಭಾಗ್)

 

 

  • email
  • facebook
  • twitter
  • google+
  • WhatsApp
Tags: Article by Dr Manmohan VaidyaManmohan Vaidya Kannada article

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
State Level One Crore Sapling Plantation drive organised by Samartha Bharata

State Level One Crore Sapling Plantation drive organised by Samartha Bharata

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

VHP Veteran Ashok Singhal flags off Annadanam Drive for Sabarimala Ayyappa pilgrims at Bangalore

VHP Veteran Ashok Singhal flags off Annadanam Drive for Sabarimala Ayyappa pilgrims at Bangalore

August 25, 2019
ಹಿಂದುಗಳನ್ನು ಹತ್ತಿಕ್ಕುವ ಕರಾಳ ಮಸೂದೆ:  ದತ್ತಾತ್ರೇಯ ಹೊಸಬಾಳೆ

ಹಿಂದುಗಳನ್ನು ಹತ್ತಿಕ್ಕುವ ಕರಾಳ ಮಸೂದೆ: ದತ್ತಾತ್ರೇಯ ಹೊಸಬಾಳೆ

August 26, 2011

NEWS IN BRIEF – NOV 19, 2011

November 20, 2011
Full Text of speech by RSS Sarasanghachalak Mohan Bhagwat’s #RSSVijayadashami Speech-2015

Full Text of speech by RSS Sarasanghachalak Mohan Bhagwat’s #RSSVijayadashami Speech-2015

October 22, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಂತ ಪದವಿಯ ತನಕದ ೩೫೦ ವರ್ಷಗಳ ವ್ಯವಸ್ಥಿತ ಷಡ್ಯಂತ್ರ – ಒಂದು ಮತಾಂತರದ ಕಥೆ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In